ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ತುಮಕೂರಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶುದ್ಧಗಂಗಾ ಘಟಕಕ್ಕೆ ಶಾಸಕ ಜಿ.ಬಿ. ಜ್ಯೋತಿಗಣೇಶ್ ಚಾಲನೆ

Tumkur News: ತುಮಕೂರು ನಗರದ ಗುಬ್ಬಿವೀರಣ್ಣ ಕಲಾಕ್ಷೇತ್ರದ ಹಿಂಭಾಗದಲ್ಲಿರುವ ಮಾರಿಯಮ್ಮ ನಗರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಶುದ್ಧಗಂಗಾ ಘಟಕಕ್ಕೆ ನಗರ ಶಾಸಕ ಜಿ.ಬಿ. ಜ್ಯೋತಿಗಣೇಶ್ ಚಾಲನೆ ನೀಡಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

ತುಮಕೂರಿನಲ್ಲಿ ಶುದ್ಧಗಂಗಾ ಘಟಕಕ್ಕೆ ಶಾಸಕ ಜಿ.ಬಿ. ಜ್ಯೋತಿಗಣೇಶ್ ಚಾಲನೆ

ತುಮಕೂರಿನಲ್ಲಿ ಶುದ್ಧಗಂಗಾ ಘಟಕಕ್ಕೆ ಶಾಸಕ ಜಿ.ಬಿ. ಜ್ಯೋತಿಗಣೇಶ್ ಚಾಲನೆ. -

Profile
Siddalinga Swamy Apr 10, 2026 9:32 PM

ತುಮಕೂರು, ಏ.10: ನಗರದ ಗುಬ್ಬಿವೀರಣ್ಣ ಕಲಾಕ್ಷೇತ್ರದ ಹಿಂಭಾಗದಲ್ಲಿರುವ ಮಾರಿಯಮ್ಮ ನಗರದಲ್ಲಿ (Tumkur News) ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಶುದ್ಧಗಂಗಾ ಘಟಕವನ್ನು ನಗರ ಶಾಸಕ ಜಿ.ಬಿ. ಜ್ಯೋತಿಗಣೇಶ್ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಶಾಸಕರು, ತುಮಕೂರು ಜಿಲ್ಲೆಯಲ್ಲಿ ಈವರೆಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ 105 ಘಟಕಗಳು ಕಾರ್ಯನಿರ್ವಹಿಸುತ್ತಿದ್ದು ಇಂದು 106ನೇ ಘಟಕವನ್ನು ಉದ್ಘಾಟಿಸಿದ್ದು ನಮಗೆ ಸಂತೋಷವಾಗುತ್ತಿದೆ ಎಂದು ಹೇಳಿದರು.

ಸಾರ್ವಜನಿಕರಿಗೆ 3 ರೂಗೆ 20 ಲೀಟರ್ ಶುದ್ಧ ನೀರನ್ನು ಕೊಡುತ್ತಿದ್ದು, ನಾಗರಿಕರ ಆರೋಗ್ಯವನ್ನು ಕಾಪಾಡುವಲ್ಲಿ ಉತ್ತಮ ನೀರು ಮುಖ್ಯ. ತುಮಕೂರು ಜಿಲ್ಲೆಯಲ್ಲಿ 5,88,000 ಲೀಟರ್ ನೀರು ಕೊಡುತ್ತಿದ್ದು, ರಾಜ್ಯದಲ್ಲಿ 556 ಶುದ್ಧಗಂಗಾ ಘಟಕಗಳು ಕಾರ್ಯನಿರ್ವಹಿಸುತ್ತಿದೆ. ತುಮಕೂರು ನಗರದಲ್ಲಿ 15 ಘಟಕಗಳು ಕಾರ್ಯನಿರ್ವಹಿಸುತ್ತಿದೆ. ಸ್ಥಳೀಯ ಶಾಸಕರ ಅನುದಾನದಲ್ಲಿ ಇಂದು 6ನೇ ಘಟಕವನ್ನು ಉದ್ಘಾಟಿಸಲಾಗಿದೆ. ಮಹಿಳೆಯರು, ವೃದ್ಧರು, ಚಿಕ್ಕಮಕ್ಕಳು ಉತ್ತಮ ಮತ್ತು ಶುದ್ಧ ನೀರನ್ನು ಸೇವಿಸಬೇಕು ಎಂದರು.

Tumkur News 1

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಸಾರ್ವಜನಿಕರ ಆರೋಗ್ಯಕ್ಕಾಗಿ ಶುದ್ಧ ನೀರನ್ನು ನೀಡುತ್ತಿದ್ದಾರೆ. ಅವರ ನಿಸ್ವಾರ್ಥ ಸೇವೆಗೆ ಧನ್ಯವಾದಗಳು. ಧರ್ಮಸ್ಥಳ ಕ್ಷೇತ್ರದಿಂದ ಹಲವಾರು ಅಭಿವೃದ್ಧಿ ಕೆಲಸಗಳು ರಾಜ್ಯದಲ್ಲಿ ಆಗುತ್ತಿದೆ. ಸ್ವಸಹಾಯ ಸಂಘದ ಮೂಲಕ ಬ್ಯಾಂಕ್‌ಗಳ ಮೂಲಕ ಸಾಲ ನೀಡುವುದು, ಕೆರೆ ಊಳೆತ್ತುವುದು, ಕೆರೆ ಅಭಿವೃದ್ಧಿ, ದೇವಸ್ಥಾನಗಳ ಪುನರುಜ್ಜೀವನ ಹೀಗೆ ನೂರಾರು ಕೆಲಸಗಳನ್ನು ಮಾಡುತ್ತಿದೆ. ಮಾರಿಯಮ್ಮ ನಗರದ ಎಲ್ಲ ಸಾರ್ವಜನಿಕರು ಶುದ್ಧ ನೀರನ್ನು ಪಡೆಯಬೇಕು. ಇದರ ಪೂರ್ಣ ಪ್ರಯೋಜನವನ್ನು ಪಡೆಯಬೇಕು. ಈ ಘಟಕದ ಸುತ್ತಮುತ್ತ ಸ್ವಚ್ಛತೆಯನ್ನು ಸಹ ಕಾಪಾಡಬೇಕೆಂದು ಶಾಸಕ ಜಿ.ಬಿ. ಜ್ಯೋತಿಗಣೇಶ್ ಮನವಿ ಮಾಡಿದರು.

Tumkur News: ಗ್ರಾಮೀಣ ಜನರಿಗೆ ಗ್ರಾಮ ನೆಟ್ ಭಾರತ ಯೋಜನೆ ವರದಾನ: ಸಂಪಿಗೆ ಜಗದೀಶ್

ಕಾರ್ಯಕ್ರಮದಲ್ಲಿ ಜಿಲ್ಲಾ ನಿರ್ದೇಶಕರಾದ ಸತೀಶ್ ಸುವರ್ಣ, ತಾಲೂಕು ಯೋಜನಾಧಿಕಾರಿ ಪ್ರಭಾಕರ್, ಮಾಜಿ ಸಿಂಡಿಕೇಟ್ ಸದಸ್ಯ ವಿನಯ್, ಪಾಲಿಕೆ ಕಾರ್ಯನಿರ್ವಾಹಕ ಎಂಜಿನಿಯರ್ ಕೆ.ಎಸ್. ಸಂದೀಪ್, ಶುದ್ಧಗಂಗಾ ಘಟಕದ ಮೇಲ್ವಿಚಾರಕರು, ವಲಯದ ಮೇಲ್ವಿಚಾರಕರು, ಸೇವಾಪ್ರತಿನಿಧಿಗಳು, ಮಾರಿಯಮ್ಮ ನಗರದ ಯುವಕ ಸಂಘದ ಪದಾಧಿಕಾರಿಗಳು ಇತರರು ಉಪಸ್ಥಿತರಿದ್ದರು.