Chikkaballapur News: ಸತ್ಯಸಾಯಿ ಗ್ರಾಮದಲ್ಲಿ ಜಾಗತಿಕ ತಜ್ಞರಿಂದ 'ಜಿನೋಮಿಕ್ಸ್ ಮತ್ತು ಇಮ್ಯುನೋಥೆರಪಿ' ವಿಚಾರ ಸಂಕಿರಣ
ವಿಚಾರ ಸಂಕಿರಣದಲ್ಲಿ ವೈದ್ಯಕೀಯ ನಾವೀನ್ಯತೆ ಗಮನ ಸೆಳೆಯಿತು. ಬಯೋಮೆಡಿಕಲ್ ತಂತ್ರಜ್ಞಾನ ದಲ್ಲಿ ಪರಿವರ್ತನಾತ್ಮಕ ಪ್ರಗತಿಯನ್ನು ಕಾಣಲು ಜಗತ್ತಿನಾದ್ಯಂತ ಪ್ರಮುಖ ವಿಜ್ಞಾನಿಗಳು ಮತ್ತು ದಾರ್ಶನಿಕರು ಒಟ್ಟಾಗಿ ಸೇರಿದ್ದು ವಿಶೇಷವಾಗಿತ್ತು. ವೈಜ್ಞಾನಿಕ ಸಾಧನೆಗಳ ಹಿಂದಿನ ಮಾನವ ಕಥೆಗಳನ್ನು ಒತ್ತಿ ಹೇಳಿದರು.

-

ಚಿಕ್ಕಬಳ್ಳಾಪುರ : ತಾಲ್ಲೂಕು ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿರುವ ಶ್ರೀ ಮಧುಸೂದನ ಸಾಯಿ ಆರೋಗ್ಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ನಡೆದ 'ಜಿನೋಮಿಕ್ಸ್ ಮತ್ತು ಇಮ್ಯುನೋಥೆರಪಿ' ವಿಚಾರ ಸಂಕಿರಣದಲ್ಲಿ ಜೀನ್ ಥೆರಪಿ, ಎಐ ನೆರವಿನಿಂದ ರೋಗಪತ್ತೆ ಮತ್ತು ಸಹಾನುಭೂತಿಯ ಆರೋಗ್ಯ ಸೇವೆಗಳ ಬಗ್ಗೆ ಮಹತ್ವದ ವಿಚಾರಗಳನ್ನು ತಜ್ಞರು ಹಂಚಿಕೊಂಡರು.
ತಾಲೂಕಿನ ಮುದ್ದೇನಹಳ್ಳಿಯಲ್ಲಿರುವ ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಆಯೋಜಿಸಿದ್ದ ಜೀನೋಮಿಕ್ಸ್ ಮತ್ತು ಇಮ್ಯುನೋಥೆರಪಿ ಕುರಿತ ವಿಚಾರ ಸಂಕಿರಣದಲ್ಲಿ ಹಲವು ತಜ್ಞರು ಭಾಗವಹಿಸಿ ತಮ್ಮ ವಿಚಾರಗಳನ್ನು ಹಂಚಿಕೊಂಡರು.
ಕೈಗೆಟುವ ದರದಲ್ಲಿ ಜೀನ್ ಚಿಕಿತ್ಸೆಗಳು, ಎಐ ಆಧಾರಿತ ಡಯಾಗ್ನೋಸ್ಟಿಕ್ಸ್ ಹಾಗೂ ಸಹಾನುಭೂತಿ ಯಿಂದ ಕೂಡಿದ ಆರೋಗ್ಯ ರಕ್ಷಣೆಯ ಸಾಧ್ಯತೆಯ ಬಗ್ಗೆ ಹಲವು ಮಹತ್ವದ ವಿಚಾರಗಳನ್ನು ಈ ಸಂದರ್ಭದಲ್ಲಿ ಚರ್ಚಿಸಲಾಯಿತು.
ವಿಚಾರ ಸಂಕಿರಣದಲ್ಲಿ ವೈದ್ಯಕೀಯ ನಾವೀನ್ಯತೆ ಗಮನ ಸೆಳೆಯಿತು. ಬಯೋಮೆಡಿಕಲ್ ತಂತ್ರಜ್ಞಾನದಲ್ಲಿ ಪರಿವರ್ತನಾತ್ಮಕ ಪ್ರಗತಿಯನ್ನು ಕಾಣಲು ಜಗತ್ತಿನಾದ್ಯಂತ ಪ್ರಮುಖ ವಿಜ್ಞಾನಿಗಳು ಮತ್ತು ದಾರ್ಶನಿಕರು ಒಟ್ಟಾಗಿ ಸೇರಿದ್ದು ವಿಶೇಷವಾಗಿತ್ತು. ವೈಜ್ಞಾನಿಕ ಸಾಧನೆಗಳ ಹಿಂದಿನ ಮಾನವ ಕಥೆಗಳನ್ನು ಒತ್ತಿ ಹೇಳಿದರು. ಇಮ್ಯುನೋಥೆರಪಿ ಮತ್ತು ಜೀನೋಮಿಕ್ಸ್ನಲ್ಲಿನ ಪ್ರಗತಿಯು ಮಾರಣಾಂತಿಕ ಕಾಯಿಲೆಗಳನ್ನು ಎದುರಿಸುತ್ತಿರುವ ಕುಟುಂಬಗಳಿಗೆ, ವಿಶೇಷವಾಗಿ ತುಂಬಾ ಕಡಿಮೆ ಆದಾಯದ ಜನರಿಗೆ ದುಬಾರಿ ಬೆಲೆಯ ಚಿಕಿತ್ಸೆಗಳ ಬಗ್ಗೆ ಹಲವು ಭರವಸೆಗಳನ್ನು ಮೂಡಿಸಿದವು.
ಭಾರತ, ಕೆನಡಾ, ಅಮೆರಿಕ ಹಾಗೂ ಇತರೆ ದೇಶಗಳ ವೈದ್ಯರು, ಸಂಶೋಧಕರು, ನೀತಿ ನಿರೂಪಕರು ಹಾಗೂ ಉದ್ಯಮ ನಾಯಕರು ಸೇರಿದಂತೆ ೫೦೦ ಕ್ಕೂ ಹೆಚ್ಚು ಗಣ್ಯರು ವಿಚಾರ ಸಂಕಿರಣದಲ್ಲಿ ಹೈಬ್ರಿಡ್ ಮಾದರಿಯಲ್ಲಿ ಭಾಗವಹಿಸಿದ್ದರು. ಜಾಗತಿಕ ಲೈವ್ ಸ್ಟ್ರೀಮ್ ಮೂಲಕ ವ್ಯಾಪಕ ಭಾಗವಹಿಸುವಿಕೆಗೆ ಕಾರ್ಯಕ್ರಮ ಸಾಕ್ಷಿಯಾಯಿತು. ಅಲ್ಲದೆ, ಬಡ ಸಮುದಾಯಗಳಿಗೆ ಆರೋಗ್ಯ ರಕ್ಷಣೆಯ ಭವಿಷ್ಯದ ಮೇಲೆ ಪರಿಣಾಮ ಬೀರುವ ಗುರಿಯನ್ನು ಹೊಂದಿರುವ ಸಹಯೋಗಕ್ಕೆ ವಿಶಿಷ್ಟ ಅವಕಾಶವನ್ನೂ ಒದಗಿಸಿತು.
ಡಾ ಸಚ್ ದೇವ್ ಸಿಧು (ಕೆನಡಾ) ಮತ್ತು ಫೇಜ್ ಡಿಸ್‌ಪ್ಲೇ ಪ್ಲಾಟ್‌ಫಾರ್ಮ್ಗಳಲ್ಲಿ ತಮ್ಮ ಪ್ರವರ್ತಕ ಕೆಲಸಕ್ಕೆ ಹೆಸರುವಾಸಿಯಾದ ಡಾ ಶೇನ್ ಮಿಯರ್ಷ್ ಹಲವು ಪ್ರಮುಖ ವಿಚಾರಗಳನ್ನು ಹಂಚಿಕೊಂಡರು. ಇಮ್ಯುನೋ-ಆಂಕೊಲಾಜಿ ಕುರಿತು ಡಾ ರಾನ್ ಗೇಯರ್ ಅವರ ಚರ್ಚೆ ಮತ್ತು ಭಾರತದಲ್ಲಿ ಚಿಕಿತ್ಸೆಗೆ ಆವಿಷ್ಕಾರವನ್ನು ಸೇತುವೆಯನ್ನಾಗಿ ಮಾಡುವ ಡಾ ಸಿ.ಎನ್. ರಾಮ್ ಚಂದ್ ಅವರ ಯೋಚನೆಯು ಸಂಭಾಷಣೆಗಳನ್ನು ಹುಟ್ಟುಹಾಕಿತು. ಆರೋಗ್ಯ ರಕ್ಷಣೆಯ ಕ್ಷೇತ್ರದಲ್ಲಿ ಹಲವು ಶಿಸ್ತುಗಳ ಬಳಕೆಗೆ, ಟ್ರಾನ್ಸ್ಲೇಶನಲ್ ಮೆಡಿಸಿನ್ ಔಷಧಕ್ಕೆ ಸಂಬಂಧಿಸಿದಂತೆ ಹೊಸ ವಿಚಾರಗಳನ್ನು ಈ ಸಂದರ್ಭದಲ್ಲಿ ಮಂಡಿಸಲಾಯಿತು.
ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ನಿವೃತ್ತ ಕಾರ್ಯದರ್ಶಿ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಪ್ರೊ. ಟಿ.ರಾಮಸ್ವಾಮಿ ಅವರ ಪ್ರಧಾನ ಭಾಷಣವು ವಿಚಾರ ಸಂಕಿರಣದ ಪ್ರಭಾವವನ್ನು ಮತ್ತಷ್ಟು ಹೆಚ್ಚಿಸಿತು. ಚಿಕಿತ್ಸೆಗಳನ್ನು ಎಲ್ಲರಿಗೂ ಸಿಗುವಂತೆ ಮಾಡುವಲ್ಲಿ ಭಾರತದ ಸಾಮರ್ಥ್ಯವನ್ನು ಅವರು ಒತ್ತಿ ಹೇಳಿದರು. ಒಂದು ತಂಡವು ಮುಂದಿನ ಪೀಳಿಗೆಯ ಇಮ್ಯುನೋಥೆರಪಿ ಮೂಲ ಕೌರ್ಯವನ್ನು ವಿಶಿಷ್ಟವಾಗಿ ಚರ್ಚಿಸಿತು. ಇಂದು ತಂಡವು ಐಐಟಿ ಮದ್ರಾಸ್, ಜಾಗತಿಕ ಸಂಶೋ ಧನಾ ಸಂಸ್ಥೆಗಳು ಮತ್ತು ಉದಯೋನ್ಮುಖ ನವೋದ್ಯಮಗಳ ವಿವಿಧ ತಜ್ಞರಿಂದ ಜೀನೋಮಿಕ್ಸ್ ಔಷಧದಲ್ಲಿ ಅನ್ವಯಿಕ ಪರಿವರ್ತನೆಯ ಪಾತ್ರವನ್ನು ಎತ್ತಿ ತೋರಿಸಿತು.
ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಸಂಸ್ಥಾಪಕ ಮತ್ತು ಸಿಇಒ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಮಾತನಾಡಿ, ಆರ್ಥಿಕ ಅಡೆತಡೆಗಳನ್ನು ಲೆಕ್ಕಿಸದೆ ಅತ್ಯಾಧುನಿಕ ಔಷಧವನ್ನು ಎಲ್ಲರಿಗೂ ಲಭ್ಯವಾಗುವಂತೆ ಮಾಡುವ ಸಾಮೂಹಿಕ ಬದ್ಧತೆಯನ್ನು ಈ ಚರ್ಚೆಯು ಹುಟ್ಟುಹಾಕಿದೆ. ಸಾಂಕ್ರಾಮಿಕವಲ್ಲದ ರೋಗಗಳಿಗೆ ಕಾರಣಗಳು, ವಿಶೇಷವಾಗಿ ಏಷ್ಯಾದ ಜನಸಂಖ್ಯೆಯಲ್ಲಿ ಅಧ್ಯಯನ ಮಾಡುವ ಮೂಲಕ ಈ ವಿಚಾರ ಸಂಕಿರಣದ ಸಾಮೂಹಿಕ ಫಲಿತಾಂಶವು ಮಾನವೀಯ ಶ್ರೇಷ್ಠ ಸೇವೆಯಾಗಬಹುದು. ಯಾವುದೇ ತಾರತಮ್ಯ ವಿಲ್ಲದೆ ಇಮ್ಯುನೋಥೆರಪಿ ಚಿಕಿತ್ಸೆಯನ್ನು ಅಗತ್ಯವಿರುವ ಪ್ರತಿಯೊಬ್ಬ ರೋಗಿಗೆ ತಲುಪಿಸುವಂತೆ ಮಾಡುವ ಮೂಲಕ, ನಾವು ಎಲ್ಲರಿಗೂ ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ಖಾತ್ರಿಪಡಿಸ ಬಹುದು ಎಂದರು.
'ಒಂದು ಜಗತ್ತು ಒಂದು ಕುಟುಂಬ ಮಿಷನ್' ೧೦೦ ದೇಶಗಳಲ್ಲಿ ಸಕ್ರಿಯವಾಗಿದೆ. ಇದು ವಿಶ್ಯ ದಾದ್ಯಂತ ಲಕ್ಷಾಂತರ ಜನರಿಗೆ ಉಚಿತ ಆರೋಗ್ಯ ರಕ್ಷಣೆ, ಶಿಕ್ಷಣ ಮತ್ತು ಪೋಷಣೆಯನ್ನು ಒದಗಿಸುತ್ತದೆ. ರೋಗಿ ಕೇಂದ್ರಿತ ಔಷಧವನ್ನು ವೇಗಗೊಳಿಸುವ ಮತ್ತು ಸುಧಾರಿತ ಆರೈಕೆಯನ್ನು ಎಲ್ಲರಿಗೂ ಲಭ್ಯವಾಗುವಂತೆ ಮಾಡಲು ಜಾಗತಿಕ ಸಹಯೋಗವನ್ನು ಬೆಳೆಸುವ ಮಹತ್ವದ ತಿರುವು ಎಂದು ಬಣ್ಣಿಸಿದರು.