Karnataka Bandh: ನಾಳೆ ಕರ್ನಾಟಕ ಬಂದ್ ಖಚಿತ: ಯಾರ ಬೆಂಬಲ, ಏನಿದೆ, ಏನಿಲ್ಲ? ವಿವರ ಇಲ್ಲಿದೆ
ಕರ್ನಾಟಕ ಬಂದ್ ವೇಳೆ ಆಸ್ಪತ್ರೆ, ವೈದ್ಯಕೀಯ ಸೇವೆ, ಮೆಡಿಕಲ್, ಹಾಲು, ಅಗತ್ಯ ವಸ್ತುಗಳು, ನಮ್ಮ ಮೆಟ್ರೋ ಸೇವೆ ಇರಲಿದೆ. ಓಲಾ ಹಾಗೂ ಉಬರ್, ಕೆಲ ಖಾಸಗಿ ವಾಹನಗಳು ಹಾಗೂ ಏರ್ಪೋರ್ಟ್ ಟ್ಯಾಕ್ಸಿ ಸಂಚಾರ ಇರುವುದಿಲ್ಲ.

ಸಾಂದರ್ಭಿಕ ಚಿತ್ರ

ಬೆಂಗಳೂರು: ಕನ್ನಡ ಪರ ಸಂಘಟನೆಗಳು (Kannada Organisations) ಮಾರ್ಚ್ 22ರಂದು ಕರ್ನಾಟಕ ಬಂದ್‌ಗೆ (Karnataka Bandh) ಕರೆ ನೀಡಿದ್ದು, ಸಾರಿಗೆ ಸಂಸ್ಥೆಗಳು ಸೇರಿ ಹಲವರು ಬೆಂಬಲ ಸೂಚಿಸಿರುವುದರಿಂದ, ನಾಳೆ ಬಂದ್ ಬಹುತೇಕ ಯಶಸ್ವಿಯಾಗುವುದು ಖಚಿತವಾಗಿದೆ. ಬೆಳಗಾವಿ ಗಡಿಯಲ್ಲಿ (Belagavi Border) ಮರಾಠಿ ಪುಂಡರ ಹಾವಳಿ ವಿರೋಧಿಸಿ ಹಾಗೂ ರಾಜ್ಯದ ಹಿತಾಸಕ್ತಿ ಸಂಬಂಧಿತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕನ್ನಡ ಸಂಘಟನೆಗಳು ಬಂದ್‌ಗೆ ಕರೆ ನೀಡಿವೆ. ಬಂದ್ ಬಗ್ಗೆ ನೀವು ತಿಳಿದಿರಬೇಕಾದ ಮಾಹಿತಿ ಇಲ್ಲಿದೆ.
ಶಾಲಾ ಕಾಲೇಜು ನಡೆಸುವ ಹಾಗೂ ಪರೀಕ್ಷೆಗಳನ್ನು ನಡೆಸುವುದಕ್ಕೆ ಸಂಬಂಧಿಸಿ ಸರ್ಕಾರದಿಂದ ಇನ್ನಷ್ಟೇ ಅಧಿಕೃತ ನಿರ್ಧಾರ ಪ್ರಕಟಗೊಳ್ಳಬೇಕಿದೆ. ಶಿಕ್ಷಣ ಸಚಿವರು ತಿಳಿಸಿರುವಂತೆ, ನಾಳೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಶೆಡ್ಯೂಲ್ ಇಲ್ಲವಾದ್ದರಿಂದ ಆ ಕುರಿತು ಆತಂಕ ಬೇಕಿಲ್ಲ. ಬಂದ್‌ಗೆ ಸರ್ಕಾರದ ಬೆಂಬಲವಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಖಚಿತಪಡಿಸಿದ್ದಾರೆ.
ಬಂದ್‌ಗೆ ಯಾರ್ಯಾರ ಬೆಂಬಲ?
ಓಲಾ
ಉಬರ್
ಏರ್ಪೋರ್ಟ್ ಟ್ಯಾಕ್ಸಿ
ಆಟೋ ಚಾಲಕರ ಸಂಘಟನೆ
ಖಾಸಗಿ ಸಾರಿಗೆ ಒಕ್ಕೂಟ
ಎಪಿಎಂಸಿ ಸಂಘಟನೆ
ಕಾರ್ಮಿಕ ಪರಿಷತ್
ಕರ್ನಾಟಕ ಸಾರಿಗೆ ನೌಕರರ ಒಕ್ಕೂಟ
ಕೆಎಸ್ಆರ್ಟಿಸಿ, ಬಿಎಂಟಿಸಿ ನೌಕರರ ಸಂಘ
ಏನೆಲ್ಲ ಬಂದ್ ಆಗಿರಲಿವೆ?
ಥಿಯೇಟರ್ – ಬೆಳಗಿನ ಪ್ರದರ್ಶನ ಮಾತ್ರ ಬಂದ್
ಬೀದಿ ವ್ಯಾಪಾರ – ನೈತಿಕ ಬೆಂಬಲ, ಎಂದಿನಂತೆ ವ್ಯಾಪಾರ ನಡೆಯಲಿದೆ
ಖಾಸಗಿ ಸಾರಿಗೆ – ಶಾಲಾ ವಾಹನ ಬಿಟ್ಟು ಉಳಿದ ಸೇವೆ ಬಂದ್
ಚಿಕ್ಕಮಗಳೂರು – 50 ಸಂಘಟನೆಗಳ ಬೆಂಬಲ
ಹುಬ್ಬಳ್ಳಿ – ಹೋಟೆಲ್ ಮಾಲೀಕರ ಬೆಂಬಲ ಇಲ್ಲ
ಹುಬ್ಬಳ್ಳಿ – ಉತ್ತರ ಕರ್ನಾಟಕ ಆಟೋ ಚಾಲಕರ ಸಂಘದ ಬೆಂಬಲವಿಲ್ಲ
ಯಾವ ಜಿಲ್ಲೆಗಳಲ್ಲಿ ಕರ್ನಾಟಕ ಬಂದ್‌ಗೆ ಬೆಂಬಲ?
ಚಿಕ್ಕಮಗಳೂರು ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ಬಂದ್‌ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಚಿಕ್ಕಮಗಳೂರಲ್ಲಿ ಬಂದ್‌ಗೆ ಬೆಂಬಲ ವ್ಯಕ್ತವಾಗಿದೆ. ಚಿತ್ರದುರ್ಗದಲ್ಲೂ ಕನ್ನಡ ಸಂಘಟನೆಗಳು ಬಂದ್‌ಗೆ ಬೆಂಬಲ ಸೂಚಿಸಿವೆ.
ಯಾವ ಜಿಲ್ಲೆಗಳಲ್ಲಿ ಬೆಂಬಲ ಇಲ್ಲ?
ಕೋಲಾರ, ದಕ್ಷಿಣ ಕನ್ನಡ, ಹುಬ್ಬಳ್ಳಿ, ಕಲಬುರಗಿ, ಕೊಪ್ಪಳ ಜಿಲ್ಲೆಗಳಲ್ಲಿ ಬಂದ್‌ಗೆ ನೇರ ಬೆಂಬಲ ವ್ಯಕ್ತವಾಗಿಲ್ಲ.
ಏನೇನಿರುತ್ತೆ, ಏನೇನಿರಲ್ಲ?
ಕರ್ನಾಟಕ ಬಂದ್ ವೇಳೆ ಆಸ್ಪತ್ರೆ, ವೈದ್ಯಕೀಯ ಸೇವೆ, ಮೆಡಿಕಲ್, ಹಾಲು, ಅಗತ್ಯ ವಸ್ತುಗಳು, ನಮ್ಮ ಮೆಟ್ರೋ ಸೇವೆ ಇರಲಿದೆ. ಓಲಾ ಹಾಗೂ ಉಬರ್, ಕೆಲ ಖಾಸಗಿ ವಾಹನಗಳು ಹಾಗೂ ಏರ್ಪೋರ್ಟ್ ಟ್ಯಾಕ್ಸಿ ಸಂಚಾರ ಇರುವುದಿಲ್ಲ.
ಶಾಲೆ ಕಾಲೇಜು
ಅಧಿಕೃತ ವೇಳಾಪಟ್ಟಿ ಪ್ರಕಾರ, ಮಾರ್ಚ್ 22ರ ಶನಿವಾರ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಇರುವುದಿಲ್ಲ. ಹೀಗಾಗಿ ಹತ್ತನೇ ತರಗತಿ ಪರೀಕ್ಷೆ ಮೇಲೆ ಬಂದ್ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ 1ರಿಂದ ನೇ ತರಗತಿ ವರೆಗಿನ ಕೆಲವು ತರಗತಿಗಳ ಪರೀಕ್ಷೆ ನಡೆಯಲಿದೆ. ಪರೀಕ್ಷೆ ಮುಂದೂಡಿಕೆ ಮಾಡಬೇಕೇ ಅಥವಾ ನಡೆಸುವುದೇ ಎಂಬ ಬಗ್ಗೆ ಸರ್ಕಾರ ಇಂದು ನಿರ್ಧಾರ ಪ್ರಕಟಿಸುವ ನಿರೀಕ್ಷೆ ಇದೆ.
ಕರ್ನಾಟಕ ಸಾರಿಗೆ ನೌಕರರ ಒಕ್ಕೂಟ, ಕೆಎಸ್ಆರ್ಟಿಸಿ, ಬಿಎಂಟಿಸಿ ನೌಕರರ ಸಂಘದಿಂದ ಕೂಡ ಬಂದ್‌ಗೆ ಬೆಂಬಲ ವ್ಯಕ್ತವಾಗಿದೆ. ಹೀಗಾಗಿ ಕೆಎಸ್ಆರ್ಟಿಸಿ, ಬಿಎಂಟಿಸಿ ಬಸ್ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: Karnataka Bandh: ಮಾ. 22ರ ಕರ್ನಾಟಕ ಬಂದ್‌ಗೆ ಕನ್ನಡ ಚಿತ್ರರಂಗ ಬೆಂಬಲ; ಬೆಳಗಿನ ಶೋ ಇಲ್ಲ