IPL 2026: ವಿರಾಟ್ ಕೊಹ್ಲಿ ಎದುರು ಯಾರಿಂದಲೂ ಸಾಧ್ಯವಾಗದ ದಾಖಲೆ ಬರೆದ ರವಿ ಬಿಷ್ಣೋಯ್!
RCB vs RR: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 16ನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿಯನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ರಾಜಸ್ಥಾನ್ ರಾಯಲ್ಸ್ ತಂಡದ ಸ್ಪಿನ್ನರ್ ರವಿ ಬಿಷ್ಣೋಯ್ ಅಪರೂಪದ ದಾಖಲೆಯನ್ನು ಬರೆದಿದ್ದಾರೆ.
ವಿರಾಟ್ ಕೊಹ್ಲಿಯನ್ನು ಬೌಲ್ಡ್ ಮಾಡಿದ ರವಿ ಬಿಷ್ಣೋಯ್. -
ಗುವಾಹಟಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ದದ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ 16ನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿಯನ್ನು (Virat Kohli) ಕ್ಲೀನ್ ಬೌಲ್ಡ್ ಮಾಡುವ ಮೂಲಕ ರಾಜಸ್ಥಾನ್ ರಾಯಲ್ಸ್ ತಂಡದ ಸ್ಪಿನ್ನರ್ ರವಿ ಬಿಷ್ಣೋಯ್ (Ravi Bishnoi) ಅಪರೂಪದ ದಾಖಲೆಯನ್ನು ಬರೆದಿದ್ದಾರೆ. ಐಪಿಎಲ್ ಟೂರ್ನಿಯ ಇತಿಹಾಸದಲ್ಲಿಯೇ ಕೊಹ್ಲಿ ಎದುರು ಸಾಧ್ಯವಾಗದ ದಾಖಲೆಯನ್ನು ಆರ್‌ಆರ್ ಸ್ಪಿನ್ನರ್ ತನ್ನ ಹೆಸರಿಗೆ ಸೇರಿಸಿಕೊಂಡಿದ್ದಾರೆ. ಅಂದ ಹಾಗೆ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿಯೂ ಉತ್ತಮವಾಗಿ ಬ್ಯಾಟ್ ಮಾಡುತ್ತಿದ್ದರು. ಆದರೆ ರವಿ ಬಿಷ್ಣೋಯ್ ಅವರ ಎಸೆತಯನ್ನು ಅಂದಾಜಿಸುವಲ್ಲಿ ವಿಫಲರಾಗಿ ಬೌಲ್ಡ್ ಆದರು.
ಶುಕ್ರವಾರ ಇಲ್ಲಿನ ಬರ್ಸಪರ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಆರ್‌ಸಿಬಿ ಪರ ಎಂದಿನಂತೆ ಓಪನಿಂಗ್ ಬಂದ ವಿರಾಟ್ ಕೊಹ್ಲಿ, ತಮ್ಮ ಜೊತೆಗಾರ ಫಿಲ್ ಸಾಲ್ಟ್ ಮೊದಲ ಎಸೆತದಲ್ಲಿಯೇ ವಿಕೆಟ್ ಒಪ್ಪಿಸಿದರೂ ಮತ್ತೊಂದು ತುದಿಯಲ್ಲಿ ಕೆಚ್ಚೆದೆಯ ಆಟವನ್ನು ಪ್ರದರ್ಶಿಸಿದರು. ಅವರು ಆಡಿದ 16 ಎಸೆತಗಳಲ್ಲಿ 7 ಬೌಂಡರಿಗಳೊಂದಿಗೆ 32 ರನ್‌ಗಳನ್ನು ಬಾರಿಸಿದರು ಹಾಗೂ ಉತ್ತಮ ಆರಂಭವನ್ನು ಪಡೆದಿದ್ದರು. ಆದರೆ, 5ನೇ ಓವರ್ ಐದನೇ ಎಸೆತದಲ್ಲಿ ರವಿ ಬಿಷ್ಣೋಯ್ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿದ ಕೊಹ್ಲಿ, ಚೆಂಡಿನ ತಿರುವನ್ನು ಅರಿಯುವಲ್ಲಿ ವಿಫಲರಾಗಿ ಕ್ಲೀನ್ ಬೌಲ್ಡ್ ಆದರು.
RCB vs RR: ರಾಜಸ್ಥಾನ್ ರಾಯಲ್ಸ್ ಪ್ಲೇಯಿಂಗ್ XIನಲ್ಲಿ ವೈಭವ್ ಸೂರ್ಯವಂಶಿ ಏಕಿಲ್ಲ? ಕಾರಣ ಇಲ್ಲಿದೆ!
ಅಪರೂಪದ ದಾಖಲೆ ಬರೆದ ರವಿ ಬಿಷ್ಣೋಯ್
ಐಪಿಎಲ್‌ನ ಮೂರು ಋತುಗಳಲ್ಲಿ ವಿರಾಟ್ ಕೊಹ್ಲಿಯನ್ನು ಕ್ಲೀನ್ ಬೌಲ್ಡ್ ಮಾಡಿದ ಮೊದಲ ಬೌಲರ್ ಎಂಬ ದಾಖಲೆಯನ್ನು ರವಿ ಬಿಷ್ಣೋಯ್ ಬರೆದಿದ್ದಾರೆ. ಬರೋಬ್ಬರಿ 1089 ದಿನಗಳ ಬಳಿಕ ಈ ಸಾಧನೆಗೆ ಭಾಜನರಾದ ಮೊದಲ ಸ್ಪಿನ್ನರ್ ಎಂಬ ಖ್ಯಾತಿಗೆ ರವಿ ಬಿಷ್ಣೋಯ್ ಭಾಜನರಾಗಿದ್ದಾರೆ. 2023ರ ಏಪ್ರಿಲ್ 10 ರಂದು ಚೆನೈ ಸೂಪರ್ ಕಿಂಗ್ಸ್ ಪರ ಆಕಾಶ್ ಸಿಂಗ್ ಆರ್‌ಸಿಬಿ ಎದುರು ಈ ದಾಖಲೆಯನ್ನು ಬರೆದಿದ್ದರು.
ಆರ್‌ಸಿಬಿ ಎದುರು ಪ್ರಾಬಲ್ಯ ಸಾಧಿಸಿದ ರವಿ ಬಿಷ್ಣೋಯ್
ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಆರ್‌ಆರ್ ಪರ ರವಿ ಬಿಷ್ಣೋಯ್ ದೊಡ್ಡ ಪ್ರಭಾವವನ್ನು ಬೀರಿದರು. ವಿರಾಟ್ ಕೊಹ್ಲಿ ಹಾಗೂ ದೇವದತ್ ಪಡಿಕ್ಕಲ್ ಅವರ 45 ರನ್‌ಗಳ ಜೊತೆಯಾಟವನ್ನು ರವಿ ಬಿಷ್ಣೋಯ್ ಬ್ರೇಕ್ ಮಾಡಿದರು. ಇದಾದ ಬಳಿಕ ಮುಂದಿನ ಓವರ್‌ನಲ್ಲಿ ಅವರು ಕೃಣಾಲ್ ಪಾಂಡ್ಯ ಅವರನ್ನು ಔಟ್ ಮಾಡಿದ್ದರು. ಅಂತಿಮವಾಗಿ ಅವರು ಬೌಲ್ ಮಾಡಿದ 32 ರನ್‌ಗಳಿಗೆ 2 ವಿಕೆಟ್‌ಗಳನ್ನು ಕಬಳಿಸಿದರು.
IPL 2026: ʻಆರ್‌ಸಿಬಿಗೆ ಮರಳಿದ್ದು ನನ್ನ ಪಾಲಿಗೆ ಟರ್ನಿಂಗ್ ಪಾಯಿಂಟ್ʼ-ದೇವದತ್ ಪಡಿಕ್ಕಲ್!
ಅಂದ ಹಾಗೆ ಈ ಸೀಸನ್‌ನಲ್ಲಿ ರವಿ ಬಿಷ್ಣೋಯ್ ಅವರು 11 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಆ ಮೂಲಕ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನುಅಲಂಕರಿಸಿದ್ದಾರೆ. ಅಲ್ಲದೆ 2026ರ ಟೂರ್ನಿಯಲ್ಲಿ ಬಹುಬೇಗ 10 ವಿಕೆಟ್‌ಗಳನ್ನು ಪೂರ್ಣಗೊಳಿಸಿದ ಬೌಲರ್ ಎನಿಸಿಕೊಂಡಿದ್ದಾರೆ.
ಲಖನೌ ಸೂಪರ್ ಜಯಂಟ್ಸ್ ಪರ ನಾಲ್ಕು ಸೀಸನ್‌ಗಳನ್ನು ಆಡಿದ ಬಳಿಕ ರಾಜಸ್ಥಾನ್ ರಾಯಲ್ಸ್ ತಂಡ, 2026ರ ಐಪಿಎಲ್ ಮಿನಿ ಹರಾಜಿನಲ್ಲಿ 7.2 ಕೋಟಿ ರು ಗಳಿಗೆ ರವಿ ಬಿಷ್ಣೋಯ್ ಅವರನ್ನು ಖರೀದಿಸಿತ್ತು. ಇದೀಗ ಅವರು ಆರ್‌ಆರ್‌ಗೆ ಸ್ಪಿನ್ ವಿಭಾಗದಲ್ಲಿ ಮೌಲ್ಯವನ್ನು ತಂದುಕೊಟ್ಟಿದ್ದಾರೆ.