MUDA sites: ಮುಡಾದ 63 ನಿವೇಶನಗಳನ್ನು ವಿವಿಧ ಇಲಾಖೆಗಳಿಗೆ ಹಂಚಿಕೆ ಮಾಡಿ ಸಿಎಂ ಆದೇಶ
CM Siddaramaiah: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನ ತಮ್ಮ ನಿವಾಸದಲ್ಲಿ ನಿವೇಶನಗಳ ಹಂಚಿಕೆಯ ಆದೇಶ ಪ್ರತಿಯನ್ನು ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ. ಕಳೆದ 20 ವರ್ಷಗಳಿಂದ ಹಂಚಿಕೆಯಾಗದೆ ಬಾಕಿ ಉಳಿದಿದ್ದ ಮುಡಾದ 63 ಮೂಲೆ ನಿವೇಶನಗಳನ್ನು ಸರ್ಕಾರದ ವಿವಿಧ ಇಲಾಖೆಗಳಿಗೆ ಹಂಚಿಕೆ ಮಾಡಲಾಗಿದೆ.
-
Prabhakara R
Aug 31, 2025 10:35 PM
ಬೆಂಗಳೂರು: ಕಳೆದ 20 ವರ್ಷಗಳಿಂದ ಹಂಚಿಕೆಯಾಗದೆ ಬಾಕಿ ಉಳಿದಿದ್ದ ಮುಡಾದ 63 ಮೂಲೆ ನಿವೇಶನಗಳನ್ನು (MUDA sites) ಸರ್ಕಾರದ ವಿವಿಧ ಇಲಾಖೆಗಳಿಗೆ ಹಂಚಿಕೆ ಮಾಡಿ ಸಿಎಂ ಸಿದ್ದರಾಮಯ್ಯ ಅವರು ಆದೇಶ ಹೊರಡಿಸಿದ್ದಾರೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನ ನಿವಾಸದಲ್ಲಿ ನಿವೇಶನಗಳ ಹಂಚಿಕೆಯ ಆದೇಶ ಪ್ರತಿಯನ್ನು ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ. ಈ ವೇಳೆ ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ರಕ್ಷಿತ್ ಉಪಸ್ಥಿತರಿದ್ದರು.
ನಿವೇಶನಗಳ ವಿವರ
- ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ-11
- ಸಮಾಜ ಕಲ್ಯಾಣ ಇಲಾಖೆ -2
- ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ- 2
- ಭೋಗಾಧಿ ಪಟ್ಟಣ ಪಂಚಾಯತಿ-1
- ಸಣ್ಣ ನೀರಾವರಿ ಇಲಾಖೆ-1
- ಚೆಸ್ಕಾಂ-23
- ಕೆಪಿಟಿಸಿಎಲ್-10
- ಮೈಸೂರು ಮಹಾ ನಗರ ಪಾಲಿಕೆ-1
- ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ-11
- ಅಗ್ನಿ ಶಾಮಕ-1
ಒಟ್ಟು 63
ಈ ಸುದ್ದಿಯನ್ನೂ ಓದಿ | CM Siddaramaiah: ಅನ್ನದಾತರಿಗೆ ಗುಡ್‌ನ್ಯೂಸ್; ರಾಜ್ಯ ಸರ್ಕಾರದಿಂದ 37 ಲಕ್ಷ ರೈತರಿಗೆ 28 ಸಾವಿರ ಕೋಟಿ ರೂ. ಸಾಲ ವಿತರಣೆ ಗುರಿ