ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸತತ ಪಂದ್ಯಗಳ ಬಳಿಕ ಮಾಲ್ಡೀವ್ಸ್‌ನಲ್ಲಿ ಆರ್‌ಸಿಬಿ ಮೋಜು ಮಸ್ತಿ

RCB players Maldives vacation: ಆರ್‌ಸಿಬಿ ತನ್ನ ಎಲ್ಲಾ ಪಂದ್ಯಗಳನ್ನು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈಗಾಗಲೇ ಪೂರ್ಣಗೊಳಿಸಿದೆ. ಉಳಿದ ಎರಡೂ ಪಂದ್ಯಗಳನ್ನು ಮೇ 10 ರಂದು ಮುಂಬೈ ಇಂಡಿಯನ್ಸ್ ವಿರುದ್ಧ ಮತ್ತು ಮೇ 13 ರಂದು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ, ಎರಡನೇ ತವರಾದ ರಾಯ್‌ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆಡಲಿದೆ.

ಸತತ ಪಂದ್ಯಗಳ ಬಳಿಕ ಮಾಲ್ಡೀವ್ಸ್‌ನಲ್ಲಿ ಆರ್‌ಸಿಬಿ ಮೋಜು ಮಸ್ತಿ

RCB players Maldives vacation -

Abhilash BC
Abhilash BC May 3, 2026 2:00 PM

ಬೆಂಗಳೂರು, ಮೇ 3: ಹಾಲಿ ಆವೃತ್ತಿಯ ಐಪಿಎಲ್‌(IPL 2026) ಟೂರ್ನಿಯಲ್ಲಿ ಸತತ ಪಂದ್ಯಗಳ ನಂತರ ಆಟಗಾರರಿಗೆ ವಿಶ್ರಾಂತಿ ನೀಡಲು ಆರ್‌ಸಿಬಿ(Royal Challengers Bengaluru) ಫ್ರಾಂಚೈಸಿಯು ಪ್ರವಾಸವನ್ನು ಆಯೋಜಿಸಿದ್ದು, ಆಟಗಾರರು ಮಾಲ್ಡೀವ್ಸ್‌(RCB players Maldives vacation)ಗೆ ಪ್ರಯಾಣಿಸಿದ್ದಾರೆ. ಇಲ್ಲಿಯವರೆಗೆ 9 ಪಂದ್ಯಗಳನ್ನು ಆಡಿರುವ ಆರ್‌ಸಿಬಿ, 6 ಪಂದ್ಯಗಳಲ್ಲಿ ಜಯಗಳಿಸಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.

ಕಳೆದ ಆವೃತ್ತಿಯಲ್ಲಿಯೂ ಫ್ರಾಂಚೈಸಿ, ಪಂದ್ಯಾವಳಿಯ ಬಿಡುವಿನ ವೇಳೆ ತಂಡವನ್ನು ಮಾಲ್ಡೀವ್ಸ್‌ಗೆ ಕರೆದುಕೊಂಡು ಹೋಗಿತ್ತು. ಒತ್ತಡದಿಂದ ವಿಶ್ರಾಂತಿ ಪಡೆಯಲು ಮತ್ತು ತಂಡದ ಒಗ್ಗಟ್ಟನ್ನು ಹೆಚ್ಚಿಸುವ ಸಲುವಾಗಿ ಫ್ರಾಂಚೈಸಿ ಈ ಪ್ರವಾಸವನ್ನು ಆಯೋಜಿಸುತ್ತದೆ.

ಆರ್‌ಸಿಬಿ ಮತ್ತು ನ್ಯೂಜಿಲೆಂಡ್ ವೇಗಿ ಜಾಕೋಬ್ ಡಫಿ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮಾಲ್ಡೀವ್ಸ್ ಎಂದು ಟ್ಯಾಗ್ ಮಾಡಲಾದ ರೆಸಾರ್ಟ್ ಪೂಲ್‌ನ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.

ಆರ್‌ಸಿಬಿ ಉತ್ತಮ ಪ್ರದರ್ಶನ ತೋರುತ್ತಿದ್ದು ಈ ಬಾರಿಯೂ ಪಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದೆ. ಪ್ರಸ್ತುತ, ಆರ್‌ಸಿಬಿಯ ಭುವನೇಶ್ವರ್ ಕುಮಾರ್ ಪರ್ಪಲ್ ಕ್ಯಾಪ್ ಅನ್ನು ಹೊಂದಿದ್ದಾರೆ ಮತ್ತು ವಿರಾಟ್ ಕೊಹ್ಲಿ ತಂಡದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ. ಕೊಹ್ಲಿ ಈ ಋತುವಿನಲ್ಲಿ ಹಲವು ಬಾರಿ ಆರೆಂಜ್ ಕ್ಯಾಪ್ ಅನ್ನು ಸಹ ಹೊಂದಿದ್ದರು. ಕಳೆದ ಪಂದ್ಯದಲ್ಲಿ ಗುಜರಾತ್‌ ವಿರುದ್ಧ ಆರ್‌ಸಿಬಿ ಸೋಲು ಕಂಡಿತ್ತು.



ತಂಡವು ತನ್ನ ಎಲ್ಲಾ ಪಂದ್ಯಗಳನ್ನು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈಗಾಗಲೇ ಪೂರ್ಣಗೊಳಿಸಿದೆ. ಉಳಿದ ಎರಡೂ ಪಂದ್ಯಗಳನ್ನು ಮೇ 10 ರಂದು ಮುಂಬೈ ಇಂಡಿಯನ್ಸ್ ವಿರುದ್ಧ ಮತ್ತು ಮೇ 13 ರಂದು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ, ಎರಡನೇ ತವರಾದ ರಾಯ್‌ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆಡಲಿದೆ.

ಮತ್ತೆ ನಾಯಕನಾಗಿ ಬಾಬರ್ ಅಜಮ್?; ಹೊಸ ನಿರೀಕ್ಷೆಗಳ ಬಗ್ಗೆ ಮಾತನಾಡಿದ ಪಾಕಿಸ್ತಾನ ಕ್ರಿಕೆಟ್‌ ತಾರೆ

ಒಂದು ವಾರದ ದೀರ್ಘ ವಿರಾಮದ ನಂತರ ತಂಡ ಮುಂದಿನ ಪಂದ್ಯವನ್ನು ಮೇ 7 ರಂದು ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಆಡಲಿದೆ. ಹಾಲಿ ಚಾಂಪಿಯನ್‌ಗಳು ಈ ಋತುವಿನಲ್ಲಿ ಈಗಾಗಲೇ ಒಮ್ಮೆ ಲಖನೌ ಸೋಲಿಸಿದ್ದಾರೆ. ಮುಂದಿನ ಗುರುವಾರ ಲಕ್ನೋದ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ಎಲ್‌ಎಸ್‌ಜಿ ಪ್ರಸ್ತುತ ಐದು ಪಂದ್ಯಗಳ ಸೋಲಿನಲ್ಲಿದೆ ಮತ್ತು ಮೇ 3 ರಂದು ಮುಂಬೈ ಇಂಡಿಯನ್ಸ್ ವಿರುದ್ಧ ಮತ್ತೊಂದು ಪಂದ್ಯವನ್ನು ಆಡಲಿದ್ದು, ನಂತರ ಬೆಂಗಳೂರು ತಂಡವನ್ನು ಎದುರಿಸಲಿದೆ.