ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Madhugiri News: ಮಧುಗಿರಿ ತಾಲೂಕು ವಕೀಲರ ಸಂಘದ ಅಧ್ಯಕ್ಷರಾಗಿ ಎಂ. ಶಿವಣ್ಣ ಆಯ್ಕೆ

Madhugiri News: ಮಧುಗಿರಿ ತಾಲೂಕಿನ ವಕೀಲರ ಸಂಘದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಶಿವಣ್ಣ, ಉಪಾಧ್ಯಕ್ಷರಾಗಿ ಎಸ್. ಆರ್. ಅಶ್ವತ್ಥನಾರಾಯಾಣ್ ಅವರು ಶುಕ್ರವಾರ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ಎಸ್. ರಘುನಾಥರೆಡ್ಡಿ ಹಾಗೂ ಜಿ.ಆರ್. ಗಂಗಾಧರಯ್ಯ ಅವರು ಕರ್ತವ್ಯ ನಿರ್ವಹಿಸಿದ್ದಾರೆ.

ಮಧುಗಿರಿ ತಾಲೂಕು ವಕೀಲರ ಸಂಘದ ಅಧ್ಯಕ್ಷರಾಗಿ ಎಂ. ಶಿವಣ್ಣ ಆಯ್ಕೆ

ಮಧುಗಿರಿ ತಾಲೂಕು ವಕೀಲರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಎಂ. ಶಿವಣ್ಣ. -

Profile
Siddalinga Swamy Jul 24, 2026 10:46 PM

ಮಧುಗಿರಿ, ಜು.24: ತಾಲೂಕಿನ ವಕೀಲರ ಸಂಘದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಶಿವಣ್ಣ, ಉಪಾಧ್ಯಕ್ಷರಾಗಿ ಎಸ್. ಆರ್. ಅಶ್ವತ್ಥನಾರಾಯಾಣ್ ಅವರು ಶುಕ್ರವಾರ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ನರಸಗೌಡ, ಜಂಟಿ ಕಾರ್ಯದರ್ಶಿಯಾಗಿ ವಸಂತ ಕುಮಾರ್, ಖಜಾಂಚಿ ಪುಟ್ಟಮ್ಮ, ನಿರ್ದೇಶರಾಗಿ ಚಿತ್ತಯ್ಯ, ಎಂ.ಜೆ. ಜಗದೀಶ್, ಬಿ.ಎಲ್. ನರಸಿಂಹ ಮೂರ್ತಿ, ಎನ್. ನರಸಿಂಹರಾಜು, ಮನೋಹರ, ಕೆ. ಸಂತೋಷ್ ಕುಮಾರ್ ಅವರು ಚುನಾವಣೆ ಮೂಲಕ ಆಯ್ಕೆಯಾದರು.

ಮಂಗಳಗೌರಿ ಹಾಗೂ ಸ್ವರ್ಣಂಬಿಕೆ ಅವಿರೋಧವಾಗಿ ಮಹಿಳಾ ನಿರ್ದೇಶರಾಗಿ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ಎಸ್. ರಘುನಾಥರೆಡ್ಡಿ ಹಾಗೂ ಜಿ.ಆರ್. ಗಂಗಾಧರಯ್ಯ ಅವರು ಕರ್ತವ್ಯ ನಿರ್ವಹಿಸಿದರು. ಒಟ್ಟು 132 ಮತದಾರರಿದ್ದು, 123 ಮತ ಚಲಾವಣೆ ಆಗಿದೆ. ‌

ಮುಖ್ಯಮಂತ್ರಿ ಪದಕ ವಿಜೇತ ರವಿಕುಮಾರ್‌ಗೆ ಭಸ್ಮಂಗಿ ಕಾವಲ್ ಸರ್ಕಾರಿ ಶಾಲೆಯ ಹಳೇ ವಿದ್ಯಾರ್ಥಿಗಳಿಂದ ಅಭಿನಂದನೆ

ಮಧುಗಿರಿ: ಮುಖ್ಯಮಂತ್ರಿ ಪದಕ ಪಡೆದಿರುವ ಹಿನ್ನೆಲೆಯಲ್ಲಿ ಭಯೋತ್ಪಾದಕ ನಿಗ್ರಹ ದಳದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ರವಿಕುಮಾರ್ ಅವರಿಗೆ ದೊಡ್ಡೇರಿ ಹೋಬಳಿಯ ಸಜ್ಜೆಹೊಸಹಳ್ಳಿ ಕ್ಲಸ್ಟರ್‌ನ ಭಸ್ಮಂಗಿ ಕಾವಲ್ ಬೆಟ್ಟದ ಶ್ರೀ ರುದ್ರೇಶ್ವರ ದೇವಸ್ಥಾನದ ಸಭಾಂಗಣದಲ್ಲಿ‌ ಶಾಲೆಯ ಹಳೆಯ ವಿದ್ಯಾರ್ಥಿಗಳಿಂದ ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ಶಾಲೆಯಲ್ಲಿ ಸುಮಾರು 20 ವರ್ಷಗಳ ಕಾಲ ಅಡುಗೆ ಸಿಬ್ಬಂದಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ರಾಜಮ್ಮ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಡುಗೆ ನೀಡಲಾಯಿತು ಮತ್ತು ಕರ್ನಾಟಕ ರಾಜ್ಯ ಪ್ರಾರ್ಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೂ ಸನ್ಮಾನ ಮಾಡಲಾಗಿದೆ.

ಜನರಿಗೆ ನಿರಂತರವಾಗಿ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳಿ: ಅಧಿಕಾರಿಗಳಿಗೆ ಶಾಸಕ ಕೆ.ಎನ್. ರಾಜಣ್ಣ ಸೂಚನೆ

ಈ ಸಂದರ್ಭದಲ್ಲಿ ಶಿಕ್ಷಕರ ಸಂಘದ ಅಧ್ಯಕ್ಷ ರಮೇಶ್, ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಎಚ್.ಎಸ್., ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಡಿ. ನರಸಿಂಹಮೂರ್ತಿ, ಇಸಿಓ ಕಾಪು ರಾಧಾಕೃಷ್ಣ, ಕ್ಲಸ್ಟರ್ ಸಿಆರ್‌ಪಿ ರಂಗನಾಥ್ ಹಾಗೂ ಕ್ಲಸ್ಟರ್‌ನ ಎಲ್ಲಾ ಶಿಕ್ಷಕರು ಮತ್ತು ಹಳೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.