Chikkanayakanahalli (Tumkur) News: ಗುಣಮಟ್ಟದ ಹಾಲು ಪೂರೈಕೆಯಲ್ಲಿ ತಾಲ್ಲೂಕು ಉತ್ತಮ ದೃಢತೆ
ಗುಣ ಮಟ್ಟದ ಹಾಲು ಒಕ್ಕೂಟದ ಅಭಿವೃದ್ದಿಗೆ ಹಾಗು ಸದೃಢತೆಯನ್ನು ಕಾಪಾಡುತ್ತದೆ. ನಾನು ಒಬ್ಬ ರೈತನ ಮಗನಾಗಿದ್ದು ಅನ್ನದಾತರ ಜೀವನ, ಕಷ್ಟ, ಸುಖಗಳ ಬಗ್ಗೆ ಅರಿತಿದ್ದೇನೆ. ಆದ್ದರಿಂದ ತುಮುಲ್ ನಲ್ಲಿ ನನಗೆ ಸಿಕ್ಕಿರುವ ಅಧಿಕಾರವನ್ನು ಕಿಂಚಿತ್ತೂ ವ್ಯರ್ಥವಾಗದಂತೆ ಬಳಸಿಕೊಂಡು ಹೈನೊದ್ಯಮದಲ್ಲಿ ರೈತರ ಜೀವನ ಮಟ್ಟ ಸುಧಾರಣೆಗೆ ಆಗಬೇಕಾದ ಎಲ್ಲಾ ರೀತಿಯ ಸೌಲಭ್ಯ ಗಳನ್ನು ತ್ವರಿತವಾಗಿ ಒದಗಿಸಲು ಶ್ರಮಿಸುತ್ತಿದ್ದೇನೆ

ನಗರದ ನಂದಿನಿ ಭವನದಲ್ಲಿ ರೈತರಿಗೆ ಸಹಾಯಧನದ ಚೆಕ್ ವಿತರಿಸಲಾಯಿತು.

ಚಿಕ್ಕನಾಯಕನಹಳ್ಳಿ : ಹಾಲು ಉತ್ಪಾದಕರು ಗುಣಮಟ್ಟದ ಹಾಲನ್ನು ಡೇರಿಗಳಿಗೆ ಪೂರೈಸುವ ಮೂಲಕ ಹಾಲು ಉತ್ಪಾದನೆಯಲ್ಲಿ ತಾಲ್ಲೂಕು ಉತ್ತಮ ಧೃಢತೆ ಕಾಯ್ದುಕೊಂಡಿದೆ ಎಂದು ತುಮುಲ್ ನಿರ್ದೇಶಕ ಬುಳ್ಳೇನಹಳ್ಳಿ ಶಿವಪ್ರಕಾಶ್ ಸಂತಸ ವ್ಯಕ್ತಪಡಿಸಿದರು. ನಗರದಲ್ಲಿನ ನಂದಿನಿ ಭವನದಲ್ಲಿ ಶುಕ್ರವಾರ ಹಾಲು ಸಂಗ್ರಹಿಸುವ ನಾಲ್ಕು ಸಂಘಗಳ ಕಟ್ಟಡ ನಿರ್ಮಾಣಕ್ಕೆ 10 ಲಕ್ಷ ಮತ್ತು ಮೃತಪಟ್ಟ ರಾಸುಗಳ 6 ಲಕ್ಷ ಮೊತ್ತದ ವಿಮೆ ಚೆಕ್ ಒಟ್ಟು 16 ಲಕ್ಷ ಹಣದ ಚೆಕ್‌ಗಳನ್ನು ವಿತರಿಸಿ ಮಾತನಾಡಿದರು.
ಇದನ್ನೂ ಓದಿ: Chikkanayakanahalli (Tumkur) News: ಹತ್ತನೇ ತರಗತಿ ಫಲಿತಾಂಶ ತಾಲ್ಲೂಕಿಗೆ ಪ್ರಥಮ ಸ್ಥಾನ : ಸಿಬಿಎಸ್ ಸಂತಸ
ಗುಣ ಮಟ್ಟದ ಹಾಲು ಒಕ್ಕೂಟದ ಅಭಿವೃದ್ದಿಗೆ ಹಾಗು ಸದೃಢತೆಯನ್ನು ಕಾಪಾಡುತ್ತದೆ. ನಾನು ಒಬ್ಬ ರೈತನ ಮಗನಾಗಿದ್ದು ಅನ್ನದಾತರ ಜೀವನ, ಕಷ್ಟ, ಸುಖಗಳ ಬಗ್ಗೆ ಅರಿತಿದ್ದೇನೆ. ಆದ್ದರಿಂದ ತುಮುಲ್ ನಲ್ಲಿ ನನಗೆ ಸಿಕ್ಕಿರುವ ಅಧಿಕಾರವನ್ನು ಕಿಂಚಿತ್ತೂ ವ್ಯರ್ಥವಾಗದಂತೆ ಬಳಸಿಕೊಂಡು ಹೈನೊದ್ಯಮದಲ್ಲಿ ರೈತರ ಜೀವನ ಮಟ್ಟ ಸುಧಾರಣೆಗೆ ಆಗಬೇಕಾದ ಎಲ್ಲಾ ರೀತಿಯ ಸೌಲಭ್ಯ ಗಳನ್ನು ತ್ವರಿತವಾಗಿ ಒದಗಿಸಲು ಶ್ರಮಿಸುತ್ತಿದ್ದೇನೆ ಎಂದರು. ಒಕ್ಕೂಟದ ಶೇಖರಣೆ ಮತ್ತು ತಾಂತ್ರಿಕ ವಿಭಾಗದ ವ್ಯವಸ್ಥಾಪಕ ಚಂದ್ರಶೇಖರ್ ಕೇದನೂರಿ, ಮೇಲ್ವಿಚಾರಕರು, ರೈತರು ಹಾಜರಿದ್ದರು.