ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Gubbi News: ಸ್ವಚ್ಛತೆ ಶುದ್ಧ ಜಲ ಜನಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದ ತಾಪಂ ಇಓ ಶಿವಪ್ರಕಾಶ್

ಕರಿಶೆಟ್ಟಿಹಳ್ಳಿ ಗ್ರಾಮದ ಬಳಿಯ ಕಸ ವಿಲೇವಾರಿ ಘಟಕ ಹತ್ತಿರ ಸ್ವಚ್ಛತಾ ಕಾರ್ಯ ನಡೆಸಿದ ಇಓ ಶಿವಪ್ರಕಾಶ್ ಅವರು ಸುದ್ದಿಗಾರರ ಜೊತೆ ಮಾತನಾಡಿ ಜಾಗತೀಕ ಯುಗದಲ್ಲಿ ಪರಿಸರ ಕಲುಷಿತ ಗೊಂಡಿದೆ. ಶುದ್ಧ ನೀರು ಗಾಳಿ ದೊರೆಯುವುದು ಕಷ್ಟಕರವಾಗುತ್ತಿದೆ. ಮುಂದಿನ ಪೀಳಿಗೆ ಉಳಿಸುವ ಸಲುವಾಗಿ ಪರಿಸರ ಸಂರಕ್ಷಣೆ ಜಾಗೃತಿ ಮೂಡಿಸುವ ಜವಾಬ್ದಾರಿ ಹೊತ್ತ ಸರ್ಕಾರ ಪ್ರತಿ ಹಳ್ಳಿಯಲ್ಲೂ ಸ್ವಚ್ಚತಾ ಅಭಿಯಾನ ಹಮ್ಮಿಕೊಂಡಿದೆ

ಜಲ ಜನಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದ ತಾಪಂ ಇಓ ಶಿವಪ್ರಕಾಶ್

Ashok Nayak Ashok Nayak Aug 14, 2025 8:39 PM

ಗುಬ್ಬಿ: ಹರ್ ಘರ್ ತಿರಂಗಾ ಸ್ವಾತಂತ್ರೋತ್ಸವ ಅಂಗವಾಗಿ ತಾಲ್ಲೂಕಿನ ಕಸಬ ಹೋಬಳಿ ಎಂ.ಎಚ್.ಪಟ್ಟಣ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣ ಸ್ವಚ್ಚಗೊಳಿಸುವ ಮೂಲಕ ಸ್ವಚ್ಛತೆ ಹಾಗೂ ಶುದ್ಧ ಜಲ ಜನ ಜಾಗೃತಿ ಅಭಿಯಾನಕ್ಕೆ ತಾಲ್ಲೂಕು ಪಂಚಾಯಿತಿ ಇಓ ಶಿವಪ್ರಕಾಶ್ ಚಾಲನೆ ನೀಡಿದರು.

ಎಂ.ಎಚ್.ಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಎಲ್ಲಾ ಗ್ರಾಮಗಳಲ್ಲಿ ಸ್ವಚ್ಛತಾ ಕಾರ್ಯಕ್ಕೆ ಸಾಂಕೇತಿಕ ಚಾಲನೆ ನೀಡಿದ ಇಓ ಶಿವಪ್ರಕಾಶ್ ಅವರು ಶಾಲಾ ಮಕ್ಕಳಿಗೆ ಸ್ವಚ್ಚತಾ ಅರಿವು ಮೂಡಿಸುವ ಪ್ರತಿಜ್ಞಾ ವಿಧಿ ಬೋಧಿಸಿದರು.

ನಂತರ ಕರಿಶೆಟ್ಟಿಹಳ್ಳಿ ಗ್ರಾಮದ ಬಳಿಯ ಕಸ ವಿಲೇವಾರಿ ಘಟಕ ಹತ್ತಿರ ಸ್ವಚ್ಛತಾ ಕಾರ್ಯ ನಡೆಸಿದ ಇಓ ಶಿವಪ್ರಕಾಶ್ ಅವರು ಸುದ್ದಿಗಾರರ ಜೊತೆ ಮಾತನಾಡಿ ಜಾಗತೀಕ ಯುಗದಲ್ಲಿ ಪರಿಸರ ಕಲುಷಿತಗೊಂಡಿದೆ. ಶುದ್ಧ ನೀರು ಗಾಳಿ ದೊರೆಯುವುದು ಕಷ್ಟಕರವಾಗುತ್ತಿದೆ. ಮುಂದಿನ ಪೀಳಿಗೆ ಉಳಿಸುವ ಸಲುವಾಗಿ ಪರಿಸರ ಸಂರಕ್ಷಣೆ ಜಾಗೃತಿ ಮೂಡಿಸುವ ಜವಾಬ್ದಾರಿ ಹೊತ್ತ ಸರ್ಕಾರ ಪ್ರತಿ ಹಳ್ಳಿಯಲ್ಲೂ ಸ್ವಚ್ಚತಾ ಅಭಿಯಾನ ಹಮ್ಮಿಕೊಂಡಿದೆ. ಈ ಕಾರ್ಯಕ್ಕೆ ಸಾರ್ವಜನಿಕರು ಹಾಗೂ ಜನ ಪ್ರತಿನಿಧಿಗಳ ಸಹಕಾರ ಅತ್ಯಗತ್ಯ ಎಂದರು.

ಇದನ್ನೂ ಓದಿ: Gubbi News: ಹಾಗಲವಾಡಿ ಕೆರೆಗೆ ಈ ವರ್ಷವೇ ನೀರು ಹರಿಸಲು ಕ್ರಮ ಕೈಗೊಳ್ಳಿ : ಶಾಸಕ ಎಸ್.ಆರ್.ಶ್ರೀನಿವಾಸ್ ಸೂಚನೆ

ಎಂ.ಎಚ್.ಪಟ್ಟಣ ಗ್ರಾಪಂ ಪಿಡಿಓ ಶೇಖರ್ ಮಾತನಾಡಿ ಆರೋಗ್ಯ ಗ್ರಾಮ ನಿರ್ಮಾಣಕ್ಕೆ ಉತ್ತಮ ಪರಿಸರ ವ್ಯವಸ್ಥೆ ಅಗತ್ಯವಿದೆ. ಪ್ರತಿ ಗ್ರಾಮದಲ್ಲೂ ಚರಂಡಿ, ರಸ್ತೆ, ಕೆರೆಕಟ್ಟೆ ಸ್ವಚವಾಗಿ ಇಟ್ಟುಕೊಳ್ಳುವ ಜಾಗೃತಿ ಮೂಡಿಸಬೇಕಿದೆ. ಪಂಚಾಯಿತಿ ಮೂಲಕ ಕೂಡಾ ಸ್ವಚ್ಛತೆ ನಿರಂತರ ನಡೆಯಲಿದೆ. ನಮ್ಮ ಕಾರ್ಯಕ್ಕೆ ಸಾರ್ವಜನಿಕರು ಸಹಕಾರ ನೀಡಿದರೆ ಉತ್ತಮ ಪರಿಸರದ ಗ್ರಾಮ ನಿರ್ಮಾಣ ಆಗಲಿದೆ. ಈ ನಿಟ್ಟಿನಲ್ಲಿ ಮಕ್ಕಳಿಗೆ ಜಾಗೃತಿ ಮೂಡಿಸಿ ಮನೆಯ ಪರಿಸರ ಕಾಪಾಡಲು ತಿಳಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸ್ವಚ್ಛ ಭಾರತ್ ಮಿಶನ್ ಜಿಲ್ಲಾ ಸಮಾಲೋಚಕಿ ವಿನುತಾ, ಐಇಸಿ ತಾಲ್ಲೂಕು ಸಂಯೋಜಕ ರಾಘವೇಂದ್ರ, ಪಂಚಾಯಿತಿ ಸಿಬ್ಬಂದಿಗಳಾದ ಗೀತಾ, ಪುನೀತ್, ರಾಜಣ್ಣ ಇತರರು ಇದ್ದರು.