ಚಾಟ್‌ಜಿಪಿಟಿ ಮತ್ತು ಜೆಮಿನಿಯನ್ನೇ ಹಿಂದಿಕ್ಕಿದ ಬೆಂಗಳೂರಿನ 'ಸರ್ವಂ ಎಐ'; ಸಂಸ್ಥಾಪಕ 'ಪ್ರತ್ಯುಶ್ ಕುಮಾರ್' ಕಹಾನಿ ಏನು ಗೊತ್ತಾ?
ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಸ್ಪರ್ಧೆ ಹೆಚ್ಚುತ್ತಿದ್ದು, ಈ ನಡುವೆ ಬೆಂಗಳೂರಿನ ಮೂಲದ ‘ಸರ್ವಂ ಎಐ ಸ್ಟಾರ್ಟ್‌ಅಪ್ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ. ಅಮೆರಿಕಾದ ಓಪನ್‌ಎಐಯ ‘ಚಾಟ್‌ಜಿಪಿಟಿ (ChatGPT)’ ಹಾಗೂ ಗೂಗಲ್‌ನ ‘ಜೆಮಿನಿ (Gemini)’ ಮಾದರಿಗಳಿಗೆ ಸಮಾನವಾಗಿ ಕೆಲ ಪ್ರಮುಖ ಮಾನದಂಡಗಳಲ್ಲಿ ಅದಕ್ಕಿಂತಲೂ ಮೇಲುಗೈ ಸಾಧಿಸಿರುವುದಾಗಿ ವರದಿಯಾಗಿದೆ. ಈ ಸಂಸ್ಥೆಯ ಸ್ಥಾಪಕ ಹಾಗೂ ಸಿಇಒ ಪ್ರತ್ಯುಶ್ ಕುಮಾರ್, ಭಾರತೀಯ ಭಾಷಾ ವೈವಿಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಅತ್ಯಾಧುನಿಕ ಎಐ ಮಾದರಿಗಳನ್ನು ರೂಪಿಸುವಲ್ಲಿ ಮುಂಚೂಣಿಯಲ್ಲಿದ್ದಾರೆ.
ಪ್ರತ್ಯುಶ್ ಕುಮಾರ್ -
ಬೆಂಗಳೂರು: ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಎಐ ತಂತ್ರಜ್ಞಾನದ ಜಗತ್ತಿನಲ್ಲಿ ಬೆಂಗಳೂರು (Bengaluru) ಮೂಲದ 'ಸರ್ವಂ ಎಐ (Sarvam AI )' ಎಂಬ ಭಾರತೀಯ ಸ್ಟಾರ್ಟ್‌ಅಪ್ ಜಾಗತಿಕ ಮಟ್ಟದ ಓಪನ್-ಎಐನ ಚಾಟ್‌ಜಿಪಿಟಿ (OpenAI's ChatGPT) ಮತ್ತು ಗೂಗಲ್‌ನ ಜೆಮಿನಿ (Google Gemini )ಯಂತಹ ದೈತ್ಯ ಸಂಸ್ಥೆಗಳನ್ನು ಪ್ರಮುಖ ಮಾನದಂಡಗಳಲ್ಲಿ ಹಿಂದಿಕ್ಕುವ ಮೂಲಕ ಹೊಸ ಸಂಚಲನ ಮೂಡಿಸಿದೆ. ಈ ಕ್ರಾಂತಿಕಾರಿ ಸಂಸ್ಥೆಯ ನೇತೃತ್ವವನ್ನು ಉದ್ಯಮಿ ಪ್ರತ್ಯುಶ್ ಕುಮಾರ್ (Pratyush Kumar) ವಹಿಸಿದ್ದು, ಅವರು ಭಾರತದ ವೈವಿಧ್ಯಮಯ ಭಾಷಾ ಪರಿಸರಕ್ಕೆ ತಕ್ಕಂತೆ ಅತ್ಯಾಧುನಿಕ ಎಐ ಮಾದರಿಗಳನ್ನು ಅಭಿವೃದ್ಧಿಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರತ್ಯುಶ್ ಕುಮಾರ್ ಶೈಕ್ಷಣಿಕ ಜೀವನ
ಭಾರತದಲ್ಲಿ ಜನಿಸಿ ಬೆಳೆದ ಪ್ರತ್ಯುಶ್ ಕುಮಾರ್ ಅವರು ಐಐಟಿ ಬಾಂಬೆಯಿಂದ ಬಿ.ಟೆಕ್ ಪದವಿ ಮತ್ತು ಸ್ವಿಟ್ಜರ್‌ಲ್ಯಾಂಡ್‌ನ ಇಟಿಎಚ್ ಜ್ಯೂರಿಚ್‌ನಿಂದ ಕಂಪ್ಯೂಟರ್ ಇಂಜಿನಿಯರಿಂಗ್‌ನಲ್ಲಿ ಪಿಎಚ್‌ಡಿ ಪಡೆದಿದ್ದು, ಶೈಕ್ಷಣಿಕವಾಗಿ ಅತ್ಯಂತ ಬಲಿಷ್ಠ ಹಿನ್ನೆಲೆಯನ್ನು ಹೊಂದಿದ್ದಾರೆ.
ವೃತ್ತಿ ಅನುಭವ:
ಮೈಕ್ರೋಸಾಫ್ಟ್ ಮತ್ತು ಐಬಿಎಂ ರಿಸರ್ಚ್‌ನಲ್ಲಿ 15 ವರ್ಷಗಳ ಅನುಭವ ಹೊಂದಿರುವ ಇವರು, ಐಐಟಿ ಮದ್ರಾಸ್‌ನಲ್ಲಿ ಗೌರವ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಭಾರತೀಯ ಭಾಷೆಗಳಿಗಾಗಿ 'AI4Bharat' ಸಂಶೋಧನಾ ಕೇಂದ್ರ ಮತ್ತು ಕೈಗೆಟುಕುವ ದರದಲ್ಲಿ ಶಿಕ್ಷಣ ನೀಡುವ 'PadhAI' ವೇದಿಕೆಯನ್ನು ಇವರು ಸ್ಥಾಪಿಸಿದ್ದರು.
Murder Case: ಪತ್ನಿಯನ್ನು ಕೊಂದು ಮನೆಯೊಳಗೇ ಹೂತುಹಾಕಿ ನಾಪತ್ತೆ ಕಥೆ ಕಟ್ಟಿದವನು ಅಂದರ್!
ಸರ್ವಂ ಎಐ (Sarvam AI) ಸಾಧನೆ
ಜುಲೈ 2023 ರಲ್ಲಿ ಅವರು ವಿವೇಕ್ ರಾಘವನ್ ಅವರೊಂದಿಗೆ ಸೇರಿ ಸರ್ವಂ ಎಐ ಸಂಸ್ಥೆಯನ್ನು ಸ್ಥಾಪಿಸಿದರು. ಈ ಸಂಸ್ಥೆಯು ಅಭಿವೃದ್ಧಿಪಡಿಸಿರುವ 'ವಿಷನ್ ಓಸಿಆರ್' ಉಪಕರಣವು ಗೂಗಲ್ ಜೆಮಿನಿಗಿಂತಲೂ ಹೆಚ್ಚಿನ ನಿಖರತೆಯನ್ನು ತೋರಿದ್ದು, ಸಂಕೀರ್ಣ ಗಣಿತ ಸೂತ್ರಗಳನ್ನು ಗುರುತಿಸುವಲ್ಲಿ ಮುಂಚೂಣಿಯಲ್ಲಿದೆ.
ಜಾಗತಿಕ ಮಟ್ಟದ ಯಶಸ್ಸು:
ವಿಷನ್ ಓಸಿಆರ್ (Vision OCR): ಈ ಉಪಕರಣವು ಗೂಗಲ್‌ನ ಜೆಮಿನಿ 3 ಪ್ರೊ ಮತ್ತು ಚಾಟ್‌ಜಿಪಿಟಿಗಿಂತ ಹೆಚ್ಚಿನ ನಿಖರತೆಯನ್ನು (84.3%) ದಾಖಲಿಸಿದೆ.
ಬುಲ್ ಬುಲ್ V3: 11 ಭಾರತೀಯ ಭಾಷೆಗಳಲ್ಲಿ ಅತ್ಯಂತ ನೈಸರ್ಗಿಕವಾಗಿ ಧ್ವನಿ ನೀಡುವ ಈ ತಂತ್ರಜ್ಞಾನವು ಜಾಗತಿಕ ಸ್ಪರ್ಧಿಗಳಿಗಿಂತ ಕಡಿಮೆ ದರದಲ್ಲಿ ಲಭ್ಯವಿದೆ.
ಶುಕ (Shuka): ಪ್ರಾದೇಶಿಕ ಭಾಷೆಗಳಲ್ಲಿ ಕಾರ್ಯನಿರ್ವಹಿಸುವ ಈ ವಾಯ್ಸ್ ಮಾಡೆಲ್ ಇತರ ಮಾದರಿಗಳಿಗಿಂತ 6 ಪಟ್ಟು ವೇಗವಾಗಿದೆ.
ಮುಂದಿನ ಗುರಿ
ಸರ್ವಂ ಎಐ ಈಗಾಗಲೇ 53 ಮಿಲಿಯನ್ ಡಾಲರ್ ಧನಸಹಾಯ ಸಂಗ್ರಹಿಸಿದ್ದು, ಎನ್ವಿಡಿಯಾ (Nvidia) ಸಂಸ್ಥೆಯೊಂದಿಗೆ ಕೈಜೋಡಿಸಿದೆ. ದೇಶದ ಎಲ್ಲಾ 22 ಅಧಿಕೃತ ಭಾಷೆಗಳಿಗೂ ಎಐ ಸೇವೆಯನ್ನು ವಿಸ್ತರಿಸುವುದು ಮತ್ತು ಗ್ರಾಮೀಣ ಭಾಗದ ಜನರಿಗೆ ಕೇವಲ '1 ರೂಪಾಯಿಗೆ' ಎಐ ವಾಯ್ಸ್ ಏಜೆಂಟ್ ಸೇವೆ ಒದಗಿಸುವುದು ಇವರ ಮುಖ್ಯ ಗುರಿಯಾಗಿದೆ.