Election: ಜಿ.ಪಂ, ತಾಪಂ ಚುನಾವಣೆಗಾಗಿ ಶಬರಿಯಂತೆ ಕಾಯುತ್ತಿರುವ ಸ್ಪರ್ಧಾಕಾಂಕ್ಷಿಗಳು
ಪಂಚಾಯತ್ ಚುನಾವಣೆಗಳ ವಿಳಂಬದಿAದ ಗ್ರಾಮೀಣಾಭಿವೃದ್ದಿಗೆ ಕೇಂದ್ರ ಸರಕಾರ ನೀಡಬೇ ಕಿರುವ ಸಹಾಯಧನ ಬಿಡುಗಡೆಯಾಗಿಲ್ಲ ಎಂಬ ಅಂಶ ಕೇಳಿಬಂದಿದೆ. ಅಲ್ಲದೆ ಸರಿಯಾದ ಕಾಲಕ್ಕೆ ಪಂಚಾ ಯಿತಿ ಚುನಾವಣೆ ನಡೆಸುವುದು ಸಾಂವಿಧಾನಿಕ ಕರ್ತವ್ಯವಾಗಿದ್ದು ಇದರ ಉಲ್ಲಂಘನೆ ಯಾಗಿದೆ. ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿಯಲ್ಲಿ ಚುನಾವಣೆ ನಡೆದರೆ ಅಧ್ಯಕ್ಷರು, ಉಪಾಧ್ಯಕ್ಷರ ಆಯ್ಕೆಯಿಂದ ಎಲೆಕ್ಷನ್ ಬಾಡಿ ಸಿಗುತ್ತದೆ


ಧನಂಜಯ್
ಚಿಕ್ಕನಾಯಕನಹಳ್ಳಿ : ರಾಮನಿಗಾಗಿ ಶಬರಿ ಜಪ ಮಾಡಿದಂತೆ ಜಿಲ್ಲಾ ಪಂಚಾಯತಿ ಹಾಗು ತಾಲ್ಲೂಕು ಪಂಚಾಯಿತಿ ಚುನಾವಣೆ ಯಾವಾಗ ನಿಗದಿಯಾಗುತ್ತದೆ ಎಂದು ಸ್ಪರ್ಧಾಕಾಂಕ್ಷಿಗಳು ಚುನಾವಣಾ ಜಪ ಮಾಡುತ್ತಿದ್ದಾರೆ. ನಾಲ್ಕು ವರ್ಷಗಳಿಂದ ಸರಕಾರಗಳು ಜಿ.ಪಂ ಹಾಗು ತಾ.ಪಂ ಚುನಾವಣೆ ನಡೆಸಲು ಅರೆ ಮನಸ್ಥಿತಿಯನ್ನು ಪ್ರದರ್ಶಿಸುತ್ತಿದೆ. ಸರಕಾರದ ಈ ನಿರ್ಧಾರ ಪಂಚಾ ಯತ್ ರಾಜ್ ವ್ಯವಸ್ಥೆಯನ್ನು ಸಡಿಲಗೊಳಿಸಿ ಮಹಾತ್ಮ ಗಾಂಧೀಜಿಯವರ ಆಶಯಕ್ಕೆ ಧಕ್ಕೆ ತರುವಂತಿದೆ. ಗ್ರಾಮಗಳ ಅಭಿವೃದ್ದಿಯಾಗದ ಹೊರತು ದೇಶದ ಅಭಿವೃದ್ದಿ ಸಾಧ್ಯವಿಲ್ಲ. ಆದರೆ ಶಾಸಕಾಂಗ ಈ ನಿಟ್ಟಿನಲ್ಲಿ ಉತ್ತೇಜನಾತ್ಮಕ ನಿರ್ಧಾರಗಳನ್ನು ಪ್ರಕಟಿಸಲು ಹಿಂಜರಿಯುತ್ತಿದೆ. ಇದು ಅಧಿಕಾರ ವಿಕೇಂದ್ರಿಕರಣದ ಮೂಲ ಆಶಯಕ್ಕೆ ಕೊಡಲಿಪೆಟ್ಟು ನೀಡುತ್ತಿದೆ.
ಪಂಚಾಯತ್ ಚುನಾವಣೆಗಳ ವಿಳಂಬದಿAದ ಗ್ರಾಮೀಣಾಭಿವೃದ್ದಿಗೆ ಕೇಂದ್ರ ಸರಕಾರ ನೀಡಬೇ ಕಿರುವ ಸಹಾಯಧನ ಬಿಡುಗಡೆಯಾಗಿಲ್ಲ ಎಂಬ ಅಂಶ ಕೇಳಿಬಂದಿದೆ. ಅಲ್ಲದೆ ಸರಿಯಾದ ಕಾಲಕ್ಕೆ ಪಂಚಾಯಿತಿ ಚುನಾವಣೆ ನಡೆಸುವುದು ಸಾಂವಿಧಾನಿಕ ಕರ್ತವ್ಯವಾಗಿದ್ದು ಇದರ ಉಲ್ಲಂಘನೆ ಯಾಗಿದೆ. ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿಯಲ್ಲಿ ಚುನಾವಣೆ ನಡೆದರೆ ಅಧ್ಯಕ್ಷರು, ಉಪಾಧ್ಯಕ್ಷರ ಆಯ್ಕೆಯಿಂದ ಎಲೆಕ್ಷನ್ ಬಾಡಿ ಸಿಗುತ್ತದೆ. ಇವರುಗಳು ಕೆಡಿಪಿ ಸಭೆಯಲ್ಲಿ ಎತ್ತುವ ಪ್ರಶ್ನೆಗಳಿಗೆ ಉತ್ತರಿಸುವ ಅನಿವಾರ್ಯತೆ ಅಧಿಕಾರಿಗಳಿಗೆ ಇರುತ್ತದೆ. ಭ್ರಷ್ಟಚಾರ,ಫಲಾನು ಭವಿಗಳ ಆಯ್ಕೆಯಲ್ಲಿ ಎಚ್ಚರಿಕೆ ವಹಿಸಬೇಕಾದ ಸಂದಿಗ್ದತೆ ಸೃಷ್ಟಿಯಾಗುತ್ತದೆ.
ಇದನ್ನೂ ಓದಿ: Chikkanayakanahalli (Tumkur) News: ಹತ್ತನೇ ತರಗತಿ ಫಲಿತಾಂಶ ತಾಲ್ಲೂಕಿಗೆ ಪ್ರಥಮ ಸ್ಥಾನ : ಸಿಬಿಎಸ್ ಸಂತಸ
ಹಳ್ಳಿಗಳಲ್ಲಿ ರೈತರು, ಬಡವರು, ಶೋಷಿತರು ಕುಡಿಯುವ ನೀರು, ಅಭಿವೃದ್ದಿ ಕಾಮಾಗಾರಿ ನಡೆಸುವುದು ಸಹಿತ ಪ್ರತಿಯೊಂದಕ್ಕೂ ಗ್ರಾಮ ಪಂಚಾಯಿತಿಗಳಿಗೆ ಎಡತಾಕಬೇಕಾಗಿದೆ. ಅಲ್ಲಾಗ ದಿದ್ದರೆ ಶಾಸಕರನ್ನು ಭೇಟಿ ಮಾಡಿ ಕೆಲಸ ಪೂರೈಸಿಕೊಳ್ಳಬೇಕಿದೆ. ಅವರ ಕೆಲಸದ ಜೊತೆಗೆ ಈ ಎಲ್ಲಾ ವಿಚಾರಗಳು ಶಾಸಕರ ಗಮನಕ್ಕೆ ಬರುವುದರಿಂದ ಕಾರ್ಯಕ್ಷೇತ್ರದ ಒತ್ತಡ ಶಾಸಕರಿಗೆ ಹೆಚ್ಚಾಗಲಿದೆ. ಒತ್ತಡ ಹೆಚ್ಚಾಳದಿಂದ ಗುಣಮಟ್ಟದ ಕೆಲಸದ ಮೇಲೆ ನಿಗಾವಹಿಸಲು ಶಾಸಕರಿಗೆ ತೊಂದರೆಯಾಗ ಲಿದೆ.
ಇದನ್ನೂ ಓದಿ: IPL 2025: ʻಒಂದು ವಾರದ ಬಳಿಕ ಐಪಿಎಲ್ ಪಂದ್ಯಗಳು ಪುನಾರಂಭʼ-ಬಿಸಿಸಿಐ ಸ್ಪಷ್ಟನೆ!
ಕೃಷಿ, ಪಶುಸಂಗೋಪನೆ, ತೋಟಗಾರಿಕೆ, ಸಮಾಜ ಕಲ್ಯಾಣ, ತಾಲ್ಲೂಕು ಪಂಚಾಯಿತಿ, ಅರಣ್ಯ, ಆರೋಗ್ಯ, ಶಿಕ್ಷಣ, ಬೆಸ್ಕಾಂ ಇಲಾಖಾ ವ್ಯಾಪ್ತಿಯಲ್ಲಿ ದಿನ ನಿತ್ಯವೂ ಅಭಿವೃದ್ದಿ ಕಾಮಾಗಾರಿಗಳು ನಡೆಯುತ್ತಿರುತ್ತವೆ. ಜೊತೆಗೆ ಫಲಾನುಭವಿಗಳಿಗೆ ವಿವಿಧ ಯೋಜನೆಗಳ ಮೂಲಕ ಸವಲತ್ತುಗಳ ವಿತರಣೆ ಹಾಗು ಆಯ್ಕೆಯನ್ನು ಅಧಿಕಾರಿಗಳು ಶಾಸಕರೊಡನೆ ಚರ್ಚಿಸಿ ರೂಪುರೇಷೆ ಸಿದ್ದಪಡಿಸ ಲಾಗುತ್ತದೆ. ಇಲ್ಲಿ ಶಾಸಕರ ಬೆಂಬಲಿಗರಿಗೆ ಹೆಚ್ಚು ಅವಕಾಶ ದೊರಕುವ ಸಂಭವವಿದ್ದು ಸಹಜವಾಗಿ ಶಾಸಕರು ಮೇಲುಗೈ ಸಾಧಿಸುತ್ತಾರೆ. ಒಂದು ವೇಳೆ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾ ಯಿತಿ ಸದಸ್ಯರು ಅಧಿಕಾರದಲ್ಲಿರುತ್ತಿದ್ದರೆ ಫಲಾನುಭವಿಗಳ ಆಯ್ಕೆಯಲ್ಲಿ ತಮ್ಮ ಅಹವಾಲು ಸಲ್ಲಿಸಿ ಅಧಿಕಾರಿಗಳಿಗೆ ಮಾರ್ಗದರ್ಶನ ಮಾಡುತ್ತಿದ್ದರು.
ಚುನಾವಣೆ ನಡೆಸಿ ವಿಶ್ವಾಸಾರ್ಹತೆ ಹೆಚ್ಚಿಸಿಕೊಳ್ಳಿ
ಕಾಲ ಕಾಲಕ್ಕೆ ಚುನಾವಣೆಗಳು ನಡೆದರೆ ಪ್ರಜಾಪ್ರಭುತ್ವ ಬಲಿಷ್ಠವಾಗುತ್ತದೆ. ಅಧಿಕಾರ ವಿಕೇಂದ್ರಿ ಕರಣ ದೇಶದ ಅಭಿವೃದ್ದಿಗೆ ಒಂದು ಅಸ್ತçವಾಗಿದ್ದು ರಾಜಕೀಯ ವ್ಯವಸ್ಥೆಯ ಆಕಾಂಕ್ಷಿಗಳಿಗೆ ಮುನ್ನಡಿಯಾಗಲಿದೆ. ಸದಾಶಾಯಗಳನ್ನು ಇಟ್ಟುಕೊಂಡು ಮಾಡುವ ಪ್ರತಿಯೊಂದು ಕೆಲಸವೂ ನ್ಯಾಯ ಸಮ್ಮತವಾಗಿರುತ್ತದೆ. ಘನ ಸರಕಾರಗಳು ಇದನ್ನು ಮನಸ್ಸಿನಲ್ಲಿಟ್ಟುಕೊಂಡು ಹೆಜ್ಜೆ ಹಾಕಿ ಸಾರ್ವಜನಿಕ ವಲಯದಲ್ಲಿ ವಿಶ್ವಾಸಾರ್ಹತೆ ಹೆಚ್ಚಿಸಿಕೊಳ್ಳಬೇಕಿದೆ.