ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Dr.M.R.Hulinaikar: ಗ್ರಾಮೀಣ ಭಾಗಕ್ಕೂ ಗುಣಮಟ್ಟದ ನೇತ್ರ ಚಿಕಿತ್ಸೆ ತಲುಪಬೇಕು

​ನಗರದ ಶಿರಾಗಸ್ತೆಯ ಶ್ರೀದೇವಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಆಸ್ಪತ್ರೆಯ ಸಭಾಂಗಣ ದಲ್ಲಿ ನೇತ್ರಶಾಸ್ತ್ರ ಸಂಘ, ಶ್ರೀದೇವಿ ಆಸ್ಪತ್ರೆ, ಯಂಗ್ ಆಫ್ತಾಲ್ಮಾಲಜಿಸ್ಟ್ ಸೊಸೈಟಿ ಆಫ್ ಇಂಡಿಯಾ ಹಾಗೂ ಕರ್ನಾಟಕ ನೇತ್ರಶಾಸ್ತ್ರ ಸಂಘದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ 'ನೇತ್ರಕಲ್ಪ-2' ಸಿ.ಎಂ.ಇ. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣ ಭಾಗಕ್ಕೂ ಗುಣಮಟ್ಟದ ನೇತ್ರ ಚಿಕಿತ್ಸೆ ತಲುಪಬೇಕು

-

Profile
Ashok Nayak Sep 27, 2026 5:07 PM

​ತುಮಕೂರು: ಕೇವಲ ನಗರ ಪ್ರದೇಶಗಳಿಗೆ ಮಾತ್ರವಲ್ಲದೆ ಗ್ರಾಮೀಣ ಭಾಗಗಳಿಗೂ ನೇತ್ರ ಸಮಸ್ಯೆ ಗಳನ್ನು ಆರಂಭಿಕ ಹಂತದಲ್ಲೇ ಗುರುತಿಸಿ ಸೂಕ್ತ ಚಿಕಿತ್ಸೆ ಒದಗಿಸುವ ಅಗತ್ಯವಿದೆ ಎಂದು ಶ್ರೀದೇವಿ ಸಂಸ್ಥೆಯ ಸ್ಥಾಪಕ ಹಾಗೂ ಅಧ್ಯಕ್ಷ, ಮಾಜಿ ವಿಧಾನ ಪರಿಷತ್ ಸದಸ್ಯ ಡಾ. ಎಂ.ಆರ್. ಹುಲಿನಾಯ್ಕರ್(Dr. M.R. Hulinaikar) ತಿಳಿಸಿದರು.

​ನಗರದ ಶಿರಾಗಸ್ತೆಯ ಶ್ರೀದೇವಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಆಸ್ಪತ್ರೆಯ ಸಭಾಂಗಣದಲ್ಲಿ ನೇತ್ರ ಶಾಸ್ತ್ರ ಸಂಘ, ಶ್ರೀದೇವಿ ಆಸ್ಪತ್ರೆ, ಯಂಗ್ ಆಫ್ತಾಲ್ಮಾಲಜಿಸ್ಟ್ ಸೊಸೈಟಿ ಆಫ್ ಇಂಡಿಯಾ ಹಾಗೂ ಕರ್ನಾಟಕ ನೇತ್ರಶಾಸ್ತ್ರ ಸಂಘದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ 'ನೇತ್ರಕಲ್ಪ-2' ಸಿ.ಎಂ.ಇ. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

​ಕಾರ್ಯಕ್ರಮದ ಪ್ರಮುಖ ಮುಖ್ಯಾಂಶಗಳು: ​ವೈದ್ಯರಿಗೆ ನಿರಂತರ ಜ್ಞಾನಾರ್ಜನೆ: ಇಂತಹ ಸಿ.ಎಂ.ಇ. ಕಾರ್ಯಕ್ರಮಗಳು ವೈದ್ಯರು ತಮ್ಮ ಜ್ಞಾನ ಮತ್ತು ಕೌಶಲ್ಯವನ್ನು ಕಾಲಕಾಲಕ್ಕೆ ನವೀಕರಿಸಿಕೊಳ್ಳಲು ಉತ್ತಮ ವೇದಿಕೆಯಾಗಿವೆ ಎಂದು ಮುಖ್ಯ ಅತಿಥಿ ಡಾ.ಎಂ.ಆರ್.ಹುಲಿ ನಾಯ್ಕರ್ ಅಭಿಪ್ರಾಯಪಟ್ಟರು.

ಇದನ್ನೂ ಓದಿ: Tumkur News: ಎನ್‌ಎಚ್‌ಎಂ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೆ.28 ರಂದು ಬೃಹತ್ ಕಾಲ್ನಡಿಗೆ ಜಾಥಾ: ಮಮಿತ್ ಗಾಯಕವಾಡ್

​ವೈದ್ಯಕೀಯ ಕ್ಷೇತ್ರದಲ್ಲಿ ಪ್ರಾಯೋಗಿಕ ಕೌಶಲ್ಯ ಮುಖ್ಯ: ವೈದ್ಯಕೀಯ ಕ್ಷೇತ್ರದಲ್ಲಿ ಜ್ಞಾನ, ಅನುಭವ ಮತ್ತು ಪ್ರಾಯೋಗಿಕ ಕೌಶಲ್ಯಗಳನ್ನು ನಿರಂತರವಾಗಿ ಬೆಳೆಸಿಕೊಳ್ಳುವುದು ಅತ್ಯಂತ ಮುಖ್ಯ ಎಂದು ಕೂಡ್ಲಿಗಿ ಕ್ಷೇತ್ರದ ಶಾಸಕ ಡಾ.ಎನ್.ಟಿ.ಶ್ರೀನಿವಾಸ್(Dr N T Srinivas) ತಿಳಿಸಿದರು.

​ಸಂಶೋಧನೆ ಮತ್ತು ಅನುಭವ ಹಂಚಿಕೆ: ನೇತ್ರ ಚಿಕಿತ್ಸಾ ಕ್ಷೇತ್ರದ ತಜ್ಞರು ತಮ್ಮ ಅನುಭವ ಗಳನ್ನು ಹಂಚಿಕೊಳ್ಳುವುದರಿಂದ ಭಾಗವಹಿಸುವ ವೈದ್ಯರಿಗೆ ಆಧುನಿಕ ತಂತ್ರಜ್ಞಾನ ಹಾಗೂ ಹೊಸ ಚಿಕಿತ್ಸಾ ವಿಧಾನಗಳ ಕುರಿತು ಹೆಚ್ಚಿನ ಪ್ರಯೋಜನವಾಗಲಿದೆ ಎಂದು ಮಿಂಟೋ ನೇತ್ರ ಆಸ್ಪರೆಯ ನಿರ್ದೇಶಕ ಡಾ. ಸುರೇಶ್ ಬಾಬು ಜಿ. ಮತ್ತು ಕರ್ನಾಟಕ ನೇತ್ರಶಾಸ್ತ್ರ ಸಂಘದ ಅಧ್ಯಕ್ಷ ಡಾ. ಕೆ.ವಿ. ಶಿವರಾಮ್ ತಿಳಿಸಿದರು.

​ತಜ್ಞರಿಂದ ಶೈಕ್ಷಣಿಕ ಅಧಿವೇಶನ ಹಾಗೂ ಸನ್ಮಾನ: ​ಕಾರ್ಯಕ್ರಮದಲ್ಲಿ ನೇತ್ರ ತಜ್ಞರಾದ ಡಾ. ರೇಣುಕಾ ಎಸ್.ಜೆ., ಡಾ.ಅನುಶ್ರೀ ಲಿಂಗಯ್ಯ, ಡಾ.ಶ್ವೇತಾ ಶ್ರೀಧರ್, ಡಾ.ಅಮೋಘ ಜಾಂಬಗಿ, ಡಾ. ರವಿ ಕುಲಕರ್ಣಿ ಹಾಗೂ ಡಾ.ರವೀಂದ್ರನಾಥ್ ಹೆಚ್.ಎಂ. ಅವರು ಕಣ್ಣಿನ ಪೊರೆ ಮತ್ತು ನೇತ್ರ ಚಿಕಿತ್ಸೆಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಉಪನ್ಯಾಸ ಹಾಗೂ ಪ್ರಾಯೋಗಿಕ ತರಬೇತಿ ನೀಡಿದರು.

​ಇದೇ ಸಂದರ್ಭದಲ್ಲಿ ತುಮಕೂರು ಆಪ್ಟಾಲ್ಮಿಕ್ ಸೊಸೈಟಿ ವತಿಯಿಂದ ಎಲ್ಲಾ ಗಣ್ಯರನ್ನು ಹಾಗೂ ಉಪನ್ಯಾಸ ನೀಡಿದ ಸಂಪನ್ಮೂಲ ವ್ಯಕ್ತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

​ಈ ಕಾರ್ಯಕ್ರಮದಲ್ಲಿ ತುಮಕೂರು ನೇತ್ರಶಾಸ್ತ್ರ ಸಂಘದ ಅಧ್ಯಕ್ಷ ಡಾ.ಜಿ.ಎಸ್.ಸಿದ್ಧಲಿಂಗಸ್ವಾಮಿ, ಕಾರ್ಯದರ್ಶಿ ಡಾ. ಕೆ.ಆರ್. ಮಂಜುನಾಥ್, ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ. ಅಸ್ಗರ್ ಬೇಗ್, ಶ್ರೀದೇವಿ ಚಾರಿಟೇಬಲ್ ಟ್ರಸ್ಟ್‌ನ ಖಜಾಂಚಿ ಡಾ. ಲಾವಣ್ಯ ರಮಣ್, ಡಾ. ದಿನೇಶ್ ಕುಮಾರ್ ಸೇರಿದಂತೆ ವಿವಿಧ ಕಾಲೇಜುಗಳು ಹಾಗೂ ರಾಜ್ಯಗಳಿಂದ ಆಗಮಿಸಿದ್ದ 300ಕ್ಕೂ ಅಧಿಕ ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ನೇತ್ರತಜ್ಞರು ಭಾಗವಹಿಸಿದ್ದರು.