ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಅಂಜಲಿ ನಿಂಬಾಳ್ಕರ್ ದಾಖಲೆ ಬಿಡುಗಡೆ ಮಾಡಲಿ ಅಥವಾ ಕ್ಷಮೆ ಕೋರಲಿ: ಸದಾನಂದ ಭಟ್

ಎಐಸಿಸಿ(AICC) ಕಾರ್ಯದರ್ಶಿ ಅಂಜಲಿ ನಿಂಬಾಳ್ಕರ್(Anjali Nimbalkar) ಅವರು ಎಸ್‌ಐಆರ್ (SIR) ಕುರಿತು ಬಿಜೆಪಿ ವಿರುದ್ಧ ಮಾಡಿರುವ ಆರೋಪಗಳನ್ನು ಸಮರ್ಥಿಸಿಕೊಳ್ಳಲು ದಾಖಲೆಗಳನ್ನು ಬಿಡುಗಡೆ ಮಾಡಬೇಕು, ಇಲ್ಲವೇ ಬೇಷರತ್ ಕ್ಷಮೆ ಕೋರಬೇಕು ಎಂದು ಬಿಜೆಪಿ ಜಿಲ್ಲಾ ವಕ್ತಾರರಾದ ಸದಾನಂದ ಭಟ್ ನಿಡಗೋಡ್ ಆಗ್ರಹಿಸಿದ್ದಾರೆ

ಅಂಜಲಿ ನಿಂಬಾಳ್ಕರ್ ದಾಖಲೆ ಬಿಡುಗಡೆ ಮಾಡಲಿ ಅಥವಾ ಕ್ಷಮೆ ಕೋರಲಿ

-

Profile
Ashok Nayak Jul 21, 2026 1:20 PM

​ಶಿರಸಿ: ​ಎಐಸಿಸಿ(AICC) ಕಾರ್ಯದರ್ಶಿ ಅಂಜಲಿ ನಿಂಬಾಳ್ಕರ್(Anjali Nimbalkar) ಅವರು ಎಸ್‌ಐಆರ್ (SIR) ಕುರಿತು ಬಿಜೆಪಿ ವಿರುದ್ಧ ಮಾಡಿರುವ ಆರೋಪಗಳನ್ನು ಸಮರ್ಥಿಸಿಕೊಳ್ಳಲು ದಾಖಲೆಗಳನ್ನು ಬಿಡುಗಡೆ ಮಾಡಬೇಕು, ಇಲ್ಲವೇ ಬೇಷರತ್ ಕ್ಷಮೆ ಕೋರಬೇಕು ಎಂದು ಬಿಜೆಪಿ ಜಿಲ್ಲಾ ವಕ್ತಾರರಾದ ಸದಾನಂದ ಭಟ್ ನಿಡಗೋಡ್ ಆಗ್ರಹಿಸಿದ್ದಾರೆ.

ಪಕ್ಷದ ವತಿಯಿಂದ ಬಿಡುಗಡೆ ಮಾಡಲಾದ ಪ್ರಕಟಣೆಯಲ್ಲಿ, ವಿನಾಕಾರಣ ಪ್ರಚಾರಕ್ಕೋಸ್ಕರ ಬಿಜೆಪಿಯ ಬಗ್ಗೆ ಆಪಾದನೆ ಮಾಡಿ ಹಿಟ್ ಅಂಡ್ ರನ್ ಮಾಡುವುದು ಸರಿಯಲ್ಲ ಎಂದು ತೀವ್ರವಾಗಿ ಖಂಡಿಸಿದ್ದಾರೆ.

​ದೇಶದ ಸ್ವಾಯತ್ತ ಸಂಸ್ಥೆಯಾದ ಚುನಾವಣಾ ಆಯೋಗವು ಎಸ್‌ಐಆರ್ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸುತ್ತಿರುವುದನ್ನು ಸುಪ್ರೀಂಕೋರ್ಟ್ ಪರಿಶೀಲಿಸಿ ಸಮ್ಮತಿಸಿದೆ. ಹೀಗಿರುವಾಗ ರಾಜಕೀಯ ಉದ್ದೇಶಗಳಿಗಾಗಿ ಜನರಲ್ಲಿ ಗೊಂದಲ ಮೂಡಿಸುವುದನ್ನು ಕಾಂಗ್ರೆಸ್ ಕೈಬಿಡಬೇಕು. ಬಿಜೆಪಿ ದೇಶ ಮತ್ತು ಹಲವಾರು ರಾಜ್ಯಗಳಲ್ಲಿ ಜನರ ವಿಶ್ವಾಸದಿಂದ ಆಡಳಿತಕ್ಕೆ ಬಂದಿದೆಯೇ ಹೊರತು ಯಾವುದೇ ವಾಮಮಾರ್ಗದಿಂದ ಅಲ್ಲ. ಇದಕ್ಕೆ ಕೇರಳ ಮತ್ತು ತಮಿಳುನಾಡು ಚುನಾವಣೆ ಗಳು ಸಾಕ್ಷಿಯಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Sirsi News: ಶಿರಸಿಯಲ್ಲಿ ಆಘಾತಕಾರಿ ಘಟನೆ; ಹಾಸ್ಟೆಲ್‌ನಲ್ಲಿ ಮಗುವಿಗೆ ಜನ್ಮ ನೀಡಿದ 9ನೇ ತರಗತಿ ಬಾಲಕಿ!

​ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದಿದ್ದರೆ ನಾಳೆ ಅವರು ಭಾರತದ ನಾಗರಿಕರಲ್ಲ ಎನ್ನಬಹುದು ಎಂಬ ಅಂಜಲಿ ನಿಂಬಾಳ್ಕರ್ ಅವರ ಹೇಳಿಕೆಯು, ನಾಗರಿಕತ್ವ ದೃಢೀಕರಿಸಲು ಯಾವ ದಾಖಲೆಗಳು ಅಗತ್ಯ ಎಂಬ ಮಾಹಿತಿಯಿಲ್ಲದೆ ಮಾತನಾಡಿರುವಂತೆ ಇದೆ. ಅಕ್ರಮ ವಲಸಿಗರ ಒಳನುಸುಳುವಿಕೆಗೆ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಕಾರಣ ಎಂದು ಪ್ರಶ್ನಿಸುವವರು, ಹಿಂದೆ ಕಾಂಗ್ರೆಸ್ ಅಧಿಕಾರ ದಲ್ಲಿದ್ದಾಗ ಅಥವಾ ಗಡಿ ರಾಜ್ಯಗಳಲ್ಲಿ ಒಳನುಸುಳುಕೋರರನ್ನು ತಡೆಯಲು ಯಾವ ಕ್ರಮ ಕೈಗೊಂಡಿದ್ದರು ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಒತ್ತಾಯಿಸಿದ್ದಾರೆ.

​ಕರ್ನಾಟಕದಲ್ಲಿ ನೆಲೆಸಿರುವ ಜನರಿಗೆ ಎಸ್‌ಐಆರ್ ಉದ್ದೇಶದಿಂದಲೇ ರಾಜ್ಯ ಸರ್ಕಾರ ಪಿಆರ್‌ಸಿ ನೀಡುತ್ತಿರುವುದು ಸಾಂವಿಧಾನಿಕವಾಗಿ ಎಷ್ಟು ಸರಿ? ಯಾವುದೇ ಅರ್ಹ ಭಾರತೀಯರ ಮತದಾನದ ಹಕ್ಕು ವಂಚಿತವಾಗದಂತೆ ನೋಡಿಕೊಳ್ಳುತ್ತಿರುವಾಗ, ಮತದಾರರ ಪಟ್ಟಿಗೆ ಅಕ್ರಮವಾಗಿ ಹೆಸರು ಸೇರಿಸಲು ಕಾಂಗ್ರೆಸ್ ಜಾರಿಗೆ ತರುತ್ತಿರುವ ಪಿಆರ್‌ಸಿ ಕಾರಣವಾಗಬಹುದು. ರಾಜ್ಯ ಕಾಂಗ್ರೆಸ್ ಸರ್ಕಾರವು ತನ್ನ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ನೀಡಲಾಗದೆ, ಇದರ ಫಲಾನುಭವಿ ಗಳನ್ನು ಕಡಿತಗೊಳಿಸುವ ಉದ್ದೇಶದಿಂದಲೇ ಮತದಾರರ ಪಟ್ಟಿಗೆ ಜೋಡಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದೆ ಎಂಬುದು ಜನರಿಗೆ ತಿಳಿದಿದೆ ಎಂದು ಆರೋಪಿಸಿದ್ದಾರೆ.

​ಲೋಕಸಭೆ ಚುನಾವಣೆ ನಂತರ ಉತ್ತರ ಕನ್ನಡಕ್ಕೆ ಬಂದು, ಕಾಂಗ್ರೆಸ್ ನಾಯಕರನ್ನು ಮೆಚ್ಚಿಸಲು ಮತ್ತು ತಮ್ಮ ಪಕ್ಷದ ಸ್ಥಾನ ಗಟ್ಟಿಗೊಳಿಸಿಕೊಳ್ಳಲು ಅಂಜಲಿ ನಿಂಬಾಳ್ಕರ್ ಈ ರೀತಿಯ ವಿನಾಕಾರಣ ಹೇಳಿಕೆ ನೀಡುತ್ತಿದ್ದಾರೆ. ಪ್ರತಿಯೊಂದು ಬೂತ್‌ನಲ್ಲಿಯೂ ಯಾವುದೇ ಅರ್ಹ ಮತದಾರರ ಹೆಸರು ಪಟ್ಟಿಯಿಂದ ತಪ್ಪಿಹೋಗದಂತೆ ಬಿಜೆಪಿ ತನ್ನ ಕಾರ್ಯಕರ್ತರ ಸಂಘಟನೆಯ ಮೂಲಕ ಹಗಲಿರುಳು ಪ್ರಯತ್ನಿಸುತ್ತಿದೆ ಎಂಬುದನ್ನು ಕಾಂಗ್ರೆಸ್‌ನ ಎಸ್‌ಐಆರ್ ಉಸ್ತುವಾರಿಗಳು ಗಮನಿಸಲಿ ಎಂದು ಸದಾನಂದ ಭಟ್ ತಿಳಿಸಿದ್ದಾರೆ.