ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ನಾಮಗೊಂಡ್ಲು ಡೇರಿಯಿಂದ ಹಾಲು ಉತ್ಪಾದಕರಿಗೆ ಯುಗಾದಿ ಕೊಡುಗೆ

ಕೃಷಿ ಚಟುವಟಿಕೆಗಳ ಜೊತೆಗೆ ಹೈನೋದ್ಯಮವು ರೈತಾಪಿ ವರ್ಗದವರಿಗೆ ಆಸರೆಯಾಗಿದೆ. ಪ್ರತೀ ರೈತಾಪಿ ಕುಟುಂಬಕ್ಕೆ ಆರ್ಥಿಕ ಮೂಲ ಒದಗಿಸುವ ಮೂಲಕ ಅವರ ಬಾಳಿಗೆ ಬೆಳಕು ನೀಡುತ್ತಿದೆ. ತಾಲ್ಲೂಕು ಬಹುತೇಕ ಡೇರಿಗಳು ನಷ್ಟದಲ್ಲಿರುವ ಕಾಲದಲ್ಲಿ ನಾಮಗೊಂಡ್ಲು ಡೇರಿಯು ಉತ್ತಮ ಲಾಭಾಂಶ ಹೊಂದಿರುವುದು ಸಂತಸದ ವಿಚಾರವಾಗಿದೆ.

ನಾಮಗೊಂಡ್ಲು ಡೇರಿಯಿಂದ ಹಾಲು ಉತ್ಪಾದಕರಿಗೆ ಯುಗಾದಿ ಕೊಡುಗೆ

ರೈತರ ಬದುಕಿಗೆ ಆಸರೆಯಾಗಿರುವ ಹೈನುಗಾರಿಕೆಯನ್ನು ಬಲಪಡಿಸಿ ಹಾಲು ಉತ್ಪಾದಕರ ಭವಿಷ್ಯವನ್ನು ಉಜ್ವಲ ಮಾಡುವುದು ಸರ್ಕಾರ ಮತ್ತು ಹಾಲು ಒಕ್ಕೂಟದ ಜವಾಬ್ದಾರಿಯಾಗಿದೆ ಎಂದು ಮಾಜಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ತಿಳಿಸಿದರು. -

Ashok Nayak
Ashok Nayak Mar 20, 2026 11:24 PM

ಗೌರಿಬಿದನೂರು : ರೈತರ ಬದುಕಿಗೆ ಆಸರೆಯಾಗಿರುವ ಹೈನುಗಾರಿಕೆಯನ್ನು ಬಲಪಡಿಸಿ ಹಾಲು ಉತ್ಪಾದಕರ ಭವಿಷ್ಯವನ್ನು ಉಜ್ವಲ ಮಾಡುವುದು ಸರ್ಕಾರ ಮತ್ತು ಹಾಲು ಒಕ್ಕೂಟದ ಜವಾಬ್ದಾರಿಯಾಗಿದೆ ಎಂದು ಮಾಜಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ( Former Minister N.H. Sivashankar Reddy)ತಿಳಿಸಿದರು.

ತಾಲ್ಲೂಕಿನ ನಾಮಗೊಂಡ್ಲು ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಹಾಲು ಉತ್ಪಾದಕರಿಗೆ ಯುಗಾದಿ ಕೊಡುಗೆಯಾಗಿ ಹಾಲಿನ ಪ್ರೋತ್ಸಾಹ ಧನ ಮತ್ತು ತುಪ್ಪ ನೀಡಿ ಮಾತನಾಡಿದರು.

ಕೃಷಿ ಚಟುವಟಿಕೆಗಳ ಜೊತೆಗೆ ಹೈನೋದ್ಯಮವು ರೈತಾಪಿ ವರ್ಗದವರಿಗೆ ಆಸರೆಯಾಗಿದೆ. ಪ್ರತೀ ರೈತಾಪಿ ಕುಟುಂಬಕ್ಕೆ ಆರ್ಥಿಕ ಮೂಲ ಒದಗಿಸುವ ಮೂಲಕ ಅವರ ಬಾಳಿಗೆ ಬೆಳಕು ನೀಡುತ್ತಿದೆ. ತಾಲ್ಲೂಕು ಬಹುತೇಕ ಡೇರಿಗಳು ನಷ್ಟದಲ್ಲಿರುವ ಕಾಲದಲ್ಲಿ ನಾಮಗೊಂಡ್ಲು ಡೇರಿಯು ಉತ್ತಮ ಲಾಭಾಂಶವನ್ನು ಹೊಂದಿರುವುದು ಸಂತಸದ ವಿಚಾರವಾಗಿದೆ.

ಇದನ್ನೂ ಓದಿ: Chikkaballapur News: ಸೇವಾ ಮನೋಭಾವದಲ್ಲಿ ಮೆರೆಯಿಸಿದ ಸಚಿವ ಡಾ.ಎಂ.ಸಿ.ಸುಧಾಕರ್ ಜನ್ಮದಿನಾಚರಣೆ

ಯುಗಾದಿ ಹಬ್ಬದ ಅಂಗವಾಗಿ ಡೇರಿಯಲ್ಲಿನ ಎಲ್ಲ ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ಹಾಗೂ ನಂದಿನಿ ತುಪ್ಪ ನೀಡುತ್ತಿದ್ದಾರೆ. ಸರ್ಕಾರ ಮತ್ತು ಹಾಲು ಒಕ್ಕೂಟಕ್ಕೆ ಮನವಿ ನೀಡಿ ಡೇರಿಗೆ ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಹೇಳಿದರು.

ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಒಕ್ಕೂಟದ ನೂತನ ನಿರ್ದೇಶಕ ದಿನೇಶ್ ಮಾತನಾಡಿ, ಇಡೀ ತಾಲ್ಲೂಕಿನಲ್ಲಿ ಪ್ರಪ್ರಥಮ ಬಾರಿಗೆ ಗುಣಮಟ್ಟದ ಹಾಲನ್ನು ಒಕ್ಕೂಟಕ್ಕೆ ಪೂರೈಕೆ ಮಾಡಿ ಉತ್ತಮ ಲಾಭಾಂಶ ಹೊಂದಿರುವ ನಾಮಗೊಂಡ್ಲು ಡೈರಿಯು ಸದಾ ರೈತರ ಬಗ್ಗೆ ಚಿಂತಿಸು ವುದು ಸಂತಸದ ವಿಚಾರವಾಗಿದೆ. ಮೊದಲ ಬಾರಿಗೆ ಹಾಲು ಉತ್ಪಾದಕರಿಗೆ ಹಾಲಿನ ಪ್ರೋತ್ಸಾಹ ಧನ ನೀಡಿರುವುದು ಹೆಮ್ಮೆಯ ವಿಚಾರವಾಗಿದೆ. ಇಲ್ಲಿನ ಡೇರಿಗೆ ಅಗತ್ಯವಿರುವ ಹೆಚ್ಚುವರಿ ಸಾಮರ್ಥ್ಯದ ಹಾಲು ಶೇಖರಣಾ ಘಟಕ ನಿರ್ಮಾಣ ಮಾಡಿ, ಸೋಲಾರ್ ವ್ಯವಸ್ಥೆ ಮಾಡಲು ಒಕ್ಕೂಟಕ್ಕೆ ಮನವಿ ನೀಡಿದ್ದು, ಮುಂದಿನ ಬಜೆಟ್ ನಲ್ಲಿ ಶೀಘ್ರದಲ್ಲೇ ಅನುಮೋದನೆ ಮಾಡಿಸಲಾಗುವುದು ಎಂದು ಹೇಳಿದರು.

ಸಂಘದ ಅಧ್ಯಕ್ಷರಾದ ಚಿಕ್ಕ ಆದೆಪ್ಪ ಮಾತನಾಡಿ, ಪ್ರಸ್ತುತ ಬೇಸಿಗೆ ಇರುವುದರಿಂದ ಉತ್ಪಾದಕರಿಗೆ ಹೈನುರಾಸುಗಳ ನಿರ್ವಹಣೆಯ ವೆಚ್ಚ ಹೆಚ್ಚಾಗುವುದರಿಂದ ಅದನ್ನು ಕಡಿಮೆ ಮಾಡುವ ಉದ್ದೇಶದಿಂದ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಚರ್ಚಿಸಿ ಈ ಹಿಂದೆ ಎನ್.ಕೆ.ಮೋಹನ್ ರವರು ಅಧ್ಯಕ್ಷರಾಗಿದ್ದ ವೇಳೆ ಉತ್ಪಾದಕರಿಗೆ ಪ್ರತಿ ಲೀಟರ್ ಹಾಲಿಗೆ ಒಂದು ರೂಪಾಯಿ ಪ್ರೋತ್ಸಾಹ ಧನ ಜಾರಿ ಮಾಡಿದ್ದರು. ಅದೇ ಯೋಜನೆಯನ್ನು ಈಗಲೂ ಕೂಡ ಯುಗಾದಿ ಕೊಡುಗೆಯಾಗಿ ಉತ್ಪಾದಕರಿಗೆ 6 ತಿಂಗಳ (ಏಪ್ರಿಲ್ ನಿಂದ ಸೆಪ್ಟೆಂಬರ್ ವರೆಗೆ) ಡೇರಿಗೆ ಹಾಲು ಸರಬರಾಜು ಮಾಡಿರುವ ಉತ್ಪಾದಕರಿಗೆ ಪ್ರತಿ ಲೀಟರ್ ಹಾಲಿಗೆ 1 ರೂಪಾಯಿಯಂತೆ ಹೆಚ್ಚುವರಿ ಪ್ರೋತ್ಸಾಹ ಧನ ನೀಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಎನ್.ಬಾಲಕೃಷ್ಣ, ನಿರ್ದೇಶಕರಾದ ಎನ್.ಕೆ.ಮೋಹನ್, ಆಶ್ವತರೆಡ್ಡಿ, ವೆಂಕಟಕೃಷ್ಣ, ಎನ್.ನರಸಿಂಹರೆಡ್ಡಿ, ಪ್ರಕಾಶ್, ಚಿಕ್ಕಗಂಗಪ್ಪ, ಉಮಾ ಶಂಕರರೆಡ್ಡಿ, ವೆಂಕಟೇಶ್, ಲಕ್ಷ್ಮಮ್ಮ ಮತ್ತು ವೆಂಕಟಲಕ್ಷ್ಮಮ್ಮ ಹಾಗೂ ಸ್ಥಳೀಯ ಮುಖಂಡರಾದ  ರಮೇಶ್ ನಾಯಕ್, ಮಂಜುನಾಥ್ ರೆಡ್ಡಿ, ರಾಂಬಾಬು, ಕಾರ್ಯದರ್ಶಿ ಸೋಮೇಗೌಡ, ಸಿಬ್ಬಂದಿಗಳಾದ ನರೇಂದ್ರಬಾಬು, ವೇಣುಗೋಪಾಲ್, ಅವಲಪ್ಪ ಸೇರಿದಂತೆ ಇತರರು  ಹಾಜರಿದ್ದರು.