Bagepally News: ಚೇಳೂರು ತಾಲ್ಲೂಕು ಕಸಾಪ ಪ್ರಥಮ ಅಧ್ಯಕ್ಷರಾಗಿ ಜೆ.ಕೆ.ಆನಂದ್
ಕನ್ನಡ ಸಾಹಿತ್ಯ ಪರಿಷತ್ತು ಇಲ್ಲಿ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತದೆ. ಚೇಳೂರು ಆಂದ್ರದ ಗಡಿಗೆ ಹೊಂದಿಕೊಂಡಿದ್ದರೂ ಕನ್ನಡ ಭಾಷೆ, ಸಾಹಿತ್ಯದ ಮೇಲೆ ಅಪಾರವಾದ ಗೌರವವನ್ನು ಹೊಂದಿರುವು ದಕ್ಕೆ ಇಲ್ಲಿ ನಡೆದ ಅನೇಕ ಕನ್ನಡ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆದಿರುವುದೇ ಸಾಕ್ಷಿಯಾಗಿತ್ತು.
ಚೇಳೂರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಪ್ರಥಮ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ ಜೆ.ಕೆ.ಆನಂದ್ ಆಯ್ಕೆಯಾಗಿದ್ದಾರೆ. -
ಬಾಗೇಪಲ್ಲಿ: ಚೇಳೂರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಪ್ರಥಮ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ ಜೆ.ಕೆ.ಆನಂದ್ ಆಯ್ಕೆಯಾಗಿದ್ದಾರೆ.
ಚೇಳೂರು ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆ ಆವರಣದಲ್ಲಿ ಇಂದು ನಡೆದ ಕಸಾಪ ಸದಸ್ಯರು ಮತ್ತು ಪದಾಧಿಕಾರಿಗಳ ಸಭೆಯಲ್ಲಿ ಕಸಾಪ ಜಿಲ್ಲಾಧ್ಯಕ್ಷ ಡಾ.ಕೋಡಿರಂಗಪ್ಪ ಚೇಳೂರು ತಾಲ್ಲೂಕಿನ ಪದಾಧಿಕಾರಿಗಳ ಆಯ್ಕೆಯನ್ನು ಘೋಷಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಕನ್ನಡ ಸಾಹಿತ್ಯ ಪರಿಷತ್ತು ಇಲ್ಲಿ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತದೆ. ಚೇಳೂರು ಆಂದ್ರದ ಗಡಿಗೆ ಹೊಂದಿಕೊಂಡಿದ್ದರೂ ಕನ್ನಡ ಭಾಷೆ, ಸಾಹಿತ್ಯದ ಮೇಲೆ ಅಪಾರವಾದ ಗೌರವವನ್ನು ಹೊಂದಿರುವುದಕ್ಕೆ ಇಲ್ಲಿ ನಡೆದ ಅನೇಕ ಕನ್ನಡ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆದಿರುವುದೇ ಸಾಕ್ಷಿಯಾಗಿತ್ತು. ಎಲ್ಲರೂ ಒಗ್ಗಟ್ಟಿನಿಂದ ಕನ್ನಡದ ತೇರನ್ನು ಎಳೆಯುವ ಕಾರ್ಯದಲ್ಲಿ ತೊಡಗಿಸಿಕೊಳ್ಲಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ: Chikkaballapur News: ಏಡುಕೊಂಡುಲ ಶ್ರೀನಿವಾಸ್‌ಗೆ ಗೌರವ ಡಾಕ್ಟರೇಟ್: ಹಿತೈಷಿಗಳ ಸನ್ಮಾನ
ಚೇಳೂರು ತಾಲ್ಲೂಕಿನ ಕಸಾಪ ನೂತನ ಅಧ್ಯಕ್ಷ ಜೆ.ಕೆ.ಆನಂದ್ ಮಾತನಾಡಿ, ನನಗೆ ಅಧ್ಯಕ್ಷ ಸ್ಥಾನವನ್ನು ನೀಡುವುದರ ಮೂಲಕ ತಾಯಿ ಭುವನೇಶ್ವರಿ ಸೇವೆ ಮಾಡುವ ಒಂದು ದೊಡ್ಡ ಜವಾ ಬ್ದಾರಿಯನ್ನು ಕಸಾಪ ನೀಡಿದ್ದು ಇದೊಂದು ಸೌಭಾಗ್ಯ ಎಂದು ಭಾವಿಸಿ ಎಲ್ಲಾ ಹಿರಿಯರ ಮಾರ್ಗ ದರ್ಶನವನ್ನು ಪಡೆದುಕೊಂಡು ಕನ್ನಡ ಸಾಹಿತ್ಯ ಪರಿಷತ್ತನ್ನು ಬೆಳುಸುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಅಮೃತ್ ಕುಮಾರ್, ಕಾರ್ಯದರ್ಶಿ ಎಸ್.ಸತೀಶ್, ಬಾಗೇಪಲ್ಲಿ ಕಸಾಪ ಅಧ್ಯಕ್ಷ ಡಾ.ಚಿನ್ನಕೈವಾರಮಯ್ಯ, ನಿಕಟಪೂರ್ವ ಅಧ್ಯಕ್ಷ ಡಿ.ಎನ್.ಕೃಷ್ಣಾರೆಡ್ಡಿ, ಶ್ರೀನಿವಾಸ್ ಬಾಣಾಲಪಲ್ಲಿ, ಬಿ.ಎಸ್.ಸುರೇಶ್, ಪಿ.ರಾಧಾಕೃಷ್ಣ, ಜೆ.ವಿ.ಚಲಪತಿ, ಜಿಲಾನ್ ಬಾಷ, ಟಿ.ಪಿ.ಅಶೋಕ್, ಪಿ.ಜಿ. ವೆಂಕಟರಾಮರೆಡ್ಡಿ, ಬಾಲಾಜಿ, ಕೆ.ವಿ.ಪ್ರಶಾಂತ್ ಕುಮಾರ್, ಶಿವಕುಮಾರ್, ಲೋಕೇಶ್, ರಾಮಾನಾಯಕ್,ಸುಬ್ಬಾರಾಯಪ್ಪ, ಆನಂದ್, ಶಿವಣ್ಣ, ಮುತ್ತಪ್ಪ, ವಿಜಯಕುಮಾರ್, ನರೇಶ್, ವೆಂಕಟರವಣ ಮತ್ತಿತರರು ಉಪಸ್ಥಿತ ರಿದ್ದರು.
*
ಕನ್ನಡ ಸಾಹಿತ್ಯ ಪರಿಷತ್ತು. ಚೇಳೂರು ತಾಲ್ಲೂಕು. ಪದಾಧಿಕಾರಿಗಳು.ಗೌರವಾಧ್ಯಕ್ಷರು : ಪಿ.ರಾಧಾಕೃಷ್ಣ, ಸಂಚಾಲಕರು : ಕೆ.ಆರ್.ಸುಧಾಕರರೆಡ್ಡಿ, ಅಧ್ಯಕ್ಷರು: ಜೆ.ಕೆ.ಆನಂದ,
ಗೌರವ ಕಾರ್ಯದರ್ಶಿಗಳು: ಜಿಲಾನ್ ಭಾಷಾ, ಟಿ.ಪಿ.ಅಶೋಕ, ಗೌರವ ಕೋಶಾಧ್ಯಕ್ಷರು : ಕೆ.ಜಿ.ವೆಂಕಟರಮಣ, ಮಹಿಳಾ ಪ್ರತಿನಿಧಿ: ಶ್ರೀಮತಿ ಸರಸ್ವತಮ್ಮ, ಪರಿಶಿಷ್ಟ ಜಾತಿ ಪ್ರತಿನಿಧಿ :
ವೆಂಕಟಾಚಲಪತಿ, ಪರಿಶಿಷ್ಟ ಪಂಗಡ ಪ್ರತಿನಿಧಿ : ಸಿ.ವಿ.ನರಸಿಂಹಪ್ಪ, ಹಿಂದುಳಿದ ವರ್ಗಗಳ ಪ್ರತಿನಿಧಿ : ಡಿ.ಕೆ.ಬಾಲಾಜಿ, ಅಲ್ಪಸಂಖ್ಯಾತರ ಪ್ರತಿನಿಧಿ :ನಸುರುದ್ದೀನ್,ಸಂಘ ಸಂಸ್ಥೆಗಳ ಪ್ರತಿನಿಧಿ : ಆಂಜನೇಯಲು, ಪದ ನಿಮಿತ್ತಸದಸ್ಯರು : ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸಂಘಟನಾ ಕಾರ್ಯದರ್ಶಿಗಳು : ನಾಗರಾಜು, ಸುಹಾಸ ತಂತ್ರಿ, ಸಾಂಸ್ಕೃತಿಕ ಕಾರ್ಯದರ್ಶಿ: ಗೋಪಿ ನಾಯಕ್,ಈಶ್ವರ್ ರೆಡ್ಡಿ(ಕವಿ),ಪತ್ರಿಕಾ ಕಾರ್ಯದರ್ಶಿ : ಜೆ.ವಿ.ಚಲಪತಿ, ಗೌರವ ಸಲಹೆಗಾರರು : ಬಿ .ಈಶ್ವರ ರೆಡ್ಡಿ, ಪಿ.ಜಿ.ವೆಂಕಟರಮಣಾರೆಡ್ಡಿ,