ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

PM Narendra Modi: ಇಂದು ಗೋಕರ್ಣ ಪರ್ತಗಾಳಿ ಮಠಕ್ಕೂ ನಮೋ ಆಗಮನ, 77 ಅಡಿ ಎತ್ತರದ ಶ್ರೀರಾಮನ ಮೂರ್ತಿ ಅನಾವರಣ

PM Narendra Modi: 77 ಅಡಿಯ ಶ್ರೀರಾಮನ ಬೃಹತ್ ವಿಗ್ರಹವನ್ನು ಇಲ್ಲಿ ಸ್ಥಾಪಿಸಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಅದನ್ನು ಅನಾವರಣ ಮಾಡಲಿದ್ದಾರೆ. ಗೋವಾ ರಾಜ್ಯದ ಕಾಣಕೋಣದಲ್ಲಿ‌ರುವ ಪುಣ್ಯ ಕ್ಷೇತ್ರ, ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದ ಅತ್ಯಂತ ಪೂಜ್ಯವಾದ (Gokarn Parthagali Math) ಈ ಮಠಕ್ಕೆ 550 ವರ್ಷಗಳ ಇತಿಹಾಸವಿದೆ.

ಇಂದು ಗೋಕರ್ಣ ಪರ್ತಗಾಳಿ ಮಠಕ್ಕೂ ನಮೋ, ಶ್ರೀರಾಮ ಮೂರ್ತಿ ಅನಾವರಣ

ಶ್ರೀರಾಮನ ಪ್ರತಿಮೆ ಅನಾವರಣ ಮಾಡಲಿರುವ ಪಿಎಂ ಮೋದಿ -

ಹರೀಶ್‌ ಕೇರ
ಹರೀಶ್‌ ಕೇರ Nov 28, 2025 7:38 AM

ಕಾರವಾರ, ನ.28: ಉಡುಪಿ (Udupi) ಭೇಟಿಯ ಬಳಿಕ ಗೋವಾ- ಕರ್ನಾಟಕ ಗಡಿಭಾಗದಲ್ಲಿರುವ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಕ್ಕೆ (Gokarn Parthagali Math) ಭೇಟಿ ನೀಡಲಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi), ಮಠದಲ್ಲಿ ತಲೆ ಎತ್ತಿರುವ 77 ಅಡಿಯ ಶ್ರೀರಾಮನ ಪ್ರತಿಮೆಯನ್ನು (Sri Ram Statue) ಲೋಕಾರ್ಪಣೆ ಮಾಡಲಿದ್ದಾರೆ. ಪಂಚ ಶತಮಾನೋತ್ಸವ ಕಾರ್ಯಕ್ರಮಗಳನ್ನು ಉದ್ಘಾಟಿಸಲಿದ್ದಾರೆ.

ಗೋವಾ (Goa) ರಾಜ್ಯದ ಕಾಣಕೋಣದಲ್ಲಿ‌ರುವ ಪುಣ್ಯ ಕ್ಷೇತ್ರ, ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದ ಅತ್ಯಂತ ಪೂಜ್ಯವಾದ ಈ ಮಠಕ್ಕೆ 550 ವರ್ಷಗಳ ಇತಿಹಾಸವಿದೆ. 24ನೇ ಯತಿಗಳಾಗಿ ವಿದ್ಯಾಧೀಶ ಶ್ರೀಪಾದ ಒಡೆಯರ್ ಮುನ್ನಡೆಸುತ್ತಿದ್ದು, ಮಠದಲ್ಲಿ ಈ ಬಾರಿ ಪಂಚ ಶತಮಾನೋತ್ಸವ ನಡೆಯಲಿದೆ. ಹೀಗಾಗಿ ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಮೋದಿ ಆಗಮನ ಹಿನ್ನೆಲೆ ಸಾವಿರಕ್ಕೂ ಅಧಿಕ ಕಾರ್ಮಿಕರು ಮಠದಲ್ಲಿ ನಡೆಯುವ ಕಾರ್ಯಕ್ರಮದ ತಯಾರಿಗೆ ಟೊಂಕ ಕಟ್ಟಿ ನಿಂತಿದ್ದಾರೆ.

77 ಅಡಿಯ ಶ್ರೀರಾಮನ ಬೃಹತ್ ವಿಗ್ರಹವನ್ನು ಇಲ್ಲಿ ಸ್ಥಾಪಿಸಲಾಗಿದ್ದು, ಪ್ರಧಾನಿ ಅದನ್ನು ಅನಾವರಣ ಮಾಡಲಿದ್ದಾರೆ. 550 ಯಜಮಾನರಿಂದ ಹವನ ಮಾಡುವ ಸಂಕಲ್ಪ ಮಾಡಲಾಗಿದೆ. ಅನೇಕ ಧಾರ್ಮಿಕ, ಸಂಸ್ಕೃತ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಮಠದ ಸ್ವಾಮೀಜಿ ವಿಧ್ಯಾಧೀಶ ಒಡೆಯರ್ ತಿಳಿಸಿದ್ದಾರೆ.

PM Narendra Modi: ಇಂದು ಉಡುಪಿಗೆ ಮೋದಿ 40 ನಿಮಿಷ ಮೊದಲೇ ಆಗಮನ, ಅರ್ಧ ಗಂಟೆ ರೋಡ್‌ ಶೋ

ಮಠದ ಇಡೀ ಆವರಣವನ್ನು ಬಿಳಿ ಮಾರ್ಬಲ್‌ನಿಂದ ನವೀಕರಿಸಲಾಗಿದೆ. ಪ್ರವೇಶ ದ್ವಾರಗಳು, ಮಠದ ಒಳ ಆವರಣ, ಜರ್ಮನ್ ಟೆಂಟ್, ಹೆಲಿಪ್ಯಾಡ್, ಪಾರ್ಕಿಂಗ್ ಹೀಗೆ ಎಲ್ಲೆಡೆ ಕಾಮಗಾರಿ ನಡೆದಿದೆ. ಗೋಡೆಗಳನ್ನು ಸಾಂಪ್ರದಾಯಿಕ ಕಲೆ, ಚಿತ್ರಗಳಿಂದ ಅಲಂಕರಿಸಲಾಗಿದೆ. ಇಡೀ ಮಠವು ಅರಮನೆಯಂತೆ ಕಂಗೊಳಿಸುತ್ತಿದೆ. ಮಠದಲ್ಲಿ ಇಂದಿನಿಂದ ವಿಶೇಷ ಹೋಮ ನಡೆಯಲಿದೆ. ಇದಕ್ಕಾಗಿ ಮಠದ ಬಲಭಾಗದಲ್ಲಿ ಬೃಹತ್ ಯಾಗಶಾಲೆಯನ್ನು ನಿರ್ಮಿಸಲಾಗಿದೆ. ನಿನ್ನೆ ಮಕರ ಲಗ್ನದಲ್ಲಿ ವಿಗ್ರಹ ಪ್ರತಿಷ್ಠಾಪನೆ ನಡೆದಿದ್ದು, ಇಂದು ಪ್ರಧಾನಿ ನರೇಂದ್ರ ಮೋದಿ ಮೂರ್ತಿಯನ್ನು ಅನಾವರಣಗೊಳಿಸಲಿದ್ದಾರೆ. ಶ್ರೀರಾಮನ ಆದರ್ಶಗಳನ್ನು ತಲುಪಿಸುವ ಸಲುವಾಗಿ ವಿಗ್ರಹದ ಸುತ್ತ ರಾಮಾಯಣ ಥೀಮ್ ಪಾರ್ಕ್ ಮಾಡಲಾಗುತ್ತಿದೆ.

ನಾಳೆ ಉಡುಪಿಗೆ ನರೇಂದ್ರ ಮೋದಿ ಭೇಟಿ; ಕನ್ನಡದಲ್ಲೇ ಪೋಸ್ಟ್‌ ಹಂಚಿಕೊಂಡ ಪ್ರಧಾನಿ

ಮಠದ ಪ್ರಮುಖ ಪ್ರದೀಪ್ ಪೈ ಮಾತನಾಡಿ, ಶುಕ್ರವಾರ ಪ್ರಧಾನಿಗಳು ಆಗಮಿಸುತ್ತಿದ್ದಾರೆ. 70-72 ನಿಮಿಷ ನಮ್ಮೊಂದಿಗೆ ಇರ್ತಾರೆ. ಈ ಅವಧಿಯಲ್ಲಿ ಅತೀ ಎತ್ತರದ ರಾಮನ ಮೂರ್ತಿಯನ್ನು ಉದ್ಘಾಟನೆ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ. ಪ್ರಧಾನಿ ಮೋದಿ ಆಗಮನಕ್ಕೆ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠ ಸಜ್ಜಾಗಿದ್ದು, 11 ದಿನ ನಡೆಯಲಿರುವ ಕಾರ್ಯಕ್ರಮಕ್ಕೆ ಮೋದಿ ಚಾಲನೆ ನೀಡಲಿದ್ದಾರೆ.