Hospet News: ಸಾಧ್ಯ ವಿಶೇಷ ಮಕ್ಕಳ ವಸತಿ ಶಾಲೆ ಮಕ್ಕಳಿಂದ ವೇಟ್ ಲಿಫ್ಟಿಂಗ್ʼನಲ್ಲಿ ವಿಶೇಷ ಸಾಧನೆ
ದಾವಣಗೆರೆ ನಗರದಲ್ಲಿ ಶ್ರೀ ಸಾಯಿ ಹೈಟೆಕ್ ಜಿಮ್ ವತಿಯಿಂದ ನ.14 ಮತ್ತು 15 ರಂದು ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ಪ್ಯಾನ್ ಇಂಡಿಯಾ ಮಾಸ್ಟರ್ ಪವರ್ ಲಿಫ್ಟಿಂಗ್ ಮತ್ತು ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಹೊಸಪೇಟೆ ನಗರದ ಸಾಧ್ಯ ವಿಶೇಷ ಮಕ್ಕಳ ವಸತಿ ಶಾಲೆಯ ವಿಶೇಷ ಚೇತನ ವಿದ್ಯಾರ್ಥಿಗಳು ವಿಶೇಷ ಸಾಧನೆ ಮಾಡಿದ್ದಾರೆ.
-
ಹೊಸಪೇಟೆ: ದಾವಣಗೆರೆ ನಗರದಲ್ಲಿ ಶ್ರೀ ಸಾಯಿ ಹೈಟೆಕ್ ಜಿಮ್ ವತಿಯಿಂದ ನ.14 ಮತ್ತು 15 ರಂದು ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ಪ್ಯಾನ್ ಇಂಡಿಯಾ ಮಾಸ್ಟರ್ ಪವರ್ ಲಿಫ್ಟಿಂಗ್ ಮತ್ತು ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಹೊಸಪೇಟೆ ನಗರದ ಸಾಧ್ಯ ವಿಶೇಷ ಮಕ್ಕಳ ವಸತಿ ಶಾಲೆಯ ವಿಶೇಷ ಚೇತನ ವಿದ್ಯಾರ್ಥಿಗಳು ವಿಶೇಷ ಸಾಧನೆ ಮಾಡಿದ್ದಾರೆ.
ವಿದ್ಯಾರ್ಥಿನಿ ಗಾಯತ್ರಿ ಸಬ್ ಜೂನಿಯರ್ ವಿಭಾಗದಲ್ಲಿ 44 ಕೆಜಿ ಎತ್ತುವ ಮೂಲಕ ಚಿನ್ನದ ಪದಕ ಗೆದ್ದಿದ್ದು ಕರ್ನಾಟಕದ ಬಲಿಷ್ಠ ಮಹಿಳೆ ಎಂಬ ಬಿರುದು ಪಡೆದಿದ್ದಾರೆ.
ಇದನ್ನೂ ಓದಿ: Hospet News: ಶ್ರೀಮಧ್ವಾಚಾರ್ಯ ಜಯಂತಿ ಆಚರಣೆ
ಸಾಧ್ಯ ಶಾಲೆಯಲ್ಲಿ ವಿಶೇಷ ಚೇತನ ಮಕ್ಕಳಿಗೆ ಲಭ್ಯವಿರುವ ಸೇವೆಗಳಲ್ಲಿ ಸ್ಪೆಷಲ್ ಒಲಂಪಿಕ್ಸ್ (ಕ್ರೀಡೆ) ಸಹ ಒಂದಾಗಿದ್ದು, ಕಳೆದ 2 ವರ್ಷಗಳಿಂದ ಗಾಯತ್ರಿ ಹೊಸಪೇಟೆಯ ರಾಯಲ್ ಸಂಜು ಮಲ್ಟಿಜಿಮ್ ಅಲ್ಲಿ ತರಬೇತುದಾರ ಹೊನ್ನೂರು ಸ್ವಾಮಿ ಮತ್ತು ಕೆ. ಜಯಶ್ರೀ ಅವರಿಂದ ನಿರಂತರವಾಗಿ ತರಬೇತಿ ಪಡೆದುಕೊಂಡಿದ್ದಾರೆ.
ಸಾಧ್ಯ ವಿಶೇಷ ಮಕ್ಕಳ ವಸತಿ ಶಾಲೆ ಸಂಸ್ಥಾಪಕಿ ಮತ್ತು ಮುಖ್ಯಸ್ಥೆ ಆರತಿ ಕೆ.ಟಿ. ಮಾತನಾಡಿ, ಈ ವಿದ್ಯಾರ್ಥಿ ಸ್ಪೆಷಲ್ ಒಲಿಪಿಕ್ಸ್ ರಾಷ್ಟ್ರ ಮಟ್ಟದಲ್ಲೂ ಅನೇಕ ಬಾರಿ ಸ್ಪರ್ದಿಸಿದ್ದು ಮುಂದಿನ ದಿನಗಳಲ್ಲಿ ಅಂತರರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ ಆಗುವ ಎಲ್ಲಾ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ.
ಸಾಧ್ಯ ಸಂಸ್ಥೆಯು ಸಹ ವಿಶೇಷ ಚೇತನ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಅವರಿಗೆ ಬೇಕಾಗಿರುವಂತಹ ತರಬೇತಿಗಳನ್ನು ನೀಡುತಿದೆ. ಸಾಧ್ಯ ಶಾಲೆ ಶಿಕ್ಷಕರು ವಿದ್ಯಾರ್ಥಿನಿ ಗಾಯತ್ರಿ ನೈತಿಕ ಬೆಂಬಲವನ್ನು ನೀಡುವುದರ ಮೂಲಕ ಆಕೆಯ ಈ ಸಾಧನೆಗೆ ಕಾರಣರಾಗಿದ್ದಾರೆ. ಜೊತೆಗೆ ಗಾಯತ್ರಿ ಮಾಡಿರುವ ಈ ಸಾಧನೆಯಲ್ಲಿ ಅವಳ ಕುಟುಂಬದ ಸಹಕಾರವನ್ನು ನಾವು ಮರೆಯು ವಂತಿಲ್ಲ ಎಂದು ಹೇಳಿದರು.
ಸಾಧ್ಯ ಶಾಲೆಯ ಮುಂದಿನ ಗುರಿ ಗಾಯತ್ರಿಯನ್ನು ಇನ್ನೂ ಹೆಚ್ಚಿನ ಮಟ್ಟದಲ್ಲಿ ಸ್ಪರ್ಧೆಗಳಿಗೆ ಸಿದ್ಧಪಡಿಸುವುದು ಹಾಗೂ ಇನ್ನೂ ಹೆಚ್ಚಿನ ಮಟ್ಟದಲ್ಲಿ ಮಕ್ಕಳಿಗೆ ಕ್ರೀಡೆಗಳಲ್ಲಿ ತರಬೇತಿಗಳನ್ನು ಕಲ್ಪಿಸಿಕೊಡುವುದರ ಮೂಲಕ ವಿಶೇಷ ಚೇತನ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಕಾರ್ಯ ನಿರ್ವಹಿಸುವುದು ಎಂದರು.