ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಭಾರತದ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ: ಇಲ್ಲಿನ ವೈದ್ಯಕೀಯ ಸೌಲಭ್ಯ ಕೊಂಡಾಡಿದ ಅಮೆರಿಕ ನಿವಾಸಿ

Viral News: ಭಾರತದ ಪ್ರವಾಸೋದ್ಯಮ ಹಾಗೂ ಆರೋಗ್ಯ ಸೇವೆ ಮತ್ತೊಮ್ಮೆ ಸದ್ದು ಮಾಡುತ್ತಿದೆ. ಇಲ್ಲಿನ ಕೈಗೆಟುಕುವ ಗುಣಮಟ್ಟದ ಸೌಲಭ್ಯದ ಬಗ್ಗೆ ಅಮೆರಿಕದ ಕಂಟೆಂಟ್ ಕ್ರಿಯೇಟರ್ ಒಬ್ಬರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಡಿಶಾದ ಗ್ರಾಮೀಣ ಸರ್ಕಾರಿ ಆಸ್ಪತ್ರೆಯಲ್ಲಿ ತಾವು ಪಡೆದ ಉಚಿತ ಚಿಕಿತ್ಸೆಯ ಅನುಭವವನ್ನುಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಭಾರತದ ಆರೋಗ್ಯ ಸೇವೆಗೆ ಫಿದಾ ಆದ ಅಮೆರಿಕ ನಿವಾಸಿ

ಭಾರತದ ಆರೋಗ್ಯ ಸೇವೆಗೆ ಫಿದಾ ಆದ ಅಮೆರಿಕ ನಿವಾಸಿ -

Profile
Pushpa Kumari Aug 17, 2026 11:01 PM

ನವದೆಹಲಿ, ಆ. 17: ಭಾರತೀಯ ಸಂಸ್ಕತಿ, ಆಚಾರ ವಿಚಾರದ ಬಗ್ಗೆ ಮೆಚ್ಚುಗೆ ವ್ಯಕ್ತರಪಡಿಸಿದ ಅನೇಕ ವಿದೇಶಿಗರು ಇದ್ದಾರೆ. ಇದೀಗ ಇಲ್ಲಿನ ಪ್ರವಾಸೋದ್ಯಮ ಹಾಗೂ ಆರೋಗ್ಯ ಸೇವೆ ಮತ್ತೊಮ್ಮೆ ಸದ್ದು ಮಾಡುತ್ತಿದೆ. ಭಾರತದ ಕೈಗೆಟುಕುವ ಗುಣಮಟ್ಟದ ಸೌಲಭ್ಯದ ಬಗ್ಗೆ ಅಮೆರಿಕದ ಕಂಟೆಂಟ್ ಕ್ರಿಯೇಟರ್ ಒಬ್ಬರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಡಿಶಾದ ಗ್ರಾಮೀಣ ಸರ್ಕಾರಿ ಆಸ್ಪತ್ರೆಯಲ್ಲಿ ತಾವು ಪಡೆದ ಉಚಿತ ಚಿಕಿತ್ಸೆಯ ಅನುಭವವನ್ನು(Viral News) ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಅಮೆರಿಕದ ಕಂಟೆಟ್ ಕ್ರಿಯೇಟರ್ ಮೈಕ್ ಇಲ್ಲಿನ ಸೌಂದರ್ಯ ಸವಿಯಲು ಆಗಮಿಸಿದ್ದರು. ಒಡಿಶಾದಲ್ಲಿ ಪ್ರಯಾಣಿಸುವಾಗ ಸ್ಥಳೀಯ ಆಹಾರವನ್ನು ಅತಿಯಾಗಿ ಸೇವಿಸಿದ್ದು, ಭಾರತ ಪ್ರವಾಸದ ಐದನೇ ದಿನದಂದು ತೀವ್ರ ಅಸ್ವಸ್ಥ‌ನಾಗಿದ್ದರು. ಕೂಡಲೇ ಅವರು ಒಡಿಶಾದ ಗ್ರಾಮೀಣ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆಯನ್ನು ಪಡೆದಿದ್ದಾರೆ. ಇಲ್ಲಿನ ಆರೋಗ್ಯ ಸೇವೆ ನಿಜಕ್ಕೂ ಮೆಚ್ಚುವಂತದ್ದು ಎಂದು ಅನುಭವವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ವಿಡಿಯೊ ನೋಡಿ:

ಸ್ಥಳೀಯ ಆಹಾರವನ್ನು ಅತಿಯಾಗಿ ಸೇವಿಸಿದ್ದರಿಂದ ಸತತ 12 ಗಂಟೆಗಳ ಕಾಲ ಪ್ರತಿ 15 ನಿಮಿಷಕ್ಕೊಮ್ಮೆ ವಾಂತಿಯಾಗುತ್ತಿತ್ತು. ಹೀಗಾಗಿ ಹತ್ತಿರದ ಗ್ರಾಮೀಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಈ ಬಗ್ಗೆ ಮಾತನಾಡಿದ ಅವರು, ʼʼಇದು ಆಹಾರ ಕೆಟ್ಟು ಹೋಗಿದ್ದರಿಂದ ಆಗಿದ್ದಲ್ಲ. ಬದಲಿಗೆ ಆಹಾರ ಅತ್ಯಂತ ರುಚಿಯಾಗಿದ್ದರಿಂದ ನಾನೇ ಅತಿಯಾಗಿ ಸೇವಿಸಿ ತೊಂದರೆಗೆ ಸಿಲುಕಿದೆʼʼ ಎಂದಿದ್ದಾರೆ.

ರೈಲು ಹಳಿಗೆ ಬಿದ್ದ ಮಕ್ಕಳನ್ನು ರಕ್ಷಿಸಲು ದೇಹವನ್ನೇ ರಕ್ಷಾ ಕವಚವಾಗಿಸಿದ ತಾಯಿ!

ಚಿಕಿತ್ಸೆಯ ಸಮಯದಲ್ಲಿ ಮೈಕ್ ಒಂದಲ್ಲ ಎರಡು ಚುಚ್ಚುಮದ್ದನ್ನು ಪಡೆಯಬೇಕಾಗಿತ್ತು ಎಂದು ತಿಳಿಸಿದ್ದಾರೆ. ಗುಣಮುಖರಾದ ನಂತರ, ಅವರಿಗೆ ಆಸ್ಪತ್ರೆಯ ಬಿಲ್ ಎಷ್ಟಾಗಬಹುದು ಎನ್ನುವ ಆತಂಕವಿತ್ತು. ʼʼಅದೇ ಅಮೆರಿಕದಲ್ಲಿ ಒಂದು IV, ವಾಕರಿಕೆ ನಿವಾರಕ ಔಷಧ ಮತ್ತು ಎರಡು ಇಂಜೆಕ್ಷನ್‌ಗಳಿಗೆ ಸುಲಭವಾಗಿ ಎರಡು ಸಾವಿರ ಡಾಲರ್‌ಗಳು ವೆಚ್ಚ ವಾಗಬಹುದು. ಆದರೆ ಇಲ್ಲಿ ಉಚಿತವಾಗಿ ಚಿಕಿತ್ಸೆ ನೀಡಿದ್ದು ನನಗೆ ಆಶ್ಚರ್ಯ ತಂದಿದೆʼʼ ಎಂದು ಬರೆದುಕೊಂಡಿದ್ದಾರೆ.

ಗ್ರಾಮೀಣ ಆಸ್ಪತ್ರೆಯಲ್ಲಿನ ಮೈಕ್‌ನ ಅನುಭವವು ಭಾರತೀಯ ಆರೋಗ್ಯ ವ್ಯವಸ್ಥೆಗೆ ವ್ಯಾಪಕ ಪ್ರಶಂಸೆ ಪಡೆದಿದೆ. ಈ ಬಗ್ಗೆ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಒಬ್ಬರು, ʼʼಒಡಿಶಾ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ಸೇವೆ ಹೆಮ್ಮೆಯ ಕ್ಷಣ. ಅದೇ ಅಮೆರಿಕದಲ್ಲಿ ಚಿಕಿತ್ಸೆಗಳು ಸಾವಿರಾರು ಡಾಲರ್‌ಗಳಷ್ಟು ವೆಚ್ಚವಾಗುತ್ತವೆ, ಅದು ಕೂಡ ಅಪಾಯಿಂಟ್‌ಮೆಂಟ್‌ಗಾಗಿ ದಿನಗಟ್ಟಲೆ ಕಾಯಬೇಕಾಗುತ್ತದೆʼʼ ಎಂದು ಹೇಳಿದ್ದಾರೆ.