77ನೇ ಗಣರಾಜ್ಯೋತ್ಸವಕ್ಕೆ ಮುಖ್ಯಶಿಕ್ಷಕ ಗೈರು ಸಸ್ಪೆಂಡ್‌ಗೆ ಗ್ರಾಮಸ್ಥರ ಆಗ್ರಹ
ತಾಲ್ಲೂಕಿನ ಗೂಳೂರು ಹೋಬಳಿ ಹಾಗೂ ಗ್ರಾಪಂ ವ್ಯಾಪ್ತಿಯ ಸದ್ದುಪಲ್ಲಿ ಮತ್ತು ಸದ್ದುಪಲ್ಲಿ ಲಂಬಾಣಿ ತಾಂಡಾ ಗ್ರಾಮಗಳಿಗೆ ಇರುವ ಏಕೈಕ ಸರಕಾರಿ ಶಾಲೆಯಲ್ಲಿ ಮುಖ್ಯ ಶಿಕ್ಷಕ ಕೆ.ಶ್ರೀನಿ ವಾಸ ಎಂಬುವವರು 77 ನೇ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಬಂದು ಧ್ವಜಾರೋಹಣ ನೆರವೇರಿಸಬೇಕಾಗಿತ್ತು. ಆದರೆ ಅವರು ಕಾರ್ಯಕ್ರಮಕ್ಕೆ ಗೈರು ಹಾಜರಾಗಿ ಕರ್ತವ್ಯಲೋಪ ಎಸಗಿದ್ದಾರೆ
-
ಬಾಗೇಪಲ್ಲಿ: 77ನೇ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಮುಖ್ಯ ಶಿಕ್ಷಕ ಶ್ರೀನಿವಾಸ ಹಾಜರಾಗದೆ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದಾರೆ ಎಂದು ಸದ್ದುಪಲ್ಲಿ ಹಿರಿಯ ಸರಕಾರಿ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ
ಶ್ರೀರಾಮಪ್ಪ ಗಂಭೀರ ಆರೋಪ ಮಾಡಿದ್ದಾರೆ.
ತಾಲ್ಲೂಕಿನ ಗೂಳೂರು ಹೋಬಳಿ ಹಾಗೂ ಗ್ರಾಪಂ ವ್ಯಾಪ್ತಿಯ ಸದ್ದುಪಲ್ಲಿ ಮತ್ತು ಸದ್ದುಪಲ್ಲಿ ಲಂಬಾಣಿ ತಾಂಡಾ ಗ್ರಾಮಗಳಿಗೆ ಇರುವ ಏಕೈಕ ಸರಕಾರಿ ಶಾಲೆಯಲ್ಲಿ ಮುಖ್ಯ ಶಿಕ್ಷಕ ಕೆ.ಶ್ರೀನಿವಾಸ ಎಂಬುವವರು 77 ನೇ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಬಂದು ಧ್ವಜಾರೋಹಣ ನೆರವೇರಿಸಬೇಕಾಗಿತ್ತು ಆದರೆ ಅವರು ಕಾರ್ಯಕ್ರಮಕ್ಕೆ ಗೈರು ಹಾಜರಾಗಿ ಕರ್ತವ್ಯಲೋಪ ಎಸಗಿದ್ದಾರೆ.
ಇವರ ಅನುಪಸ್ಥಿತಿಯಲ್ಲಿ ಅತಿಥಿ ಶಿಕ್ಷಕರು ಧ್ವಜಾರೋಹಣ ಮಾಡಿದ್ದಾರೆ ಇವರು ಇದೇ ಮೊದಲಲ್ಲ ಪ್ರತಿ ಸರಕಾರಿ ಕಾರ್ಯಕ್ರಮಕ್ಕೂ ಸತತವಾಗಿ ಗೈರು ಹಾಜರಾಗುತ್ತಲೇ ಇರುತ್ತಾರೆ. ಇನ್ನು ಶಾಲೆಗೆ ಬರುವುದು ಕೂಡ ಅಪರೂಪವಾಗಿದೆ ಆದ್ದರಿಂದ ಕೂಡಲೇ ಇವರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯ ಮಾಡಿದ್ದಾರೆ.
ಇದನ್ನೂ ಓದಿ: Raghavendra Chitravani: ರಾಘವೇಂದ್ರ ಚಿತ್ರವಾಣಿಗೆ 50ರ ಸಡಗರ; ಲೋಗೋ ಲಾಂಚ್
35 ವಿದ್ಯಾರ್ಥಿಗಳು ಇರುವ ಈ ಶಾಲೆಯಲ್ಲಿ 1 ರಿಂದ 7ನೇ ತರಗತಿಯವರೆಗೆ ಇದ್ದು ಇಬ್ಬರು ಅತಿಥಿ ಶಿಕ್ಷಕರಾದ ಶ್ರೀನಿವಾಸ ಮತ್ತು ಅವರ ಪತ್ನಿ ಸರಳ ಎಂಬ ದಂಪತಿಗಳು ಮಾತ್ರ ಕರ್ತವ್ಯ ನಿರ್ವಹಸುತ್ತಿದ್ದಾರೆ.
ಇನ್ನು ಮುಖ್ಯ ಶಿಕ್ಷಕ ಕೆ.ಶ್ರೀನಿವಾಸ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ ಇದು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೂ ಮಾಹಿತಿ ಇದ್ದರೂ ಅವರು ಯಾವುದೇ ಕ್ರಮಕ್ಕೆ ಮುಂದಾ ಗಿಲ್ಲ. ಇವರ ಬೇವಾಬ್ದಾರಿಯಿಂದ ಮಕ್ಕಳು ದಿನೇ ದಿನೇ ಬೇರೆ ಬೇರೆ ಶಾಲೆಗಳಿಗೆ ಹೋಗಿ ದಾಖಲಾಗುತ್ತಿದ್ದಾರೆ ಎಂದು ಗ್ರಾಮಸ್ಥರು ಕಿಡಿ ಕಾರಿದ್ದಾರೆ.
*
ನಮ್ಮ ಸದ್ದುಪಲ್ಲಿ ಶಾಲೆಯ ಮುಖ್ಯ ಶಿಕ್ಷಕರ ಕಾರ್ಯವೈಖರಿ ಸರಿಯಿಲ್ಲ ಅವರು ಶಾಲೆಗೆ ಬರುವುದು ಅಪರೂಪವಾಗಿದೆ ಇಂದು ಸಹಾ ಅವರು ಧ್ವಜಾರೋಹಣಕ್ಕೆ ಬರದೆ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದಾರೆ ಈ ಘಟನೆಯ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದಾಗ ಸಿಒ ರವಿಕುಮಾರ್ ಅವರನ್ನು ಕಳುಹಿಸಿದ್ದಾರೆ. ಇವರು ಪ್ರತಿ
ಬಾರಿಯೂ ಇದೇ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಆದ್ದರಿಂದ ಕೂಡಲೇ ಅವರ ವಿರುದ್ದ ಕ್ರಮ ಕೈಗೊಳ್ಳಬೇಕು.
ಶ್ರೀರಾಮಪ್ಪ, ಎಸ್.ಡಿ.ಎಂ.ಸಿ ಅಧ್ಯಕ್ಷ ಸದ್ದುಪಲ್ಲಿ ಶಾಲೆ.
ಇಂದು ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಗೈರು ಗೈರಾಗಿದ್ದ ಸದ್ದುಪಲ್ಲಿ ಶಾಲೆಯ ಮುಖ್ಯ ಶಿಕ್ಷಕ ಶ್ರೀನಿವಾಸ ಅವರು
ಧ್ವಜಾರೋಹಣ ಮಾಡಿಲ್ಲ ಎಂದು ಮಾಹಿತಿ ಬಂದಿದೆ ಅವರಿಗೆ ನಾನು ಸಾಕಷ್ಟು ಸಲ ಸರಿಯಾಗಿ ಕೆಲಸ ಮಾಡು ಎಂದು ಹೇಳಿದ್ದೇನೆ ಅವರು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಅವರಿಗೆ 3-4 ನೋಟೀಸ್ ನೀಡುತ್ತೇನೆ ಅದಕ್ಕೆ ಉತ್ತರ ಬಾರದಿದ್ದಾಗ ಅಮಾನತ್ ಮಾಡಲು
ಮುಂದಾಗುತ್ತೇನೆ.
ಎನ್.ವೆಂಕಟೇಶಪ್ಪ ಕ್ಷೇತ್ರ ಶಿಕ್ಷಣಾಧಿಕಾರಿ, ಬಾಗೇಪಲ್ಲಿ.