ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Madhugiri News: ವಿಜೃಂಭಣೆಯಿಂದ ನೆರವೇರಿದ ಶ್ರೀ ಅಮ್ಮಾಜಿ ಕಾವಲ್ಲೇಶ್ವರಿ ದೇವಿ, ನರಸಿಂಹ ಸ್ವಾಮಿ ಜಲಧಿ ಮಹೋತ್ಸವ

Madhugiri News: ಮಧುಗಿರಿ ತಾಲೂಕಿನ ಕಸಬಾ ವ್ಯಾಪ್ತಿಯ ಭಕ್ತರಹಳ್ಳಿ ಗ್ರಾಮದಲ್ಲಿ ಕುಂಚಿಟಿಗರ (ಶೆಟ್ಟನವರ) ಕುಲದೇವತೆ ಅಮ್ಮಾಜಿ ಕಾವಲ್ಲೇಶ್ವರಿ ದೇವಿ ಹಾಗೂ ನರಸಿಂಹ ಸ್ವಾಮಿಯ ಜಲಧಿ ಮಹೋತ್ಸವ ಸಾವಿರಾರು ಮಂದಿ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ವಿಜೃಂಭಣೆಯಿಂದ ನೆರವೇರಿದ ಅಮ್ಮಾಜಿ ಕಾವಲ್ಲೇಶ್ವರಿ ಜಲಧಿ ಮಹೋತ್ಸವ

ಭಕ್ತರಹಳ್ಳಿಯಲ್ಲಿ ಅಮ್ಮಾಜಿ ಕಾವಲ್ಲೇಶ್ವರಿ ದೇವಿ, ನರಸಿಂಹ ಸ್ವಾಮಿಯ ಜಲಧಿ ಮಹೋತ್ಸವ ಜರುಗಿತು. -

Profile
Siddalinga Swamy May 9, 2026 9:39 PM

ಮಧುಗಿರಿ, ಮೇ 9: ತಾಲೂಕಿನ ಕಸಬಾ ವ್ಯಾಪ್ತಿಯ (Madhugiri News) ಭಕ್ತರಹಳ್ಳಿ ಗ್ರಾಮದಲ್ಲಿ ಕುಂಚಿಟಿಗರ (ಶೆಟ್ಟನವರ) ಕುಲದೇವತೆ ಅಮ್ಮಾಜಿ ಕಾವಲ್ಲೇಶ್ವರಿ ದೇವಿ ಹಾಗೂ ನರಸಿಂಹ ಸ್ವಾಮಿಯ ಜಲಧಿ ಮಹೋತ್ಸವ ಸಾವಿರಾರು ಮಂದಿ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು. ದೇವಾಲಯದಿಂದ ಮಂಗಳವಾದ್ಯಗಳೊಂದಿಗೆ ಉತ್ಸವ ಮೂರ್ತಿಗಳನ್ನು ಬಿಜವರ ಗ್ರಾಮದ ಕೆರೆಯಲ್ಲಿ ಶುಭ್ರಗೊಳಿಸಿ ಪೂಜೆ ಸಲ್ಲಿಸಿದರು. ಅಲ್ಲಿಂದ ಉತ್ಸವ ಮೂರ್ತಿಗಳನ್ನು ಮೆರವಣಿಗೆಯ ಮೂಲಕ ಗ್ರಾಮದಲ್ಲಿ ಮೆರವಣಿಗೆ ನಡೆಸಿ ಗುಡಿ ತುಂಬಿಸಿದರು.

ಬುಕ್ಕಪಟ್ಟಣದಮ್ಮ, ಚೆನ್ನಪಟ್ಟಣದಮ್ಮ, ಬಲಿಕೊಂಡಮ್ಮ, ಮೂಗನಲಮ್ಮ ಸೇರಿದಂತೆ ಏಳು ಅಕ್ಕತಂಗಿಯರನ್ನು ಒಂದೇ ಗದ್ದಿಗೆಯಲ್ಲಿ ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸುವುದು ಜಾತ್ರೆಯ ವಿಶೇಷವಾಗಿತ್ತು. ಒಂದೇ ಗದ್ದಿಗೆಯಲ್ಲಿ ದೇವರನ್ನು ಭಕ್ತರು ಸರದಿ ಸಾಲಿನಲ್ಲಿ ಪೂಜೆ ಸಲ್ಲಿಸಿದರು. ಕುಂಚಿಟಿಗ ಜನಾಂಗದ 48 ಕುಲದವರನ್ನು ಆಹ್ವಾನಿಸಿ ತಾಂಬೂಲ ಪ್ರಸಾದ ವಿತರಿಸಿದರು.

BESCOM: ವಿದ್ಯುತ್‌ ಸಂಬಂಧಿತ ದೂರುಗಳಿಗೆ ವಾಟ್ಸ್‌ಆ್ಯಪ್‌, ಸಾಮಾಜಿಕ ಜಾಲತಾಣ ಬಳಸಿ: ಬೆಸ್ಕಾಂ

ಪ್ರತಿಷ್ಠಾನದ ಅಧ್ಯಕ್ಷ ಡಾ. ರಾಜಶೇಖರ, ಉಪಾಧ್ಯಕ್ಷ ರಾಮಕೃಷ್ಣಯ್ಯ, ಕಾರ್ಯದರ್ಶಿ ಎಂ.ಎನ್. ರಂಗನಾಥ್ ಕುಮಾರ್ , ಸಹ ಕಾರ್ಯದರ್ಶಿ ಲಕ್ಷ್ಮಿಕಾಂತ್ ಸೇರಿದಂತೆ ಸದಸ್ಯರು ಹಾಗೂ 45 ಕುಲಗಳ ನೆಂಟರು ಮಹೋತ್ಸವದಲ್ಲಿ ಹಾಜರಿದ್ದರು.