ಪುರಾಣ ಪ್ರಸಿದ್ಧ ಶ್ರೀರಂಗನಾಥಸ್ವಾಮಿ ಬ್ರಹ್ಮರಥೋತ್ಸವ: ಕೂದಲೆಳೆ ಅಂತರದಲ್ಲಿ ಧರಾಘಾತದಿಂದ ಪಾರಾದ ತೇರು
ರಥೋತ್ಸವದ ಅಂಗವಾಗಿ ದೇವಾಲಯವನ್ನು ತಳಿರು ತೋರಣಗಳಿಂದ ಸಿಂಗರಿಸಿದಂತೆ ರಥವನ್ನು ಕೂಡ ವಿಜಯಧ್ವಜಗಳು, ತೋಮಾಲೆ ಹಾಗೂ ಬಗೆಬಗೆಯ ಹೂವುಗಳಿಂದ ಅಲಂಕರಿಸಲಾಗಿದ್ದು, ಅಲಂಕೃತ ತೇರಿನ ಮಂಟಪದಲ್ಲಿ ರಂಗನಾಥಸ್ವಾಮಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದು, ಭಕ್ತರ ಜಯಘೋಷದ ನಡುವೆ ದೇವಾಲಯದ ಹೊರಭಾಗದಲ್ಲಿ ತೇರನ್ನು ಪ್ರದಕ್ಷಿಣೋ ಪಾದಿಯಲ್ಲಿ ಮೆರವಣಿಗೆ ಮಾಡಲಾಯಿತು.
ರಂಗನಾಥಸ್ವಾಮಿಯ ರಥೋತ್ಸವ -
ದೀರ್ಘ ನಿಟ್ಟುಸಿರು ಬಿಟ್ಟ ಭಕ್ತಗಣ : ದೇವಾಲಯ ಪ್ರದಕ್ಷಿಣೆ ನಂತರ ಸ್ವಸ್ಥಾನ ಸೇರಿದ ರಂಗನಾಥಸ್ವಾಮಿ ರಥ
ಚಿಕ್ಕಬಳ್ಳಾಪುರ: ಪ್ರತಿವರ್ಷ ನಡೆದಂತೆ ಪುರಾಣ ಪ್ರಸಿದ್ಧ ರಂಗನಾಥಸ್ವಾಮಿ ಬ್ರಹ್ಮರಥೋತ್ಸವವು ಮಾರ್ಗಶಿರ ಹುಣ್ಣಿಮೆಯಂದು ಅಪಾರ ಜನಸ್ತೋಮದ ನಡುವೆ ಶ್ರದ್ಧಾಭಕ್ತಿಯಿಂದ ನಡೆಯಿತು.
ತಾಲೂಕಿನ ತಿಪ್ಪೇನಹಳ್ಳಿ ಪಂಚಾಯಿತಿ ಬೋದಗಾನಹಳ್ಳಿ ಸಮೀಪದ ರಂಗಸ್ಥಳದಲ್ಲಿರುವ ಶ್ರೀ ರಂಗನಾಥಸ್ವಾಮಿ ಬ್ರಹ್ಮರತೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶ್ರದ್ಧಾ ಭಕ್ತಿಯಿಂದ ಗೋವಿಂದ ನಾಮಸ್ಮರಣೆಯ ಜಯಘೋಷದ ನಡುವೆ ಶ್ರದ್ಥಾ ಭಕ್ತಿಯಿಂದ ನೆರವೇರಿತು.
ರಥೋತ್ಸವದ ಅಂಗವಾಗಿ ದೇವಾಲಯವನ್ನು ತಳಿರು ತೋರಣಗಳಿಂದ ಸಿಂಗರಿಸಿದಂತೆ ರಥವನ್ನು ಕೂಡ ವಿಜಯಧ್ವಜಗಳು, ತೋಮಾಲೆ ಹಾಗೂ ಬಗೆಬಗೆಯ ಹೂವುಗಳಿಂದ ಅಲಂಕರಿಸಲಾಗಿದ್ದು, ಅಲಂಕೃತ ತೇರಿನ ಮಂಟಪದಲ್ಲಿ ರಂಗನಾಥಸ್ವಾಮಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದು, ಭಕ್ತರ ಜಯಘೋಷದ ನಡುವೆ ದೇವಾಲಯದ ಹೊರಭಾಗದಲ್ಲಿ ತೇರನ್ನು ಪ್ರದಕ್ಷಿಣೋ ಪಾದಿಯಲ್ಲಿ ಮೆರವಣಿಗೆ ಮಾಡಲಾಯಿತು.
ಇದನ್ನೂ ಓದಿ: Chikkaballapur News: ಪುಟ್ಟತಿಮ್ಮನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮಂಚನಬಲೆ ಸದಾಶಿವ ನೆರವು
ಬ್ರಹ್ಮ ರಥೋತ್ಸವದ ಅಂಗವಾಗಿ ಭಕ್ತರು ಅನ್ನಸಂತರ್ಪಣೆ ಏರ್ಪಡಿಸಿದ್ದು, ಸಾಲಿಗ್ರಾಮ ಶಿಲೆಯ ರಂಗನಾಥಸ್ವಾಮಿಯನ್ನು ಹೂಗಳಿಂದ ಅಲಂಕರಿಸಲಾಗಿತ್ತು.ಭಕ್ತಾಧಿಗಳು ಬೆಳಗಿನಿಂದಲೇ ದೇವಾಲಯಕ್ಕೆ ಬಂದು ದೇವರ ದರ್ಶನ ಪಡೆದು ಪುನೀತರಾಗುತ್ತಿದ್ದ ದೃಶ್ಯಗಳು ಸಾಮಾನ್ಯ ವಾಗಿದ್ದವು.
ರಥೋತ್ಸವವನ್ನು ಕಣ್ತುಂಬಿಕೊಳ್ಳಲು ಸಮಾಜ ಸೇವಕ ಸಂದೀಪ್‌ರೆಡ್ಡಿ, ಕಂಡಕನಹಳ್ಳಿ ಹರೀಶ್, ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್. ಆಂಜನೇಯರೆಡ್ಡಿ, ಸೇರಿದಂತೆ ಅನೇಕ ಮುಖಂಡರು ಭಾಗಿಯಾಗಿದ್ದರು.
*
ತಾಲೂಕಿನ ರಂಗಸ್ಥಳದಲ್ಲಿ ಪಂಚಗಿರಿಗಳ ಸಾಲಿನಲ್ಲಿ ನೆಲೆಸಿರುವ ಶೀದೇವಿ ಭೂದೇವಿ ಸಮೇತ ರಂಗನಾಥಸ್ವಾಮಿಯ ಬ್ರಹ್ಮರಥೋತ್ಸವವು ಗುರುವಾರ ಮಹೂರ್ತದಂತೆ ಸಕಾಲದಲ್ಲಿ ನಡೆದರೂ ಕೂಡ ಭಕ್ತಾಧಿಗಳ ಎಚ್ಚರವಿಲ್ಲದ ನಡೆ ಮತ್ತು ಭೂಮಿ ಸಮತಟ್ಟಿಲ್ಲದ ಪರಿಣಾಮ ತೇರು ನೆಲಕ್ಕುರು ವಂತೆ ವಾಲಿತು. ಹುಣಸೆಮರ ಮತ್ತು ಭಕ್ತರ ಸಹಾಯದಿಂದಾಗಿ ಬೀಳಲಿದ್ದ ತೇರು ಯಥಾಸ್ಥಾನಕ್ಕೆ ಬಂದು ನಿಂತಿತು.ಈ ಅನಿರೀಕ್ಷಿತ ಬೆಳವಣಿಗೆ ಅಪಾರ ಜನಸ್ತೋಮ ಬೆಕ್ಕಸ ಬೇರಗಾಗುವಂತೆ ಮಾಡಿದ್ದಲ್ಲದೆ ದೊಡ್ಡ ಅನಾಹುತವೊಂದು ತಪ್ಪಿದಂತಾದ ಕಾರಣ ನಿಟ್ಟುಸಿರು ಬಿಡುವಂತೆ ಆಯಿತು. ಈ ವೇಳೆ ಭಕ್ತಾಧಿಗಳು ಗಿರಿಗಳಲ್ಲಿ ಅನುರಣಿಸುವಂತೆ ಗೋವಿಂದ ನಾಮಸ್ಮರಣೆ ಮಾಡುತ್ತಾ ತೇರನ್ನು ನಿಧಾನಕ್ಕೆ ಎಳೆಯುತ್ತ ಮುಂದೆ ಸಾಗಿದರು.ಈ ವೇಳೆ ನೆರೆದಿದ್ದ ಭಕ್ತಗಣ ತಲೆಗೊಂದು ಮಾತಂತೆ ಈ ಘಟನೆಯ ವಿಶ್ಲೇಷಣೆಯಲ್ಲಿ ತೊಡಗಿದ್ದು ಕಂಡು ಬಂತು.
ಈ ಘಟನೆಯಿಂದ ಜಾಗೃತರಾದ ಭಕ್ತರು ಗೋವಿಂದ ನಾಮಸ್ಮರಣೆಯ ಜಯಘೋಷದ ನಡುವೆ ತೇರನ್ನು ದೇವಾಲಯ ಪ್ರದಕ್ಷಿಣೆ ಮಾಡಿದರು.