ಬೈಕ್‌ಗೆ ರೈಲಿನ ಹಾರ್ನ್ ಅಳವಡಿಸಿ ಪೊಲೀಸರ ಅತಿಥಿಯಾದ ಯುವಕ: ಸರಿಯಾಗಿ ಬುದ್ಧಿ ಕಲಿಸಿ ಎಂದ ನೆಟ್ಟಿಗರು
Viral Video: ಯುವಕನೊಬ್ಬ ಬೈಕ್‌ಗೆ ರೈಲಿನ ಹಾರ್ನ್ ಅಳವಡಿಸಲು ಹೋಗಿ ಪೇಚಿಗೆ ಸಿಲುಕಿದ್ದಾನೆ. ತನ್ನ ಬೈಕ್‌ಗೆ ಕಾನೂನು ಬಾಹಿರವಾಗಿ ಭಾರೀ ಶಬ್ದದ ರೈಲಿನ ಹಾರ್ನ್ ಬಳಸಿ ಪ್ರಯಾಣಿಕರಲ್ಲಿ ಅತಂಕ ಹುಟ್ಟಿಸಿದ್ದಾನೆ. ಸದ್ಯ ಈ ವಿಚಾರ ತಿಳಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಬೈಕ್‌ಗೆ ರೈಲಿನ ಹಾರ್ನ್ ಅಳವಡಿಸಿದ ಯುವಕನ ಬಂಧನ -
ದೆಹಲಿ, ಮೇ 19: ಭಾರತದಲ್ಲಿ ಸಾರಿಗೆ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದರೂ ಇದನ್ನು ಉಲ್ಲಂಘಿಸುವ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಇದೀಗ ಯುವಕನೊಬ್ಬ ಬೈಕ್‌ಗೆ ರೈಲಿನ ಹಾರ್ನ್ ಅಳವಡಿಸಲು ಹೋಗಿ ಪೇಚಿಗೆ ಸಿಲುಕಿದ್ದಾನೆ. ಹೌದು, ಆತ ತನ್ನ ಬೈಕ್‌ಗೆ ಕಾನೂನು ಬಾಹಿರವಾಗಿ ಭಾರಿ ಶಬ್ದದ ರೈಲಿನ ಹಾರ್ನ್ ಅಳವಡಿಸಿ ಪ್ರಯಾಣಿಕರಲ್ಲಿ ಅತಂಕ ಹುಟ್ಟಿಸಿದ್ದಾನೆ. ಸದ್ಯ ಈ ವಿಚಾರ ತಿಳಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಯುವಕನು ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಬೇಕು ಎನ್ನುವ ಉದ್ದೇಶದಿಂದ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.
ಬೈಕ್‌ಗೆ ತೀವ್ರ ಶಬ್ದದ ರೈಲಿನ ಹಾರ್ನ್ ಅಳವಡಿಸಿಕೊಂಡು ರಸ್ತೆಯಲ್ಲಿ ಆತ ಸಂಚರಿಸಿದ್ದಾನೆ. ಇದ್ದಕ್ಕಿದ್ದಂತೆ ರಸ್ತೆಯಲ್ಲಿ ರೈಲಿನ ಹಾರ್ನ್ ಶಬ್ದ ಕೇಳಿ ಇತರ ವಾಹನ ಸವಾರರು ಕಳವಳಗೊಂಡಿದ್ದಾರೆ. ಅನೇಕರು ಭಯಗೊಂಡು ಸಮೀಪದಲ್ಲಿ ರೈಲು ಟ್ರ್ಯಾಕ್ ಇದೆಯೇ ಎಂದು ಪ್ರಶ್ನಿಸಿದ್ದಾರೆ.
ವಿಡಿಯೊ ನೋಡಿ:
Indians' honking obsession peaked here.
— Vije (@vijeshetty) May 19, 2026
Bro installed, train horn on his 100cc bike 😂🤦♂️ pic.twitter.com/xvfDcRaxaW
ಬೈಕ್ ರೈಲಿನ ಹಾರ್ನ್‌ನಂತೆ ಶಬ್ದ ಮಾಡುತ್ತ ರಸ್ತೆಯಲ್ಲಿ ಸಾಗುತ್ತಿರುವುದು ವಿಡಿಯೊದಲ್ಲಿ ಕಂಡು ಬಂದಿದೆ. ಕೆಲವರು ವಿಚಿತ್ರ ದೃಶ್ಯವನ್ನು ನೋಡಿ ನಕ್ಕರೆ, ಇನ್ನು ಹಲವರು, "ಇದು ತಮಾಷೆಯಲ್ಲ ಇದು ಅಪಾಯಕಾರಿ" ಎಂದು ಆಕ್ರೋಶ ಹೊರಹಾಕಿದ್ದಾರೆ. ಅಂತಹ ಹಾರ್ನ್‌ಗಳು ಭಯ ಮತ್ತು ಅಪಘಾತಗಳಿಗೆ ಕಾರಣವಾಗಬಹುದು ಎಂದು ಕಿಡಿಕಾರಿದ್ದಾರೆ.
ಪ್ಲಂಬರ್ ಕೆಲಸ ಮಾಡುವ ವ್ಯಕ್ತಿಯ ವಾರ್ಷಿಕ ಆದಾಯ ಗೊತ್ತಾ? ಐಟಿ ಉದ್ಯೋಗಕ್ಕಿಂತ ಇದೆ ಬೆಸ್ಟ್ ಎಂದ ನೆಟ್ಟಿಗರು
ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಯಿತು. ಸಾರ್ವಜನಿಕರ ದೂರಿನ ಆಧಾರದ ಮೇಲೆ ತಕ್ಷಣ ಪೊಲೀಸರು, ಆ ಯುವಕನನ್ನು ಪತ್ತೆ ಹಚ್ಚಿ ಬೈಕ್ ಜಪ್ತಿ ಮಾಡಿದ್ದಾರೆ. ನೆಟ್ಟಿಗರೊಬ್ಬರು ಇದು, ʼʼಸೃಜನಶೀಲತೆ ಅಲ್ಲ, ಇದು ಅವ್ಯವಸ್ಥೆ. ರಸ್ತೆಗಳು ಸಾಹಸಗಳಿಗೆ ಅಲ್ಲʼʼ ಎಂದು ಬರೆದಿದ್ದಾರೆ. ಮತ್ತೊಬ್ಬರು, ʼʼಪ್ರಚಾರಕ್ಕಾಗಿ ಇಂತಹ ಕೆಲಸ ಮಾಡುವುದು ತಪ್ಪುʼʼ ಎಂದು ಸಲಹೆ ನೀಡಿದ್ದಾರೆ.