ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vishwavani Impact: ಕೊಪ್ಪಳ ವಿವಿಯ ಅಕ್ರಮ ತನಿಖೆ: ವಿಶ್ವವಾಣಿ ವರದಿಯ ಬೆನ್ನಲ್ಲೇ ಎಚ್ಚೆತ್ತ ರಾಜ್ಯ ಸರಕಾರ

ಸೆ.14ರಂದು ವಿಶ್ವವಾಣಿಯ ಮುಖಪುಟದಲ್ಲಿ (3ನೇ ಪುಟ) ಕೊಪ್ಪಳ ವಿವಿ ಅಕ್ರಮದ ಬಗ್ಗೆ ‘ಕೆಪಿಎಸ್‌ಸಿ ಯನ್ನೂ ಮೀರಿಸಿದೆ ಕೊಪ್ಪಳ ವಿವಿ ನೇಮಕಾತಿ ಅಕ್ರಮ, ಲಂಚವೇ ಪರಪಂಚ’ ಎಂಬ ಶೀರ್ಷಿಕೆಯಲ್ಲಿ ವರದಿ ಪ್ರಕಟವಾಗಿತ್ತು. ಉನ್ನತ ಶಿಕ್ಷಣ ಇಲಾಖೆ (ವಿಶ್ವವಿದ್ಯಾಲಯಗಳು) ಸರಕಾರ ಉಪ ಕಾರ್ಯದರ್ಶಿ ಟಿ.ವಿ.ರಾಜ್ಯಶ್ರೀ, ಸಮಿತಿ ರಚನೆ ಆದೇಶದಲ್ಲಿ ವಿಶ್ವವಾಣಿ ಪತ್ರಿಕೆ ವರದಿ ಉಲ್ಲೇಖಿಸಿದ್ದಾರೆ.

ಕೊಪ್ಪಳ ವಿವಿಯ ಅಕ್ರಮ ತನಿಖೆ

-

Profile
Ashok Nayak Sep 17, 2026 11:17 AM

ಶರಣಬಸವ ಹುಲಿಹೈದರ, ಕೊಪ್ಪಳ

ಉನ್ನತ ಶಿಕ್ಷಣ ಸಚಿವ ರಾಯರಡ್ಡಿ ಸೂಚನೆಯಂತೆ ತನಿಖೆ

ಕೊಪ್ಪಳ ವಿಶ್ವವಿದ್ಯಾಲಯ(Koppal University)ದ ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ನಡೆದ ಅಕ್ರಮದ ಬಗ್ಗೆ ಸರಕಾರ ತಡವಾಗಿಯಾದರೂ ಎಚ್ಚೆತ್ತುಕೊಂಡಿದೆ. ನೇಮಕಾತಿ ಪ್ರಕ್ರಿಯೆ ಯಲ್ಲಿ ನಡೆದ ನಿಯಮಾವಳಿ ಉಲ್ಲಂಘನೆ ಹಾಗೂ ಅಕ್ರಮಗಳ ತನಿಖೆಗೆ, ಇಬ್ಬರು ಕುಲಪತಿಗಳ ನೇತೃತ್ವದಲ್ಲಿ ಸಮಿತಿ ರಚಿಸಿ ಸರಕಾರ ಆದೇಶಿಸಿದೆ. ಸ್ವತಃ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಸೂಚನೆಯಂತೆ ಈ ಹೆಜ್ಜೆಯನ್ನಿಡಲಾಗಿದೆ. ಇದು ವಿಶ್ವವಾಣಿ ವರದಿಯ ಫಲಶ್ರುತಿ.

ಸೆ.14ರಂದು ವಿಶ್ವವಾಣಿಯ ಮುಖ ಪುಟದಲ್ಲಿ (3ನೇ ಪುಟ) ಕೊಪ್ಪಳ ವಿವಿ ಅಕ್ರಮದ ಬಗ್ಗೆ ‘ಕೆಪಿಎಸ್‌ಸಿಯನ್ನೂ ಮೀರಿಸಿದೆ ಕೊಪ್ಪಳ ವಿವಿ ನೇಮಕಾತಿ ಅಕ್ರಮ, ಲಂಚವೇ ಪರಪಂಚ’ ಎಂಬ ಶೀರ್ಷಿಕೆಯಲ್ಲಿ ವರದಿ ಪ್ರಕಟವಾಗಿತ್ತು.

ಉನ್ನತ ಶಿಕ್ಷಣ ಇಲಾಖೆ (ವಿಶ್ವವಿದ್ಯಾಲಯಗಳು) ಸರಕಾರ ಉಪ ಕಾರ್ಯದರ್ಶಿ ಟಿ.ವಿ.ರಾಜ್ಯಶ್ರೀ, ಸಮಿತಿ ರಚನೆ ಆದೇಶದಲ್ಲಿ ವಿಶ್ವವಾಣಿ ಪತ್ರಿಕೆ ವರದಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: Koppal University: ಯುಜಿಸಿ ನಿಯಮದ ಹೆಸರಿನಲ್ಲಿ ಸ್ವಹಿತಾಸಕ್ತಿ ಸಾಧನೆ ಆರೋಪ: ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ನಿಯಮ ಉಲ್ಲಂಘನೆ

ಧಾರವಾಡದ ಕರ್ನಾಟಕ ವಿಶ್ವವಿದ್ಯಾ ಲಯದ ಕುಲಪತಿ ಡಾ.ಖಾನ್ ಎ.ಎಂ ಹಾಗೂ ಗದಗದ ಮಹಾತ್ಮ ಗಾಂಧಿ ಗ್ರಾಮೀಣಾ ಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸುರೇಶ ವಿ.ನಾಡಗೌಡರ ನೇತೃತ್ವದಲ್ಲಿ ತನಿಖೆ ಸಮಿತಿ ರಚನೆ ಮಾಡಿದ್ದಾರೆ. ಅಕ್ರಮಗಳ ತನಿಖೆಗೆ ನೇಮಿಸಲಾದ ತನಿಖಾ ಸಮಿತಿಯು ಮುಂದಿನ 15 ದಿನದಲ್ಲಿ ತನಿಖೆ ವರದಿ ಸಲ್ಲಿಸುವಂತೆ ಆದೇಶದಲ್ಲಿ ಸೂಚಿಸಲಾಗಿದೆ.

ಆದೇಶದಲ್ಲಿ ಏನಿದೆ?: ಕೊಪ್ಪಳ ವಿಶ್ವವಿದ್ಯಾ ಲಯದ ಅತಿಥಿ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆ ಯಲ್ಲಿ ನಿಯಮ ಉಲ್ಲಂಘಿಸಿ ನೇಮಕಾತಿ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿವೆ. ಈ ಕುರಿತಂತೆ ಸತ್ಯಾಸತ್ಯತೆ ಪರಿಶೀಲಿಸಿ, ಅತಿಥಿ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆ ಯುಜಿಸಿ ನಿಯಮ, ವಿಶ್ವವಿದ್ಯಾಲಯಗಳ ಕಾಯ್ದೆಗೆ ಅನುಗು ಣವಾಗಿ ನಡೆಸಲಾಗಿದೆಯೇ ಎಂಬ ಬಗ್ಗೆ ಖಚಿತಪಡಿಸಿ ಕೊಳ್ಳಲು ಕುಲಪತಿಗಳಾದ ಡಾ.ಖಾನ್ ಎ.ಎಂ, ಪ್ರೊ.ಸುರೇಶ ವಿ.ನಾಡಗೌಡರ ನೇತೃತ್ವದಲ್ಲಿ ಕೆಲ ನಿಬಂಧನೆಗೆ ಒಳಪಟ್ಟು ತನಿಖಾ ಸಮಿತಿ ರಚಿಸಿ ಆದೇಶಿಸಿದೆ ಎಂದು ತಿಳಿಸಲಾಗಿದೆ.

ತನಿಖಾ ಸಮಿತಿಗೆ ಅಗತ್ಯವಿರುವ ಪೀಠೋಪಕರಣ, ಪೂರಕ ಸಿಬ್ಬಂದಿ ಮತ್ತು ಲೇಖನ ಸಾಮಗ್ರಿ ಕೊಪ್ಪಳ ವಿಶ್ವವಿದ್ಯಾಲಯ ಒದಗಿಸಬೇಕು. ಸಮಿತಿ ಸದಸ್ಯರಿಗೆ ಭತ್ಯೆ, ಪ್ರಯಾಣ ಭತ್ಯೆ, ದಿನ ಭತ್ಯೆ ಕೊಪ್ಪಳ ವಿವಿ ಪಾವತಿಸಬೇಕು. ಸಮಿತಿ ಸದಸ್ಯರಿಗೆ ವಸತಿ ಮತ್ತು ವಾಹನ ಸೌಕರ್ಯ ಕೊಪ್ಪಳ ವಿವಿ ನೀಡಬೇಕು ಎಂದು ಷರತ್ತು ವಿಧಿಸಲಾಗಿದೆ.

ಅಕ್ರಮದ ವರದಿಯಲ್ಲೇನಿತ್ತು?

ಕೊಪ್ಪಳ ವಿಶ್ವವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ಭಾರಿ ಅಕ್ರಮ ನಡೆದ ಆರೋಪ ಕೇಳಿ ಬಂದಿದ್ದವು. ಯುಜಿಸಿ ನಿಯಮಾವಳಿ ಉಲ್ಲಂಘಿಸಿ ನೇಮಕಾತಿ ನಡೆದಿದೆ. ಮನಸೋ ಇಚ್ಛೆ ಮೆರಿಟ್ ಲೀಸ್ಟ್ ಮಾಡಲಾಗಿತ್ತು. ಹೊರಗುತ್ತಿಗೆ ನೌಕರನೊಬ್ಬನ ಆಣತಿಯಂತೆ ಮೆರಿಟ್ ಲಿಸ್ಟ್ ಮಾಡಲಾಗಿದೆ. ಅತಿಥಿ ಉಪನ್ಯಾಸಕರ ಹುದ್ಧೆಗೆ ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳ ಶೈಕ್ಷಣಿಕ ದಾಖಲೆ ಪರಿಶೀಲಿಸಲು ತಜ್ಞರ ಸಮಿತಿ ಇಲ್ಲ. ಬದಲಾಗಿ ಹೊರಗುತ್ತಿಗೆ ನೌಕರನೇ ಅರ್ಜಿ ಪರಿಶೀಲನೆ ಮಾಡಿರುವ ಆರೋಪದ ಬಗ್ಗೆ, ಸೆ.14 ಕೆಪಿಎಸ್ಸಿಯನ್ನೂ ಮೀರಿಸಿದೆ ಕೊಪ್ಪಳ ವಿವಿ ನೇಮಕಾತಿ ಅಕ್ರಮ, ಲಂಚವೇ ಪರಪಂಚ! ತಲೆ ಬರಹದಡಿ ಹಾಗೂ ಸೆ.8ರಂದು ಕೊಪ್ಪಳ ವಿವಿಯಲ್ಲಿ ಅಪರಾತಪರ? ತಲೆ ಬರಹದಡಿ ಸಮಗ್ರ ವರದಿ ಪ್ರಕಟಿಸಿತ್ತು. ಕೊಪ್ಪಳ ವಿಶ್ವವಿದ್ಯಾಲಯಕ್ಕೆ ಹೈ ಚಾಟಿ ಕೊಪ್ಪಳ ವಿಶ್ವವಿದ್ಯಾಲಯದ ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ನಡೆದ ಅಕ್ರಮದ ತನಿಖೆಗೆ ಸರಕಾರ ಸಮಿತಿ ರಚಿಸಿದೆ. ಮತ್ತೊಂದೆಡೆ ರಾಜ್ಯ ಹೈಕೋರ್ಟ್ ಧಾರವಾಡ ಪೀಠವೂ ಚಾಟಿ ಬೀಸಿದೆ.

ನೇಮಕಾತಿಯಿಂದ ತಮ್ಮನ್ನು ಹೊರಗಿಟ್ಟಿದ್ದ ಕೊಪ್ಪಳ ವಿಶ್ವವಿದ್ಯಾಲಯದ ನಡೆ ಪ್ರಶ್ನಿಸಿ, ಅತಿಥಿ ಉಪನ್ಯಾಸಕ ಡಾ.ರವೀಂದ್ರ ಬಟಗೇರಿ ಎಂಬುವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ಪುರಸ್ಕರಿಸಿರುವ ಹೈಕೋರ್ಟ್, ಮಧ್ಯಂತರ ಆದೇಶ ಹೊರಡಿಸಿದೆ. ಮುಂದಿನ ಆದೇಶದ ವರೆಗೆ ಅರ್ಜಿದಾರರನ್ನು ಕೆಲಸದಲ್ಲಿ ಮುಂದುವರೆಸಬೇಕು. ಯಾವುದೇ ರೀತಿಯಲ್ಲಿ ಕಿರಿಕಿರಿ ನೀಡು ವಂತಿಲ್ಲ. ನಿಮ್ಮ ಯಾವುದೇ ಸಮರ್ಥನೆಗಳು ಇದ್ದರೂ ಅ.14ರಂದು ನೀಡಿರುವ ಸಲ್ಲಿಸಲು ಅವಕಾಶ ಇದೆ ಎಂದು ಆದೇಶದಲ್ಲಿ ತಿಳಿಸಿದೆ.

image

ನಿಯಮದ ಪ್ರಕಾರವೇ ಎಲ್ಲ ನೇಮಕಾತಿ ನಡೆಯಬೇಕು. ಯಾರಿಗೂ ಅನ್ಯಾಯ ಆಗಬಾರದು. ನಾನು ನ್ಯಾಯದ ಪರ. ಆ ಕಾರಣಕ್ಕಾಗಿಯೇ ಕೊಪ್ಪಳ ವಿವಿಯಲ್ಲಿ ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎನ್ನುವ ಆರೋಪಕ್ಕೆ, ಸತ್ಯಾಸತ್ಯತೆ ತಿಳಿಯಲು ಸಮಿತಿ ರಚಿಸಿದ್ದೇನೆ. ಅವರಿಗೆ ೧೫ ದಿನದಲ್ಲಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ಅವರು ವರದಿ ಕೊಟ್ಟ ನಂತರ, ತಪ್ಪು ನಡೆದಿದ್ದರೆ, ತಪ್ಪಿತಸ್ಥರಿಗೆ ಕಾನೂನು ಪ್ರಕಾರ ಶಿಕ್ಷೆ ಖಂಡಿತ ಆಗುತ್ತದೆ.

-ಬಸವರಾಜ ರಾಯರಡ್ಡಿ, ಉನ್ನತ ಶಿಕ್ಷಣ ಸಚಿವ