ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Gubbi News: ಲಿಂಕ್ ಕೆನಾಲ್ ಕಾಮಗಾರಿ ಮಾಡಲು ಬಿಡಲ್ಲ, ಯಾರು ಬರಲಿ ಬಿಡಲಿ ಹೋರಾಟಕ್ಕೆ ಸಿದ್ಧ ಎಂದ ರೈತರು..!!

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ವಿರೋಧಿ ವೇದಿಕೆಯ ಪೂರ್ವಭಾವಿ ಸಭೆಯಲ್ಲಿ ರೈತರು ಶಾಸಕರು, ಸಂಸದರು ಈ ಹೋರಾಟಕ್ಕೆ ಬರಬೇಕು. ಜಿಲ್ಲೆಯ ನಮ್ಮ ನೀರು ನಮ್ಮ ಹಕ್ಕು ಪ್ರತಿಪಾದಿಸಲು ಹೋರಾಟಕ್ಕೆ ಯಾರೊಬ್ಬರ ನೇತೃತ್ವಕ್ಕಿಂತ ಸಾಮೂಹಿಕ ನೇತೃತ್ವದಲ್ಲಿ ಯಾರು ಬರಲಿ ಬಿಡಲಿ ಹೋರಾಟ ಸಾವಿರಾರು ರೈತರೊಟ್ಟಿಗೆ ನಡೆಯಲಿದೆ.

ಯಾರು ಬರಲಿ ಬಿಡಲಿ ಹೋರಾಟಕ್ಕೆ ಸಿದ್ಧ ಎಂದ ರೈತರು..!!

-

Profile
Ashok Nayak Jun 11, 2026 11:25 PM

ಗುಬ್ಬಿ: ಜಿಲ್ಲೆಯ ಜೀವನಾಡಿ ಹೇಮಾವತಿ ನೀರು ಬೇರೆಡೆ ಹರಿಸುವ ಅವೈಜ್ಞಾನಿಕ ಲಿಂಕ್ ಕೆನಾಲ್ ಕಾಮಗಾರಿ ವರ್ಷದ ಹಿಂದೆ ಹೋರಾಟದ ಮೂಲಕವೇ ಸ್ಥಗಿತ ಮಾಡಲಾಗಿತ್ತು. ಜನರ ತಾಳ್ಮೆ ಪರೀಕ್ಷಿಸಿದ ಉಪಮುಖ್ಯಮಂತ್ರಿ ಪರಮೇಶ್ವರ್(Deputy Chief Minister Parameshwar) ಅವರ ಹೇಳಿಕೆ ಮತ್ತೊಂದು ಬೃಹತ್ ಹೋರಾಟಕ್ಕೆ ಮುನ್ನುಡಿ ಬರೆದಂತಾಗಿದೆ. ಸರ್ಕಾರದ ನಡೆಗೆ ಆಕ್ರೋಶ ವ್ಯಕ್ತಪಡಿಸಿದ ರೈತರು, ಎಲ್ಲಾ ಪಕ್ಷದ ಮುಖಂಡರು ಹಾಗೂ ಸಾಮಾಜಿಕ ಹೋರಾಟಗಾರರು ಗುರುವಾರ ಪೂರ್ವಭಾವಿ ನಡೆಸಿ ಹೋರಾಟಕ್ಕೆ ಯಾರು ಬರಲಿ ಬಿಡಲಿ ಉಗ್ರ ಹೋರಾಟಕ್ಕೆ ಸನ್ನದ್ಧ ಎಂಬ ಎಚ್ಚರಿಕೆಯನ್ನು ಸರ್ಕಾರಕ್ಕೆ ರವಾನೆ ಮಾಡಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ವಿರೋಧಿ ವೇದಿಕೆಯ ಪೂರ್ವಭಾವಿ ಸಭೆಯಲ್ಲಿ ರೈತರು ಶಾಸಕರು, ಸಂಸದರು ಈ ಹೋರಾ ಟಕ್ಕೆ ಬರಬೇಕು. ಜಿಲ್ಲೆಯ ನಮ್ಮ ನೀರು ನಮ್ಮ ಹಕ್ಕು ಪ್ರತಿಪಾದಿಸಲು ಹೋರಾಟಕ್ಕೆ ಯಾರೊಬ್ಬರ ನೇತೃತ್ವಕ್ಕಿಂತ ಸಾಮೂಹಿಕ ನೇತೃತ್ವದಲ್ಲಿ ಯಾರು ಬರಲಿ ಬಿಡಲಿ ಹೋರಾಟ ಸಾವಿರಾರು ರೈತರೊಟ್ಟಿಗೆ ನಡೆಯಲಿದೆ. ಮುಂದಿನ ಹೋರಾಟದ ರೂಪುರೇಷೆ ಸಿದ್ಧಪಡಿಸಲು ಒಕ್ಕೊರಲಿನ ತೀರ್ಮಾನ ಕೈಗೊಂಡರು.

ಇದನ್ನೂ ಓದಿ: Gubbi News: ಹೇಮಾವತಿ ಲಿಂಕ್ ಕೆನಾಲ್ ನಿಲ್ಲಲೇಬೇಕು: ರೈತ ಸಂಘ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು

ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಮಾತನಾಡಿ, ಜಿಲ್ಲೆಯ ಏಳು ತಾಲ್ಲೂಕಿಗೆ ಜೀವಜಲವಾದ ಹೇಮಾವತಿ ನೀರು ಏಕಾಏಕಿ ಮಾಗಡಿ ರಾಮನಗರದತ್ತ ಹೊಯ್ಯುವುದು ಸರಿಯಲ್ಲ. ಇಲ್ಲಿನ ರೈತರಿಗೆ ಮರಣ ಶಾಸನ ಬರೆದು ಸಿಎಂ ತಮ್ಮ ಕನಸಿನ ಕೂಸು ಬಿಡದಿ ಟೌನ್ ಶಿಪ್ ಗಾಗಿ ನಮ್ಮ ನೀರು ಹರಿಸಿಕೊಳ್ಳುತ್ತಿರುವುದು ಯಾವ ನ್ಯಾಯ. ಕೆಡಿಪಿ ಸಭೆ ಯಲ್ಲಿ ಕಾಮಗಾರಿ ನಿಲ್ಲಿಸುವ ಮಾತು ಹೇಳಿದ್ದ ಉಪಮುಖ್ಯಮಂತ್ರಿ ಪರಮೇಶ್ವರ್(Deputy Chief Minister Parameshwar) ಅವರು ಈಗ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದು ರೈತರಿಗೆ ವಿಷ ಕೊಟ್ಟಂತೆ. ಜಿಲ್ಲೆಯ ಜನರಿಗೆ ದ್ರೋಹ ಮಾಡದೆ ನೀರು ಉಳಿಸುವ ಬಗ್ಗೆ ಸಿಎಂ ಮನವರಿಕೆ ಮಾಡಬೇಕಿದೆ. ಆಕ್ರೋಶಕ್ಕೆ ಒಳಗಾದ ರೈತರು ಮುಂದೆ ನಡೆಸುವ ಉಗ್ರ ಹೋರಾಟಕ್ಕೆ ತಡೆ ಎನ್ನುವುದಿಲ್ಲ. ಯಾವುದೇ ಕೆಟ್ಟ ಪರಿಣಾಮ ನಡೆದರೂ ಸರ್ಕಾರವೇ ಹೊಣೆಯಾಗಬೇಕು ಎಂದು ಎಚ್ಚರಿಸಿದರು.

ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್ ಕುಮಾರ್ ಮಾತನಾಡಿ, ಜನಶಕ್ತಿ ಮುಂದೆ ಯಾವುದೇ ಸರ್ಕಾರ ಮಂಡಿಯೂರಲೇಬೇಕು. ಈಗಾಗಲೇ 80 ಮಂದಿ ರೈತರ ಮೇಲೆ ಕೇಸು ದಾಖಲಾ ಗಿದೆ. ದೊಡ್ಡ ಹೋರಾಟದ ಮೂಲಕ ಕಾಮಗಾರಿ ನಿಲ್ಲಿಸಿದ್ದೇವು. ಮತ್ತೊಮ್ಮೆ ಉಗ್ರ ಹೋರಾಟಕ್ಕೆ ರೈತರು ಸಜ್ಜಾಗಿದ್ದಾರೆ. ಜೈಲ್ ಭರೋ ಎಂದು ಘೋಷಣೆ ಮೂಲಕ ಸರ್ಕಾರದ ವಿರುದ್ಧ ಹೋರಾಟಕ್ಕೆ ಸಾವಿರಾರು ರೈತರು ನಿಲ್ಲುತ್ತಾರೆ. ಯಾವ ಹಿಂಜರಿಕೆ ಇಲ್ಲದೆ ರೈತರು ಒಗ್ಗೂಡಿ ಕೆನಾಲ್ ಬಳಿ ಹೋರಾಟ ಮಾಡುತ್ತಾರೆ. ಪ್ರತಿ ಮನೆಯಿಂದ ಇಬ್ಬರು ಕಡ್ಡಾಯ ಬರುತ್ತಾರೆ. ಈ ಜನಪ್ರವಾಹ ತಡೆಯಲು ಸಾಧ್ಯವಿಲ್ಲ ಎಂದ ಅವರು ಕಳೆದ ವರ್ಷ ನಾಲಾ ಮೂಲಕವೇ 3.5 ಟಿಎಂಸಿ ನೀರು ಕುಣಿಗಲ್ ತಾಲ್ಲೂಕಿಗೆ ಹರಿದಿದೆ. ಅಲ್ಲಿಂದ ಮಾಗಡಿ ರಾಮನಗರಕ್ಕೆ ಪಂಪ್ ಸಹ ಆಗಿದೆ. ಎಲ್ಲವೂ ತಿಳಿದು ನಮ್ಮ 80 ಕಿಮೀ ನಾಲೆಯ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳು ಎಲ್ಲಾ ರೈತರ ಯೋಗ ಕ್ಷೇಮ ನೋಡಬೇಕು. ಗುಬ್ಬಿ ಶಾಸಕರು ವಿರೋಧದ ಹೇಳಿಕೆ ನೀಡಿದ್ದಾರೆ. ಆದರೆ ಹೋರಾ ಟಕ್ಕೆ ಮುಂಚೂಣಿಯಲ್ಲಿ ಬಂದರೆ ಸ್ವಾಗತ ಕೋರುತ್ತೇವೆ ಎಂದರು.

ಜೆಡಿಎಸ್ ಮುಖಂಡ ಬಿ.ಎಸ್.ನಾಗರಾಜು ಮಾತನಾಡಿ, ಹೋರಾಟದಿಂದ ಮಾತ್ರ ಕಾಮ ಗಾರಿ ಸ್ಥಗಿತವಾಗಿತ್ತು. ಮತ್ತೊಮ್ಮೆ ಹೋರಾಟ ಮಾಡುವ ಅಬಿವಾರ್ಯವಿದೆ. ಇಲ್ಲಿ ಯಾವ ಪಕ್ಷವಿಲ್ಲ. ಚುನಾವಣಾ ಗಿಮಿಕ್ ಯಾವುದು ಇಲ್ಲ. ರೈತರ ಉಳಿವಿನ ಪ್ರಶ್ನೆ ಇಲ್ಲಿದೆ. ಕುಣಿಗಲ್ ರೈತರು ಹೋರಾಟಕ್ಕೆ ಸಜ್ಜಾಗುತ್ತಿದ್ದಾರೆ. ಆದರೆ ಅವರ ಪಾಲಿನ ನೀರು ನಾಲೆ ಮೂಲಕ ಕೊಡಲು ನಮ್ಮ ಅಡ್ಡಿಯಿಲ್ಲ. ಕುಣಿಗಲ್ ಶಾಸಕರು ಪ್ರಚೋದನೆ ಮಾಡು ತ್ತಿದ್ದಾರೆ. ನಮ್ಮ ಶಾಸಕರು ದಿಢೀರ್ ಪತ್ರಿಕಾ ವಿರೋಧವಿದೆ ಎಂದು ಹೇಳಿಕೆ ನೀಡಿದ್ದಾರೆ. ಸಚಿವ ಸ್ಥಾನದ ಲಾಭಿಯ ಒಂದು ಅಸ್ತ್ರವಾಗಿ ಈ ಹೇಳಿಕೆ ಬರದಿದ್ದರೆ ಒಳಿತು. ಮನಸ್ಸಿ ನಿಂದ ಹೇಳಿದ್ದರೆ ಅವರ ನೇತೃತ್ವದಲ್ಲಿ ಹೋರಾಟ ನಡೆಯಲಿ. ಅವರ ಜೊತೆ ನಾವು ಹೊರಡುತ್ತೇವೆ ಎಂದರು.

ಜೆಡಿಎಸ್ ಮುಖಂಡ ಹೊನ್ನಗಿರಿಗೌಡ ಮಾತನಾಡಿ, ನೀರಾವರಿ ಹೋರಾಟಕ್ಕೆ ನಮ್ಮಲ್ಲೇ ನಿರಾಸಕ್ತಿ ತೋರುತ್ತಾರೆ. ಅಂತಹ ಮುಖಂಡರು ದೂರವಿರುವುದು ಔಚಿತ್ಯ. ಒಂದು ತಾಲ್ಲೂಕಿನ ಹೋರಾಟ ಇದಲ್ಲ. ಜಿಲ್ಲೆಯ ಈ ಹೋರಾಟಕ್ಕೆ ಎಲ್ಲರ ಸಹಕಾರ ಅಗತ್ಯವಿದೆ. ಹೋರಾಟ ಸಮಿತಿ ರಚಿಸಿ ಸಂಚಾಲಕರ ನೇತೃತ್ವದಲ್ಲಿ ಹೋರಾಟ ನಡೆಯಲಿ. ಸಾವಿರಾರು ರೈತರ ಹೋರಾಟ ನೋಡಿ ಚುನಾಯಿತ ಎಲ್ಲಾ ಪ್ರತಿನಿಧಿಗಳು ಸ್ಥಳಕ್ಕೆ ಬರುತ್ತಾರೆ. ಕುಡಿಯಲು ನೀರು ಸಿಗದ ದುಸ್ಥಿತಿ ಬರುವ ಮುನ್ನ ಎಲ್ಲರೂ ಎಚ್ಚೆತ್ತು ಹೋರಾಟಕ್ಕೆ ಬನ್ನಿ ಎಂದರು.

ಜೆಡಿಎಸ್ ಮುಖಂಡ ಕಳ್ಳಿಪಾಳ್ಯ ಲೋಕೇಶ್ ಮಾತನಾಡಿ, ಹೋರಾಟದ ಬಿಸಿ ಈಗಾಗಲೇ ಸರ್ಕಾರಕ್ಕೆ ತಿಳಿದಿದೆ. ಆದರೂ ಹಠಕ್ಕೆ ಬಿದ್ದು ಮತ್ತೊಮ್ಮೆ ರೈತರನ್ನು ಕೆಣಕಿದ್ದಾರೆ. ಸಿಎಂ ಅವರು ಮೇಕೆದಾಟು ಯೋಜನೆ ಮಾಡಿ ರಾಮನಗರ, ಮಾಗಡಿ, ಬಿಡದಿಗೆ ನೀರು ಹರಿಸಿ ಕೊಳ್ಳಲಿ. ನಮ್ಮ ಪಾಲಿನ ನೀರು ಹೇಗೆ ಕೊಡಲು ಸಾಧ್ಯ. ಮಾರ್ಕೋನಹಳ್ಳಿ ಡ್ಯಾಂ ಗೆ 4 ಟಿಎಂಸಿ ಹಾಗೂ ಕುಣಿಗಲ್ ಗೆ 3.5 ಟಿಎಂಸಿ ಪಡೆದರೆ ಉಳಿದ ತಾಲ್ಲೂಕು ಹೇಗೆ ನೀರು ಹಂಚಿಕೊಳ್ಳುತ್ತವೆ. ಈ ಬಗ್ಗೆ ಎಲ್ಲಾ ಶಾಸಕರು ಮಾತನಾಡಬೇಕಿದೆ. ನಮ್ಮ ಶಾಸಕರು ಸಹ ಹೋರಾಟಕ್ಕೆ ಬರಬೇಕಿದೆ ಎಂದರು.

ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಪಿ.ಬಿ.ಚಂದ್ರಶೇಖರಬಾಬು, ಮುಖಂಡರಾದ ಎಚ್.ಟಿ.ಭೈರಪ್ಪ, ಜಿ.ಡಿ.ಸುರೇಶಗೌಡ, ಬಲರಾಮಯ್ಯ, ಕೆ.ಪಿ.ಮಹೇಶ್, ಚಂದ್ರಶೇಖರ್, ಸಿ.ಆರ್.ಶಂಕರ್ ಕುಮಾರ್, ವಿದ್ಯಾಸಾಗರ್, ರೈತಸಂಘದ ಕೆ.ಎನ್.ವೆಂಕಟೇಗೌಡ, ಸಿ.ಜಿ.ಲೋಕೇಶ್ ಇನ್ನಿತರರು ಇದ್ದರು.