Yoga Camp: ಮೂಳೆ, ಸ್ನಾಯು ದೃಢತೆ ಕಡೆಗಣಿಸಬೇಡಿ: 87ನೇ ವಿಶೇಷ ಯೋಗ ಶಿಬಿರದಲ್ಲಿ ಡಾ.ಎಸ್.ಬಿ.ಹಂದ್ರಾಳ ಸಲಹೆ
ನಗರದ ಫ್ರೀಡಂ ಯೋಗ ಪಾರ್ಕ್ನಲ್ಲಿ ಭಾನುವಾರ ಬೆಳಿಗ್ಗೆ ತಮ್ಮ 87ನೇ ವಿಶೇಷ ಯೋಗ ಶಿಬಿರದಲ್ಲಿ ಮಾತನಾಡಿದರು. ಪ್ರತಿನಿತ್ಯ ಕನಿಷ್ಠ ಒಂದೂವರೆ ಗಂಟೆಯನ್ನು ನಮ್ಮ ದೇಹವನ್ನು ಸುಸ್ಥಿತಿಯಲ್ಲಿ ಇಡುವುದಕ್ಕೆ ಮೀಸಲಿಡಬೇಕು. ಮೂಳೆ, ಸ್ನಾಯುಗಳ ಕೆಲಸ, ಸಾಮರ್ಥ್ಯಕ್ಕೆ ತಕ್ಕಂತೆ ಅವುಗಳ ಬಿಗಿತ ಸಡಿಲಗೊಳಿಸುವ ಮತ್ತು ಅವುಗಳನ್ನು ಸುಸ್ಥಿತಿಯಲ್ಲಿ ಇರಿಸುವ ಟ್ವಿಸ್ಟಿಂಗ್, ಪ್ಲೆಕ್ಸಿಬಿಲಿಟಿ ಆಸನಗಳನ್ನು ಮಾಡುವುದನ್ನು ಕಲಿಯಬೇಕು, ಇದರಿಂದ ಇಡೀ ದಿನ ಉಲ್ಲಸಿತವಾಗಿ ಇರಲು ಸಾಧ್ಯವಾಗುತ್ತದೆ ಎಂದು ಹೇಳಿದರು.
-
ಹೊಸಪೇಟೆ: ನಮ್ಮ ದೇಹದಲ್ಲಿ 206 ಮೂಳೆಗಳಿದ್ದು, ಅದಕ್ಕೆ ಹೊಂದಿಕೊಂಡಂತೆ ಸ್ನಾಯುಗಳು ಇವೆ. ಇವುಗಳ ಸದೃಢತೆಗೆ ಯೋಗ ಸಹಕಾರಿ ಎಂದು ಪತಂಜಲಿ(Pathanjali) ಯೋಗ ಸಮಿತಿಯ ಗದಗ, ವಿಜಯನಗರ ಜಿಲ್ಲೆಗಳ ಉಸ್ತುವಾರಿ ಡಾ.ಎಸ್.ಬಿ.ಹಂದ್ರಾಳ ಹೇಳಿದರು.
ನಗರದ ಫ್ರೀಡಂ ಯೋಗ ಪಾರ್ಕ್ನಲ್ಲಿ ಭಾನುವಾರ ಬೆಳಿಗ್ಗೆ ತಮ್ಮ 87ನೇ ವಿಶೇಷ ಯೋಗ ಶಿಬಿರದಲ್ಲಿ ಮಾತನಾಡಿದರು. ಪ್ರತಿನಿತ್ಯ ಕನಿಷ್ಠ ಒಂದೂವರೆ ಗಂಟೆಯನ್ನು ನಮ್ಮ ದೇಹವನ್ನು ಸುಸ್ಥಿತಿಯಲ್ಲಿ ಇಡುವುದಕ್ಕೆ ಮೀಸಲಿಡಬೇಕು. ಮೂಳೆ, ಸ್ನಾಯುಗಳ ಕೆಲಸ, ಸಾಮರ್ಥ್ಯಕ್ಕೆ ತಕ್ಕಂತೆ ಅವುಗಳ ಬಿಗಿತ ಸಡಿಲಗೊಳಿಸುವ ಮತ್ತು ಅವುಗಳನ್ನು ಸುಸ್ಥಿತಿಯಲ್ಲಿ ಇರಿಸುವ ಟ್ವಿಸ್ಟಿಂಗ್, ಪ್ಲೆಕ್ಸಿಬಿಲಿಟಿ ಆಸನಗಳನ್ನು ಮಾಡುವುದನ್ನು ಕಲಿಯಬೇಕು, ಇದರಿಂದ ಇಡೀ ದಿನ ಉಲ್ಲಸಿತವಾಗಿ ಇರಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ: 12th International Yoga Day: ಯೋಗವು ದೇಹ ಮತ್ತು ಮನಸ್ಸಿನ ಸಮತೋಲನ ಕಾಪಾಡುವ ಅತ್ಯುತ್ತಮ ಸಾಧನ : ಯೋಗಗುರು ಶ್ರೀಮತಿ ಸುನೀತಾ
ಅಷ್ಟಾಂಗ ಯೋಗದ ಐದನೇ ಮೆಟ್ಟಿಲಾದ ಪ್ರತ್ಯಾಹಾರದ ರಹಸ್ಯ, ಅದರ ಮಹತ್ವ, ಮೂಗಿನಲ್ಲಿ ಅಡಗಿರುವ ರಹಸ್ಯಮಯ ಶಕ್ತಿಕೇಂದ್ರದ ಚಮತ್ಕಾರ, ಮಾನವನ ದೇಹದಲ್ಲಿರುವ 72 ಸಾವಿರ ನಾಡಿಗಳ ಕಾರ್ಯವೈಖರಿ ಮತ್ತು ಅವುಗಳ ಮಹತ್ವವನ್ನು ವಿವರಿಸಿದರು.
ಆರಂಭದಲ್ಲಿ 15 ನಿಮಿಷಗಳ ಕಾಲ ಕೃತಜ್ಞತೆಯ ಧ್ಯಾನದ ಬಗ್ಗೆ ಪ್ರಾತ್ಯಕ್ಷಿಕೆ ಸಹಿತ ಮಾಹಿತಿ ನೀಡಿದ ಅವರು, ಸೂರ್ಯನಮಸ್ಕಾರದಲ್ಲೇ ಹಲವು ವಿಶೇಷ ಭಂಗಿಗಳನ್ನು ಪರಿಚಯಿಸುವ ಮೂಲಕ ಮೂಳೆ, ಸ್ನಾಯುಗಳ ದೃಢತೆಯನ್ನು ಕಾಪಾಡುವ ವಿಧಾನ ಹೇಳಿಕೊಟ್ಟರು.
ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ತಿಪ್ಪೇಸ್ವಾಮಿ ವಿಶೇಷ ಆಹ್ವಾನಿತರಾಗಿದ್ದರು. ಮಕ್ಕಳ ದಿನಾಚರಣೆ ಪ್ರಯುಕ್ತ ಯೋಗಾಭ್ಯಾಸದಲ್ಲಿ ತೊಡಗಿರುವ ಹಲವಾರು ವಿದ್ಯಾರ್ಥಿಗಳಿಗೆ ಸಿಹಿ ನೀಡಿ ಪ್ರೋತ್ಸಾಹಿಸಲಾಯಿತು.
ಪತಂಜಲಿ ಯೋಗ ಸಮಿತಿಯ ಜಿಲ್ಲಾ ಪ್ರಭಾರಿ ಇ.ಸತ್ಯಪ್ಪ, ಯುವ ಭಾರತ ಜಿಲ್ಲಾ ಪ್ರಭಾರಿ ಶ್ರೀಧರ್, ಸಹ ಪ್ರಭಾರಿ ರಾಜ್ಯಭಕ್ಷಿ , ಮಾಧ್ಯಮ ಪ್ರಭಾರಿ ಅನಂತ ಜೋಶಿ, ಮಹಿಳಾ ಪ್ರಭಾರಿ ಕವಿತಾ ಆನಂದ್, ಸಹಪ್ರಭಾರಿ ಗೀತಾ ಮಹಾರಾಜ್ ಫ್ರೀಡಂ ಪಾರ್ಕ್ ಸಂಚಾಲಕ ಶ್ರೀರಾಮ, ಹಿರಿಯ ಯೋಗ ಸಾಧಕರಾದ ಅಶೋಕ ಚಿತ್ರಗಾರ, ಪ್ರಮೀಳಮ್ಮ, ಶಿವಮೂರ್ತಿ, ಕಟ್ಟಾ ನಂಜಪ್ಪ, ಶ್ರೀನಿವಾಸ್ ಮಂಚಿಕಟ್ಟಿ, ಭಾಗ್ಯವೋಲಿ, ಮೋಟ್ಲ ನಾಯ್ಕ, ಚಿಕ್ಕ ಜೋಗಿಹಳ್ಳಿಯ ಸಾಧಕ ಶಿವಕುಮಾರ್ ಮುಕ್ಕುಂದಿ ಸೇರಿದಂತೆ ವಿವಿಧ ಕೇಂದ್ರಗಳ ಸಂಚಾಲಕರು ಇದ್ದರು.