ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕನಕದಾಸರ ಸಂದೇಶ ಸರ್ವಕಾಲಿಕ ಪ್ರಸ್ತುತ: ಜಿ.ಯರ್ರಿಸ್ವಾಮಿ

ಜಾತಿಯ ಗೊಂದಲಗಳು ಮೇಲು-ಕೀಳು ಭಾವನೆ ನಮ್ಮ ಅಹಂಕಾರಗಳ ಕುರಿತು "ಕುಲ ಕುಲ ಕುಲವೆಂದು ಬಡಿದಾಡಬೇಡಿ ನಿಮ್ಮ ಕುಲದ ನೆಲೆ ಏನಾದರೂ ಬಲ್ಲಿರಾ" ಎಂಬ ಕೀರ್ತನೆಯು ಸೇರಿದಂತೆ ಎಲ್ಲ ಕೀರ್ತನೆಗಳು ಸಾಮಾಜಿಕ ಹುಡುಗನ ತೊಡೆದು ಹಾಕುವ ನೆರಹಂಕಾರ ಭಾವನೆಯ ಮನಸ್ಸನ್ನು ರೂಪಿಸುವ ಸಂದೇಶಗಳನ್ನು ತಿಳಿಸಿದ್ದು ಇಂತಹ ಸಂದೇಶಗಳು ಸರ್ವಕಾಲಿಕ ಪ್ರಸ್ತುತವಾಗಿವೆ ಎಂದರು.

ಪತಂಜಲಿ ಯೋಗ ಸಮಿತಿಯಿಂದ ಕನಕ ಜಯಂತಿ

-

Profile
Ashok Nayak Nov 28, 2026 9:39 AM

ಹೊಸಪೇಟೆ: ಸದ್ಯ ಸಮಾಜವನ್ನು ಕಾಡುತ್ತಿರುವ ಜಾತೀಯತೆ ಅಸಮಾನತೆ ಆರ್ಥಿಕ ಹಾಗೂ ಸಾಮಾಜಿಕ ಗೊಂದಲಗಳು ಅವುಗಳ ಪರಿಹಾರ ಮತ್ತು ಪರಿಣಾಮಗಳನ್ನು ದಾಸರು ಅಂದೆ ತಿಳಿಸಿದ್ದು ನಾವು ಇಂತಹ ಗೊಂದಲಗಳಿಂದ ಹೊರ ಬರುವ ಮೂಲಕ

ಕನಕದಾಸ ಜಯಂತಿ ಅರ್ಥಪೂರ್ಣ ಆಚರಣೆ ಮಾಡಬೇಕು ಎಂದು ಶಿಕ್ಷಕ ಯರಿಸ್ವಾಮಿ ಅಭಿಪ್ರಾಯಪಟ್ಟರು. ಪತಂಜಲಿ ಯೋಗ ಸಮಿತಿಯಿಂದ ಮಹಾಲಕ್ಷ್ಮಿ ಯೋಗ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸದಲ್ಲಿ ಮಾತನಾಡಿದರು.

ಇದನ್ನೂ ಓದಿ: Hospet News: ಸಾಧ್ಯ ವಿಶೇಷ ಮಕ್ಕಳ ವಸತಿ ಶಾಲೆ ಮಕ್ಕಳಿಂದ ವೇಟ್ ಲಿಫ್ಟಿಂಗ್‌ʼನಲ್ಲಿ ವಿಶೇಷ ಸಾಧನೆ

ಜಾತಿಯ ಗೊಂದಲಗಳು ಮೇಲು-ಕೀಳು ಭಾವನೆ ನಮ್ಮ ಅಹಂಕಾರಗಳ ಕುರಿತು "ಕುಲ ಕುಲ ಕುಲವೆಂದು ಬಡಿದಾಡಬೇಡಿ ನಿಮ್ಮ ಕುಲದ ನೆಲೆ ಏನಾದರೂ ಬಲ್ಲಿರಾ" ಎಂಬ ಕೀರ್ತನೆಯು ಸೇರಿದಂತೆ ಎಲ್ಲ ಕೀರ್ತನೆಗಳು ಸಾಮಾಜಿಕ ಹುಡುಗನ ತೊಡೆದು ಹಾಕುವ ನೆರಹಂಕಾರ ಭಾವನೆಯ ಮನಸ್ಸನ್ನು ರೂಪಿಸುವ ಸಂದೇಶಗಳನ್ನು ತಿಳಿಸಿದ್ದು ಇಂತಹ ಸಂದೇಶಗಳು ಸರ್ವಕಾಲಿಕ ಪ್ರಸ್ತುತವಾಗಿವೆ ಎಂದರು.

ಪ್ರಾಸ್ತಾವಿಕವಾಗಿ ಡಾ ಎಫ್. ಟಿ. ಹಳ್ಳಿಕೇರಿ ಮಾತನಾಡಿ, ನಮ್ಮ ದೇಶದಲ್ಲಿ ಸಾದು ಸಂತರು ದಾಸರು ಸೇರಿದಂತೆ ಅನೇಕ ಯತಿಗಳು ತಮ್ಡೆ ಆದ ರೀತಿಯಲ್ಲಿ ಸಾಮಾಜಿಕ ಸಾಮರಕ್ಕೆ ಅವಿಸ್ಮರ್ಣೆಯ ಸೇವೆ ಮಾಡಿದ್ದಾರೆ ಈಗಯೋಗ ಬಾಬಾ ರಾಮದೇವ್ ಆರೋಗ್ಯ ಸೇವೆ ಮಾಡಲು ಮುಂದಾಗಿದ್ದಾರೆ ಈ ಹಿನ್ನೆಲೆಯಲ್ಲಿ ಪತಂಜಲಿ ಸಮಿತಿ ಧಾರ್ಮಿಕ ಸಾಮಾಜಿಕ ಸನಾತನ ಧರ್ಮ ಕಾರ್ಯಗಳನು ಮಾಡುತ್ತಿದೆ ಎಂದರು.

ಜಿಲ್ಲಾ ಪ್ರಭಾರಿ ಈ ಸತ್ಯಪ್ಪ, ರಾಜ್ಯ ಸಮಿತಿ ಸದಸ್ಯ ರಾಜೇಶ್ ಕರ್ವಾ ವೇದಿಕೆಯಲ್ಲಿದ್ದರು. ಮಾಧ್ಯಮ ಪ್ರಭಾರಿ ಅನಂತ ಜೋಶಿ, ಜಿಲ್ಲಾ ಸಮಿತಿಯ ಶ್ರೀಧರ್, ರಾಮು, ಶ್ರೀನಿವಾಸ್ ಮಂಚಿಕಟ್ಟಿ , ಗೀತಾ ಮಹಾರಾಜ್, ಸಾವಿತ್ರಿ ತಂತ್ರಿ ಕವಿತಾ ಭಾಸ್ಕರ್, ಯರಿಯಪ್ಪ ವಿವಿಧ ಕೇಂದ್ರಗಳ ಸಂಚಾಲಕರು ಪ್ರಮುಖರು ಪಾಲ್ಗೊಂಡಿದ್ದರು.

ಪಿ ಜಿ ಎಂ ನಾಗರತ್ನ, ಕವಿತಾ ಭಾಸ್ಕರ್, ಪತಂಜಲಿಮಹಿಳಾ ಪ್ರವಾರಿ ಕವಿತಾ ಆನಂದ ಸುರೇಂದ್ರ ಕಾರ್ಯಕ್ರಮ ನಿರ್ವಹಿಸಿದ್ದರು.