ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ZP Election: ಕಬ್ಬೂರ ಜಿ.ಪಂ. ಕ್ಷೇತ್ರಕ್ಕೆ ಹಾಶೀಮ್ ಜಿಗಳೂರ ಪ್ರಬಲ ಆಕಾಂಕ್ಷಿ: ಕಾಂಗ್ರೆಸ್ ಟಿಕೆಟ್‌ಗೆ ಸ್ಥಳೀಯ ನಾಯಕನ ಒಲವು

ಸಂಗೂರ ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಅವಧಿ ಯಲ್ಲಿ ಸಾರ್ವಜನಿಕ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಿದ್ದು, ಜನರ ವಿಶ್ವಾಸ ಗಳಿಸಿದ ತೃಪ್ತಿ ಇದೆ. ಎಲ್ಲ ಸಮುದಾಯಗಳ ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು, ಸಾಮಾಜಿಕ ಹಾಗೂ ಸಾರ್ವಜನಿಕ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದೇನೆ ಎಂದು ಹೇಳಿದ್ದಾರೆ.

ಕಬ್ಬೂರ ಜಿ.ಪಂ. ಕ್ಷೇತ್ರಕ್ಕೆ ಹಾಶೀಮ್ ಜಿಗಳೂರ ಪ್ರಬಲ ಆಕಾಂಕ್ಷಿ

-

Profile
Ashok Nayak Oct 28, 2026 9:25 AM

ಹಾವೇರಿ: ಜಿಲ್ಲಾ ಪಂಚಾಯಿತಿ ಚುನಾವಣೆ(Zilla Panchayat Election) ಹಿನ್ನೆಲೆಯಲ್ಲಿ ಜಿಲ್ಲೆಯ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಹಾವೇರಿ ತಾಲೂಕಿನ ಕಬ್ಬೂರ ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್‌ಗಾಗಿ ಆಕಾಂಕ್ಷಿಗಳ ಪ್ರಯತ್ನ ಆರಂಭವಾಗಿದೆ. ಈ ನಡುವೆ ಕ್ಷೇತ್ರದ ಸ್ಥಳೀಯ ಮುಖಂಡ ಹಾಗೂ ಸಂಗೂರ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹಾಶೀಮ್ ಜಿಗಳೂರ(Hashim Jigalur) ಅವರು ಕಾಂಗ್ರೆಸ್ ಪಕ್ಷದ ಪ್ರಬಲ ಆಕಾಂಕ್ಷಿಯಾಗಿ ಗುರುತಿಸಿ ಕೊಂಡಿದ್ದಾರೆ.

ಕಬ್ಬೂರ ಜಿಲ್ಲಾ ಪಂಚಾಯಿತಿ ಕ್ಷೇತ್ರದ ವ್ಯಾಪ್ತಿಯ 23 ಹಳ್ಳಿಗಳ ಜನರೊಂದಿಗೆ ನಿಕಟ ಸಂಪರ್ಕ ಹೊಂದಿರುವ ತಮಗೆ, ಕ್ಷೇತ್ರದ ಜನರ ಸಮಸ್ಯೆ ಹಾಗೂ ಅಗತ್ಯಗಳ ಬಗ್ಗೆ ಉತ್ತಮ ಅರಿವಿದೆ ಎಂದು ಹಾಶೀಮ್ ಜಿಗಳೂರ ತಿಳಿಸಿದ್ದಾರೆ.

ಇದನ್ನೂ ಓದಿ: MLC Election 2026: ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿ ಎ.ಪಿ. ರಂಗನಾಥ್ ಜಯಭೇರಿ, ಕಾಂಗ್ರೆಸ್‌ನ ಪುಟ್ಟಣ್ಣಗೆ ಮುಖಭಂಗ

ಸಂಗೂರ ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಅವಧಿ ಯಲ್ಲಿ ಸಾರ್ವಜನಿಕ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಿದ್ದು, ಜನರ ವಿಶ್ವಾಸ ಗಳಿಸಿದ ತೃಪ್ತಿ ಇದೆ. ಎಲ್ಲ ಸಮುದಾಯಗಳ ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು, ಸಾಮಾಜಿಕ ಹಾಗೂ ಸಾರ್ವಜನಿಕ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದೇನೆ ಎಂದು ಹೇಳಿದ್ದಾರೆ.

ತಮ್ಮ ಕುಟುಂಬಕ್ಕೂ ರಾಜಕೀಯ ಹಿನ್ನೆಲೆ ಇದ್ದು, ಕುಟುಂಬದ ಸದಸ್ಯರು ಹಾವೇರಿ ತಾಲೂಕು ಪಂಚಾಯಿತಿ ಸದಸ್ಯರಾಗಿ,ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಹೀಗಾಗಿ ಕುಟುಂಬಕ್ಕೆ ರಾಜಕೀಯ ಕ್ಷೇತ್ರದೊಂದಿಗೆ ನಿರಂತರ ನಂಟಿದೆ. ಈ ಅನುಭವ ಹಾಗೂ ಕ್ಷೇತ್ರದ ಜನರೊಂದಿಗಿನ ಸಂಪರ್ಕದ ಬಲದೊಂದಿಗೆ ಈ ಬಾರಿ ಕಾಂಗ್ರೆಸ್ ಪಕ್ಷದಿಂದ ಕಬ್ಬೂರ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಸಾಮಾನ್ಯ ಮೀಸಲು ಕ್ಷೇತ್ರಕ್ಕೆ ಸ್ಪರ್ಧಿಸಲು ಪ್ರಬಲ ಆಕಾಂಕ್ಷಿಯಾಗಿದ್ದೇನೆ ಎಂದು ಹಾಶೀಮ್ ಜಿಗಳೂರ ತಿಳಿಸಿದ್ದಾರೆ.