Music Fest: ಕೈವಾರದಲ್ಲಿ ಜು.27 ರಿಂದ ಮಹಾ ಸಂಗೀತೋತ್ಸವ: ತಾತಯ್ಯರ ಸನ್ನಿಧಿಯಲ್ಲಿ 72 ಗಂಟೆಗಳ ನಿರಂತರ ನಾದೋಪಾಸನೆ
ಸದ್ಗುರು ಕೈವಾರ ತಾತಯ್ಯರ 300ನೇ ಜಯಂತಿ ವರ್ಷಪೂರ್ತಿ ಶ್ರೀಮಠದ ವತಿಯಿಂದ ಆಚರಿಸ ಲಾಗುತ್ತಿದ್ದು, ಈ ಸಂಗೀತೋತ್ಸವವು ಈ ಭಾಗದ ಪ್ರಮುಖ ಸಾಂಸ್ಕೃ ತಿಕ ಹಬ್ಬವಾಗಿದೆ. ಜು.27ರಂದು ಧರ್ಮಾಧಿಕಾರಿ ಡಾ.ಎಂ. ಆರ್.ಜಯರಾಮ್ ನೇತೃತ್ವದಲ್ಲಿ ಸಾಮೂಹಿಕ ನಾಮ ಸಂಕೀರ್ತನೆಯೊಂದಿಗೆ ಸಂಗೀತೋತ್ಸವಕ್ಕೆ ಚಾಲನೆ ನೀಡಲಾಗುತ್ತದೆ.
-
ಚಿಂತಾಮಣಿ: ಶ್ರೀಕ್ಷೇತ್ರ ಕೈವಾರದ ಸದ್ಗುರು ಶ್ರೀಯೋಗಿನಾರಾಯಣ ತಾತಯ್ಯರ ಸನ್ನಿಧಿಯಲ್ಲಿ ಜು.27ರಿಂದ 29ರವರೆಗೆ ಶ್ರದ್ಧಾಭಕ್ತಿಗಳಿಂದ ಗುರುಪೂಜಾ ಸಂಗೀತೋತ್ಸವ ಆಚರಿಸಲಾಗುವುದೆಂದು ಕೈವಾರ ಶ್ರೀಯೋಗಿನಾರೇಯಣ ಮಠದ ಸಂಕೀರ್ತನಾ ಯೋಜನೆ ಸಂಚಾಲಕ ವಾನರಾಶಿ ಬಾಲಕೃಷ್ಣ ಭಾಗವತರ್ ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಸದ್ಗುರು ಕೈವಾರ ತಾತಯ್ಯರ 300ನೇ ಜಯಂತಿ ವರ್ಷಪೂರ್ತಿ ಶ್ರೀಮಠದ ವತಿಯಿಂದ ಆಚರಿಸಲಾಗುತ್ತಿದ್ದು, ಈ ಸಂಗೀತೋತ್ಸವವು ಈ ಭಾಗದ ಪ್ರಮುಖ ಸಾಂಸ್ಕೃ ತಿಕ ಹಬ್ಬವಾಗಿದೆ. ಜು.27ರಂದು ಧರ್ಮಾಧಿಕಾರಿ ಡಾ.ಎಂ. ಆರ್.ಜಯರಾಮ್ ನೇತೃತ್ವ ದಲ್ಲಿ ಸಾಮೂಹಿಕ ನಾಮ ಸಂಕೀರ್ತನೆಯೊಂದಿಗೆ ಸಂಗೀತೋತ್ಸವಕ್ಕೆ ಚಾಲನೆ ನೀಡಲಾಗುತ್ತದೆ. ಸಂಜೆ ದೆಹಲಿಯ ಸರಸ್ವತಿ ರಾಜಗೋಪಾಲನ್‌ರಿಂದ ವೀಣಾವಾದನ, ಮಹಾಲಿಂಗಯ್ಯ ಮಠದ್ ತಂಡ ದಿಂದ ಗಾಯನ, ಹಾಗೂ ಬೆಂಗಳೂರಿನ ವಿನಯ್‌ಶರ್ಮ ಮತ್ತು ತಿರುಪತಿಯ ಬಿ.ರಘುನಾಥ್ ರಿಂದ ಗಾಯನ ಕಾರ್ಯಕ್ರಮ ಜರುಗಲಿದೆ.
ಇದನ್ನೂ ಓದಿ: Chinthamani News: ಗ್ರಾಮಗಳ ಅಭಿವೃದ್ಧಿಗಾಗಿ ನಿಲ್ಲದ ಹೋರಾಟ: ಮೂರನೇ ಹಂತದ ಪಾದಯಾತ್ರೆಗೆ ಅನುಮತಿ ಕೋರಿದ ಮಂಜುನಾಥ್
ಜು.28ರಂದು ಸುಮಂತ್ ಹಾಗೂ ಮಾಳವಿರಿಂದ ಪಿಟೀಲು ಸೋಲೋ, ಶಂಕರ್ ನಂಬೂದರಿ ಅವರಿಂದ ಗಾಯನ, ಅಮಿತ್ ಎ.ನಾಡಿಗೆರಿಂದ ಕೊಳಲುವಾದನ, ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ತಂಡದಿಂದ ಗಾಯನ, ಹೈದರಾಬಾದಿನ ಎಸ್.ಎಂ.ಸುಭಾನಿರಿಂದ ಮ್ಯಾಂಡೋಲಿನ್ ವಾದನ ಹಾಗೂ ನೂಪುರ ಫೈನ್ ಆರ್ಟ್ಸ್ ರೂಪ ರಾಜೇಶ್ ತಂಡದಿಂದ ಕೂಚಿಪುಡಿ ನೃತ್ಯರೂಪಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಜು.29ರ ಗುರುಪೂರ್ಣಿಮೆ ದಿನದಂದು ಬೆಳಗ್ಗೆ ನಾಡಿನ ಪ್ರಸಿದ್ದ ವಿದ್ವಾಂಸರಿಂದ ತಾತಯ್ಯರು ರಚಿಸಿರುವ ಪಂಚರತ್ನ ಕೀರ್ತನೆಗಳ ಗೋಷ್ಟಿಗಾಯನ ಹಾಗೂ ವಿಶೇಷ ಗುರುಪೂಜೆ ನಡೆಯಲಿದೆ. ಸಂಜೆ ಎ.ಸಿ.ರಾಜಶೇಖರ್ ತಂಡದಿಂದ ನಾದಸ್ವರ-ತವಿಲ್ ವಾದನ, ಕೋಲಾರದ ಡಿ.ಆರ್.ರಾಜಪ್ಪ ತಂಡದಿಂದ ಗಾಯನ, ವಿಶಾಖಪಟ್ಟಣಂ ಪಂತುಲ ರಮಾ ಗಾಯನ, ಕೇರಳದ ಕೆ.ಎಸ್.ವಿಷ್ಣುದೇವ್ ಗಾಯನ, ಮೈಸೂರು ನಾಗರಾಜ್ ಮತ್ತು ಡಾ.ಮೈಸೂರು ಮಂಜುನಾಥ್‌ರಿಂದ ಪಿಟೀಲು ಸೋಲೋ,ನಯನಾ ರಮೇಶ್ ಭರತನಾಟ್ಯ,ಕೇರಳದ ಕಣ್ಣನ್ ಮತ್ತು ಆನಂದ್ ನಾದಸ್ವರ ಹಾಗೂ ಶ್ರೀಲಂಕಾದ ಬದಲಿಶಂಕರ್ ಹಾಗೂ ವಿಲಂಬಾಕಂ ಗಣಪತಿರಿಂದ ತವಿಲ್ ವಾದನ ಕಾರ್ಯಕ್ರಮ ವಿರುತ್ತದೆ.
ಈ ಸಂಗೀತೋತ್ಸವದಲ್ಲಿ ಪದಶ್ರೀ ಪುರಸ್ಕೃತ ತಿರುವಾರೂರು ಭಕ್ತವತ್ಸಲಂ,ಅನೂರು ಅನಂತಕೃಷ್ಣ ಶರ್ಮ,ಚೆನ್ನೈನ ಕೆ.ವಿ.ಪ್ರಸಾದ್, ತಿರುಚಿ ಬಿ.ಹರಿಕಮಾರ್, ಬೆಂಗಳೂರಿನ ಬಿ.ರಾಜಶೇಖರ್, ಬಿ.ಸಿ.ಮಂಜುನಾಥ್, ಗುರುಪ್ರಸನ್ನ, ತಿರುಪತಿ ಗಿರಿನಾಥ್ ಹಾಗೂ ದೆಲ್ಲಿ ಸಾಯಿರಾಮ್ ಸೇರಿದಂತೆ ಹಿರಿಯ ಕಲಾವಿದರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ನಾಡಿನ ಹಿರಿಯ ಸಾಹಿತಿ ಹಾಗೂ ಕೈವಾರ ಕ್ಷೇತ್ರದಿಂದ ಪ್ರಕಟವಾಗುವ ಮಲ್ಲಾರ ಮಾಸ ಪತ್ರಿಕೆಯ ನಿರ್ವಾಹಕ ಸಂಪಾದಕ ಡಾ.ಬಾಬು ಕೃಷ್ಣಮೂರ್ತಿರಿಗೆ ನಾರೇಯಣ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಈ ಮೂರು ದಿನ ನಿತ್ಯ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಹಾಗೂ ನಾಡಿನ ಹೆಸರಾಂತ ಕಲಾವಿದರಿಂದ ಸಂಗೀತ ಕಚೇರಿ, ನಾದಸ್ವರ-ತವಿಲ್ ವಾದನ, ಭರತನಾಟ್ಯ, ಹರಿಕಥೆ, ಬುರಕಥೆ ಹಾಗೂ ಸಾವಿರಾರು ಭಜನಾ ಕಾರ್ಯಕ್ರಮಗಳೊಂದಿಗೆ ನಿರಂತರವಾಗಿ 72 ಗಂಟೆಗಳ ನಾದೋಪಾಸನೆ ಜರುಗಲಿದೆಯೆಂದರು. ಮಠದ ಉಪಾಧ್ಯಕ್ಷ ಜೆ.ವಿಭಾಕರರೆಡ್ಡಿ, ಪ್ರವಚನಾಕಾರ ತಳಗವಾರ ಆನಂದ್, ವೆಂಕಟರವಣಪ್ಪ ಇದ್ದರು.