ಕರ್ನಾಟಕ ಬಜೆಟ್​ ಮಹಿಳಾ ದಿನಾಚರಣೆ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

International Women's Day 2025: ಅಂತರರಾಷ್ಟ್ರೀಯ ಮಹಿಳಾ ದಿನ 2025: ಮಹಿಳೆಯರಿಗೆ ವಿಭಿನ್ನವಾಗಿ ಶುಭಾಶಯ ತಿಳಿಸಿದ ಗೂಗಲ್

Google Doodle: ಈ ಬಾರಿಯ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಗೆ ಗೂಗಲ್​ ಡೂಡಲ್​ನಲ್ಲಿ ವಿಶೇಷವಾಗಿ ಶುಭಾಶಯ ತಿಳಿಸುವ ಮೂಲಕ ವುಮೆನ್ಸ್ ಡೇ ಸೆಲೆಬ್ರೆಟ್ ಮಾಡುತ್ತಿದೆ. ಜಾಗತಿಕ ಸರ್ಚ್ ಎಂಜಿನ್ ಗೂಗಲ್ ಕೂಡಾ ತನ್ನ ಮುಖಪುಟವನ್ನು ವಿಭಿನ್ನ ರೀತಿಯಲ್ಲಿ ವಿನ್ಯಾಸಗೊಳಿಸುವ ಮೂಲಕ ಎಲ್ಲಾ ಮಹಿಳಾಮಣಿಗಳಿಗೆ ಅಂತಾರಾಷ್ಟ್ರೀಯ ಮಹಿಳಾ ದಿನ 2025ರ ಶುಭಾಶಯಗಳನ್ನು ವಿಭಿನ್ನವಾಗಿ ತಿಳಿಸಿದೆ.

ಮಹಿಳಾ ದಿನಾಚರಣೆಗೆ ಸ್ಪೆಷಲ್​​ ಆಗಿ ವಿಶ್​ ಮಾಡಿದ ಗೂಗಲ್​!

ಗೂಗಲ್ ಡೂಡಲ್

Profile Sushmitha Jain Mar 8, 2025 5:15 PM

ಬೆಂಗಳೂರು, ಮಾ.8: ಮಾರ್ಚ್‌ 8 ಅಂತಾರಾಷ್ಟ್ರೀಯ ಮಹಿಳಾ ದಿನ. ದೇಶದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಮಹಿಳಾ ದಿನಕ್ಕೆ ಶುಭಕೋರಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಮಹಿಳೆಯರ ಸಾಧನೆಗಳನ್ನು ಬಣ್ಣಿಸಿ ಹಲವರು ಶುಭಾಶಯ ಸಲ್ಲಿಸಿದ್ದಾರೆ. ಇದೀಗ ಜಾಗತಿಕ ಸರ್ಚ್ ಎಂಜಿನ್ ಗೂಗಲ್ ಕೂಡಾ ತನ್ನ ಮುಖಪುಟವನ್ನು ವಿಭಿನ್ನ ರೀತಿಯಲ್ಲಿ ವಿನ್ಯಾಸಗೊಳಿಸುವ ಮೂಲಕ ಎಲ್ಲಾ ಮಹಿಳಾಮಣಿಗಳಿಗೆ ಅಂತಾರಾಷ್ಟ್ರೀಯ ಮಹಿಳಾ ದಿನ 2025(International Women's Day 2025)ರ ಶುಭಾಶಯಗಳನ್ನು ವಿಭಿನ್ನವಾಗಿ ತಿಳಿಸಿದೆ.

ಹೌದು ಮಹಿಳಾ ದಿನ ಬಂದರೆ ಮಹಿಳೆಯನ್ನು ತಾಯಿ, ಶಿಕ್ಷಕಿ,ಸಹನೆ, ಕ್ಷಮೆಗಳಿಗೆ ಹೋಲಿಸಿ ಹಲವರು ಬಣ್ಣಿಸುತ್ತಾರೆ. ಈ ಮೂಲಕ ಮಹಿಳೆಯರಿಗೆ ಶುಭಾಶಯವನ್ನು ಸಲ್ಲಿಸುತ್ತಾರೆ. ಈ ಹಿನ್ನಲೆಯಯೇ ತಾನು ಸಬಲೆ ಎಂಬುದನ್ನು ಸಾಬೀತು ಮಾಡಿ, ಆರ್ಥಿಕತೆಯ ಎಲ್ಲಾ ಕ್ಷೇತ್ರಗಳಲ್ಲೂ ವಿಶೇಶ ಸಾಧನೆ ಮಾಡುವ ಮೂಲಕ ಪುರುಷನಷ್ಟೇ ಸರಿಸಮಾನವಾಗಿ ಬೆಳೆಯುತ್ತಿರುವ, ಅಮ್ಮನಾಗಿ, ಅಕ್ಕನಾಗಿ, ಪತ್ನಿಯಾಗಿ, ತಂಗಿಯಾಗಿ ಹೀಗೆ ಅನೇಕ ರೂಪಗಳಲ್ಲಿ ಜೀವನ ರೂಪಿಸಿಕೊಟ್ಟ ಸ್ತ್ರೀಗೆ ಗೂಗಲ್ ವಿಶೇಷವಾದ ಡೂಡಲ್ ಮೂಲಕ ಗೂಗಲ್ ಗೌರವ ಸಲ್ಲಿಸಿದೆ. ಈ ಬಾರಿಯ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಗೂಗಲ್​ ಡೂಡಲ್​ನಲ್ಲಿ ವಿಶೇಷವಾದ ಆ್ಯನಿಮೇಶನ್​ ಮಾಡುವ ಮೂಲಕ ಆಚರಿಣೆ ಮಾಡಿದ್ದು, ಮಹಿಳೆಯರು ನಾನಾ ಕ್ಷೇತ್ರಗಳಲ್ಲಿ ಮಾಡಿರುವ ಸಾಧನೆಗೆ ಈ ಮೂಲಕ ಮೆಚ್ಚುಗೆ ಸೂಚಿಸಲಾಗಿದೆ.

ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರದ ವಿಷಯಗಳಲ್ಲಿ ಪ್ರಯೋಗ, ಸಂಶೋಧನೆ ನಡೆಸಿದ, ಬಾಹ್ಯಾಕಾಶ ಪರಿಶೋಧನೆಯಲ್ಲಿ ಸಾಧನೆ ಮಾಡಿದ, ಪ್ರಾಚೀನ ಸಂಶೋಧನೆಗಳನ್ನು ನಡೆಸಿದ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿಗೆ ಮಹಿಳೆಯರು ಸಲ್ಲಿಸಿದ ಕೊಡುಗೆಯನ್ನು ಗಮನದಲ್ಲಿಟ್ಟುಕೊಂಡು ಗೂಗಲ್ ಶುಭಾಷಾಯ ಕೋರಿದ್ದು, ಮಹಿಳೆಯರ ಸಾಧನೆಯ ಪ್ರತೀಕವಾಗಿ ಡೂಡಲನ್ನು ರಚಿಸಲಾಗಿದೆ.

ಇನ್ನು ಗೂಗಲ್ ಡೂಡಲ್‌ಗಳು ಗೂಗಲ್ ಲೋಗೋಗೆ ತಾತ್ಕಾಲಿಕ ವಿನ್ಯಾಸ ಬದಲಾವಣೆಗಳಾಗಿದ್ದು, ರಜಾದಿನಗಳು ಮತ್ತು ಪ್ರಮುಖ ಮೈಲಿಗಲ್ಲುಗಳಿಂದ ಹಿಡಿದು ಸಮಾಜದ ಮೇಲೆ ಗಮನಾರ್ಹವಾಗಿ ಪ್ರಭಾವ ಬೀರಿದ ಪ್ರಭಾವಿ ವ್ಯಕ್ತಿಗಳವರೆಗೆ ವಿವಿಧ ಸ್ಥಳೀಯ ಮತ್ತು ಜಾಗತಿಕ ವಿಷಯಗಳನ್ನು ಗೌರವಿಸಲು ರಚಿಸಲಾಗಿದೆ.

ಈ ಸುದ್ದಿಯನ್ನು ಓದಿ: International Women's Day 2025: ಭಾರತೀಯ ನಾರಿಯರಿಂದ ನಿರ್ಮಾಣಗೊಂಡ ಪ್ರಾಚೀನ ಸ್ಮಾರಕಗಳು ಇವು...!

ಇನ್ನು ಪ್ರತಿ ವರ್ಷ ಮಾರ್ಚ್ 8 ರಂದು ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಣೆ ಮಾಡಲಾಗುತ್ತದೆ. ಮಹಿಳೆಯರ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿನ ಸಾಧನೆಗಳು ಮತ್ತು ಸಮಾಜಕ್ಕೆ ಅವರು ನೀಡಿರುವ ಕೊಡುಗೆಗಳನ್ನು ಸಂಭ್ರಮಿಸುವ ಮಹತ್ವದ ದಿನ ಇದಾಗಿದೆ. ಮಹಿಳಾ ದಿನದ ಪರಿಕಲ್ಪನೆಯು 1900 ರ ದಶಕದ ಆರಂಭದಲ್ಲಿ ಬೆಳಕಿದೆ ಬಂದಿದೆ. 28 ಫೆಬ್ರವರಿ 1909 ರಂದು ಮೊದಲ ಬಾರಿಗೆ ಯುನೈಟೆಡ್‌ ಸ್ಟೇಟ್ಸ್‌ನಲ್ಲಿ ಮಹಿಳಾ ದಿನವನ್ನು ಆಚರಿಸಲಾಯಿತು. ಅಂದು 15,000 ಮಹಿಳೆಯರು ಕಡಿಮೆ ಸಮಯ, ಉತ್ತಮ ವೇತನ ಮತ್ತು ಮತದಾನದ ಹಕ್ಕುಗಳನ್ನು ಒತ್ತಾಯಿಸಿ ನ್ಯೂಯಾರ್ಕ್ ನಗರದಲ್ಲಿ ಮೆರವಣಿಗೆ ನಡೆಸಿದರು. 1910 ರ ವೇಳೆಗೆ ಯುರೋಪ್‌ನ ಡೆನ್ಮಾರ್ಕ್‌ನ ಕೋಪನ್‌ಹೇಗನ್‌ನಲ್ಲಿ ಎರಡನೇ ಅಂತಾರಾಷ್ಟ್ರೀಯ ಕಾರ್ಮಿಕ ಮಹಿಳೆಯರ ಸಮ್ಮೇಳನ ನಡೆಸಲಾಯಿತು. ಜರ್ಮನಿಯ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿಯ ಮಹಿಳಾ ಕಚೇರಿಯ ನೇತೃತ್ವ ವಹಿಸಿದ್ದ ಕ್ಲಾರಾ ಜೆಟ್ಕಿನ್ ಅವರು ಅಂತಾರಾಷ್ಟ್ರೀಯ ಮಹಿಳಾ ದಿನದ ಕಲ್ಪನೆಯನ್ನು ಮಂಡಿಸಿದ್ದರು. ಆ ಬಳಿಕ, ಮಾರ್ಚ್ 9, 1911 ರಂದು ಆಸ್ಟ್ರಿಯಾ, ಡೆನ್ಮಾರ್ಕ್, ಜರ್ಮನಿ ಮತ್ತು ಸ್ವಿಟ್ಜರ್ಲೆಂಡ್​ನಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮಹಿಳಾ ದಿನ ಆಚರಿಸಲಾಯಿತು.

ವಿಶ್ವಸಂಸ್ಥೆಯು 1975 ರಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲು ಆರಂಭಿಸಿತು. 1977 ರಲ್ಲಿ ವಿಶ್ವಸಂಸ್ಥೆ ಸಾಮಾನ್ಯ ಸಭೆಯು ಮಹಿಳೆಯರ ಹಕ್ಕುಗಳು ಹಾಗೂ ಜಾಗತಿಕ ಶಾಂತಿಯನ್ನು ಬೆಂಬಲಿಸಲು ಮಾರ್ಚ್‌ 8 ರಂದು ಅಂತಾರಾಷ್ಟ್ರೀಯ ಮಹಿಳಾ ದಿನ ಎಂದು ಘೋಷಣೆ ಮಾಡಿತು. ಅಂದಿನಿಂದ ಪ್ರತಿ ವರ್ಷ ಮಾರ್ಚ್‌ 8 ರಂದು ಮಹಿಳಾ ದಿನಾಚರಣೆ ಮಾಡಲಾಗುತ್ತಿದೆ. ಪ್ರತಿ ವರ್ಷ ಹೊಸ ಥೀಮ್​ನೊಂದಿಗೆ ಈ ದಿನಾಚರಣೆ ನಡೆಯುತ್ತದೆ.