#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Viral Video: ‘ಓ.. ಭ್ರಮೆ..’ ಅಂದ್ಕೋಬೇಡಿ ; ಪ್ರೀತಿಸುವ ಹುಡುಗರಿಗಾಗಿ ಇವನದ್ದು ‘ವಿಲನ್’ ಸರ್ವಿಸ್!

ಈ ಲೋಕದಲ್ಲಿ ದುಡ್ಡು ಕೊಟ್ರೆ ಎಂತೆಂತಾ ಸರ್ವಿಸ್ ಗಳು ಸಿಗ್ತಾವೆ ಎಂಬುದಕ್ಕೆ ಇದೇ ಸಾಕ್ಷಿ! ಈತನ ಈ ವಿಚಿತ್ರ ಸರ್ವಿಸ್ ಬಗ್ಗೆ ಕೇಳಿದ್ರೆ ನಿಮಗೂ ನಗು ಬರೋದಂತು ಗ್ಯಾರಂಟಿ..! ಮಲೇಷ್ಯಾದ 28 ವರ್ಷದ ಈ ಯುವಕನ ಕೆಲ್ಸವೇ ನಿಮ್ಮ ಹುಡುಗಿಯನ್ನು ಇಂಪ್ರೆಸ್ ಮಾಡಲು ನಿಮ್ಗೆ ಹೆಲ್ಪ್ ಮಾಡೋದು. ಅದೂ ತಾನು ವಿಲನ್ ಆಗಿ.. ಈತ ಇದನ್ನೊಂದು ಸರ್ವಿಸ್ ಆಗಿ ಮಾಡ್ತಿದ್ದಾನೆ

ಹುಡ್ಗೀರ ಕಣ್ಣಲ್ಲಿ ‘ಕೆಟ್ಟವ’ನಾಗಿ ಜೋಡಿ ಹಕ್ಕಿಗಳಿಗೆ ಹೆಲ್ಪ್ ಮಾಡೋ ‘ವಿಲನ್’ ಕಥೆಯಿದು!

ವಿಲನ್ ಸರ್ವಿಸ್ ನೀಡುತ್ತಿರುವ ಶಾಝಲಿ ಸುಲೈಮಾನ್.

Profile Sushmitha Jain Jan 28, 2025 10:56 AM

ಕೌಲಾಲಂಪುರ: ನೀವೊಂದು ಹುಡುಗಿಯನ್ನು ಪ್ರೀತಿಸುತ್ತಿದ್ದರೆ, ಅವಳನ್ನು ಇಂಪ್ರೆಸ್ ಮಾಡಲು ಏನೇನೋ ಕಸರತ್ತುಗಳನ್ನು ಮಾಡ್ಬೇಕಾಗುತ್ತದೆ! ಕೆಲವೊಮ್ಮೆ ಆ ಹುಡುಗಿಯ ಮುಂದೆ ಹೀರೋ ಆಗಿ ಆಕೆಯನ್ನು ಇಂಪ್ರೆಸ್ ಮಾಡ್ಬೇಕಾದ ಸಂದರ್ಭಗಳೂ ಬರಬಹುದು. ಈ ಸಂದರ್ಭದಲ್ಲಿ ನೀವು ಹೀರೋ ಆಗ್ಬೇಕಾದ್ರೆ ಯರಾದ್ರೊಬ್ರು ವಿಲನ್ (Villain) ಬೇಕಲ್ವಾ..?

ಇದು ಒಂಥರಾ ‘ವಿಲನ್ ಬಾಡಿಗಿಗಿದ್ದಾನೆ’ ಕಥೆ ಮಾರ್ರೆ..! ನಮ್ಮ ಪ್ರೇಮ್ ಅವರಿಗೆ ಗೊತ್ತಾದ್ರೆ ‘ಬಾಡಿಗೆ ವಿಲನ್’ ಫಿಲ್ಮ್ ತೆಗ್ದ್ರೂ ತೆಗ್ದ್ರೇ..! ಮಲೇಷ್ಯಾದ 28 ವರ್ಷದ ಈ ಯುವಕನ ಕೆಲ್ಸವೇ ನಿಮ್ಮ ಹುಡುಗಿಯನ್ನು ಇಂಪ್ರೆಸ್ ಮಾಡಲು ನಿಮ್ಗೆ ಹೆಲ್ಪ್ ಮಾಡೋದು. ಅದೂ ತಾನು ವಿಲನ್ ಆಗಿ.. ಈತ ಇದನ್ನೊಂದು ಸರ್ವಿಸ್ ಆಗಿ ಮಾಡ್ತಿದ್ದಾನೆ ಈ ಎಂಥಾ ತ್ಯಾಗಮಯಿ ಅಂದ್ಕೋತಿದ್ದಿರಾ.. ಅಷ್ಟೆಲ್ಲಾ ಕರುಣೆ ಬೇಡ.. ಈತ ಇದನ್ನೊಂದು ಸರ್ವಿಸ್ ಆಗಿ ಮಾಡ್ತಿದ್ದಾನೆ ಮತ್ತು ಇದಕ್ಕೆ ಸುಲೈಮಾನ್ ಒಂದಷ್ಟು ಚಾರ್ಜ್ ಕೂಡಾ ಮಾಡ್ತಾನೆ! ಹೌದಪ್ಪಾ.. ಹುಡ್ಗೀನಾ ಪಟಾಯಿಸ್ಬೇಕಂದ್ರೆ ಸ್ವಲ್ಪ ಕಾಸು ಖರ್ಚು ಮಾಡ್ಬೇಕು ಸ್ವಾಮಿ..! ನಿಮ್ಮ ಪ್ರೀತಿಯ ಹುಡ್ಗೀ ಮುಂದೆ ಬ್ಯಾಡ್ ಬಾಯ್ ಆಗಲು ಸುಲೈಮಾನ್ ಚಾರ್ಜ್ ತಗೋತಾನೆ.

ಸುಲೈಮಾನ್ ಬರೆದಿರುವ ಫೇಸ್ಬುಕ್ ಪೋಸ್ಟ್

ತನ್ನ ಫೇಸ್ಬುಕ್ ಪೋಸ್ಟ್ ನಲ್ಲಿ ಸುಲೈಮಾನ್ ತಾನು ನೀಡುತ್ತಿರುವ ಈ ಸೇವೆಯ ಬಗ್ಗೆ ವಿವರವಾಗಿ ಬರೆದುಕೊಂಡಿದ್ದು ಅಲ್ಲಿ ಈತ ತನ್ನನ್ನು ತಾನು, ‘ಪೆಸಕಿಟ್ ಸಿಫರ್ ಕಾಕರ್ ಮೋನ್ ಯೇಕ್’ ಎಂದು ಕರೆದುಕೊಂಡಿದ್ದು, ‘ನಿಮ್ಮನ್ನು ನಿಮ್ಮ ಸಂಗಾತಿ ವೀಕ್ ಅಂದ್ಕೊಂಡಿದ್ದಾಳಾ.. ಇದರಿಂದ ನೀವು ಬೇಸರಗೊಂಡಿದ್ದೀರಾ..? ಹಾಗಾದ್ರೆ ಆಕೆಯ ಯೋಚನರ ತಪ್ಪು ಎಂದು ನಾನು ಪ್ರೂವ್ ಮಾಡ್ತೇನೆ.. ಅದೂ ಸಹ ದುಬಾರಿಯಲ್ಲದ ಫೀಸ್ ನಲ್ಲಿ!’ ಎಂದು ತನ್ನ ಸೇವೆಗಳ ಬಗ್ಗೆ ಡಿಟೇಲಾಗಿ ಬರ್ಕೊಂಡಿದ್ದಾನೆ ಈ ಪುಣ್ಯಾತ್ಮ!

ತನ್ನ ವಿಲನ್ ರೋಲ್ ನ ಸ್ಕ್ರಿಪ್ಟ್ ಅನ್ನೂ ಸಹ ಇವನೇ ಬರ್ಕೊಂಡಿದ್ದಾನೆ. ‘ನೀವು ಹೇಳೋ ಸ್ಥಳದಲ್ಲಿ ನಾನು ವಿಲನ್ ಆಗಿ ಕಾಣಿಸ್ಕೊಂಡು ನಿಮ್ಮ ಹುಡ್ಗಿ ಜೊತೆ ಕಿರಿಕ್ ಮಾಡ್ತೇನೆ. ಆ ಸಂದರ್ಭದಲ್ಲಿ ನೀವು ಅಲ್ಲಿಗೆ ಹೀರೋ ಥರ ಎಂಟ್ರಿ ಕೊಟ್ಟು ನನ್ನಿಂದ ನಿಮ್ಮ ಹುಡ್ಗೀನಾ ಕಾಪಾಡ್ಕೊಳ್ಳಿ..’ ಎಂದು ರೋಮಿಯೋಗಳಿಗೆ ಹೊಸ ಐಡಿಯಾವನ್ನು ಸಹ ಇವ್ನೇ ಕೊಟ್ಟಿದ್ದಾನೆ.

ಹಾಗಾದ್ರೆ ಈ ಸೌಭಾಗ್ಯಕ್ಕೆಲ್ಲಾ ಚಾರ್ಜ್ ಎಷ್ಟು ಅಂತ ನೀವು ಕೇಳ್ಬೋದು! ಇವನ ಈ ಚಾರ್ಜ್ ವಿಕ್ ಡೇ ಮತ್ತು ವೀಕೆಂಡ್ ಗಳಿಗೆ ಬೇರೆ ಬೇರೆಯಾಗಿದೆ. ವೀಕ್ ಡೇಗಳಲ್ಲಿ ತಾನು ವಿಲನ್ ಆಗೋದಕ್ಕೆ ಸುಲೈಮಾನ್ 1975 ರೂಪಾಯಿ (ಆರ್.ಎಂ. 100) ಚಾರ್ಜ್ ಮಾಡ್ತಾನೆ, ಅದೇ ವಿಕೆಂಡ್ ಆದ್ರೆ ಸ್ವಲ್ಪ ಕ್ವಾಸ್ಟ್ಲೀ, 2963 ರೂಪಾಯಿ (150 ಆರ್.ಎಂ.) ಜಿ.ಎಸ್.ಟಿ. ಎಲ್ಲಾ ಇಲ್ಲ ಮಾರ್ರೆ..! ಯಾಕಂದ್ರೆ ಅವ್ನಿರೋದು ಮಲೇಷ್ಯಾದಲ್ಲಿ ಅಲ್ವಾ..?

ಇದನ್ನೂ ಓದಿ: Viral Video: ತರಕಾರಿ ಮಾರುವ ಶತಾಯಷಿ ಅಜ್ಜನ ಜೀವನ ಪ್ರೀತಿಗೆ ನೆಟ್ಟಿಗರು ಫಿದಾ..!

ಇನ್ನು ಸುಲೈಮಾನ್ ತನ್ನ ಈ ವಿಲನ್ ಸೇವೆಯನ್ನು ಹುಡ್ಗರಿಗೆ ಮಾತ್ರ ಕೊಡೋದಲ್ವಂತೆ, ಈತನ ಈ ಮಹಾನ್ ಸೇವೆ ಹುಡುಗರಿಗೂ, ಹುಡುಗಿಯರಿಗೂ ಇಬ್ರಿಗೂ ಇದೆಯಂತೆ..! ಇಲ್ಲಿನ ಸ್ಥಳೀಯ ಮಾಧ್ಯಮಗಳೊಂದಿಗೆ ಮಾತನಾಡಿದ ಸುಲೈಮಾನ್, ತನ್ನ ಈ ವಿಲನ್ ಸೇವೆಯನ್ನು ಈಗಾಗಲೇ ತನ್ನ ಕೆಲವು ಫ್ರೆಂಡ್ಸ್ ಗಳಿಗೆ ನೀಡಿದ್ದು ಅದರಲ್ಲಿ ಒಂದು ಇನ್ಸಿಡೆಂಟನ್ನು ಸುಲೈಮಾನ್ ವಿವರಿಸಿದ್ದಾನೆ.

‘ಜೋಡಿಯೊಂದು ಖುಷ್ ಖಷಿಯಾಗಿ ಶಾಪಿಂಗ್ ಗೆಂದು ಮಾಲ್ ಗೆ ಹೊರಟಿತ್ತು, ಈ ಸಂರ್ಭದಲ್ಲಿ ಬಾಯ್ ಫ್ರೆಂಡ್ ಆಕೆಯನ್ನು ಟಾಯ್ಲೆಟ್ ನಲ್ಲಿ ಬಿಟ್ಟು ಹೋಗುತ್ತಾನೆ. ಈ ಸಂದರ್ಭವನ್ನೇ ಉಪಯೋಗಿಸಿಕೊಂಡ ನಾನು ಆ ಹುಡುಗಿಯನ್ನು ರೇಗಿಸ್ತೇನೆ, ಈ ಸಂದರ್ಭದಲ್ಲಿ ಅಲ್ಲಿಗೆ ಹೀರೋ ಥರ ಬರೋ ಆಕೆಯ ಪ್ರಿಯತಮ ನನ್ನಿಂದ ಆ ಹುಡ್ಗಿಯನ್ನು ಬಚಾವ್ ಮಾಡ್ತಾನೆ..’ ಎಂದು ಸುಲೈಮಾನ್ ತನ್ನ ವಿಲನ್ ಪಾತ್ರ ವರ್ಕೌಟ್ ಆಗುವ ಬಗೆಯನ್ನು ಹೇಳಿಕೊಂಡಿದ್ದಾನೆ.