ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Chikkaballapur News: ಕೇಂದ್ರ ರಾಜ್ಯ ಸರಕಾರಗಳು ಮಾರಕ ನೀತಿಗಳ ಮೂಲಕ ಕೃಷಿ ಕ್ಷೇತ್ರವನ್ನು ದಿವಾಳಿಯಾಗಿಸಲಾಗುತ್ತಿದೆ

ದೆಹಲಿಯಲ್ಲಿ ಕೃಷಿ, ಕಾರ್ಮಿಕ, ಎಪಿಎಂಸಿ ಸೇರಿದಂತೆ ಮಾರಕ ಕಾಯ್ದೆಗಳ ವಿರುದ್ಧ ರೈತರು ತಿಂಗಳಾನುಗಟ್ಟಲೇ ಹೋರಾಟ ನಡೆಸಿದರು. ಇದಕ್ಕೆ ಕೊನೆ ಹಂತದಲ್ಲಿ ಕೇಂದ್ರ ಸರ್ಕಾರವು ಮಣಿದು, ನೀತಿಗಳ ಜಾರಿಯಿಂದ ಹಿಂದೆ ಸರಿಯಿತು. ಆದರೂ ರಾಜ್ಯಗಳಲ್ಲಿ ಇಂದಿಗೂ ಕಾರ್ಯ ರೂಪದಲ್ಲಿದ್ದು ಇದರಿಂದ ರೈತಪರ ನಿಜವಾದ ಧೋರಣೆ ಏನೆಂಬುದು ತಿಳಿಯುತ್ತದೆ ಎಂದರು

ಕೃಷಿಕರು ಬೆವರು ಸುರಿಸಿ, ದೇಶದ ಆರ್ಥಿಕಾಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ

ರೈತರ ಹೆಸರನ್ನು ಹೇಳಿಕೊಂಡು ಮಾರಕ ನೀತಿಗಳ ಮೂಲಕ ಕೃಷಿ ಕ್ಷೇತ್ರವನ್ನು ದಿವಾಳಿಯಾಗಿಸಲಾಗುತ್ತಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂದ ಉಪಾಧ್ಯಕ್ಷ ಯು.ಬಸವರಾಜು ಬೇಸರ ವ್ಯಕ್ತಪಡಿಸಿದರು.

Profile Ashok Nayak Feb 22, 2025 10:06 PM

ಚಿಕ್ಕಬಳ್ಳಾಪುರ: ರೈತರ ಹೆಸರನ್ನು ಹೇಳಿಕೊಂಡು ಮಾರಕ ನೀತಿಗಳ ಮೂಲಕ ಕೃಷಿ ಕ್ಷೇತ್ರವನ್ನು ದಿವಾಳಿಯಾಗಿಸಲಾಗುತ್ತಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ ಉಪಾ ಧ್ಯಕ್ಷ ಯು.ಬಸವರಾಜು ಬೇಸರ ವ್ಯಕ್ತಪಡಿಸಿದರು. ನಗರದ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ಪ್ರಾಂತ ರೈತ ಸಂ ಶನಿವಾರ ಹಮ್ಮಿ ಕೊಂಡಿದ್ದ ರೈತರ ಜಿಲ್ಲಾ ಸಂಟನಾ ಸಮಾವೇಶವನ್ನುದ್ದೇಶಿಸಿ ಮಾತನಾಡಿದರು. ನಿರಂತರವಾಗಿ ರೈತ ಚಳವಳಿಗಳು ನಡೆಯು ತ್ತಿವೆ. ಪ್ರಮುಖವಾಗಿ ಕೃಷಿಕರು ಬೆವರು ಸುರಿಸಿ, ದೇಶದ ಆರ್ಥಿಕಾಭಿವೃದ್ಧಿಗೆ ಶ್ರಮಿಸು ತ್ತಿದ್ದಾರೆ. ಇದನ್ನು ಸಮರ್ಪಕ ರೀತಿಯಲ್ಲಿ ಸರ್ಕಾರ ಗಳು ಗುರುತಿಸುವಲ್ಲಿ ವಿಫಲವಾಗಿದ್ದು ಉದ್ದಿಮೆದಾರರ ಪರ ನೀತಿಗಳನ್ನು ರೂಪಿಸುತ್ತಿವೆ. ಮೇಲ್ನೋಟಕ್ಕೆ ವೋಟ್ ಬ್ಯಾಂಕ್ಗಾಗಿ ರೈತರ ಅಭಿವೃದ್ಧಿಯ ಮತ ಜಪಿಸುತ್ತಿವೆ. ಇಂತಹ ಆಡಳಿತ ವ್ಯವಸ್ಥೆಗಳಿಂದ ಕೃಷಿ ವಲಯವು ನಷ್ಟದಾಯಕವಾಗಿ ಪರಿವರ್ತನೆಯಾಗುತ್ತಿವೆ ಎಂದರು.

ದೆಹಲಿಯಲ್ಲಿ ಕೃಷಿ, ಕಾರ್ಮಿಕ, ಎಪಿಎಂಸಿ ಸೇರಿದಂತೆ ಮಾರಕ ಕಾಯ್ದೆಗಳ ವಿರುದ್ಧ ರೈತರು ತಿಂಗಳಾನುಗಟ್ಟಲೇ ಹೋರಾಟ ನಡೆಸಿದರು. ಇದಕ್ಕೆ ಕೊನೆ ಹಂತದಲ್ಲಿ ಕೇಂದ್ರ ಸರ್ಕಾರವು ಮಣಿದು, ನೀತಿಗಳ ಜಾರಿಯಿಂದ ಹಿಂದೆ ಸರಿಯಿತು. ಆದರೂ ರಾಜ್ಯಗಳಲ್ಲಿ ಇಂದಿಗೂ ಕಾರ್ಯರೂಪದಲ್ಲಿದ್ದು ಇದರಿಂದ ರೈತಪರ ನಿಜವಾದ ಧೋರಣೆ ಏನೆಂಬುದು ತಿಳಿಯುತ್ತದೆ ಎಂದರು.

ಇದನ್ನೂ ಓದಿ: Chinnaswamy Stadium: ಚಿನ್ನಸ್ವಾಮಿ ಕ್ರೀಡಾಂಗಣ ಸ್ಟ್ಯಾಂಡ್‌ಗಳಿಗೆ ದಿಗ್ಗಜರ ನಾಮಫಲಕ ಅನಾವರಣ

ವೈದ್ಯ ಡಾ ಅನಿಲ್ ಕುಮಾರ್ ಮಾತನಾಡಿ, ಕಳೆದ 10 ವರ್ಷಗಳಿಂದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಆಯೋಜನೆಯ ಮೂಲಕ ಉದ್ದಿಮೆದಾರರನ್ನು ಪ್ರೋತ್ಸಾಹಿಸುವ ಕಾಳಜಿ ತೋರಲಾಗಿದೆ. ಈಗಾಗಲೇ ಕೃಷಿ ಜಮೀನು ಸ್ವಾಧೀನಪಡಿಸಿ ಕೊಂಡು ರೈತರನ್ನು ಒಕ್ಕಲೆಬ್ಬಿಸುವ ಕೆಲಸವಾಗುತ್ತಿದೆ. ನಿರ್ವಹಣೆ ವೆಚ್ಚಕ್ಕೆ ಅನುಗುಣ ವಾಗಿ ಆದಾಯವಿಲ್ಲದೇ ಕೃಷಿ ವಲಯ ಮೊದಲೇ ಹಿನ್ನಡೆ ಕಾಣುತ್ತಿದೆ. ಇದೆಲ್ಲದರ ಪರಿಹಾರಕ್ಕೆ ಬಲಿಷ್ಠ ಚಳವಳಿಯ ಅಗತ್ಯವಿದೆ ಎಂದರು.

ಪ್ರಾAತ ರೈತ ಸಂದ ರಾಜ್ಯ ಉಪಾಧ್ಯಕ್ಷ ಎಂ.ಪಿ.ಮುನಿವೆಂಕಟಪ್ಪ ಮಾತನಾಡಿ, ಬಡ ಮತ್ತು ಮಧ್ಯಮ ವರ್ಗದ ಹೆಸರಿನಲ್ಲಿ ದಿಕ್ಕು ತಪ್ಪಿಸುವ ಆಡಳಿತ ವ್ಯವಸ್ಥೆಯ ಘೋಷಣೆಗಳಿಗೆ ಮರುಳಾಗಬಾರದು. ಕಾಲ ಕಾಲಕ್ಕೆ ಜಾರಿಗೊಳಿಸುತ್ತಿರುವ ನೀತಿಗಳ ಸಾಧಕ ಬಾಧಕಗಳನ್ನು ಅರಿಯಬೇಕಾಗಿದೆ ಎಂದರು.

ದಲಿತ ಹಕ್ಕುಗಳ ಸಮಿತಿ ರಾಜ್ಯ ಕಾರ್ಯದರ್ಶಿ ಜಿ.ಕೃಷ್ಣಪ್ಪ, ಮುಖಂಡರಾದ ಎಂ.ಎನ್. ರಾಮರೆಡ್ಡಿ, ಮಾಡಪಲ್ಲಿ ಬೈರಾರೆಡ್ಡಿ, ಚೇಳೂರು ಬೈರೆಡ್ಡಿ, ಆನಂದ, ಡಿ.ಟಿ.ಮುನಿಸ್ವಾಮಿ, ಚನ್ನರಾಯಪ್ಪ ಮತ್ತಿತರರು ಇದ್ದರು.