International Women's Day 2025: ಮಹಿಳಾ ದಿನದಂದು ನಿಮ್ಮ ತಾಯಿಗೆ ಈ ಗಿಫ್ಟ್ ನೀಡಿ.... ಆಕೆಯ ಮುಖದಲ್ಲೊಂದು ನಗು ಮೂಡಿಸಿ!
ಪ್ರತಿಯೊಂದು ಕ್ಷೇತ್ರದಲ್ಲಿಯೂ ಕೂಡ ಮಹಿಳೆ ಪುರುಷರಿಗೆ ಸರಿಸಮಾನವಾಗಿ ಬೆಳೆದು ನಿಂತಿದ್ದಾಳೆ. ಹಾಗಾಗಿ ಪ್ರತೀ ವರ್ಷ ಮಹಿಳೆಯರನ್ನು ಗೌರವಿಸುವ ಸಲುವಾಗಿ ಮಾರ್ಚ್ 8ರಂದು ವಿಶ್ವದಾದ್ಯಂತ ಹೆಚ್ಚಿನ ರಾಷ್ಟ್ರಗಳಲ್ಲಿ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದಂದು ನಿಮ್ಮ ಅಮ್ಮನಿಗೆ ಇಷ್ಟವಾಗುವಂತಹ ಉಡುಗೊರೆಯನ್ನು ನೀಡಿ. ಅವರನ್ನು ಖುಷಿ ಪಡಿಸಬೇಕು ಎಂದು ನಿಮಗಿದ್ದರೆ ನಿಮ್ಮ ತಾಯಿಗೆ ನೀಡುವ ವಿಶೇಷ ಗಿಫ್ಟ್‌ಗಳ ಐಡಿಯಾ ಇಲ್ಲಿದೆ.

womens day gifts

ನವದೆಹಲಿ: ಮಹಿಳಾ ದಿನಾಚರಣೆ ಸಮೀಪಿಸುತ್ತಿದೆ. ಪ್ರತಿ ವರ್ಷ ಮಾರ್ಚ್ 8 ರಂದು ಅಂತರಾಷ್ಟ್ರೀಯ ಮಹಿಳಾ ದಿನ (Women's Day 2025) ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಮಹಿಳೆಯರ ಅಸ್ತಿತ್ವವನ್ನು ಗುರುತಿಸುವ ಸಲುವಾಗಿ ಪ್ರತಿವರ್ಷ ಈ ದಿನವನ್ನು ಆಚರಿಸಲಾಗುತ್ತದೆ. ಇಂದು ಪುರುಷರಂತೆ ಮಹಿಳೆಯು ಎಲ್ಲಾ ಕ್ಷೇತ್ರದಲ್ಲಿ ಸರಿಸಮಾನಳಾಗಿ ಕಾರ್ಯನಿರ್ವಹಿಸುತ್ತಿದ್ದಾಳೆ. ವಿವಿಧ ಕ್ಷೇತ್ರಗಳಲ್ಲಿ ಹೆಣ್ಣುಮಕ್ಕಳ ಸಾಧನೆ ನಿಜಕ್ಕೂ ಮೆಚ್ಚುವಂತದ್ದು, ಪ್ರತಿಯೊಂದು ಕ್ಷೇತ್ರದಲ್ಲಿಯೂ ಕೂಡ ಆಕೆ ಪುರುಷರಿಗೆ ಪೈಪೋಟಿ ನೀಡುವಷ್ಟು ಬೆಳೆದು ನಿಂತಿದ್ದಾಳೆ. ತಾಯಿಯಾಗಿ, ಪತ್ನಿಯಾಗಿ, ಮಗಳಾಗಿ, ಸಹೋದರಿಯಾಗಿ ಹೀಗೆ ಎಲ್ಲಾ ಜವಾಬ್ದಾರಿಗಳನ್ನೂ ಸಲೀಸಾಗಿ ನಿಭಾಯಿಸುವ ಮಹಿಳೆಯರನ್ನು ಗೌರವಿಸುವ ಸಲುವಾಗಿ ಮಾರ್ಚ್ 8ರಂದು ವಿಶ್ವದಾದ್ಯಂತ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದಂದು ನಿಮ್ಮ ಅಮ್ಮನಿಗೆ ಇಷ್ಟವಾಗುವಂತಹ ಉಡುಗೊರೆಯನ್ನು ನೀಡಿ ಅವರನ್ನು ಖುಷಿ ಪಡಿಸಬೇಕು ಎಂದು ಇದ್ದರೆ ನಿಮ್ಮ ತಾಯಿಗೆ ನೀಡುವ ವಿಶೇಷ ಗಿಫ್ಟ್ ಗಳ ಐಡಿಯಾ ಇಲ್ಲಿದೆ.
ಮೇಕಪ್ ಕಿಟ್:

ನಿಮ್ಮ ತಾಯಿ ಮೇಕಪ್ ಮಾಡುವುದನ್ನು ಇಷ್ಟಪಡುವವರಾಗಿದ್ದರೆ ಅವರ ನೆಚ್ಚಿನ ಬ್ರಾಂಡ್ಗಳ ಮೇಕಪ್, ಸ್ಕೀನ್ ಕೇರ್ ಪ್ರಾಡಕ್ಟ್ ಗಳನ್ನು ಗಿಫ್ಟ್ ಆಗಿ ನೀಡ ಬಹುದು. ನಿಮ್ಮ ತಾಯಿಗೆ ಸರಿ ಹೊಂದು ವಂತಹ ಕ್ರೀಮ್, ಲಿಪ್ ಸ್ಟಿಕ್, ಇನ್ನಿತರ ಮೇಕಪ್ ಕಿಟ್ ಅನ್ನು ಅವರಿಗೆ ನೀಡಬಹುದು. ಸೌಂದರ್ಯದ ಬಗ್ಗೆ ನಿಮ್ಮ ಕಾಳಜಿ ವಹಿಸದಿದ್ದರೆ ಅಮ್ಮಂದಿರಿಗಾಗಿ ಸ್ಕಿನ್ ಕೇರ್‌ಗಳನ್ನು ಗಿಫ್ಟ್ ಮಾಡಿ. ಕ್ರೀಮ್, ಸನ್‌ಸ್ಕ್ರೀನ್, ಲಿಪ್ ಜೆಲ್, ಬಾಡಿ ಲೋಶನ್ ಇವುಗಳನ್ನು ಮಹಿಳಾ ದಿನದಂದು ನಿಮ್ಮ ಅಮ್ಮನಿಗೆ ಗಿಫ್ಟ್ ಮಾಡಬಹುದು.
ಮನೆಯ ಅಲಂಕಾರಿಕ ವಸ್ತು:

ನಿಮ್ಮ ತಾಯಿ ಮನೆಯ ಅಲಂಕಾರವನ್ನು ಇಷ್ಟ ಪಡುವರಾಗಿದ್ದರೆ ಮನೆಯ ಅಲಂಕಾರಿಕ ವಸ್ತುಗಳನ್ನು ಗಿಫ್ಟ್ ಮಾಡಬಹುದು. ವಿಶಿಷ್ಟ ಗೋಡೆಯಲಂ ಕಾರಿಕ ವಸ್ತುಗಳು, ಮನೆಯ ಒಳಗಡೆ ಇಡಬಹುದಾದ ವಿಶೇಷ ವಿನ್ಯಾಸದ ಫೋಟೋ ಪ್ರೇಮ್, ಪ್ಲಾಂಟ್ ಹೀಗೆ ಕೆಲವು ಮನೆಯ ಅಲಂಕಾರಿಕ ವಸ್ತುಗಳನ್ನು ಉಡುಗೊರೆಯಾಗಿ ನೀಡಬಹುದು.
ಪ್ರಿಂಟೆಡ್ ಆರ್ಟ್ ಸಿಲ್ಕ್ ಸ್ಯಾರಿ:

ಆಧುನಿಕ ವಿನ್ಯಾಸ ಹೊಂದಿರುವ ಈ ಸೀರೆ ನಿಮ್ಮ ತಾಯಿಗೆ ಇಷ್ಟವಾಗಬಹುದು.ಈ ಹಗುರವಾದ ಸ್ಯಾರಿಯು ಆರಾಮದಾಯಕವಾದ ಲುಕ್ ನೀಡಲಿದ್ದು ಹಬ್ಬದ ಸಂದರ್ಭದಲ್ಲಿ ತೊಡಲು ಬಹಳ ಪರಿ ಪೂರ್ಣವಾಗಿದೆ. ಪ್ರಿಂಟೆಡ್ ವಿನ್ಯಾಸ ದೊಂದಿಗೆ ಈ ಸೀರೆ ಅತ್ಯಾಧುನಿಕ ಲುಕ್ ನೀಡಲಿದೆ. ಹಾಗಾಗಿ ಸಾಂಪ್ರದಾಯಿಕ ಉಡುಗೆಯನ್ನು ಇಷ್ಟಪಡುವ ತಾಯಂದಿರಿಗೆ ಇಂತಹ ಸೀರೆಗಳನ್ನು ಗಿಫ್ಟ್ ಆಗಿ ನೀಡಬಹುದು.
ವಾಚ್:

ಹೆಚ್ಚಿನ ಅಮ್ಮಂದಿರಿಗೆ ವಾಚ್ ಮೇಲೂ ವಿಶೇಷ ಪ್ರೀತಿ. ಸಹಜವಾಗಿ ಇತ್ತೀಚಿನ ದಿನಗಳಲ್ಲಿ ಎಲ್ಲ ಅಮ್ಮಂದಿರೂ ವಾಚ್ ಧರಿಸುತ್ತಾರೆ.ಹಾಗಾಗಿ ಮಹಿಳಾ ದಿನದ ವಿಶೇಷವಾಗಿ ವಾಚ್ ಗಿಫ್ಟ್ ಮಾಡಬಹುದು. ನೀವು ಸ್ಪೆಷ ಲ್ ಆಗಿ ಚೈನ್ ವಾಚ್‌ಗಳನ್ನು ಗಿಫ್ಟ್ ಮಾಡಬಹುದು,ಅಥವಾ ಉತ್ತಮ ವಿನ್ಯಾಸ ಡಯಲ್ ಹೊಂದಿರುವ ವಾಚ್ ಅನ್ನು ಆಯ್ಕೆ ಮಾಡಬಹುದು. ಇದನ್ನು ನೀವು ಆನ್‌ಲೈನ್‌ನಲ್ಲೂ ಖರೀದಿಸಬಹುದು.
ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳು:
ನಿಮ್ಮ ತಾಯಿ ಫೋನ್ ಬಳಕೆ ಇಷ್ಟ ಪಡುತ್ತಿದ್ದರೆ ಪ್ರತಿಷ್ಠಿತ ಕಂಪನಿಯ ಫೋನ್ ಅನ್ನು ಗಿಫ್ಟ್ ಆಗಿ ನೀಡಬಹುದು. ಇದಲ್ಲದೆ ಏರ್‌ಪಾಡ್ಸ್, ಇಯರ್ ಫೋನ್, ಬ್ಲೂಟೂತ್ ಸ್ಪೀಕರ್, ಇಂತಹ ಗಿಫ್ಟ್‌ಗಳು ಕೂಡ ಅವರಿಗೆ ಇಷ್ಟವಾಗಬಹುದು.
ನೀವೇ ತಯಾರಿಸಿದ ಉಡುಗೊರೆ:

ಇನ್ನು ನಿಮ್ಮ ತಾಯಿಗಾಗಿ ನೀವೇ ತಯಾರಿಸಿದ ಗಿಫ್ಟ್ ಅನ್ನು ಉಡು ಗೊರೆಯಾಗಿ ನೀಡಬಹುದು. ನಿಮ್ಮ ಕೈಯಾರೆ ತಯಾರಿಸಿದ ವಸ್ತುಗಳು ಬಹಳ ವಿಶೇಷ ವಾಗಿರಲಿದ್ದು ಎಷ್ಟೇ ಬೆಲೆ ಬಾಳುವ ಉಡುಗೊರೆಗಿಂತ ನೀವು ವಿಶೇಷವಾಗಿ ತಯಾರಿಸಿರುವ ಉಡುಗೊರೆ ನಿಮ್ಮ ತಾಯಿಗೆ ಸಾಕಷ್ಟು ಖುಷಿಯನ್ನು ನೀಡಬಹುದು.
ಇದನ್ನು ಓದಿ: International Women's Day 2025: ಮಹಿಳಾ ಸಬಲೀಕರಣಕ್ಕೆ ಸರಕಾರ ಜಾರಿ ಮಾಡಿರುವ ಯೋಜನೆಗಳಾವ್ಯಾವು ಗೊತ್ತಾ?
ಡಿಸೈನರ್ ಹ್ಯಾಂಡ್ ಬ್ಯಾಗ್:

ನಿಮ್ಮ ತಾಯಿ ಫ್ಯಾಷನ್ ಪ್ರಿಯರಾಗಿದ್ದರೆ ನಿಮ್ಮ ತಾಯಿಗೆ ಡಿಸೈನರ್ ಹ್ಯಾಂಡ್ ಬ್ಯಾಗ್ ಅನ್ನು ಉಡುಗೊರೆಯಾಗಿ ನೀಡಬಹುದು. ಕೆಲವೊಮ್ಮೆ ಅಮ್ಮಂದಿರು ಸರಳವಾದ ಹ್ಯಾಂಡ್ ಬ್ಯಾಗ್ ಇಷ್ಟ ಪಡುತ್ತಾರೆ. ಹಾಗಾಗಿ ನಿಮ್ಮ ಅಮ್ಮನ ಅಭಿರುಚಿಯಂತೆ ಹ್ಯಾಂಡ್ ಬ್ಯಾಗ್ ಗಿಫ್ಟ್ ಮಾಡಬಹುದು.