ಕರ್ನಾಟಕ ಬಜೆಟ್​ ಮಹಿಳಾ ದಿನಾಚರಣೆ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

International Women's Day 2025: ಭಾರತೀಯ ನಾರಿಯರಿಂದ ನಿರ್ಮಾಣಗೊಂಡ ಪ್ರಾಚೀನ ಸ್ಮಾರಕಗಳು ಇವು...!

ಮಹಿಳೆಯರು ಎಷ್ಟೇ ಸಬಲೀಕರಣ ಹೊಂದಿದರೂ ಪುರುಷ ಪ್ರಧಾನದ ಈ ಸಮಾಜದಲ್ಲಿ ನಮಗೆ ಈ ಸ್ಮಾರಕಗಳು, ಕೋಟೆಗಳು ಎಂದ ಕೂಡಲೇ ಅದರ ನಿರ್ಮಾತೃಗಳು ಪುರುಷರೇ ಎಂದೆನಿಸುತ್ತದೆ... ಆದ್ರೆ ನಿಮ್ಗೆ ಗೊತ್ತಾ ನಮ್ಮ ಭಾರತದಲ್ಲಿ ಅಂದಿನ ಕಾಲದಲ್ಲಿ ನಮ್ಮ ವೀರ ಮಹಿಳೆಯರು, ವನಿತೆಯರು ಇಂತಹ ಹೆಸರಾಂತ ಸ್ಮಾರಕಗಳನ್ನು ನಿರ್ಮಿಸಿದ್ದಾರೆ. ನಾವಿಲ್ಲಿ ಮಹಿಳೆಯರು ನಿರ್ಮಿಸಿದ ಪ್ರಸಿದ್ಧ ಐತಿಹಾಸಿಕ ಸ್ಮಾರಕಗಳ ಬಗ್ಗೆ ತಿಳಿದುಕೊಳ್ಳೋಣ

ಅಂದಿನ ಕಾಲದಲ್ಲಿ ರಾಣಿಯರು ರಾಜರ ಸ್ಮರಣಾರ್ಥವಾಗಿ ನಿರ್ಮಿಸಿದ ಸ್ಮಾರಕಗಳು

Profile Sushmitha Jain Mar 7, 2025 4:52 PM

ಬೆಂಗಳೂರು: ನಮ್ಮ ಭಾರತ ದೇಶದಲ್ಲಿ ಐತಿಹಾಸಿಕ ಸ್ಮಾರಕಗಳು, ಕಟ್ಟಡಗಳು, ಪುಣ್ಯ ನದಿಗಳು, ಪವಿತ್ರವಾದ ದೇವಾಲಯಗಳು, ಆಹ್ಲಾದಕರವಾದ ಕಡಲತೀರಗಳು, ಶ್ರೀಮಂತ ಪ್ರಾಕೃತಿಕ ಸೊಬಗನ್ನು ಹೊಂದಿ ಶ್ರೀಮಂತವಾಗಿದೆ. ವಿದೇಶಿಗರು ಧಾವಿಸಿ ನಮ್ಮ ಭಾರತದ ಕೆಲವು ತಾಣಗಳಿಗೆ ಭೇಟಿ ನೀಡಲು ಬರುತ್ತಾರೆ. ಸುಂದರವಾದ ವಾಸ್ತುಶಿಲ್ಪ, ಇಂದಿನ ಪೀಳಿಗೆಗೆ ಸಾವಲು ಹಾಕುವ ಸೂಕ್ಷ್ಮ ಕೆತ್ತನೆಗಳು, ಶತ್ರುಗಳ ತಲೆ ಕೆಡಿಸಬಲ್ಲ ಕೋಟೆಯ ರಚನೆಗಳು ನಮ್ಮ ಭಾರತದಲ್ಲಿವೆ. ಜೊತೆಗೆ ಅರಮನೆಗಳ ಸೌಂದರ್ಯವನ್ನು ನೋಡಲು ಎರಡು ಕಣ್ಣುಗಳು ಸಾಲವು ಎಂದೇ ಹೇಳಬಹುದು. ವಿಜ್ಞಾನಿಗಳು ತಲೆ ಕೆಡಿಸಿಕೊಳ್ಳುವಂತಹ ತಾಣಗಳು ನಮ್ಮ ಭಾರತದಲ್ಲಿ ಬೇಕಾದಷ್ಟಿವೆ(International Women's Day 2025).

ಆದ್ರೆ ಮಹಿಳೆ ಎಷ್ಟೇ ಸಬಲೀಕರ ಹೊಂದಿದ್ದರು ಪುರುಷರ ಪ್ರಧಾನದ ಈ ಸಮಾಜದಲ್ಲಿ ನಮಗೆ ಈ ಸ್ಮಾರಕಗಳು, ಕೋಟೆಗಳು ಎಂದ ಕೂಡಲೇ ಅದರ ನಿರ್ಮಾತೃಗಳು ಪುರುಷರೇ ಎಂದೆನಿಸುತ್ತದೆ... ಆದ್ರೆ ನಿಮ್ಗೆ ಗೊತ್ತಾ ನಮ್ಮ ಭಾರತದಲ್ಲಿ ಅಂದಿನ ಕಾಲದಲ್ಲಿ ನಮ್ಮ ವೀರ ಮಹಿಳೆಯರು, ವನಿತೆಯರು ಇಂತಹ ಹೆಸರಾಂತ ಸ್ಮಾರಕಗಳನ್ನು ನಿರ್ಮಿಸಿದ್ದಾರೆ.

ಭಾರತ ದೇಶವನ್ನು ಯಾರಾದರೂ ಪರ್ಯಟನೆ ಮಾಡಲು ಬಯಸುವವರು? ಇತಿಹಾಸ ಪ್ರೇಮಿಗಳು ನಮ್ಮ ದೇಶದಲ್ಲಿ ಮಹಿಳೆಯರು ನಿರ್ಮಿಸಿದ ಈ ಸ್ಮಾರಕಗಳಿಗೆ ಒಮ್ಮೆ ಭೇಟಿ ನೀಡಲೇಬೇಕು... ಹಾಗಾದರೆ ಯಾವೆಲ್ಲಾ ತಾಣಗಳು ಯಾವುವು..? ಎಲ್ಲಿವೆ ಎಂಬುದನ್ನು ಇಲ್ಲಿ ತಿಳಿಯಿರಿ.

ತಾಜ್-ಉಲ್-ಮಸಾಜಿದ್

ಏಷ್ಯಾದ ಅತಿದೊಡ್ಡ ಮಸೀದಿಗಳಲ್ಲಿ ಒಂದು ಎಂದು ಖ್ಯಾತಿ ಪಡೆದಿರುವ ಮಧ್ಯಪ್ರದೇಶ ರಾಜ್ಯದ ತಾಜ್-ಉಲ್-ಮಸಾಜಿದ್ ಅನ್ನು ಸುಲ್ತಾನ್ ಷಾ ಜಹಾನ್ ಬೇಗಂ ರಾಣಿಯು ತನ್ನ ಪತಿಯ ಸವಿನೆನಪಿಗಾಗಿ 1868-1901 ರ ನಡುವೆ ಈ ಸ್ಮಾರಕವನ್ನು ನಿರ್ಮಿಸಿದರು. ಇದರ ಅರ್ಥ, 'ಮಸೀದಿಗಳ ನಡುವೆ ಕಿರೀಟ' ಎಂದಾಗಿದ್ದು, ಇದನ್ನು ಮೊಘಲ್ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾಗಿದೆ. ಇದರ ಭವ್ಯತೆಯನ್ನು ಕಣ್ತುಂಬಿಕೊಳ್ಳಲು ಜನರು ಇಲ್ಲಿಗೆ ಭೇಟಿ ನೀಡುತ್ತಾರೆ.

ಈ ಸುದ್ದಿಯನ್ನು ಓದಿ:International Women's Day 2025: ಮಹಿಳಾ ದಿನದಂದು ನಿಮ್ಮ ತಾಯಿಗೆ ಈ ಗಿಫ್ಟ್ ನೀಡಿ.... ಆಕೆಯ ಮುಖದಲ್ಲೊಂದು ನಗು ಮೂಡಿಸಿ!

ಇತಿಮದ್-ಉದ್-ದೌಲಾ, ಆಗ್ರಾ

ಪ್ರೀತಿಯ ಸಂಕೇತ, ಪ್ರೇಮಿಗಳು ಒಮ್ಮೆಯಾದರು ಭೇಟಿ ನೀಡಲೇಬೇಕಾದ ಸ್ಥಳ ಎಂದರೆ ನಮಗೆ ತಕ್ಷಣ ನೆನಪಾಗೋದು ಆಗ್ರಾದ ತಾಜ್‌ಮಹಲ್‌. ಇದನ್ನು ಷಹಜಹಾನ್‌ ತನ್ನ ಪತ್ನಿಯ ನೆನಪಿಗಾಗಿ ನಿರ್ಮಿಸಿದ. ಅದೇ ರೀತಿ ಇತಿಮಾದ್-ಉದ್-ದೌಲಾ ವನ್ನು ರಾಣಿಯು ರಾಜನಿಗಾಗಿ ನಿರ್ಮಿಸಿದಳು. ಈ ಸಮಾಧಿಯೂ ಮೊಘಲ್ ವಾಸ್ತುಶಿಲ್ಪದ ಹೋಲುತ್ತದೆ. ಪ್ರಸಿದ್ಧ ಮೊಘಲ್ ಸಾಮ್ರಾಜ್ಞಿ ನೂರ್ ಜಹಾನ್ ಅವರಿಂದ ನಿರ್ಮಾಣವಾದ ಈ ಭವ್ಯವಾದ ಸಮಾಧಿಯು ಸೌಂದರ್ಯ ಮತ್ತು ವೈಭವದ ಪ್ರತೀಕವಾಗಿದೆ.

ವಿರೂಪಾಕ್ಷ ದೇವಸ್ಥಾನ

ಹಿಂದೆ ಲೋಕೇಶ್ವರ ದೇವಸ್ಥಾನ ಎಂದು ಕರೆಯಲ್ಪಡುತ್ತಿದ್ದ ವಿರೂಪಾಕ್ಷ ದೇವಸ್ಥಾನ ಪಟ್ಟದಕಲ್ಲಿನ ಅತಿದೊಡ್ಡ ದೇವಾಲಯ ಮತ್ತು ಅತ್ಯಂತ ಜನಪ್ರಿಯವಾದ ದೇವಾಲಯವಾಗಿದೆ. 8 ನೇ ಶತಮಾನದಲ್ಲಿ ಪಲ್ಲವರ ವಿರುದ್ಧ ಪತಿ ಎರಡನೇ ವಿಕ್ರಮಾದಿತ್ಯ ವಿಜಯ ಸಾಧಿಸಿದ ನೆನಪಿಗಾಗಿ ಇದನ್ನು ರಾಣಿ ಲೋಕಮಹಾದೇವಿ ಅವರು ನಿರ್ಮಿಸಿದರು. ಇಡೀ ದೇವಾಲಯವು ಸಂಕೀರ್ಣವಾದ ಕೆತ್ತನೆಗಳು ಮತ್ತು ಶಾಸನಗಳಿಂದ ಅಲಂಕರಿಸಲ್ಪಟ್ಟಿದೆ. ಈ ದೇವಾಲಯದಲ್ಲಿ ಹಿಂದೂ ದೇವರುಗಳ ಹಲವಾರು ಸುಂದರವಾದ ಶಿಲ್ಪಗಳಿದ್ದು, ಗಮನಾರ್ಹವಾಗಿದೆ. ಪ್ರತಿಯೊಬ್ಬರು ಪಲ್ಲವರ ಕಲೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಬೇಕೆಂದು, ರಾಜ ವಿಕ್ರಮಾದಿತ್ಯನು ದಕ್ಷಿಣದ ವಾಸ್ತುಶಿಲ್ಪಿ ಮತ್ತು ಶಿಲ್ಪಿಗಳ ತಂಡವನ್ನು ನೇಮಿಸಿಕೊಂಡಿದ್ದನು ಎಂದು ದೇವಾಲಯದಲ್ಲಿನ ಶಾಸನಗಳು ಬಹಿರಂಗಪಡಿಸುತ್ತವೆ. ಕರ್ನಾಟಕ ಸರ್ಕಾರವು ಪ್ರತಿ ವರ್ಷ ವಿರೂಪಾಕ್ಷ ದೇವಾಲಯದ ಕಾರ್ ಉತ್ಸವವನ್ನು ಆಯೋಜಿಸುತ್ತಿದ್ದು, ಹೆಚ್ಚಿನ ಜನಸಂದಣಿ ಸೇರುತ್ತದೆ.

ರಾಣಿ ಕಿ ವಾವ್

1063 ರಲ್ಲಿ ಚಾಲುಕ್ಯ ರಾಜವಂಶದ ರಾಣಿ ಉದಯಮತಿಯು ರಾಜ (ಪತಿ) ಭೀಮರಾವ್ 1 ಸ್ಮರಣಾರ್ಥವಾಗಿ ಮೆಟ್ಟಿಲು ಬಾವಿಯನ್ನು ನಿರ್ಮಾಣ ಮಾಡಿದರು. ಇದೊಂದು ಅದ್ಭುತವಾದ ಬಾವಿಯಾಗಿದ್ದು, ಈ ಮಟ್ಟಿಲು ಬಾವಿ ಪೂರ್ಣಗೊಳ್ಳಲು ಸುಮಾರು 20 ವರ್ಷಗಳಷ್ಟು ಸಮಯ ತೆಗೆದುಕೊಂಡಿತು ಎಂದು ಈ ಬಾವಿಯ ಕುರಿತು ಉಲ್ಲೇಖಗಳಿವೆ. ಹಾಗೇ ರಾಣಿ ಕೀ ವಾವ್‌ ಭಾರತೀಯ ಇತಿಹಾಸದಲ್ಲಿನ ಅತ್ಯದ್ಭುತವಾದ ವಾಸ್ತುಶಿಲ್ಪಗಳನ್ನೊಳಗೊಂಡಿದ್ದು, ಅಂದಾಜು 800ಕ್ಕೂ ಅಧಿಕ ವಾಸ್ತುಶಿಲ್ಪಗಳಿವೆ. ಈ ಮೆಟ್ಟಿಲು ಬಾವಿಯ ಅನೇಕ ಕಂಬಗಳ ರಚನೆ ಕಲಾತ್ಮಕ ವಿನ್ಯಾಸ ಹೊಂದಿದೆ. ಇದು ಭಾರತದ ಗುಜರಾತ್ ರಾಜ್ಯದ ಪಟಾನ್ ಎಂಬ ಪಟ್ಟಣದಲ್ಲಿದ್ದು, 11 ನೇ ಶತಮಾನದಲ್ಲಿ ರಾಜನ ನೆನಪಿನ ಸ್ಮಾರಕವಾಗಿ ನಿರ್ಮಾಣ ಮಾಡಲಾಯಿತು.

ಹುಮಾಯೂನ್ ಸಮಾಧಿ

ದೆಹಲಿ ಯುನೆಸ್ಕೋದ ಜನಪ್ರಿಯ ವಿಶ್ವ ಪರಂಪರೆಯ ತಾಣವಾದ ಹುಮಾಯೂನ್ ಸಮಾಧಿಯನ್ನು ಮೊಘಲ್ ಸಾಮ್ರಾಜ್ಞಿ ಬಿಗಾ ಬೇಗಂ ನಿರ್ಮಿಸಿದಳು. ಮೊಘಲರು ನಿರ್ಮಿಸಿದ ಪ್ರಸಿದ್ಧ ಉದ್ಯಾನ ಸಮಾಧಿಗಳಲ್ಲಿ ಇದು ಅಗ್ರಗಣ್ಯವಾಗಿದೆ. ಇದನ್ನು ನೋಡಲು ಅನೇಕ ಭಾಗಗಳಿಂದ ಜನರು ಭೇಟಿ ನೀಡುತ್ತಾರೆ. ವಿಶೇಷವಾಗಿ ದೆಹಲಿಯ ಪ್ರವಾಸ ಮಾಡುವವರು ಈ ಸುಂದರ ಸ್ಮಾರಕವನ್ನು ಮಿಸ್ ಮಾಡಿಕೊಳ್ಳುವುದಿಲ್ಲ.