Sirsi News: ಕೈಗಾ ಅಣುವಿದ್ಯುತ್ ಸ್ಥಾವರದ ಘಟಕ 1 ಅಣು ವಿದ್ಯುತ್ ಸ್ಥಾವರಕ್ಕೆ ಶೀತಕ ಕೊಳವೆ ಮರು ಅಳವಡಿಸುವ ಕಾರಣದಿಂದ ಸ್ಥಗಿತ
ಸ್ಥಾವರದ ಮೊದಲ ಘಟಕದಲ್ಲಿ ಅಣು ಶಕ್ತಿ ಉತ್ಪಾದನೆಗೆ ಯುರೇನಿಯಂ ಬಂಡಲ್‌ಗಳನ್ನು ರವಾನಿಸುವ ಮತ್ತು ಸ್ಥಾವರದಲ್ಲಿ ತಾಪಮಾನ ನಿಯಂತ್ರಿಸುವ 306 ಕೊಳವೆಗಳಿವೆ. ಅಧಿಕ ತಾಪಮಾನದಿಂದ ಅವು ಬಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ನಿಗದಿತ ಅವಧಿಗೆ ಅವು ಗಳನ್ನು ಬದಲಿಸಿ, ಹೊಸದು ಅಳವಡಿಸಬೇಕಿದೆ. ಪ್ರತಿ 25 ರಿಂದ 30 ವರ್ಷಕ್ಕೊಮ್ಮೆ ಈ ಪ್ರಕ್ರಿಯೆ ನಡೆಯುತ್ತದೆ.

ಶಿರಸಿ: ವಿಶ್ವಮಟ್ಟದಲ್ಲಿ ಹೆಸರಾಗಿದ್ದ ಕೈಗಾ ಅಣುವಿದ್ಯುತ್ ಸ್ಥಾವರದ ಒಂದು ಘಟಕ ತನ್ನ ಕೆಲಸವನ್ನು ಸ್ಥಗಿತಗೊಳಿಸಿದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕೈಗಾ ಅಣು ಸ್ಥಾವರದಲ್ಲಿ ಸತತ 27 ವರ್ಷಗಳಿಂದ ವಿದ್ಯುತ್ ಉತ್ಪಾದನೆ ಮಾಡುತಿದ್ದ ಘಟಕ1 ತನ್ನ ಕಾರ್ಯಚಟುವಟಿಕೆಯನ್ನು ಸ್ಥಗಿತ ಮಾಡಿದ್ದು, 2018ರ ಡಿಸೆಂಬರ್ 10 ರಂದು ಸತತ 962 ದಿನ ವಿದ್ಯುತ್ ಉತ್ಪಾದಿಸುವ ಮೂಲಕ ಇಂಗ್ಲೆಂಡ್‌ನ ಹೇಶಮ್ ಅಣುಸ್ಥಾವರದ ದಾಖಲೆ ಯನ್ನು ಅಳಿಸಿ ವಿಶ್ವ ದಾಖಲೆ ಬರೆದಿದ್ದ ಈ ಘಟಕ 1 ಅಣು ವಿದ್ಯುತ್ ಸ್ಥಾವರಕ್ಕೆ ಶೀತಕ ಕೊಳವೆ ಮರು ಅಳವಡಿಸುವ ಕಾರಣದಿಂದ ಸ್ಥಗಿತ ಮಾಡಲಾಗಿದೆ.
ಸ್ಥಾವರದ ಮೊದಲ ಘಟಕದಲ್ಲಿ ಅಣು ಶಕ್ತಿ ಉತ್ಪಾದನೆಗೆ ಯುರೇನಿಯಂ ಬಂಡಲ್‌ಗಳನ್ನು ರವಾನಿಸುವ ಮತ್ತು ಸ್ಥಾವರದಲ್ಲಿ ತಾಪಮಾನ ನಿಯಂತ್ರಿಸುವ 306 ಕೊಳವೆಗಳಿವೆ. ಅಧಿಕ ತಾಪಮಾನದಿಂದ ಅವು ಬಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ನಿಗದಿತ ಅವಧಿಗೆ ಅವು ಗಳನ್ನು ಬದಲಿಸಿ, ಹೊಸದು ಅಳವಡಿಸಬೇಕಿದೆ. ಪ್ರತಿ 25 ರಿಂದ 30 ವರ್ಷಕ್ಕೊಮ್ಮೆ ಈ ಪ್ರಕ್ರಿಯೆ ನಡೆಯುತ್ತದೆ.
ಸ್ಥಾವರದಲ್ಲಿ ಶೀತಕ ಕೊಳವೆ ಗಳ ಜೊತೆಗೆ ಅದರಲ್ಲಿನ ಇನ್ನಿತರ ಯಂತ್ರೋಪಕರಣ ಪರಿಶೀಲಿಸಿ ದುರಸ್ತಿ ಪಡಿಸಲಾಗು ತ್ತದೆ. ಪ್ರಕ್ರಿಯೆ ಪೂರ್ಣಗೊಳ್ಳಲು ಒಂದು ವರ್ಷಕ್ಕಿಂತ ಹೆಚ್ಚು ಅವಧಿ ತಗಲುತಿದ್ದು ಇನ್ನು ಒಂದು ವರ್ಷಗಳ ಕಾಲ 220 ಮೆಗಾ ವ್ಯಾಟ್ ಉತ್ಪಾದಿಸುತಿದ್ದ ಈ ಘಟಕ ಉತ್ಪಾದನೆ ಕೊರತೆ ಎದುರಿಸಲಿದೆ.
ಸದ್ಯ ಕೈಗಾದಲ್ಲಿ ನಾಲ್ಕು ಅಣು ವಿದ್ಯುತ್ ಘಟಕಗಳಿದ್ದು, 5 ಮತ್ತು 6 ನೇ ಘಟಕಗಳು ನಿರ್ಮಾಣ ಹಂತದಲ್ಲಿ ಪರಿಸರವಾದಿಗಳ ವಿರೋಧ ಎದುರಿಸುತ್ತಿದೆ.