ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಹೂ ಮಾರುಕಟ್ಟೆಯಲ್ಲಿ ಹಸಿದವರಿಗೆ ಅನ್ನದಾನ ಪ್ರಾರಂಭ ಮಾಡಿದ ಯಲುವಹಳ್ಳಿ ರಮೇಶ್

ಜನರಿಂದ ಗಿಜಿಗುಡುವ ಸ್ಥಳದಲ್ಲಿ ಹಮಾಲಿಗಳು, ಕೂಲಿ ಕಾರ್ಮಿಕರು ಸೇರಿದಂತೆ ಬಡಬಗ್ಗರಿಗೆ ಅನುಕೂಲವಾಗುವ ಉದ್ದೇಶದಿಂದ ಸೇವಾ ಚಟುವಟಿಕೆಯನ್ನು ಕೈಗೊಳ್ಳುತ್ತಿದ್ದು ಪ್ರತಿ ಸೋಮ ವಾರ ಬೆಳಿಗ್ಗೆ ೯ ಕ್ಕೆ ಊಟವನ್ನು ವಿತರಿಸಲಾಗುತ್ತದೆ ಎಂದು ವಕ್ಕಲಿಗರ ಸಂಘದ ರಾಜ್ಯ ನಿರ್ದೇಶಕ ಹಾಗೂ ಜಿಲ್ಲಾ ಗ್ಯಾರಂಟಿ ಅನುಷ್ಟಾನಗಳ ಅಧ್ಯಕ್ಷ  ಯಲುವಹಳ್ಳಿ.ಎನ್. ರಮೇಶ್ ತಿಳಿಸಿದರು.

ಹೂ ಮಾರುಕಟ್ಟೆಯಲ್ಲಿ ಹಸಿದವರಿಗೆ ಅನ್ನದಾನ ಪ್ರಾರಂಭ

-

Ashok Nayak
Ashok Nayak Dec 16, 2025 12:39 AM

ಚಿಕ್ಕಬಳ್ಳಾಪುರ : ನಗರ ಹೊರವಲಯದ ಕೆವಿ ಕ್ಯಾಂಪಸ್ ಬಳಿಯ  ಹೂ ಮಾರುಕಟ್ಟೆಯಲ್ಲಿ ಯಲುವಳ್ಳಿ ರಮೇಶ್ ಅಭಿಮಾನಿ ಬಳಗದಿಂದ ವಾರಕ್ಕೊಂದು ದಿನ ಉಚಿತ ಅನ್ನದಾನ ಸೇವಾ ಕಾರ್ಯ( Free food distribution service) ಕ್ಕೆ ಸೋಮವಾರ ಚಾಲನೆ ನೀಡಿದರು.

ಇಲ್ಲಿನ ಹೂ ಮಾರುಕಟ್ಟೆಯಲ್ಲಿ  ಹೂವುಗಳ ಮಾರಾಟ ಪ್ರಕ್ರಿಯೆ ನಡೆಯುತ್ತಿರುತ್ತದೆ. ತಾಲ್ಲೂಕಿನ ಮತ್ತು ಜಿಲ್ಲೆಯ ಎಲ್ಲಡೆಗಳಿಂದ ಹೂ ಬೆಳೆಗಾರರು ಮುಂಜಾನೆಯೇ  ಹೂ ಹೊತ್ತು ಬರುತ್ತಿರುತ್ತಾರೆ. ದೂರದ ವಿವಿಧ ಭಾಗಗಳಿಂದ ಸರಕು ಸಾಗಾಣೆಯ ವಾಹನಗಳು ಬರುತ್ತಿರುತ್ತವೆ. ಇದೇ ವೇಳೆ ಸದಾ ಜನರಿಂದ ಗಿಜಿಗುಡುವ ಸ್ಥಳದಲ್ಲಿ ಹಮಾಲಿಗಳು, ಕೂಲಿ ಕಾರ್ಮಿಕರು ಸೇರಿದಂತೆ ಬಡಬಗ್ಗರಿಗೆ ಅನುಕೂಲವಾಗುವ ಉದ್ದೇಶದಿಂದ ಸೇವಾ ಚಟುವಟಿಕೆಯನ್ನು ಕೈಗೊಳ್ಳುತ್ತಿದ್ದು ಪ್ರತಿ ಸೋಮ ವಾರ ಬೆಳಿಗ್ಗೆ ೯ ಕ್ಕೆ ಊಟವನ್ನು ವಿತರಿಸಲಾಗುತ್ತದೆ ಎಂದು ವಕ್ಕಲಿಗರ ಸಂಘದ ರಾಜ್ಯ ನಿರ್ಧೇಶಕ ಹಾಗೂ ಜಿಲ್ಲಾ ಗ್ಯಾರಂಟಿ ಅನುಷ್ಟಾನಗಳ ಅಧ್ಯಕ್ಷ  ಯಲುವಹಳ್ಳಿ.ಎನ್. ರಮೇಶ್ ತಿಳಿಸಿದರು.

ಇದನ್ನೂ ಓದಿ: Chinthamani Crime: ITC ನಕಲಿ ಕಂಪನಿಯ ಸಿಗರೇಟ್ ಮಾರಾಟ: ಮೂವರು ಆರೋಪಿಗಳ ಸಮೇತ ಕಾರು ವಶಕ್ಕೆ

ಮಾರುಕಟ್ಟೆಗೆ ಬರುವವರ ಪೈಕಿ ಅನೇಕರು ಊಟಕ್ಕಾಗಿ ಪರದಾಡುತ್ತಿರುವುದು ಗಮನಕ್ಕೆ ಬಂದಿದ್ದು ಹಸಿದ ಹೊಟ್ಟೆಗೆ ಅನ್ನವನ್ನು ಕೊಡಬೇಕೆಂಬ ಆಸೆಯಲ್ಲಿ ಅನ್ನದಾನ ಸೇವೆಯನ್ನುಇಂದಿನಿAದ ಪ್ರಾರಂಭಿಸಲಾಗಿದೆ. ಹಿಂದೆ ಕರೊನಾ ಸಂಕಷ್ಟದ ಸಂದರ್ಭದಲ್ಲೂ ದಿನಸಿ ಮತ್ತು ತರಕಾರಿ ಮೂಟೆ ಗಳನ್ನು ಜನರಿಗೆ ವಿತರಿಸಲಾಗಿತ್ತು. ಈಗ ಸೇವಾ ಚಟುವಟಿಕೆಯಲ್ಲಿ ಅನ್ನದಾನ ಕಾರ್ಯವು ಸೇರಿ ಕೊಂಡಿದೆ. ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಕಳೆದೊಂದು ವರೆ ವರ್ಷದಿಂದ ತರಕಾರಿ, ಹೂವು ಹಣ್ಣು ಮಾರಾಟಗಾರರು,ರೈತರು, ಹಮಾಲಿಗಳು, ಕೂಲಿ ಕಾರ್ಮಿಕರು ಸೇರಿದಂತೆ ಬಡಬಗ್ಗ ರಿಗೆ ಅನುಕೂಲವಾಗುವ ಉದ್ದೇಶದಿಂದ ಅನ್ನದಾನ ಸೇವಾ ಚಟುವಟಿಕೆಯನ್ನು  ನಿಗದಿತ ಬುಧವಾರ ಮತ್ತು ಶನಿವಾರದಂದು ಬೆಳಿಗ್ಗೆ ೧೦ ಕ್ಕೆ ಊಟವನ್ನು ವಿತರಿಸಲಾಗುತ್ತದೆ ಎಂದು ತಿಳಿಸಿದರು.

ಮಾರುಕಟ್ಟೆಗೆ ಬರುವವರಿಗೆ ಕೆಲವೊಮ್ಮೆ ನಿರೀಕ್ಷಿತ ದರ ಸಿಗದೆ ನಿರಾಶೆಗೆ ಒಳಗಾಗಿ ಊಟಕ್ಕೂ ದುಡ್ಡಿಲ್ಲದೆ ಪರದಾಡುವ ಪರಿಸ್ಥಿತಿಯನ್ನು ಕಂಡಿದ್ದೇನೆ  ಹೋಟೆಲ್ ನಲ್ಲಿ ತಿಂಡಿ ತಿನ್ನಲು ಹೆಚ್ಚು ವರಿ ದುಡ್ಡು ನೀಡಲು ಆಗಲ್ಲ ಹೊಟ್ಟೆ ಹಸಿವಿನಿಂದಲೇ ಮನೆಗೆ ವಾಪಸ್ಸಾಗುತಿದ್ದ ರೈತರು,ಹಮಾಲಿ, ಕೂಲಿಕಾರರು, ವ್ಯಾಪಾರಿಗಳು, ಬಿಕ್ಷುಕರು ಸೇರಿದಂತೆ ಎಲ್ಲರಿಗೂ ಅನ್ನಸಂತರ್ಪಣೆ ಮಾಡ ಬೇಕೆನ್ನುವ ಸದುದ್ದೇಶದೀಂದ ನಮ್ಮ ಕುಟುಂಭದವರು, ಅಭಿಮಾನಿಗಳು ಸೇರಿ ಮಾಡುತ್ತಿದ್ದೇವೆ ಎಂದು ಹೇಳಿದರು.

ಈ ಉಚಿತ ಅನ್ನಸಂತರ್ಪಣೆ ಯೋಜನೆಯನ್ನ ಸರ್ಕಾರಿ ಜಿಲ್ಲಾಸ್ಪತ್ರೆ ಮತ್ತು ಜೂನಿಯರ್ ಕಾಲೇಜು ಮಕ್ಕಳಿಗೆ ಊಟ ನೀಡಲು ನಿರ್ದರಿಸಿದ್ದೇನೆ ಮತ್ತು  ಶೀಘ್ರವಾಗಿಯೇ ಪ್ರಾರಂಭಿಸುತ್ತೇನೆ ಎಂದರು.  

ನಾನು ನನ್ನ ಕುಟುಂಬದೊಂದಿಗೆ ಚರ್ಚಿಸಿ ಪ್ರಾರಂಭಿಸಿದ ಈ ಯೋಜನೆ ಅತ್ಯಂತ ಯಶಸ್ಬಿಯಾಗಿದೆ. ನನಗೆ ಸಂತೋಷವುಂಟು ಮಾಡಿದೆ. ಬಡತನದಲ್ಲಿಯೂ ಕೂಡ ನಮ್ಮ ತಂದೆಯವರು ಬಡವರಿಗೆ ಊಟ ನೀಡದೇ ತಾವು ಊಟ ಸೇವಿಸುತ್ತಿರಲಿಲ್ಲ. ಅವರ ಒಳ್ಳೆಯ ಗುಣಗಳು ನಮ್ಮ ಕುಟುಂಬದಲ್ಲಿ ಬಂದಿದ್ದು, ನನ್ನ ನಂತರ ಮಕ್ಕಳು ಮೊಮ್ಮಕ್ಕಳು ಕೂಡ ಬಡವರಿಗೆ ಸ್ಪಂದಿಸುವ ಕೆಲಸ ನಿಲ್ಲಿಸಲ್ಲ ಎಂದು ಹೇಳಿದರು.

ಎನ್ ರಮೇಶ್‌ರ ಸೊಸೆ ಹೇಮಲತಾ ಜನಾರ್ದನ್ ಮಾತನಾಡಿ, ಅಪ್ಪನವರ ಸಮಾಜ ಸೇವೆಯ ಕಳಕಳಿ ಇಡೀ ಕುಟುಂಬ ಅನುಸರಿಸಿ ಅವರ ನಡೆದು ಬಂದAತಹ ದಾರಿಯಲ್ಲಿ ನಾವು ಸಾಗುತ್ತೇವೆ. ಬಡವರ ಬಗ್ಗೆ ಅವರಿಗಿರುವ ಕಾಳಜಿ ಸಹಾಯ ಹಸ್ತದಲ್ಲಿಯೇ ಮನುಷ್ಯನ ನೆಮ್ಮದಿ ಎಂದು ಬಿಂಬಿಸುತ್ತೆ ಎಂದರು.

ಈ ವೇಳೆ ಸಾವಿರಕ್ಕೂ ಅಧಿಕ ಮಂದಿ ಅನ್ನದಾಸೋಹ ಸವಿದರು. ಈ ಸಂದರ್ಭದಲ್ಲಿ ಯುವ ಮುಖಂಡ ಯಲುವಹಳ್ಳಿ ಜನಾರ್ದನ್, ಶಿವರಾಮ್‌ಸ್ವಾಮಿ, ಕೆಂಪೇಗೌಡ, ಮತ್ತಿತರರು ಇದ್ದರು.