MLA S R Srinivas: ಸರ್ವ ಪಕ್ಷಗಳ ಸಭೆಗೆ ಮುನ್ನ ಬಿಜೆಪಿ ಹೋರಾಟ ಅರ್ಥವಿಲ್ಲ: ಶಾಸಕ ಎಸ್.ಆರ್.ಶ್ರೀನಿವಾಸ್
ಕಳೆದ ಎಂಟು ವರ್ಷದಿಂದ ಬಡವರಿಗೆ ಮನೆ ಮಂಜೂರು ಆಗುತ್ತಿಲ್ಲ. ಇತ್ತೀಚೆಗೆ ಬರುತ್ತಿದ್ದರೂ ಕೇವಲ ತಾಲ್ಲೂಕಿಗೆ 50 ಮನೆ ಬರುತ್ತದೆ. ಇದು ಹೇಗೆ ಬಡವರಿಗೆ ಹಂಚಲು ಸಾಧ್ಯ. ಈ ಬಗ್ಗೆ ಸದನದಲ್ಲಿ ಚರ್ಚಿಸು ತ್ತೇನೆ ಎಂದ ಅವರು ಸಚಿವ ಸ್ಥಾನ ಬಗ್ಗೆ ಎರಡು ತಿಂಗಳ ಹಿಂದೆ ಸಿದ್ದರಾಮಯ್ಯ ಅವರ ಬಳಿ ಕೇಳಿದ್ದೆ
-
ಗುಬ್ಬಿ: ಕಾವೇರಿ ವಿಚಾರದಲ್ಲಿ ಸರ್ಕಾರ ಯಾವ ನಿರ್ಧಾರ ಕೈಗೊಂಡಿಲ್ಲ. ಸರ್ವಪಕ್ಷಗಳ ಸಭೆ ನಡೆಸಲು ಮುಖ್ಯಮಂತ್ರಿಗಳು ಕರೆ ನೀಡಿದ್ದಾರೆ. ಅಲ್ಲಿಯ ತೀರ್ಮಾನಕ್ಕೆ ಬದ್ದ ಎಂದು ಸಹ ಹೇಳಿದ್ದಾರೆ. ಆದರೆ ಬಿಜೆಪಿ ಅರ್ಥವಿಲ್ಲದ ಹೋರಾಟ, ಪ್ರತಿಭಟನೆ, ಮುತ್ತಿಗೆ ಹೀಗೆ ರಾಜಕೀಯ ಗಿಮಿಕ್ ಮಾಡುತ್ತಿದೆ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್(MLA S R Srinivas) ತಿಳಿಸಿದರು.
ತಾಲ್ಲೂಕಿನ ಇರಕಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿಂಗಯ್ಯನಪಾಳ್ಯ ಕಾಲೋನಿ ಗ್ರಾಮ ದಲ್ಲಿ 38 ಲಕ್ಷ ರೂಗಳ ಸಿಸಿ ರಸ್ತೆಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು ತಮಿಳುನಾಡಿಗೆ ನೀರು ಹರಿಸಿದ್ದರೆ ಆಗ ಹೋರಾಟ ಮಾಡುವುದರಲ್ಲಿ ಅರ್ಥ ಇರುತ್ತದೆ. ಆದರೆ ಕಾವೇರಿ ನದಿ ನೀರು ಹಂಚಿಕೆ ಬಗ್ಗೆ ಪ್ರಾಧಿಕಾರ ಆದೇಶ ನೀಡಿದ ತಕ್ಷಣ ನೀರು ಬಿಟ್ಟಿದ್ದೇವೆ ಎನ್ನುವ ರೀತಿ ಹೋರಾಟ ಕೈಗೊಳ್ಳುವುದು ಬಿಜೆಪಿಯ ಬರಿಯ ಗಿಮಿಕ್ ಅಷ್ಟೇ ಎಂದರು.
ಇದನ್ನೂ ಓದಿ; Gubbi News: ಗುಬ್ಬಿಯಲ್ಲಿ ಅರ್ಥಪೂರ್ಣ ಕಾರ್ಗಿಲ್ ಮತ್ತು ಆಪರೇಷನ್ ಸಿಂಧೂರ ವಿಜಯೋತ್ಸವ
ಕಳೆದ ಎಂಟು ವರ್ಷದಿಂದ ಬಡವರಿಗೆ ಮನೆ ಮಂಜೂರು ಆಗುತ್ತಿಲ್ಲ. ಇತ್ತೀಚೆಗೆ ಬರುತ್ತಿದ್ದರೂ ಕೇವಲ ತಾಲ್ಲೂಕಿಗೆ 50 ಮನೆ ಬರುತ್ತದೆ. ಇದು ಹೇಗೆ ಬಡವರಿಗೆ ಹಂಚಲು ಸಾಧ್ಯ. ಈ ಬಗ್ಗೆ ಸದನ ದಲ್ಲಿ ಚರ್ಚಿಸುತ್ತೇನೆ ಎಂದ ಅವರು ಸಚಿವ ಸ್ಥಾನ ಬಗ್ಗೆ ಎರಡು ತಿಂಗಳ ಹಿಂದೆ ಸಿದ್ದರಾಮ ಯ್ಯ ಅವರ ಬಳಿ ಕೇಳಿದ್ದೆ. ಆದರೆ ಈಗ ಎಲ್ಲಿಯೂ ಕೇಳಿಲ್ಲ. ಅದರ ಪ್ರಸ್ತುತ ಆಯ್ಕೆ ಬಗ್ಗೆ ತಿಳಿದಿಲ್ಲ. ಸಚಿವ ಸ್ಥಾನ ಕೊಟ್ಟರೆ ಕೆಲಸ ಮಾಡುತ್ತೇನೆ ಅಷ್ಟೇ ಎಂದರು.
ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಸಿಸಿ ರಸ್ತೆ ಕೆಲಸ ನಡೆಸಿದ್ದೇವೆ. ಆದರೆ ಇಂಜಿನಿಯರ್ ಗಳು ಎಲ್ಲೆಡೆ ಅರ್ಧ ಕೆಲಸ ಮಾಡಿದ್ದಾರೆ. ನೂರು ಇನ್ನೂರು ಮೀಟರ್ ಕೆಲಸ ಬಾಕಿ ಉಳಿಸಿಯೇ ಕ್ರಿಯಾ ಯೋಜನೆ ಸಿದ್ಧಪಡಿಸುವುದು ಅವರ ಕಾರ್ಯ ವೈಖರಿ ಬಗ್ಗೆ ಅನುಮಾನ ಹುಟ್ಟಿಸುತ್ತೇವೆ. ಖುದ್ದು ಗ್ರಾಮ ಪರಿಶೀಲಿಸಲು ಸೂಚಿಸಿದ್ದೆ. ಆದರೆ ಬಾಕಿ ಉಳಿಸಿದ್ದಾರೆ. ಅನುದಾನ ಒಂದು ಗ್ರಾಮದ ಕೆಲಸ ಪೂರ್ಣ ಮಾಡುವ ರೀತಿ ಯೋಜನೆ ರೂಪಿಸುತ್ತಿಲ್ಲ. ಅದು ಹೇಗೆ ಎಂಜಿನಿಯರಿಂಗ್ ಪದವಿ ಪಡೆದರೂ ತಿಳಿಯುತ್ತಿಲ್ಲ. ಓದಿದ್ದಾರೂ, ಕಾಪಿ ಹೊಡೆದು ಬಂದಿದ್ದರೂ ಏನೂ ತಿಳಿಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಮುಖಂಡರಾದ ಲಿಂಗರಾಜು, ಸಿದ್ದರಾಜು, ಜಗನ್ನಾಥ್, ರಮೇಶ್, ಶಿವಣ್ಣ , ಕೆಂಪರಾಜು, ರಾಮಕೃಷ್ಣಯ್ಯ, ವಿರೂಪಾಕ್ಷ, ನಾಗರಾಜು, ಪಿಡಿಓ ಶ್ಯಾಮಲಾ ಇತರರು ಇದ್ದರು.