ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Gauribidanur News: ಶ್ರದ್ಧಾಭಕ್ತಿಯಿಂದ ನಡೆದ ತ್ರಯಂಬಕೇಶ್ವರ ದೇವಾಲಯ ಜೀರ್ಣೋದ್ಧಾರ

ಮೂರನೇ ದಿನವಾದ ಗುರುವಾರ ರಾಜ್ಯ ಉಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಎನ್.ಕುಮಾರ್ ಅವರ ಮಾರ್ಗದರ್ಶನದಲ್ಲಿ ಮುಂಜಾನೆ ದೀಪಾರಾಧನೆ, ಪ್ರಾಣ ಪ್ರತಿಷ್ಠಾಪನೆ, ಮಹಾಪೂಜೆ, ಗೋಪೂಜೆ, ಸಾಮೂಹಿಕ ನಿರೀಕ್ಷಣ, ತತ್ವನ್ಯಾಸ, ಕಲನ್ಯಾಸ ಹೋಮ, ಪಂಚಬ್ರಹ್ಮ ಸದಾಶಿವ ಹೋಮ, ಶ್ರೀತ್ರ್ಯಂಬ ಕೇಶ್ವರಕೇಶ್ವರ ಮೂಲ ಮಂತ್ರ ಹೋಮ,ಮಹಾಪೂರ್ಣಾಹುತಿ ಮುಂತಾದ ದೇವತಾ ಕಾರ್ಯಗಳು ನೆರವೇರಿದವು

ಶ್ರದ್ಧಾಭಕ್ತಿಯಿಂದ ನಡೆದ ತ್ರಯಂಬಕೇಶ್ವರ ದೇವಾಲಯ ಜೀರ್ಣೋದ್ಧಾರ

-

Ashok Nayak
Ashok Nayak Dec 19, 2025 1:13 AM

ಗೌರಿಬಿದನೂರು : ತಾಲೂಕಿನ ಹೊಸೂರು ಗ್ರಾಮದ ಪುರಾತನ ದೇವಸ್ಥಾನವಾದ ಶ್ರೀತ್ರ್ಯಂಬ ಕೇಶ್ವರಸ್ವಾಮಿಯ ಮೂಲ ಸ್ಥಿರಬಿಂಬ, ಅಷ್ಟಬಂಧನ ಪ್ರತಿಷ್ಠಾಪನ ಮತ್ತು ಚರಬಿಂಬ ಪ್ರತಿಷ್ಠಾಪನ ಹಾಗೂ ದೇವಾಲಯ ಜೀರ್ಣೋದ್ಧಾರ ಕಲಾ ಪೂರ್ಣ ಮಹೋತ್ಸವ ಮುಂತಾದ ದೇವತಾ ಕಾರ್ಯಗಳನ್ನು ಮೂರು ದಿನಗಳ ಕಾಲ ಅತ್ಯಂತ ಶ್ರದ್ದಾಭಕ್ತಿಯಿಂದ ನೆರವೇರಿಸಲಾಯಿತು.

ಮೂರನೇ ದಿನವಾದ ಗುರುವಾರ ರಾಜ್ಯ ಉಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಎನ್.ಕುಮಾರ್ (Retired High Court Justice N. Kumar)ಅವರ ಮಾರ್ಗದರ್ಶನದಲ್ಲಿ ಮುಂಜಾನೆ ದೀಪಾರಾಧನೆ, ಪ್ರಾಣ ಪ್ರತಿಷ್ಠಾಪನೆ, ಮಹಾಪೂಜೆ, ಗೋಪೂಜೆ, ಸಾಮೂಹಿಕ ನಿರೀಕ್ಷಣ, ತತ್ವನ್ಯಾಸ, ಕಲನ್ಯಾಸ ಹೋಮ, ಪಂಚಬ್ರಹ್ಮ ಸದಾಶಿವ ಹೋಮ, ಶ್ರೀತ್ರ್ಯಂಬ ಕೇಶ್ವರಕೇಶ್ವರ ಮೂಲ ಮಂತ್ರ ಹೋಮ,ಮಹಾಪೂರ್ಣಾಹುತಿ ಮುಂತಾದ ದೇವತಾ ಕಾರ್ಯಗಳು ನೆರವೇರಿದವು.

ಇದನ್ನೂ ಓದಿ: Gauribidanur News: ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪ್ರೋತ್ಸಾಹ ಅಗತ್ಯ

ಮಹಾ ಮಂಗಳಾರತಿ ನಂತರ ನೆರೆದಿದ್ದ ಭಕ್ತಾದಿಗಳಿಗೆ ತೀರ್ಥ ಪ್ರಸಾದ ಹಾಗೂ ಅನ್ನ ಸಂತರ್ಪಣೆ ಯನ್ನು ವಿನಿಯೋಗಿಸಲಾಯಿತು.

ಈ ಸಂಧರ್ಭದಲ್ಲಿ ಮಾಜಿ ಸಚಿವ ಶಿವಶಂಕರರೆಡ್ಡಿ, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಹೆಚ್ವಿ.ಮಂಜುನಾಥ್ , ಬಿಜೆಪಿ ಪಕ್ಷದ ಮುಖಂಡರಾದ ಡಾ.ಎಸ್ ಶಶಿಧರ್, ಜಿಲ್ಲಾ ಪಂಚಾಯತಿ ಮಾಜಿ ಉಪಾಧ್ಯಕ್ಷ ಜಿಕೆ.ರಮೇಶ್ ,ಸಮಾಜ ಸೇವಕ ಕೆ.ಕೆಂಪರಾಜು, ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಆರ್.ಲೋಕೇಶ್, ಗ್ರಾಮ ಪಂಚಾಯತಿ ಅಧ್ಯಕ್ಷೆ ಕೆ.ಗೀತಾ ನಾಗರಾಜ್, ಸತೀಶ್ ಹಾಗೂ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.