Gubbi News: ಶತಮಾನ ಕಂಡ ಪಿಎಂಶ್ರೀ ಶಾಲೆಯಲ್ಲಿ ವಿದ್ಯಾರ್ಥಿಗಳಿಬ್ಬರಿಗೆ ಥಳಿತ..!! : ಪೋಷಕರ ದೂರು - ಶಿಕ್ಷಕ ಸಮೀರ್ ಸಸ್ಪೆಂಡ್
ಶುಕ್ರವಾರ ಶಾಲೆಯಲ್ಲಿ ಏಳನೇ ತರಗತಿಯ ನೂತನ್ ಹಾಗೂ ದಯಾನಂದ್ ಎಂಬ 12 ವರ್ಷದ ವಿದ್ಯಾರ್ಥಿಗಳಿಗೆ ಶಿಕ್ಷಕ ಸಮೀರ್ ಮಕ್ಕಳ ಮುಂದೆಯೇ ಕೋಲು ಹಿಡಿದು ಮನಬಂದಂತೆ ಥಳಿಸಿ ದ್ದಾರೆ. ಕಾಲು ಕೈ ಹಾಗೂ ಎದೆಯ ಭಾಗದಲ್ಲಿ ಬಾಸುಂಡೆ ಬಂದು ರಕ್ತ ಹೆಪ್ಪುಗಟ್ಟಿ ಮಕ್ಕಳು ನರಳಾಡಿದ್ದಾರೆ. ಮನೆಗೆ ಮರಳಿದ ಮಕ್ಕಳ ವರ್ತನೆ ಕಂಡ ಪೋಷಕರು ವಿಚಾರಿಸಿದಾಗ ಶಿಕ್ಷಕನ ಅಮಾನವೀಯ ನಡವಳಿಕೆ ತಿಳಿದುಬಂದಿದೆ.
-
ಗುಬ್ಬಿ: ಪಟ್ಟಣದ ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆ ಶತಮಾನ ಕಂಡ ಶಾಲೆಯಾಗಿದೆ. ಸುಮಾರು 400 ವಿದ್ಯಾರ್ಥಿಗಳ ದಾಖಲಾತಿಯ ಈ ಪಿಎಂಶ್ರೀ ಶಾಲೆಯಲ್ಲಿ ವಿದ್ಯಾರ್ಥಿಗಳಿಬ್ಬರಿಗೆ ಬಾಸುಂಡೆ ಬರುವಂತೆ ಥಳಿಸಿ ಅಮಾನವೀಯವಾಗಿ ವರ್ತಿಸಿರುವ ಶಿಕ್ಷಕ ಸಮೀರ್ ಮಲ್ಲಿಕ್ ಎಂಬುವವರನ್ನು ಸಸ್ಪೆಂಡ್ ಮಾಡಿದ ಘಟನೆ ಶನಿವಾರ ನಡೆದಿದೆ.
ಶುಕ್ರವಾರ ಶಾಲೆಯಲ್ಲಿ ಏಳನೇ ತರಗತಿಯ ನೂತನ್ ಹಾಗೂ ದಯಾನಂದ್ ಎಂಬ 12 ವರ್ಷದ ವಿದ್ಯಾರ್ಥಿಗಳಿಗೆ ಶಿಕ್ಷಕ ಸಮೀರ್ ಮಕ್ಕಳ ಮುಂದೆಯೇ ಕೋಲು ಹಿಡಿದು ಮನಬಂದಂತೆ ಥಳಿಸಿ ದ್ದಾರೆ. ಕಾಲು ಕೈ ಹಾಗೂ ಎದೆಯ ಭಾಗದಲ್ಲಿ ಬಾಸುಂಡೆ ಬಂದು ರಕ್ತ ಹೆಪ್ಪುಗಟ್ಟಿ ಮಕ್ಕಳು ನರಳಾಡಿದ್ದಾರೆ. ಮನೆಗೆ ಮರಳಿದ ಮಕ್ಕಳ ವರ್ತನೆ ಕಂಡ ಪೋಷಕರು ವಿಚಾರಿಸಿದಾಗ ಶಿಕ್ಷಕನ ಅಮಾನವೀಯ ನಡವಳಿಕೆ ತಿಳಿದುಬಂದಿದೆ.
ಇದನ್ನೂ ಓದಿ: Gubbi News: ವಿಜೃಂಭಣೆಯಿಂದ ಜರುಗಿದ ಸಿಡಿಲು ಬಸವಣ್ಣ ಪರೇವು ಜಾತ್ರೆ
ನೊಂದ ಪೋಷಕರು ಕೂಡಲೇ ಮಕ್ಕಳ ಆಯೋಗ ಹಾಗೂ ಪೊಲೀಸ್ ಠಾಣೆಗೆ ತಿಳಿಸಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿ ನಟರಾಜು ಅವರಿಗೂ ಸಹ ದೂರು ಬಂದ ಹಿನ್ನಲೆ ಶನಿವಾರ ಶಾಲೆಗೆ ಬಂದ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಮಕ್ಕಳ ತುಂಟಾಟಕ್ಕೆ ಬೇಸತ್ತ ಶಿಕ್ಷಕ ಸಮೀರ್ ದಂಡಿಸುವ ರೀತಿ ಯಾವ ಪೋಷಕರು ಒಪ್ಪುವಂತಿಲ್ಲ. ಮಕ್ಕಳ ಮೇಲೆ ಹಲ್ಲೆಯ ತೀವ್ರತೆ ಶಿಕ್ಷಕನ ಮನಸ್ಥಿತಿ ಸರಿಯಿಲ್ಲ ಎನಿಸುತ್ತದೆ. ಈ ರೀತಿಯ ಶಿಕ್ಷೆ ಪೊಲೀಸರು ಸಹ ಕಳ್ಳರಿಗೆ ನೀಡುವುದಿಲ್ಲ ಎಂದು ಪೋಷಕರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಕ್ಕೆ ಬಂದಿದ್ದ ಬಿಇಓ ನಟರಾಜು, ಸಿಪಿಐ ರಾಘವೇಂದ್ರ, ಪಿಎಸ್ಐ ರಾಜೇಶ್ವರಿ, ಬಿಆರ್ ಸಿ ಮಧುಸೂಧನ್ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕಿ. ಹಲ್ಲೆಗೊಳಗಾದ ಮಕ್ಕಳು ಹಾಗೂ ಶಿಕ್ಷಕ ಸಮೀರ್ ತನಿಖೆಗೆ ಒಳಪಡಿಸಿ ಕೂಡಲೇ ಡಿಡಿಪಿಐ ಅವರಿಗೆ ವಿಷಯ ತಿಳಿಸಿ ಸಸ್ಪೆಂಡ್ ಆದೇಶ ಹೊರಡಿಸಿದರು. ಹಲ್ಲೆಗೊಳಗಾದ ಕದರೇಗೌಡನಪಾಳ್ಯದ ನೂತನ್ ಹಾಗೂ ಬಿಳೇಕಲ್ಲು ಪಾಳ್ಯದ ದಯಾನಂದ್ ಈ ಮಕ್ಕಳ ಪೋಷಕರಿಂದ ದೂರು ಪಡೆದ ಗುಬ್ಬಿ ಪೊಲೀಸರು ದೂರು ಅರ್ಜಿ ದಾಖಲಿಸಿ ಎಫ್ಐಆರ್ ದಾಖಲು ಮಾಡಿದರು.
ಈ ಸಂದರ್ಭದಲ್ಲಿ ರೈತಸಂಘದ ಲೋಕೇಶ್, ಸುರೇಶ್, ರಂಗಸ್ವಾಮಿ, ಎಸ್ ಡಿಎಂಸಿ ಅಧ್ಯಕ್ಷರು ಸದಸ್ಯರು ಇನ್ನಿತರರು ಇದ್ದರು.