Gauribidanur News: ಗೌರಿಬಿದನೂರಿನಲ್ಲಿ ತಾರಕಕ್ಕೇರಿದ ಹಾಲಿ-ಮಾಜಿ ಶಾಸಕರ ವಾಕ್ಸಮರ
ಪೊಲೀಸ್ ಠಾಣೆಗಳಲ್ಲಿ ಸಾಮಾನ್ಯ ಜನರಿಗೆ ನ್ಯಾಯ ಸಿಗುತ್ತಿಲ್ಲ. ರೌಡಿಗಳು ಹಾಗೂ ದಂಧೆಕೋರರಿಗೆ ಪೊಲೀಸರು ಬೆಂಬಲ ನೀಡುತ್ತಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್ ಇಲಾಖೆ ವಿಫಲ ವಾಗಿದೆ ಎಂದು ದೂರಿದರು. ವ್ಯವಸ್ಥೆ ಸರಿಪಡಿಸದಿದ್ದರೆ ಪೊಲೀಸ್ ಠಾಣೆಗಳಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
-
ಗೌರಿಬಿದನೂರು: ತಾಲ್ಲೂಕಿನ ರಾಜಕೀಯದಲ್ಲಿ ಹಾಲಿ ಶಾಸಕ ಕೆ.ಎಚ್. ಪುಟ್ಟಸ್ವಾಮಿಗೌಡ(K H Puttaswamy Gowda) ಹಾಗೂ ಮಾಜಿ ಶಾಸಕ ಎನ್.ಎಚ್.ಶಿವಶಂಕರ ರೆಡ್ಡಿ(N.H. Shivashan kara Reddy) ನಡುವಿನ ವಾಕ್ಸಮರ ತಾರಕಕ್ಕೇರಿದ್ದು, ಪರಸ್ಪರ ಆರೋಪ-ಪ್ರತ್ಯಾರೋಪ ಗಳು ತೀವ್ರಗೊಂಡಿವೆ.
ಪಿಎಲ್ ಡಿ ಬ್ಯಾಂಕ್ ನಿರ್ದೇಶಕರ ಸಭೆಯಲ್ಲಿ ಪುಟ್ಟಸ್ವಾಮಿಗೌಡ ಅವರು ತಮ್ಮ ವಿರುದ್ಧ ಅಭಿವೃದ್ಧಿ ಕಾಮಗಾರಿಗಳ ಕುರಿತು ಅಪಪ್ರಚಾರ ನಡೆಯುತ್ತಿದೆ ಎಂದು ಆರೋಪಿಸಿದ್ದರು. ಇದಕ್ಕೆ ತಿರುಗೇಟು ನೀಡಿರುವ ಮಾಜಿ ಸಚಿವ ಶಿವಶಂಕರ ರೆಡ್ಡಿ, ತಾಲ್ಲೂಕಿನ ಪೊಲೀಸ್ ವ್ಯವಸ್ಥೆ ಹದಗೆಟ್ಟಿದೆ. ಎಂದು ಆರೋಪಿಸಿದರು.
ಪೊಲೀಸ್ ಠಾಣೆಗಳಲ್ಲಿ ಸಾಮಾನ್ಯ ಜನರಿಗೆ ನ್ಯಾಯ ಸಿಗುತ್ತಿಲ್ಲ. ರೌಡಿಗಳು ಹಾಗೂ ದಂಧೆಕೋರರಿಗೆ ಪೊಲೀಸರು ಬೆಂಬಲ ನೀಡುತ್ತಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ ಎಂದು ದೂರಿದರು. ವ್ಯವಸ್ಥೆ ಸರಿಪಡಿಸದಿದ್ದರೆ ಪೊಲೀಸ್ ಠಾಣೆಗಳಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಇದನ್ನೂ ಓದಿ: Gauribidanur News: ಗಣೇಶೋತ್ಸವಕ್ಕೆ ಅನಗತ್ಯ ಷರತ್ತು ವಿಧಿಸಬೇಡಿ: ಹಿಂದೂ ಸಂಘಟನೆಗಳ ಆಗ್ರಹ
ಕಳೆದ ಚುನಾವಣೆಯಲ್ಲಿ ಹಣ ಹಂಚಿ ಗೆಲುವು ಸಾಧಿಸಿದ್ದಾರೆ ಎಂದು ಆರೋಪಿಸಿದ ಎನ್.ಎಚ್. ಶಿವಶಂಕರ ರೆಡ್ಡಿ, '2028ರ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಪುಟ್ಟಸ್ವಾಮಿಗೌಡರನ್ನು ಗೆಲ್ಲಲು ಬಿಡುವುದಿಲ್ಲ. ಎಲ್ಲ ಪಕ್ಷಗಳ ಮುಖಂಡರ ಸಹಕಾರ ಪಡೆದು ಅವರನ್ನು ಸೋಲಿಸಿ ನಾಗಮಂಗಲಕ್ಕೆ ಕಳುಹಿಸುತ್ತೇನೆ' ಎಂದು ಸವಾಲು ಹಾಕಿದರು.
ಪೊಲೀಸ್ ಭದ್ರತೆ ಇಲ್ಲದೆ ಹಳ್ಳಿಗಳಿಗೆ ಬಂದು ಜನರನ್ನು ಎದುರಿಸುವ ಧೈರ್ಯ ಶಾಸಕರಿ ಗಿದೆಯೇ ಎಂದು ಪ್ರಶ್ನಿಸಿದ ಅವರು, ಸಿಮೆಂಟ್ ರಸ್ತೆ, ಸೀರೆ ವಿತರಣೆ, ಫೋಟೊ ಹಾಕಿಸಿಕೊಳ್ಳು ವುದಷ್ಟೇ ಅಭಿವೃದ್ಧಿಯಲ್ಲಿ ಎಂದರು. 1,000 ಎಕರೆ ಖರಾಬ್ ಹಾಗೂ ಗೋಮಾಳ ಜಮೀನಿನಲ್ಲಿ ಸೋಲಾರ್ ಘಟಕ ಸ್ಥಾಪನೆಗೆ ಯೋಜನೆ ರೂಪಿಸಲಾಗಿದೆ ಎಂಬ ಆರೋಪ ಮಾಡಿದರು.
'ಬೆದರಿಕೆ ರಾಜಕಾರಣ ಬಿಡಲಿ' ಶಿವಶಂಕರ ರೆಡ್ಡಿ ಆರೋಪ ಗಳಿಗೆ ಕೆ.ಎಚ್.ಪಿ. ಮುಖಂಡ ಅಬ್ದುಲ್ಲಾ ತಿರುಗೇಟು ನೀಡಿದ್ದು, ಐದು ಬಾರಿ ಶಾಸಕರಾಗಿ ಸೇವೆ ಸಲ್ಲಿಸಿರುವ ಹಿರಿಯ ನಾಯಕರು ಬೆದರಿಕೆ ರಾಜಕಾರಣದ ಭಾಷೆ ಬಳಸುವುದು ಶೋಭೆ ತರುವುದಿಲ್ಲ ಎಂದರು.
ತಾಲ್ಲೂಕಿನ ಅಭಿವೃದ್ಧಿಯನ್ನು ಸಹಿಸಲಾಗದೆ ರಾಜಕೀಯ ಹತಾಶೆಯಿಂದ ಆರೋಪ ಮಾಡು ತ್ತಿದ್ದಾರೆ. ಪುಟ್ಟಸ್ವಾಮಿಗೌಡ ಶಾಸಕರಾದ ಬಳಿಕ ದ್ವೇಷದ ರಾಜ ಕಾರಣ ನಡೆಸಿಲ್ಲ. ಸೋಲಾರ್ ಘಟಕಗಳ ಸ್ಥಾಪನೆಯ ಸರ್ಕಾರದ ನಿಯಮಗಳ ಪ್ರಕಾರವೇ ನಡೆಯುತ್ತಿದೆ ಎಂದು ಸಮರ್ಥಿಸಿ ಕೊಂಡರು.
ಅಭಿವೃದ್ಧಿ ವಿಚಾರದಲ್ಲಿ ಟೀಕೆಗಳಿದ್ದರೆ ದಾಖಲೆಗಳೊಂದಿಗೆ ಮಾತನಾಡಲಿ; ವೈಯಕ್ತಿಕ ಟೀಕೆ ಹಾಗೂ ರಾಜಕೀಯ ಕೆಸರೆರ ಚಾಟವನ್ನು ನಿಲ್ಲಿಸಲಿ ಎಂದು ಅಬ್ದುಲ್ಲಾ ಹೇಳಿದರು.
ಹಾಲಿ-ಮಾಜಿ ಶಾಸಕರ ನಡುವಿನ ವಾಕ್ಸಮರ 2028ರ ವಿಧಾನಸಭಾ ಚುನಾವಣೆಗೆ ಮುನ್ನವೇ ಗೌರಿಬಿದನೂರು ರಾಜಕೀಯ ಕಣವನ್ನು ಮತ್ತಷ್ಟು ಕಾವೇರಿಸುವ ಸಾಧ್ಯತೆ ಇದೆ.