ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Assault Case: ಉಡುಪಿಯಲ್ಲಿ ಕಾಂಗ್ರೆಸ್‌ ಯುವ ಮುಖಂಡನ ಮೇಲೆ ಮಾರಕ ದಾಳಿ

ಮಣಿಪಾಲದ ಹೋಟೆಲ್‌ ಒಂದರಲ್ಲಿ ಊಟಕ್ಕೆ ತೆರಳಿದ್ದ ವೇಳೆ ಹೋಟೆಲ್‌ನಲ್ಲಿ ಶರತ್ ಕುಂದರ್ ಅವರ ಕೈ ಆರೋಪಿಗಳ ಪೈಕಿ ಒಬ್ಬರ ಕೈಗೆ ತಾಗಿದ ಹಿನ್ನೆಲೆಯಲ್ಲಿ ಮಾತಿನ ವಾಗ್ವಾದ ನಡೆದಿತ್ತು. ಬಳಿಕ ಹೋಟೆಲ್‌ನಲ್ಲಿ ನಡೆದ ಗಲಾಟೆಯ ಬಗ್ಗೆ ಮಾತನಾಡಲು ಪಿಪಿಸಿ ಕ್ರಾಸ್ ಬಳಿ ಬರುವಂತೆ ಕರೆಸಿ ಹಲ್ಲೆ ನಡೆಸಿದ್ದಾರೆ. ಜೀವ ಬೆದರಿಕೆ ಹಾಕಲಾಗಿದೆ.

ಉಡುಪಿಯಲ್ಲಿ ಕಾಂಗ್ರೆಸ್‌ ಯುವ ಮುಖಂಡನ ಮೇಲೆ ಮಾರಕ ದಾಳಿ

ಹಲ್ಲೆಗೀಡಾದ ಶರತ್‌ ಕುಂದರ್ -

ಹರೀಶ್‌ ಕೇರ
ಹರೀಶ್‌ ಕೇರ Feb 2, 2026 12:20 PM

ಉಡುಪಿ, ಫೆ. 02: ಕರಾವಳಿ ಜಿಲ್ಲೆ ಉಡುಪಿಯಲ್ಲಿ (Udupi news) ಮತ್ತೆ ಶಾಂತಿ ಕದಡಿದ್ದು, ತಲ್ವಾರ್​​ಗಳು ಝಳಪಿಸಿವೆ. ಕಾಂಗ್ರೆಸ್ ಯುವ ಮುಖಂಡನ ಮೇಲೆ ನಗರದ ಪಿಪಿಸಿ ಕ್ರಾಸ್ ಬಳಿ ಸಶಸ್ತ್ರ ದಾಳಿ (Assault case) ನಡೆಸಲಾಗಿದ್ದು, ಮಾತುಕತೆಗೆಂದು ಕರೆಸಿ ಅಟ್ಯಾಕ್​​ ಮಾಡಲಾಗಿದೆ ಎನ್ನಲಾಗಿದೆ. ಘಟನೆಯಲ್ಲಿ ಉಡುಪಿ ಕಾಂಗ್ರೆಸ್ ನ NSUI ಉಪಾಧ್ಯಕ್ಷ ಚಿಟ್ಟಾಡಿ ಬೈಲೂರು ನಿವಾಸಿ ಶರತ್ ಕುಂದರ್ (25) ಗಂಭೀರ ಗಾಯಗೊಂಡಿದ್ದು, 6-7 ದುಷ್ಕರ್ಮಿಗಳ ತಂಡದಿಂದ ದಾಳಿ ನಡೆದಿದೆ.

ಟಾಟಾ ಸಫಾರಿ, ಮಹೀಂದ್ರ ಥಾರ್ ವಾಹನಗಳಲ್ಲಿ ಬಂದ ಆರೋಪಿಗಳು, ತಲ್ವಾರಿನಿಂದ ದಾಳಿ ಮಾಡಿ ಕೊಲೆ ಯತ್ನ ನಡೆಸಿದ್ದಾರೆ. ಜೊತೆಗೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ. ಶರತ್ ಕುಂದರ್ ಜ.30 ರಂದು ಸಂಜೆ 9 ಗಂಟೆ ಸುಮಾರಿಗೆ ಸ್ನೇಹಿತನ ಗ್ರಾಂಡ್ ವಿಟಾರಾ ಕಾರಿನಲ್ಲಿ ಮಣಿಪಾಲದ ಹೋಟೆಲ್‌ಗೆ ಊಟಕ್ಕೆ ತೆರಳಿದ್ದರು. ಈ ವೇಳೆ ಹೋಟೆಲ್‌ನಲ್ಲಿ ಶರತ್ ಕುಂದರ್ ಅವರ ಕೈ ಆರೋಪಿಗಳ ಪೈಕಿ ಒಬ್ಬರ ಕೈಗೆ ತಾಗಿದ ಹಿನ್ನೆಲೆಯಲ್ಲಿ ಮಾತಿನ ವಾಗ್ವಾದ ನಡೆದಿತ್ತು.

ಬಳಿಕ ಮನೆಗೆ ಹೋಗಲು ಕಲ್ಸಂಕ ಬಳಿ ತಲುಪುವಾಗ ಅಕ್ಷತ್ ಪೈ ಎಂಬಾತ ಫೋನ್ ಮಾಡಿ ಹೋಟೆಲ್‌ನಲ್ಲಿ ನಡೆದ ಗಲಾಟೆಯ ಬಗ್ಗೆ ಮಾತನಾಡಲು ಪಿಪಿಸಿ ಕ್ರಾಸ್ ಬಳಿ ಬರುವಂತೆ ತಿಳಿಸಿದ್ದಾನೆ. ಅದರಂತೆ ಶರತ್ ಕುಂದರ್ ಹಾಗೂ ಸ್ನೇಹಿತರಾದ ಧ್ರುವಾ, ಸಿಲಾನ್ ಗಗನ್, ರೋಹಿತ್ ಜೊತೆಗೆ ಪಿಪಿಸಿ ಕ್ರಾಸ್ ಸಮೀಪದ ರಸ್ತೆ ಬದಿಯಲ್ಲಿ ನಿಂತು ಮಾತನಾಡುತ್ತಿದ್ದರು. ಆಗ ರಾತ್ರಿ 11.50ರ ಸುಮಾರಿಗೆ ಟಾಟಾ ಸಫಾರಿ ಹಾಗೂ ಮಹೀಂದ್ರ ಥಾರ್ ವಾಹನಗಳಲ್ಲಿ ಬಂದ ಅಕ್ಷತ್ ಪ್ರೈ, ಶಶಾಂಕ್, ರಾಧಾಕೃಷ್ಣ ಜನರಲ್ ಸ್ಟೋರ್‌ನ ಮಾಲಕ ಸೇರಿದಂತೆ ಇನ್ನೂ 6-7 ಮಂದಿ ಏಕಾಏಕಿ ವಾಹನಗಳಿಂದ ಇಳಿದು ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

Haveri News: ವರದಕ್ಷಿಣೆಗಾಗಿ ಗರ್ಭಿಣಿ ಪತ್ನಿ ಮೇಲೆ ಹಲ್ಲೆ, ಅಬಾರ್ಷನ್‌; ಮನೆಯವರ ಕೊಲೆಗೂ ಯತ್ನಿಸಿದ ಧನದಾಹಿ ಪತಿ

ಆರೋಪಿಗಳು ತಲವಾರಿನಂತಹ ಆಯುಧ ಹಾಗೂ ಕಬ್ಬಿಣದ ಚಯರ್ ಬಳಸಿ ಕೊಲೆ ಮಾಡುವ ಉದ್ದೇಶದಿಂದ ಶರತ್ ಕುಂದರ್ ಮೇಲೆ ದಾಳಿ ನಡೆಸಿದ್ದು, ತಲೆಗೆ ಬೀಸಿದಾಗ ತಪ್ಪಿಸಿಕೊಳ್ಳಲು ಕೈಗಳನ್ನು ಮುಂದಿಟ್ಟ ಶರತ್ ಅವರಿಗೆ ಬಲ ಅಂಗೈ, ಮಧ್ಯ ಬೆರಳು ಹಾಗೂ ಎಡ ಕೈ ಮಣಿಕಟ್ಟು ಭಾಗದಲ್ಲಿ ಗಾಯಗಳಾಗಿವೆ. ಹಲ್ಲೆಯ ವೇಳೆ “ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ” ಎಂದು ಬೆದರಿಕೆ ಹಾಕಿರುವ ಬಗ್ಗೆ ದೂರಿನಲ್ಲಿ ತಿಳಿಸಿದ್ದಾರೆ. ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.