ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ತಿಪಟೂರಿನಲ್ಲಿ ಬೃಹತ್ ಮರದ ಕೊಂಬೆ ಬಿದ್ದು ನಿವೃತ್ತ ಶಿಕ್ಷಕ ಸಾವು

ತಿಪಟೂರು ನಗರದ ಬಿ.ಎಚ್.ರಸ್ತೆಯ ಕಲ್ಪತರು ಕಾಲೇಜಿನ ಮುಂಭಾಗ ಘಟನೆ ನಡೆದಿದೆ. ಬೃಹತ್ ಮರ ಕೊಂಬೆ ಬೈಕ್‌ ಮೇಲೆ ಉರುಳಿಬಿದ್ದ ಪರಿಣಾಮ ನಿವೃತ್ತ ಶಿಕ್ಷಕರೊಬ್ಬರು ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ನಗರ ಪೊಲೀಸ್ ಠಾಣಾ ಸಿಬ್ಬಂದಿ, ನಗರಸಭೆ ಅಧಿಕಾರಿಗಳು ಹಾಗೂ ಬೆಸ್ಕಾಂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ತಿಪಟೂರಿನಲ್ಲಿ ಬೃಹತ್ ಮರದ ಕೊಂಬೆ ಬಿದ್ದು ನಿವೃತ್ತ ಶಿಕ್ಷಕ ಸಾವು

-

Prabhakara R
Prabhakara R Oct 12, 2026 3:40 PM

ತಿಪಟೂರು: ನಗರದ ಬಿ.ಎಚ್.ರಸ್ತೆಗೆ (Tiptur News) ಹೊಂದಿಕೊಂಡಂತಿರುವ ಕಲ್ಪತರು ಕಾಲೇಜಿನ ಮುಂಭಾಗ ಬೃಹತ್ ಮರ ಕೊಂಬೆ ರಸ್ತೆಗೆ ಉರುಳಿಬಿದ್ದ ಪರಿಣಾಮ ಶಾರದ ನಗರದ ನಿವಾಸಿ, ನಿವೃತ್ತ ಶಿಕ್ಷಕ ಶಿವಸ್ವಾಮಿ ಎಂಬುವವರು ಮೃತಪಟ್ಟಿರುವ ಘಟನೆ ನಡೆದಿದೆ. ಬಹಳಷ್ಟು ವರ್ಷಗಳಿಂದ ಒಣಗಿ ನಿಂತಿದ್ದ ಮರದ ಬೃಹತ್ ಕೊಂಬೆಯೂ ಇದ್ದಕ್ಕಿದ್ದ ಹಾಗೆ ಮುರಿದು ಬಿದ್ದು ವ್ಯಕ್ತಿಯನ್ನು ಬಲಿ ಪಡೆದುಕೊಂಡಿದೆ.

ನಗರದಲ್ಲಿ ಬೀಳುವ ಹಂತದಲ್ಲಿ ನೂರಾರು ಮರಗಳಿದ್ದು ಯಾವುದೇ ಕ್ಷಣದಲ್ಲಾದರೂ, ಅಪಾಯ ಸಂಭವಿಸುವ ಸ್ಥಿತಿ ಹೆಚ್ಚಾಗಿದೆ. ಇದರಿಂದ ಸಾರ್ವಜನಿಕರು ಸೇರಿದಂತೆ ವಾಹನ ಸವಾರರು ಆತಂಕದಲ್ಲಿ ಓಡಾಡುವಂತಹ ಪರಿಸ್ಥಿತಿ ಉಂಟಾಗಿದೆ.

ಘಟನಾ ಸ್ಥಳಕ್ಕೆ ನಗರ ಪೊಲೀಸ್ ಠಾಣಾ ಸಿಬ್ಬಂದಿ, ನಗರಸಭೆ ಅಧಿಕಾರಿಗಳು ಹಾಗೂ ಬೆಸ್ಕಾಂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೃಹತ್ ಕೊಂಬೆ ಬಿದ್ದ ಪರಿಣಾಮ ಕೆಲ ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಉಂಟಾಗಿದೆ.

ಆಂಬ್ಯುಲೆನ್ಸ್ ಚಾಲಕನ ನಿರ್ಲಕ್ಷ್ಯ; ಚಲಿಸುತ್ತಿದ್ದ ವಾಹನದಿಂದ ಸ್ಟ್ರೆಚರ್ ಸಮೇತ ರಸ್ತೆಗೆ ಬಿದ್ದ ರೋಗಿ! ಭಯಾನಕ ವಿಡಿಯೋ ವೈರಲ್‌

ಈಗಾಗಲೇ ವಿಶ್ವವಾಣಿ ದಿನಪತ್ರಿಕೆಯಲ್ಲಿ "ಬೀಳುವ ಹಂತದಲ್ಲಿರುವ ನೂರಾರು ಮರಗಳ ಕೊಂಬೆಗಳು "ಎಂಬ ಶೀರ್ಷಿಕೆಯಡಿ ಸುದ್ದಿ ಬಿತ್ತರಿಸಲಾಗಿತ್ತು. ಪತ್ರಿಕೆಯಲ್ಲಿ ವರದಿಯಾದರೂ ಕೂಡ ಕ್ರಮ ಯಾವುದೇ ಕೈಗೊಂಡಿಲ್ಲ. ಹೀಗಾಗಿ ಅರಣ್ಯ ಇಲಾಖೆ ಸಿಬ್ಬಂದಿಗೆ ಸಾರ್ವಜನಿಕರು ಇಡೀ ಶಾಪ ಹಾಕುವುದರ ಜತೆಗೆ ಕೂಡಲೇ ಒಣಗಿರುವ ಮರಗಳನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿದ್ದಾರೆ.