ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Electricity Bill: ಸದ್ಯದಲ್ಲೇ ಇನ್ನೊಂದು ದರ ಏರಿಕೆ ಶಾಕ್‌, ಎಸ್ಕಾಂಗಳಿಂದ ‌ಕರೆಂಟ್ ಬೆಲೆ ಏರಿಕೆಗೆ ಮನವಿ

ರಾಜ್ಯದ ಎಲ್ಲಾ ಎಸ್ಕಾಂಗಳಿಂದಲೂ ವಿದ್ಯುತ್ ದರ ಏರಿಕೆಗೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ (KERC) ಮನವಿ ಮಾಡಿದೆ. ಎಸ್ಕಾಂಗಳ ಖರ್ಚು ವೆಚ್ಚ ಸರಿದೂಗಿಸಲು ದರ ಏರಿಕೆ ಅಗತ್ಯ ಎಂದು ಸಂಸ್ಥೆಗಳು ಹೇಳಿವೆ. ವಿದ್ಯುಚ್ಛಕ್ತಿಗೆ ಯುನಿಟ್‌ಗೆ ಒಂದು ರೂ.ವರೆಗೆ ದರ ಏರಿಕೆಗೆ ಎಸ್ಕಾಂಗಳು ಮನವಿ ಸಲ್ಲಿಸಿವೆ.

ಸದ್ಯದಲ್ಲೇ ಇನ್ನೊಂದು ದರ ಏರಿಕೆ, ಎಸ್ಕಾಂಗಳಿಂದ ಕರೆಂಟ್ ಬೆಲೆ ಏರಿಕೆಗೆ ಮನವಿ

ಸಾಂದರ್ಭಿಕ ಚಿತ್ರ -

ಹರೀಶ್‌ ಕೇರ
ಹರೀಶ್‌ ಕೇರ Feb 10, 2026 7:56 AM

ಬೆಂಗಳೂರು, ಫೆ.10: ರಾಜ್ಯದ ಜನರಿಗೆ ಮತ್ತೆ ಬೆಲೆ ಏರಿಕೆ (Price Hike) ಬಿಸಿ ಎದುರಾಗಿದೆ. ಮೆಟ್ರೋ ದರ ಏರಿಕೆ (Metro Fare Hike) ಪ್ರಸ್ತಾಪ ಬೆನ್ನಲ್ಲೇ ಮತ್ತೊಂದು ಬೆಲೆ ಏರಿಕೆ ಶಾಕ್​ ಎದುರಾಗುವ ಲಕ್ಷಣ ಕಾಣಿಸಿದೆ. ಈ ವರ್ಷವೂ ವಿದ್ಯುತ್ ದರ (Electricity Bill) ಏರಿಕೆಗೆ ಎಸ್ಕಾಂಗಳಿಂದ (ESCOM) KERCಗೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ರಾಜ್ಯದ ಎಲ್ಲಾ ಎಸ್ಕಾಂಗಳಿಂದಲೂ ವಿದ್ಯುತ್ ದರ ಏರಿಕೆಗೆ (electricity price hike) ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ (KERC) ಮನವಿ ಮಾಡಿದೆ. ಎಸ್ಕಾಂಗಳ ಖರ್ಚು ವೆಚ್ಚ ಸರಿದೂಗಿಸಲು ದರ ಏರಿಕೆ ಅಗತ್ಯ ಎಂದು ಸಂಸ್ಥೆಗಳು ಹೇಳಿವೆ.

ಎಸ್ಕಾಂಗಳ ಖರ್ಚು ವೆಚ್ಚವನ್ನು ಸರಿದೂಗಿಸಲು ಎಸ್ಕಾಂ ಸಂಸ್ಥೆಗಳು ಒಂದು ರೂ.ವರೆಗೆ ದರ ಏರಿಕೆಗೆ ಮನವಿ ಸಲ್ಲಿಸಿವೆ. ರಾಜ್ಯದ ಎಲ್ಲಾ ಎಸ್ಕಾಂಗಳಿಂದಲೂ ವಿದ್ಯುತ್ ದರ ಏರಿಕೆಗೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಮನವಿ ಮಾಡಿದೆ.

ಎಸ್ಕಾಂಗಳು ಸಲ್ಲಿಸಿದ ಪ್ರಸ್ತಾವನೆಯ ಮುಖ್ಯ ಕಾರಣಗಳೇನು?

- ಜನರ ಬೇಡಿಕೆ ಪೂರೈಸಲು

- ಖರ್ಚು ವೆಚ್ಚ ಸರಿದೂಗಿಸಲು

- ಮೆಟ್ರೋ ದರ ಕಡಿಮೆ ಮಾಡಲು

- ಗ್ಯಾಸ್ ಸಿಲಿಂಡರ್ ಬೆಲೆ ಏರಿಸಲು

ಕಳೆದ ಬಾರಿಯೂ ಸಹ ರಾಜ್ಯದ ಎಲ್ಲಾ ಎಸ್ಕಾಂ ಸಂಸ್ಥೆಗಳು ಯುನಿಟ್‌ಗೆ 1 ರೂಪಾಯಿ ಏರಿಕೆಗೆ ಪ್ರಸ್ತಾವನೆ ಸಲ್ಲಿಸಿದ್ದವು. ಆದರೆ, KERC 2025-26ನೇ ಸಾಲಿನಲ್ಲಿ 35 ಪೈಸೆ ಪ್ರತಿ ಯೂನಿಟ್​ಗೆ ಏರಿಸಿ ಆದೇಶ ಮಾಡಿತ್ತು. ಇದೀಗ ಮತ್ತೆ ಬೆಲೆ ಏರಿಕೆ ಪ್ರಸ್ತಾವನೆ ಸಲ್ಲಿಸಿದ್ದು ಈ ಬಾರಿಯೂ KERC ದರ ಏರಿಸಿ ಆದೇಶ ಮಾಡುವುದು ಬಹುತೇಕ ಫಿಕ್ಸ್ ಅಂತ ಹೇಳಲಾಗಿದೆ.

Bengaluru Metro Fare Hike: ಪ್ರಯಾಣಿಕರಿಗೆ ಗುಡ್‌ನ್ಯೂಸ್‌; ಮೆಟ್ರೋ ಟಿಕೆಟ್‌ ದರ ಹೆಚ್ಚಳಕ್ಕೆ ತಾತ್ಕಾಲಿಕ ಬ್ರೇಕ್‌

ಬೆಲೆ ಏರಿಕೆ ಯಾಕೆ?

ವಾರ್ಷಿಕವಾಗಿ ಎಸ್ಕಾಂಗಳ ಮೇಲೆ 4,500 ಕೋಟಿ ಮೊತ್ತ ಹೆಚ್ಚುವರಿ ಹೊರೆಯಾಗಿ ಪರಿಣಮಿಸಿದೆ. ಹೀಗಾಗಿ ಈ ಹೊರೆಯನ್ನು ತಪ್ಪಿಸಲು ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ವಿದ್ಯುತ್ ದರ ಏರಿಕೆ ಸಾಧ್ಯ ಅಂತ ಹೇಳಲಾಗಿದೆ. ತ್ರೈವಾರ್ಷಿಕ ದರ ಏರಿಕೆ ನೀತಿಯಂತೆ ಈ ಬಾರಿಯೂ 35 ಪೈಸೆ ಯೂನಿಟ್​ಗೆ ಏರಿಕೆ ಆಗುವ ಸಾಧ್ಯತೆ ಇದೆ. ಮುಂದಿನ ಫೆಬ್ರವರಿ 16 ರಿಂದ 28ರವರೆಗೆ ದರ ಏರಿಕೆ ಬಗ್ಗೆ KERC ಸಾರ್ವಜನಿಕ ಆಕ್ಷೇಪ ಕೇಳಲಿದೆ, ಸಭೆ ಬಳಿಕ ಪ್ರತಿ ಯೂನಿಟ್​ಗೆ ಎಷ್ಟು ದರ ಏರಿಕೆ ಎಂಬುವುದರ ಬಗ್ಗೆ ನಿರ್ಧಾರವಾಗಲಿದೆ.