ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Bigg Boss Kannada 12: ಡಿಸಿಪ್ಲಿನ್‌ನಲ್ಲಿ ಕಿಂಗ್, ಟಾಸ್ಕ್‌ಗಳಲ್ಲಿ ಮಾಸ್ಟರ್! ರಘು ಜರ್ನಿ ಇದು

Bigg Boss Raghu: ಬಿಗ್‌ ಬಾಸ್‌ ಫಿನಾಲೆಗೆ ಇನ್ನು ಕೇವಲ ಎರಡು ದಿನಗಳು ಬಾಕಿ ಇವೆ. ಅಶ್ವಿನಿ ಗೌಡ, ಗಿಲ್ಲಿ ನಟ, ಕಾವ್ಯಾ, ರಘು, ಧನುಷ್, ರಕ್ಷಿತಾ ಶೆಟ್ಟಿ ಅವರು ಈಗ ಫಿನಾಲೆ ತಲುಪಿದ್ದಾರೆ. ರಾಘವೇಂದ್ರ ಅಲಿಯಾಸ್‌ ಮ್ಯೂಟೆಂಟ್‌ ರಘು ಕೂಡ ಪ್ರಬಲ ಸ್ಪರ್ಧಿಯೇ ಆಗಿದ್ದಾರೆ. ಪವರ್ ಲಿಫ್ಟಿಂಗ್‌ನಲ್ಲಿ ಎಲ್ಲಾ ರೆಕಾರ್ಡ್‌ನೂ ಬ್ರೇಕ್‌ ಜೊತೆಗೆ ಕರ್ನಾಟಕ ಸರ್ಕಾರದಿಂದ ಕ್ರೀಡಾ ರತ್ನ ಅವಾರ್ಡ್‌ ಲಭಿಸಿದೆ. ಹೀಗಿರುವಾಗ ಬಿಗ್‌ ಬಾಸ್‌ ಮನೆಯ ಟಾಸ್ಕ್‌ಗಳಲ್ಲಿ ಅವರು ಕಠಿಣ ಸ್ಪರ್ಧಿ ಆಗದೇ ಇರೋಕೆ ಆಗತ್ತಾ? ಹೇಗಿತ್ತು ಅವರು ಪ್ರಯಾಣ?

ಡಿಸಿಪ್ಲಿನ್‌ನಲ್ಲಿ ಕಿಂಗ್, ಟಾಸ್ಕ್‌ಗಳಲ್ಲಿ ಮಾಸ್ಟರ್! ರಘು ಜರ್ನಿ ಇದು

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Jan 16, 2026 3:32 PM

ಬಿಗ್‌ ಬಾಸ್‌ ಫಿನಾಲೆಗೆ (Bigg Boss Kannada 12 Finale) ಇನ್ನು ಕೇವಲ ಎರಡು ದಿನಗಳು ಬಾಕಿ ಇವೆ. ಅಶ್ವಿನಿ ಗೌಡ, ಗಿಲ್ಲಿ ನಟ, ಕಾವ್ಯಾ, ರಘು, ಧನುಷ್, ರಕ್ಷಿತಾ ಶೆಟ್ಟಿ (Rakshitha Shetty) ಅವರು ಈಗ ಫಿನಾಲೆ ತಲುಪಿದ್ದಾರೆ. ರಾಘವೇಂದ್ರ ಅಲಿಯಾಸ್‌ ಮ್ಯೂಟೆಂಟ್‌ ರಘು ಕೂಡ ಪ್ರಬಲ ಸ್ಪರ್ಧಿಯೇ ಆಗಿದ್ದಾರೆ. ಪವರ್ ಲಿಫ್ಟಿಂಗ್‌ನಲ್ಲಿ ಎಲ್ಲಾ ರೆಕಾರ್ಡ್‌ನೂ ಬ್ರೇಕ್‌ ಜೊತೆಗೆ ಕರ್ನಾಟಕ ಸರ್ಕಾರದಿಂದ ಕ್ರೀಡಾ ರತ್ನ ಅವಾರ್ಡ್‌ (Award) ಲಭಿಸಿದೆ. ಹೀಗಿರುವಾಗ ಬಿಗ್‌ ಬಾಸ್‌ ಮನೆಯ ಟಾಸ್ಕ್‌ಗಳಲ್ಲಿ ಅವರು ಕಠಿಣ ಸ್ಪರ್ಧಿ ಆಗದೇ ಇರೋಕೆ ಆಗತ್ತಾ? ಹೇಗಿತ್ತು ಅವರು ಪ್ರಯಾಣ?

ಬಿಗ್‌ ಬಾಸ್‌ ಮನೆಯ ಅನ್ನಪೂರ್ಣೇಶ್ವರ

ರಘು ಅಂದರೆ ಮೊದಲಿಗೆ ಇಡೀ ಮನೆಗೆ ಅನ್ನ ನೀಡೋ ನಳಮಹಾರಾಜ ಆಗಿದ್ದರು. ಎಷ್ಟೇ ಕೋಪ, ತಾಪ ಇದ್ರೂ ಅಡುಗೆ ಮನೆಯಲ್ಲಿ ರಘು ವೆರೈಟಿ ತಿಂಡಿ, ತಿನಿಸುಗಳನ್ನ ಮಾಡೋದನ್ನ ಮರೆಯುತ್ತಿರಲಿಲ್ಲ. ಆ ವಿಚಾರಕ್ಕೆ ಸಾಕಷ್ಟು ಬಾರಿ ಗಿಲ್ಲಿ ಜೊತೆ ಜಗಳ ಆಗಿದ್ದೂ ಇದೆ. ಅಡುಗೆ ಮನೆಯಲ್ಲಿ ಬೆಳ್ಳುಳ್ಳಿ ಕುಟ್ಟೋಕೆ ಮಾತ್ರ ರಘು ಸಿಮೀತ ಅಂದ ಗಿಲ್ಲಿ ಮಾತು, ರಘುಗೆ ಬೇಸರ ತರಿಸಿತ್ತು. ನಿನ್ನೆಯ ಎಪಿಸೋಡ್‌ನಲ್ಲಿ ಈ ಬಗ್ಗೆ ಗಿಲ್ಲಿ ಕ್ಷಮೆಯೂ ಕೇಳಿದ್ದಾರೆ.

ಇದನ್ನೂ ಓದಿ: Bigg Boss Kannada 12: ನಯವಾಗಿ ಬಂದ್ರೆ ಸ್ನೇಹಜೀವಿ! ಸಿಡಿ–ಮಿಡಿ ಮಾಡಿದ್ರೆ ಸುಂಟರಗಾಳಿ; ಹೇಗಿತ್ತು ರಾಜಮಾತೆ ಅಶ್ವಿನಿ ಗೌಡ ಜರ್ನಿ?

ರಘು-ಗಿಲ್ಲಿ ಕುಚಿಕು ಫ್ರೆಂಡ್ಸ್‌

ಇನ್ನು ರಘು ಕೂಡ ಬಿಗ್‌ ಬಾಸ್‌ ಮನೆಯಲ್ಲಿ ಸ್ವಲ್ಪ ಸೈಲೆಂಟ್‌ ಇದ್ದರೂ ಗಿಲ್ಲಿ ಜೊತೆ ಒಳ್ಳೆಯ ಬಾಡಿಂಗ್‌ ಇತ್ತು. ಇವರಿಬ್ಬರ ಜೋಡಿ ಟ್ರೋಲ್‌ ಕೂಡ ಆಗಿತ್ತು. ಬಿಗ್ ಬಾಸ್ ಕನ್ನಡ 12’ ಕಾರ್ಯಕ್ರಮಕ್ಕೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಂದವರು ರಘು. ಕಾಲಿಡುತ್ತಿದ್ದಂತೆಯೇ ಅಶ್ವಿನಿ ಗೌಡ ಹಾಗೂ ಜಾಹ್ನವಿ ಜೊತೆ ರಘು ಕಿತ್ತಾಡಿಕೊಂಡರು.

ಘು ಹಾಗೂ ಗಿಲ್ಲಿ ನಡುವಿನ ಸ್ನೇಹ, ಒಡನಾಟ ವೀಕ್ಷಕರಿಗೂ ಇಷ್ಟವಾಗಿತ್ತು. ‘ರಘು ಲವ್ಸ್ ಗಿಲ್ಲಿ’ ಕ್ಯಾರಿಕೇಚರ್‌ ಸಹ ವೈರಲ್ ಆಗಿತ್ತು. ಆದ್ರೆ ಬರ್ತಾ ಬರ್ತಾ ಇವರಿಬ್ಬರ ಸ್ನೇಹದ ಮಧ್ಯೆ ಬಿರುಕು ಮೂಡಿತ್ತು. ಗಿಲ್ಲಿ ಎಷ್ಟೇ ಕೇಳಿದರೂ ರಘು ಕೊಡಲಿಲ್ಲ. ರಘು ತಟ್ಟೆಗೆ ಗಿಲ್ಲಿ ಕೈ ಹಾಕಲಿಲ್ಲ. ಆದರೆ, ಆನಂತರ ರಾಶಿಕಾ ಬಂದು ರಘು ತಟ್ಟೆಗೆ ಕೈಹಾಕಿ ಚಪಾತಿ ತೆಗೆದುಕೊಂಡರು. ರಾಶಿಕಾ ಜೊತೆ ರಘು ತಮ್ಮ ಚಪಾತಿಯನ್ನ ಹಂಚಿಕೊಂಡರು. ಇದು ಕೂಡ ರಘು ಬಗ್ಗೆ ಗಿಲ್ಲಿ ಫ್ಯಾನ್ಸ್‌ ಬೇಸರ ವ್ಯಕ್ತಪಡಿಸಿದ್ದರು.

ರಕ್ಷಿತಾ ಮುದ್ದಿನ ಅಣ್ಣ

ರಘು ಕಂಡರೆ ರಕ್ಷಿತಾಗೆ ತುಂಬಾ ಪ್ರೀತಿ. . ಸುದೀಪ್‌ ಅವರು ಸ್ಪರ್ಧಿಗಳು ಉಡುಗೊರೆಗಳ ವಿನಿಮಯ ಮಾಡಿಕೊಳ್ಳುವಂತೆ ಹೇಳಿದರು. ಆಗ ಒಬ್ಬೊಬ್ಬರು ತಮಗೆ ಇಷ್ಟವಾದವರಿಗೆ ಒಂದೊಂದು ಗಿಫ್ಟ್‌ ನೀಡಿದರು. ಈ ವೇಳೆ ರಕ್ಷಿತಾ ಶೆಟ್ಟಿ ನಡೆ ಎಲ್ಲರಿಗೂ ಅಚ್ಚರಿಯನ್ನು ಉಂಟು ಮಾಡಿತು.ರಘು ಅವರಿಗೆ ರಕ್ಷಿತಾ ನೀಡಿದ ಉಡುಗೊರೆ ಎಲ್ಲರಿಗೂ ಶಾಕ್‌ ನೀಡಿತು.

ಯಾಕೆಂದರೆ, ರಕ್ಷಿತಾ ತಮ್ಮಲ್ಲಿದ್ದ ಉತ್ತಮ ಮೆಡಲ್‌ ಅನ್ನು ರಘುಗೆ ನೀಡಿದರು. ರಘು ಅವರು ನನಗೆ ಅಣ್ಣ ಇದ್ದಂತೆ, ನಾನು ಇಲ್ಲಿಂದ ಹೊರಗೆ ಹೋದಮೇಲೂ ಅವರು ನನ್ನೊಂದಿಗೆ ಬೆಂಬಲವಾಗಿ ಇರುತ್ತಾರೆ ಎಂಬ ರಕ್ಷಿತಾ ಮಾತುಗಳನ್ನು ಕೇಳಿದ ಮೇಲೆ ರಘು ಭಾವುಕರಾದರು.

ಇದನ್ನೂ ಓದಿ: Bigg Boss Kannada 12: ಗಿಲ್ಲಿಯೇ ಗೆಲ್ಲೋದು! ಭವಿಷ್ಯ ನುಡಿದ ಶಿವಣ್ಣ

ಕ್ಯಾಪ್ಟನ್‌ ರಘು

ಅಶ್ವಿನಿ ರಘು ನಡುವೆ ಎಷ್ಟೇ ಗಲಾಟೆ ಆದ್ರೂ ಸರಿಹೋಗಿದೆ. ವೀಕೆಂಡ್‌ ನಲ್ಲಿ ಇವರಿಬ್ಬರ ಎಂಟರ್ ಟೈನ್ಮೆಂಟ್‌ನ ವೀಕ್ಷಕರು ಎಂಜಾಯ್‌ ಮಾಡ್ತಿದ್ದರು. ಒಂದು ತಿಂಗಳಲ್ಲಿ ಎರಡು ಬಾರಿ ಕ್ಯಾಪ್ಟನ್‌, ಬೆಸ್ಟ್‌ ಪ್ರಿನ್ಸಿಪಾಲ್‌ ಬಿರುದು, ಕಿಚ್ಚನ ಚಪ್ಪಾಳೆ ಪಡೆದಿದ್ದಾರೆ. ಇದೀಗ ಕಪ್‌ ಯಾರ ಪಾಲಾಗುತ್ತೇ ಅನ್ನೋದೇ ವೀಕ್ಷಕರಲ್ಲಿ ಇರುವ ಕುತೂಹಲ.