ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Chikkaballapur News: ಒತ್ತಡರಹಿತ ಜೀವನಕ್ರಮ ಹಾಗೂ ನಿಯಮಿತ ದೈಹಿಕ ಚಟುವಟಿಕೆಗಳೇ ಆರೋಗ್ಯದ ಜೀವನಾಡಿಗಳು : ಡಿವೈಎಸ್ಪಿ ಪ್ರಕಾಶ್ ಸಲಹೆ

ಆರೋಗ್ಯವೇ ಮಹಾಭಾಗ್ಯ ಎಂಬ ಸಂದೇಶವನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಸಿಧ್ವಿನ್ ಆಸ್ಪತ್ರೆಯು ವಿಶ್ವ ಕಿಡ್ನಿ ದಿನದ ಹಾಗೂ ವಿಶ್ವ ಪ್ರಯೋಗಾಲಯ ದಿನಾಚರಣೆ ಅಂಗವಾಗಿ ವಿಶಿಷ್ಟ “ರನ್ ಫಾರ್ ಹೆಲ್ತ್” ಮ್ಯಾರಥಾನ್ ಆಯೋಜಿಸಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಆರೋಗ್ಯವೊಂದಿದ್ದರೆ ಉಳಿದೆಲ್ಲವೂ ನಮ್ಮ ಕಾಲ ಬಳಿ ಬರಲಿವೆ ಎಂಬುದು ಅಹಂಕಾರದ ಮಾತಾದರೂ ಸತ್ಯವಾದ ಮಾತಾಗಿದೆ.

ನಿಯಮಿತ ದೈಹಿಕ ಚಟುವಟಿಕೆಗಳೇ ಆರೋಗ್ಯದ ಜೀವನಾಡಿಗಳು

ಒತ್ತಡರಹಿತ ಜೀವನಕ್ರಮ ಹಾಗೂ ನಿಯಮಿತ ದೈಹಿಕ ಚಟುವಟಿಕೆಗಳೇ ಉತ್ತಮ ಆರೋಗ್ಯ ಸುಧಾರಣೆಯ ಸಿದ್ಧಸೂತ್ರಗಳಾಗಿವೆ ಎಂದು ಡಿವೈಎಸ್ಪಿ ಪ್ರಕಾಶ್ ಅಭಿಪ್ರಾಯಪಟ್ಟರು. -

Profile
Ashok Nayak Mar 28, 2026 10:20 PM

ಚಿಕ್ಕಬಳ್ಳಾಪುರ: ಒತ್ತಡ ರಹಿತ ಜೀವನಕ್ರಮ ಹಾಗೂ ನಿಯಮಿತ ದೈಹಿಕ ಚಟುವಟಿಕೆಗಳೇ ಉತ್ತಮ ಆರೋಗ್ಯ ಸುಧಾರಣೆಯ ಸಿದ್ಧಸೂತ್ರಗಳಾಗಿವೆ ಎಂದು ಡಿವೈಎಸ್ಪಿ ಪ್ರಕಾಶ್ ಅಭಿಪ್ರಾಯಪಟ್ಟರು.

ನಗರದ ಸಿಧ್ವಿನ್ ಆಸ್ಪತ್ರೆ ಮತ್ತು ರೋಟರಿ ಕ್ಲಬ್ ಸಹಯೋಗದಲ್ಲಿ ಶನಿವಾರ ಆಯೋಜಿ ಸಿದ್ದ ಐದು ಕಿಲೋಮೀಟರ್ ಮಾರಥಾನ್/ವಾಕ್‌ಥಾನ್‌ಗೆ ಚಾಲನೆ ನೀಡಿ ಮಾತನಾಡಿದರು.

ಆರೋಗ್ಯವೇ ಮಹಾಭಾಗ್ಯ ಎಂಬ ಸಂದೇಶವನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಸಿಧ್ವಿನ್ ಆಸ್ಪತ್ರೆಯು ವಿಶ್ವ ಕಿಡ್ನಿ ದಿನದ ಹಾಗೂ ವಿಶ್ವ ಪ್ರಯೋಗಾಲಯ ದಿನಾಚರಣೆ ಅಂಗವಾಗಿ ವಿಶಿಷ್ಟ “ರನ್ ಫಾರ್ ಹೆಲ್ತ್” ಮ್ಯಾರಥಾನ್ ಆಯೋಜಿಸಿರುವುದು ಒಳ್ಳೆಯ ಬೆಳವಣಿಗೆಯಾಗಿದೆ.ಆರೋಗ್ಯವೊಂದಿದ್ದರೆ ಉಳಿದೆಲ್ಲವೂ ನಮ್ಮ ಕಾಲ ಬಳಿ ಬರಲಿವೆ ಎಂಬುದು ಅಹಂಕಾರದ ಮಾತಾದರೂ ಸತ್ಯವಾದ ಮಾತಾಗಿದೆ.

ಇದನ್ನೂ ಓದಿ: Chiranjeevi: ರಾಮ್ ಚರಣ್ ಹುಟ್ಟುಹಬ್ಬದಂದು 10 ಲಕ್ಷ ರೂ ಹಣವನ್ನು ಸಮಾಜ ಸೇವೆಗೆಂದು ಕೊಟ್ಟ ಚಿರಂಜೀವಿ

ಊಟ ಬಲ್ಲವರಿಗೆ ರೋಗ ವಿಲ್ಲ ಮಾತು ಬಲ್ಲವನಿಗೆ ಜಗಳವಿಲ್ಲ ಎಂಬ ಗಾದೆಯಿದೆ. ಆದರೆ ಇದನ್ನು ಕೊಂಚ ಬದಲಾವಣೆ ಮಾಡಿ ಹೇಳುವುದಾದರೆ ಒಳ್ಳೆಯ ಹವ್ಯಾಸಗಳೇ ಆರೋಗ್ಯ ದ ಗುಟ್ಟಾಗಿದ್ದು, ಆಟ ಬಲ್ಲವರಿಗೆ ರೋಗವಿಲ್ಲ ಎನ್ನಬಹುದು ಎಂದರು. ಮಾರಥಾನ್‌ನಲ್ಲಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಉತ್ಸಾಹದಿಂದ ಭಾಗವಹಿಸಿರುವುದು ಕೂಡ ಸಂತೋಷ ತಂದಿದೆ ಎಂದರು.

ಸಿಧ್ವಿನ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕಿ ಡಾ.ಮೇಘನಾ ಅರುಣ್ ಕುಮಾರ್ ಮಾತನಾಡಿ, ವಾಕಥಾನ್ ಅಥವಾ ಮ್ಯಾರಥಾನ್ ಎಂಬುದು ಆರೋಗ್ಯ, ಸಾಮಾಜಿಕ ಜಾಗೃತಿ, ಮತ್ತು ಏಕತೆಯನ್ನು ಉತ್ತೇಜಿಸುವ ಪ್ರಮುಖ ಚಟವಟಿಕೆಗಳಾಗಿವೆ. ಇದು ದೈಹಿಕ ವ್ಯಾಯಾಮದೊಂದಿಗೆ ಸಾಗಲಿದ್ದರೂ ಕಿಡ್ನಿ ಆರೊಗ್ಯದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ನಮ್ಮ ಸಂಸ್ಥೆ ಯಶಸ್ವಿಯಾಗಿದೆ.ಮೂತ್ರಪಿಂಡಗಳು ಸರಿಯಾಗಿವೆಯೇ ಎಂಬುದನ್ನು ಪರೀಕ್ಷೆ ಮಾಡಿಸಿಕೊಂಡಲ್ಲಿ ಆರಂಭಿಕ ಪತ್ತೆ ಸಾಧ್ಯ. ಗಂಭೀರ ತೊಡಕುಗಳನ್ನು ತಪ್ಪಿಸಲು ತಪಾಸಣೆ ಅಗತ್ಯ ಎಂದರು.

cbpm3mrt

ಡಾ.ರಮೇಶ್ ಮಾತನಾಡಿ, ವಿಶ್ವ ಕಿಡ್ನಿ ದಿನದ ಅಂಗವಾಗಿ ಕೆಎಸ್‌ಆರ್‌ಟಿಸಿ ನೌಕರರಿಗೆ ಉಚಿತ ಕಿಡ್ನಿ ತಪಾಸಣೆ ಶಿಬಿರವನ್ನು ನಡೆಸಲಾಗುತ್ತಿದೆ. ದೀರ್ಘಕಾಲ ಔಷಧಿಗಳನ್ನು ಸೇವಿಸುವುದರಿಂದ ಕಿಡ್ನಿ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದ್ದು, ಆರಂಭಿಕ ಹಂತ ದಲ್ಲಿ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ.ಆದ್ದರಿಂದ ನಿಯಮಿತ ತಪಾಸಣೆ ಅಗತ್ಯವಿದೆ ಎಂದು ತಿಳಿಸಿದರು.

ಆರೋಗ್ಯಕರ ಜೀವನಕ್ಕೆ ದೈಹಿಕ ಚಟುವಟಿಕೆಗಳು ಬಹಳ ಮುಖ್ಯ ಓಟ ಹಾಗೂ ವ್ಯಾಯಾಮಗಳಿಂದ ದೇಹದಲ್ಲಿ ರಕ್ತ ಸಂಚಲನ ಸುಧಾರಿಸಿ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ ಪ್ರತಿಯೊಬ್ಬರೂ ದಿನನಿತ್ಯ ವ್ಯಾಯಾಮ ಮಾಡುವ ಮೂಲಕ ತಮ್ಮ ಆರೋಗ್ಯದ ಕಡೆ ಗಮನಹರಿಸಬೇಕು ಎಂದು ಅವರು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಸಿಧ್ವಿನ್ ಆಸ್ಪತ್ರೆಯಲ್ಲಿ ಸಾರ್ವಜನಿಕರಿಗಾಗಿ ಉಚಿತ ಕಿಡ್ನಿ ತಪಾಸಣೆ ಶಿಬಿರವನ್ನು ಸಹ ಆಯೋಜಿಸಿದ್ದು  ನಿರೀಕ್ಷೆಗಿಂತ ಹೆಚ್ಚು ಮಂದಿ ಭಾಗವಹಿಸಿದ್ದು, 300 ಕ್ಕೂ ಹೆಚ್ಚು ಮಂದಿ ಹಾಜರಾಗಿದ್ದರು. ವಿಜೇತರಿಗೆ ಮೊದಲ ಮೂರು ಬಹುಮಾನ ಗಳೊಂದಿಗೆ, ಭಾಗವಹಿಸಿದ ಎಲ್ಲರಿಗೂ ಪ್ರಮಾಣಪತ್ರ ಮತ್ತು ಪದಕಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು.

ಪುರುಷ ವಿಭಾಗದಲ್ಲಿ ಗುರುಪ್ರಸಾದ್ ಪ್ರಥಮ ಬಹುಮಾನವಾಗಿ 10 ಸಾವಿರ ರೂ.ಚಿರಂತ್ ಕಶ್ಯಾಪ್ ದ್ವಿತೀಯ ಬಹುಮಾನವಾಗಿ 5 ಸಾವಿರ ರೂ.,ರಘು ವಂಶಿ ತೃತೀಯ ಬಹುಮಾನ ವಾಗಿ 3 ಸಾವಿರ ರೂ.ಪಡೆದರು.

ಮಹಿಳಾ ವಿಭಾಗದಲ್ಲಿ ಜಯಶ್ರೀ ಪ್ರಥಮ ಬಹುಮಾನವಾಗಿ 7 ಸಾವಿರ ರೂ.,ಕುಸುಮಾ ದ್ವಿತೀಯ ಬಹುಮಾನವಾಗಿ 5 ಸಾವಿರ ರೂ.ಸೌಮ್ಯ ತೃತೀಯ ಬಹುಮಾನವಾಗಿ 3 ಸಾವಿರ ರೂ.ಪಡೆದರು.ಯುವಕರು ಹಾಗೂ ಹಿರಿಯರು ಸಮಾನವಾಗಿ ಭಾಗವಹಿಸಿ ತಮ್ಮ ದೈಹಿಕ ಸಾಮರ್ಥ್ಯವನ್ನು ಪ್ರದರ್ಶಿಸಿದರು. ಸಿದ್ವಿನ್ ಆಸ್ಪತ್ರೆ ವತಿಯಿಂದ ಆಯೋಜಿಸಲಾದ ಈ ವಾಕಥಾನ್ ಕಾರ್ಯಕ್ರಮ ಆರೋಗ್ಯವೇ ಭಾಗ್ಯ ಎಂಬ ಸಂದೇಶವನ್ನು ಪರಿಣಾಮಕಾರಿ ಯಾಗಿ ಸಾರಿತು.

ಈ ಸಂದರ್ಭದಲ್ಲಿ ಡಾ.ಅರುಣ್ ಕುಮಾರ್, ಡಾ.ರವಿ ಕುಮಾರ್, ಡಾ.ಜ್ಯೋತಿ ಪ್ರಕಾಶ್, ಡಾ.ಅರ್ಜುನ್, ಮ್ಯಾನೇಜರ್ ಮಹೇಶ್ ಇತರರು ಉಪಸ್ಥಿತರಿದ್ದರು.