Tumkur News: ಆಡಂಬರದ ಹುಟ್ಟುಹಬ್ಬದ ಆಚರಣೆ ಬದಿಗೊತ್ತಿ: ನಟರಾಜ್ ಶೆಟ್ಟಿ
ಮನಸ್ಸು ಮಾಡಿದ್ದರೆ ರಮೇಶ್ ಬಾಬು ದೊಡ್ಡ ರೆಸಾರ್ಟ್ ಅಥವಾ ಪಂಚತಾರಾ ಹೋಟೆಲ್‌ಗಳಲ್ಲಿ ಲಕ್ಷಾಂತರ ರುಪಾಯಿ ಖರ್ಚು ಮಾಡಿ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳಬಹುದಿತ್ತು. ಆದರೆ ಅದನ್ನೆಲ್ಲ ಬದಿಗೊತ್ತಿ ಶಾಲಾ ಮಕ್ಕಳೊಂದಿಗೆ ಅತ್ಯಂತ ಸರಳವಾಗಿ ದಿನವನ್ನು ಕಳೆದಿರು ವುದು ಅವರ ಉದಾತ್ತ ಗುಣಕ್ಕೆ ಸಾಕ್ಷಿ
-
ತುಮಕೂರು: ಇತ್ತೀಚಿನ ದಿನಗಳಲ್ಲಿ ಐಷಾರಾಮಿ ಹಾಗೂ ಆಡಂಬರದ ಹುಟ್ಟುಹಬ್ಬದ ಆಚರಣೆ ಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ, ಸಮಾಜ ಸೇವಕರಾದ ರಮೇಶ್ ಬಾಬು ತಮ್ಮ ಜನ್ಮದಿನವನ್ನು ಅತ್ಯಂತ ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸಿಕೊಳ್ಳುವ ಮೂಲಕ ಇತರರಿಗೆ ಮಾದರಿ ಯಾಗಿದ್ದಾರೆ ಎಂದು ಸಾಯಿಬಾಬಾ ಮಂದಿರದ ಅಧ್ಯಕ್ಷ ನಟರಾಜ್ ಶೆಟ್ಟಿ ಪ್ರಶಂಸಿಸಿದರು.
ನಗರದ ಬಟವಾಡಿಯ ಮಹಾಲಕ್ಷ್ಮಿ ನಗರದ ದಾರಿದೀಪ ಚಾರಿಟಬಲ್ ಟ್ರಸ್ಟ್ ನ ಅಂಧ ಹೆಣ್ಣು ಮಕ್ಕಳ ವಸತಿ ನಿಲಯದಲ್ಲಿ ಉದ್ಯಮಿ ರಮೇಶ್ ಬಾಬು ಅವರ ಹುಟ್ಟುಹಬ್ಬದ ಪ್ರಯುಕ್ತ ವಿಶೇಷ ಚೇತನ ಮಕ್ಕಳಿಗೆ ಅಗತ್ಯ ಪರಿಕರಗಳನ್ನು ವಿತರಿಸಿ ಮಾತನಾಡಿದರು.
ಮನಸ್ಸು ಮಾಡಿದ್ದರೆ ರಮೇಶ್ ಬಾಬು ದೊಡ್ಡ ರೆಸಾರ್ಟ್ ಅಥವಾ ಪಂಚತಾರಾ ಹೋಟೆಲ್‌ಗಳಲ್ಲಿ ಲಕ್ಷಾಂತರ ರುಪಾಯಿ ಖರ್ಚು ಮಾಡಿ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳಬಹುದಿತ್ತು. ಆದರೆ ಅದನ್ನೆಲ್ಲ ಬದಿಗೊತ್ತಿ ಶಾಲಾ ಮಕ್ಕಳೊಂದಿಗೆ ಅತ್ಯಂತ ಸರಳವಾಗಿ ದಿನವನ್ನು ಕಳೆದಿರು ವುದು ಅವರ ಉದಾತ್ತ ಗುಣಕ್ಕೆ ಸಾಕ್ಷಿ ಎಂದರು.
ಇದನ್ನೂ ಓದಿ: Tumkur News: ಪರಿಶ್ರಮದಿಂದ ಯಶಸ್ಸು ಸಾಧ್ಯ: ಡಾ. ನಾಗಲಕ್ಷ್ಮಿ ಚೌಧರಿ
ಕನ್ನಡ ಸೇನೆ ಜಿಲ್ಲಾಧ್ಯಕ್ಷ ಡಾ.ಧನಿಯಾಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಎಲೆಮರೆಯ ಕಾಯಿಯಂತೆ ಸದ್ದಿಲ್ಲದೆ ಸಮಾಜ ಸೇವೆ ಮಾಡುವ ಅದೆಷ್ಟೋ ಮಹನೀಯರಿದ್ದಾರೆ. ಎಡಗೈಯಲ್ಲಿ ನೀಡಿದ್ದು ಬಲಗೈಗೆ ತಿಳಿಯದಂತೆ ಜನಸೇವೆ ಮಾಡುವ ಗುಣ ಇವರ ರಕ್ತದಲ್ಲೇ ಹಾಸುಹೊಕ್ಕಾಗಿದೆ. ಇವರ ನಿಸ್ವಾರ್ಥ ಸೇವೆಯನ್ನು ಸಾರ್ವಜನಿಕರು ಸದಾ ಸ್ಮರಿಸುತ್ತಾರೆ ಎಂದು ಅಭಿಪ್ರಾಯಪಟ್ಟರು.
ಹುಟ್ಟುಹಬ್ಬ ಆಚರಿಸಿಕೊಂಡ ಉದ್ಯಮಿ ಡಾ. ರಮೇಶ್ ಬಾಬು ಮಾತನಾಡಿ, ನಾವು ಹುಟ್ಟಿದಾಗ ಉಸಿರಿರುತ್ತದೆ, ಆದರೆ ಇನ್ನೂ ಹೆಸರಿಟ್ಟಿರುವುದಿಲ್ಲ. ಆದರೆ ನಾವು ಮನುಷ್ಯರಾಗಿ ಸಾಧನೆ ಮಾಡಿ ಮರಣ ಹೊಂದಿದಾಗ, ನಮ್ಮ ದೇಹದಲ್ಲಿ ಉಸಿರಿರುವುದಿಲ್ಲ, ಆದರೆ ನಾವು ಮಾಡಿದ ಸಾಧನೆ ಮತ್ತು ನಮ್ಮ ಹೆಸರು ಜಗತ್ತಿನಲ್ಲಿ ಶಾಶ್ವತವಾಗಿ ಉಳಿಯುವಂತಾಗಬೇಕು. ಅದೇ ನಿಜವಾದ ಸಾಧನೆ ಎಂದು ಅವರು ಮಾರ್ಮಿಕವಾಗಿ ನುಡಿದರು.
ವಿದ್ಯಾರ್ಥಿಗಳ ಜೀವನದ ನಿರೂಪಣೆಗೆ ಶ್ರಮಿಸುತ್ತಿರುವ ದಾರಿದೀಪ ಸಂಸ್ಥೆಯ ಶಿವಕುಮಾರ್ ಅವರ ಸೇವೆಯನ್ನು ಶ್ಲಾಘಿಸಿದ ಅವರು, ನಿಮ್ಮೆಲ್ಲರ ಪಾಲನೆ, ಪೋಷಣೆ ಹಾಗೂ ವಿದ್ಯಾಭ್ಯಾಸವನ್ನು ನೀಡುತ್ತಾ, ನಿಮ್ಮ ಮುಂದಿನ ಸುಂದರ ಭವಿಷ್ಯಕ್ಕೆ ದಾರಿದೀಪವಾಗಿರುವ ಶಿವಕುಮಾರ್ ಅವರನ್ನು ಕೊನೆಯವರೆಗೂ ನೆನಪಿನಲ್ಲಿಟ್ಟುಕೊಳ್ಳುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಕರ್ತವ್ಯ ಎಂದರು.
ಇತಿಹಾಸದಲ್ಲಿ ಅಳಿಸದ ಹೆಸರು ಮುದ್ರಿಸಿ ಹೋಗಿರುವ ಮಹನೀಯರನ್ನು ಸ್ಮರಿಸಿದ ಅವರು ಸರ್ ಎಂ. ವಿಶ್ವೇಶ್ವರಯ್ಯ ಭೌತಿಕವಾಗಿ ನಮ್ಮೊಂದಿಗಿಲ್ಲದಿದ್ದರೂ, ಅವರ ಹೆಸರು ಮತ್ತು ಸಾಧನೆ ಇಂದಿಗೂ ಅಮರವಾಗಿದೆ. ಸರ್ದಾರ್ ವಲ್ಲಭಭಾಯಿ ಪಟೇಲ್ ಮತ್ತು ಮಹಾತ್ಮ ಗಾಂಧೀಜಿ ದೇಶಕ್ಕಾಗಿ ಮತ್ತು ಸಮಾಜಕ್ಕಾಗಿ ತನು-ಮನ ಮುಡುಪಾಗಿಟ್ಟ ಇಂತಹ ಪುಣ್ಯಪುರುಷರು ಇಂದು ನಮ್ಮೊಂದಿಗಿಲ್ಲದಿದ್ದರೂ ಅವರ ಹೆಸರು ಇತಿಹಾಸದ ಪುಟಗಳಲ್ಲಿ ಶಾಶ್ವತವಾಗಿ ಉಳಿದಿದೆ ಎಂದರು. ಆರ್ಯ ವೈಶ್ಯ ಮಂಡಳಿಯ ನಟರಾಜು ಶೆಟ್ಟಿ, ಸಮಾಜ ಸೇವಕ ನರಸೇಗೌಡ ಮಾತನಾಡಿದರು.
ಸಮಾಜ ಸೇವಕ ನೇತಾಜಿ ಶ್ರೀಧರ್ , ಉದ್ಯಮಿಗಳಾದ ಆಕರ್ಷ್, ಚಿದಾನಂದ್, ದಾರಿದೀಪ ಟ್ರಸ್ಟ್ ಅಧ್ಯಕ್ಷ ಡಾ. ಶಿವಕುಮಾರ್, ಮತ್ತಿತರರಿದ್ದರು.
ಈ ಸಂದರ್ಭದಲ್ಲಿ ಮಕ್ಕಳಿಗೆ ವೀಲ್ ಚೇರ್, ಕಮೋಡ್ ಚೇರ್, ಸ್ಪಂದನ ಬುದ್ದಿ ಮಾಂದ್ಯ ಶಾಲೆಯ ಮಕ್ಕಳಿಗೆ ನೋಟ್ ಬುಕ್, ವಿದ್ಯಾಭ್ಯಾಸಕ್ಕೆ ಅಗತ್ಯವಾದ ಕಿಟ್ ವಿತರಣೆ ಮಾಡಲಾಯಿತು.