ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shri Nirmalanandanath Mahaswamiji: ವಿಜ್ಞಾನ ಮತ್ತು ಆಧ್ಯಾತ್ಮ ಒಂದೇ ನಾಣ್ಯದ ಎರಡು ಮುಖಗಳು : ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ

ಬಿಜಿಎಸ್ ಶಿಕ್ಷಣ ಸಂಸ್ಥೆಗಳು ಇಲ್ಲಿ ಬರುವ ವಿದ್ಯಾರ್ಥಿಗಳಿಗೆ ಕೇವಲ ಕಲಿಕೆಗೆ ಮಾತ್ರ ಒತ್ತು ನೀಡುವು ದಿಲ್ಲ. ಬದಲಿಗೆ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಆಧ್ಯತೆ ನೀಡಲಾಗುತ್ತದೆ. ಕಳೆದ ಹಲವು ವರ್ಷಗಳಿಂದ ವಿಜ್ಞಾತಂ ಎಂಬ ಕಾರ್ಯಕ್ರಮಗಳ ಮೂಲಕ ಮಕ್ಕಳಿಗೆ ವಿಜ್ಞಾನ, ತಂತ್ರಜ್ಞಾನ, ಬಾಹ್ಯಾಕಾಶ ತಂತ್ರಜ್ಞಾನದ ಬೆಳವಣಿಗೆಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ

ವಿಜ್ಞಾನ ಮತ್ತು ಆಧ್ಯಾತ್ಮ ಒಂದೇ ನಾಣ್ಯದ ಎರಡು ಮುಖಗಳು

-

Ashok Nayak
Ashok Nayak Dec 18, 2025 11:38 PM

ಚಿಕ್ಕಬಳ್ಳಾಪುರ : ವಿಜ್ಞಾನ ಮತ್ತು ಆಧ್ಯಾತ್ಮ ಒಂದೇ ನಾಣ್ಯದ ಎರಡು ಮುಖಗಳಾಗಿವೆ.ವಿಜ್ಞಾನದ ಸಂಶೋಧನೆಗಳು ಮನುಕುಲದ ಅಗತ್ಯಗಳನ್ನು ಪೂರೈಸಲು ಶ್ರಮಿಸಿದರೆ, ಆಧ್ಯಾತ್ಮದ ಸಾಧನೆ  ಅಂತರಂಗವನ್ನು ಬೆಳಗಲಿದೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಜಗದ್ಗುರು ಡಾ. ಶ್ರೀ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ತಿಳಿಸಿದರು.

ನಗರ ಹೊರವಲಯ ಅಗಲಗುರ್ಕಿಯ ಬಿಜಿಎಸ್ ಸೈನ್ಸ್ ಅಕಾಡೆಮಿ ಜ್ಞಾನಗಂಗೋತ್ರಿ ಕ್ಯಾಂಪಸ್‌ ನಲ್ಲಿ ಆಯೋಜಿಸಿದ್ದ ವಿಜ್ಞಾನೋತ್ಸವ-೨೦೨೫ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.

ಬಿಜಿಎಸ್ ಶಿಕ್ಷಣ ಸಂಸ್ಥೆಗಳು ಇಲ್ಲಿ ಬರುವ ವಿದ್ಯಾರ್ಥಿಗಳಿಗೆ ಕೇವಲ ಕಲಿಕೆಗೆ ಮಾತ್ರ ಒತ್ತು ನೀಡುವುದಿಲ್ಲ. ಬದಲಿಗೆ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಆಧ್ಯತೆ ನೀಡಲಾಗುತ್ತದೆ. ಕಳೆದ ಹಲವು ವರ್ಷಗಳಿಂದ ವಿಜ್ಞಾತಂ ಎಂಬ ಕಾರ್ಯಕ್ರಮಗಳ ಮೂಲಕ ಮಕ್ಕಳಿಗೆ ವಿಜ್ಞಾನ, ತಂತ್ರಜ್ಞಾನ, ಬಾಹ್ಯಾಕಾಶ ತಂತ್ರಜ್ಞಾನದ ಬೆಳವಣಿಗೆಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

ಇದನ್ನೂ ಓದಿ: Chunchashree Nirmalanandanath Swami: ಆರೋಗ್ಯ ಕ್ಷೇತ್ರಕ್ಕೆ ಸರಕಾರಿ ರಂಗದಂತೆ ಖಾಸಗಿ ಆಸ್ಪತ್ರೆಗಳ ಕೊಡುಗೆಯೂ ಅಪಾರ : ಚುಂಚಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅಭಿಮತ

ವಿಜ್ಞಾನಿಗಳು ಮತ್ತು ಧರ್ಮಗುರುಗಳು ಸದಾ ಮೌನಿಯಾಗಿದ್ದುಕೊಂಡೇ ತಮ್ಮ ತಮ್ಮ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡುವ ಮೂಲಕ ಸಮಾಜವನ್ನು ಮುನ್ನಡೆಸುವ ಕೆಲಸ ಮಾಡುತ್ತಿರುತ್ತಾರೆ. ಹೀಗಾಗಿ ಮೌನಕ್ಕೆ ತನ್ನದೇ ಆದ ಮಹತ್ವವಿದೆ ಎಂದರು.

ಇಸ್ರೋದ ಪ್ರಖ್ಯಾತ ವಿಜ್ಞಾನಿ ನಾಡಗೌಡ ಮಾತನಾಡಿ ಆದಿಚುಂಚನಗಿರಿ ಶ್ರೀಮಠವು ಅನ್ನ, ಅಕ್ಷರ, ಆರೋಗ್ಯ, ಆಧ್ಯಾತ್ಮಿಕತೆ, ಆನಂದ ದಾಸೋಹ ಸೇವೆಗಳಿಗೆ ದಾರಿದೀಪವಾಗಿದೆ. ಇಲ್ಲಿನ ಶಿಕ್ಷಣ ಸಂಸ್ಥೆ ಗಳಲ್ಲಿ ವಿದ್ಯಾರ್ಥಿ ದಿಸೆಯಿಂದಲೇ ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆಯನ್ನು ಇಂತಹ ಕಾರ್ಯಕ್ರಮ ಗಳ ಮೂಲಕ ಮಾಡುತ್ತಿರುವುದು ಸಂತೋಷದ ವಿಚಾರವಾಗಿದೆ ಎಂದರು.

ಇಸ್ರೋ ಬಾಹ್ಯಾಕಾಶ ಕ್ಷೇತ್ರದಲ್ಲಿ ವಿಶ್ವಮಟ್ಟದ ಸಾಧನೆಯನ್ನು ದಾಖಲಿಸಿರುವ ಸಂಸ್ಥೆಯಾಗಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ೨೦೪೦ರ ವೇಳೆಗೆ ಭಾರತೀಯರನ್ನು ಚಂದ್ರನ ಮೇಲೆ ಇಳಿಸುವ ಗುರಿಯನ್ನು ಹೊಂದಿದೆ. ಭಾತರದ ಮೊದಲ ಮಾನವ ಸಹಿತ ನೌಕೆ ಮಿಷನ್‌ನ ಅಡಿಯಲ್ಲಿ ಗಗನಯಾನ ೨೦೨೭ ರಲ್ಲಿ ಉಡಾವಣೆಗೆ ಸಿದ್ಧತೆಗಳು ನಡೆದಿವೆ. ಚಂದ್ರನ ಮೇಲೆ ನೀರಿನ ಆವಿಷ್ಕಾರದಿಂದ ಹಿಡಿದು ಚಂದ್ರಯಾನ-೩ ಮಿಷನ್ ಮೂಲಕ ಚಂದ್ರನ ದಕ್ಷಿಣ ಧೃವದ ಬಳಿ ಮೊದಲ ಸಾಫ್ಟ್ ಲ್ಯಾಂಡಿಂಗ್‌ವರೆಗೆ ಇಸ್ರೋ ಸಾಧನೆಗಳು ಅಪರವಾಗಿವೆ ಎಂದರು.

kids

ಎಐ ತಂತ್ರಜ್ಞಾನ, ರೋಬೋಟಿಕ್ ತಂತ್ರಜ್ಞಾನ ಮತ್ತು ಬಿಗ್ ಡೇಟಾ ತಂತ್ರಜ್ಞಾನಗಳು ಬಾಹ್ಯಾಕಾಶ ಕಾರ್ಯಾಚರಣೆಗಳ ಅವಿಭಾಜ್ಯ ಅಂಗವಾಗುತ್ತಿವೆ. ೩೫ ವರ್ಷಗಳ ಹಿಂದೆ ಕಂಪ್ಯೂಟರ್ ಕ್ರಾಂತಿ ಯನ್ನು ಯಾರೂ ಊಹಿಸಲೂ ಸಾಧ್ಯವಿರಲಿಲ್ಲ.ಇದೇ ರೀತಿ ಕೃತಕ ಬುದ್ದಿಮತ್ತೆ ಮತ್ತು ರೋಬೊ ಟಿಕ್ಸ್ ವಿಜ್ಞಾನ ಭವಿಷ್ಯದ ಬಾಹ್ಯಾಕಾಶ ಯುಗವನ್ನು ವ್ಯಾಖ್ಯಾನಿಸುತ್ತವೆ. ಈ ದಿಕ್ಕಿನಲ್ಲಿ ಭಾರತವು ತ್ವರಿತ ಪ್ರಗತಿಯನ್ನು ಸಾಧಿಸುತ್ತಿದೆ. ಚಂದ್ರಯಾನ-೧ ರೊಂದಿಗೆ ಆರಂಭವಾದ ಇಸ್ರೋ ಸಾಧನೆ,  ಚಂದ್ರನ ದಕ್ಷಿಣ ಧೃವದ ಮೇಲೆ ಮೊದಲ ಸಾಪ್ಟ್ ಲ್ಯಾಂಡಿಂಗ್‌ವರೆಗೆ ಭಾರತವು ಬಾಹ್ಯಾಕಾಶದಲ್ಲಿ ಹಲವಾರು ವಿಶ್ವದಾಖಲೆಗಳನ್ನು ಸ್ಥಾಪಿಸಿದೆ ಎಂದರು.

ವಿಜ್ಞಾನೋತ್ಸವ-೨೦೨೫ರ ಭಾಗವಾಗಿ ವಿದ್ಯಾರ್ಥಿಗಳಿಂದ ವಿಜ್ಞಾನ, ಬಾಹ್ಯಾಕಾಶ, ಕೃಷಿ, ತಂತ್ರಜ್ಞಾನ ಕ್ಷೇತ್ರಕ್ಕೆ ಸಂಶೋಧನೆಗೆ ಸಂಬAಧಿಸಿದ ವಿವಿಧ ವಿವಿಧ ಮಾದರಿಗಳನ್ನು ಪ್ರದರ್ಶನಕ್ಕೆ ಇಡಲಾಗಿದ್ದು ಅತಿಥಿಗಳು ಕೇಳುವ ಪ್ರಶ್ನೆಗಳಿಗೆ ಮಕ್ಕಳು ಸಮರ್ಥವಾಗಿ ಉತ್ತರ ನೀಡುವ ಮೂಲಕ ಭೇಷ್ ಎನಿಸಿಕೊಂಡರು.

ಈ ವೇಳೆ ಆದಿಚುಮಚನಗಿರಿ ಶಾಖಾ ಮಠದ ಶ್ರೀ ಮಂಗಳನಾಥ ಸ್ವಾಮೀಜಿ, ಪ್ರಾಂಶುಪಾಲ ಡಿ.ಸಿ. ಮೋಹನ್ ಕುಮಾರ್ ಸೇರಿದಂತೆ ಬೋಧಕ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.