ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Medical Negligency: ತಾಲೂಕು ಆಸ್ಪತ್ರೆಯಲ್ಲಿ ಒಂದೇ ಸಿರೆಂಜಿನಲ್ಲಿ ಹಲವಾರು ಜನರಿಗೆ ಚುಚ್ಚುಮದ್ದು : ವೈದ್ಯಕೀಯ ಲೋಪ ಎಸಗಿದ ಸಿಬ್ಬಂದಿ !

ವಿಶ್ವ ಆರೋಗ್ಯ ಸಂಸ್ಥೆ ಮಾರ್ಗಸೂಚಿ ಪ್ರಕಾರ, ಪ್ರತಿಯೊಬ್ಬ ರೋಗಿಗೂ ಪ್ರತ್ಯೇಕ ಮತ್ತು ಹೊಸ ಸಿರಿಂಜ್ಗಳನ್ನು ಕಡ್ಡಾಯವಾಗಿ ಬಳಸಬೇಕು ಎಂಬ ಕಾನೂನು ಇದೆ ಆದರೆ ಪಟ್ಟಣದ ತಾಲೂಕಾ ಆಸ್ಪತ್ರೆಯಲ್ಲಿ ಮಲ್ಲಿಕಾರ್ಜುನ ಎಂಬ ಯುವಕ ಸಣ್ಣಪುಟ್ಟ ಗಾಯಗಳಾ ಗಿದ್ದು ಚಿಕಿತ್ಸೆಗಾಗಿ ಸರಕಾರಿ ಆಸ್ಪತ್ರೆಗೆ ಹೋಗಿದ್ದಾನೆ ಈ ವೇಳೆ ಕರ್ತವ್ಯದಲ್ಲಿದ್ದ ಸ್ಟಾಪ್ ನರ್ಸ್ ಕೇವಲ ಸೂಜಿ ಬದಲಿಸಿ ಹಳೆಯ ಸಿರೇಂಜ್ ಬಳಸಿ ಚುಚ್ಚುಮದ್ದು ನೀಡಿದ್ದಾನೆ.

ವೈದ್ಯಕೀಯ ಲೋಪ ಎಸಗಿದ ಸಿಬ್ಬಂದಿ !

-

Profile
Ashok Nayak Jun 2, 2026 4:32 PM

ಮಂಜು ಕಲಾಲ ವಿಜಯಪುರ

ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣದ ತಾಲೂಕಾ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದ ಸ್ಟಾಪ್ ನರ್ಸ್ ಒಬ್ಬರು ಒಂದೇ ಸಿರಿಂಜಿನಲ್ಲಿ ಹಲವಾರು ಜನರಿಗೆ ಚುಚ್ಚುಮದ್ದು ನೀಡಿ ವೈದ್ಯಕೀಯ ಲೋಪವೆಸಗಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ವಿಶ್ವ ಆರೋಗ್ಯ ಸಂಸ್ಥೆ ಮಾರ್ಗಸೂಚಿ ಪ್ರಕಾರ, ಪ್ರತಿಯೊಬ್ಬ ರೋಗಿಗೂ ಪ್ರತ್ಯೇಕ ಮತ್ತು ಹೊಸ ಸಿರಿಂಜ್ಗಳನ್ನು ಕಡ್ಡಾಯವಾಗಿ ಬಳಸಬೇಕು ಎಂಬ ಕಾನೂನು ಇದೆ ಆದರೆ ಪಟ್ಟಣದ ತಾಲೂಕಾ ಆಸ್ಪತ್ರೆಯಲ್ಲಿ ಮಲ್ಲಿಕಾರ್ಜುನ ಎಂಬ ಯುವಕ ಸಣ್ಣಪುಟ್ಟ ಗಾಯಗಳಾ ಗಿದ್ದು ಚಿಕಿತ್ಸೆಗಾಗಿ ಸರಕಾರಿ ಆಸ್ಪತ್ರೆಗೆ ಹೋಗಿದ್ದಾನೆ ಈ ವೇಳೆ ಕರ್ತವ್ಯದಲ್ಲಿದ್ದ ಸ್ಟಾಪ್ ನರ್ಸ್ ಕೇವಲ ಸೂಜಿ ಬದಲಿಸಿ ಹಳೆಯ ಸಿರೇಂಜ್ ಬಳಸಿ ಚುಚ್ಚುಮದ್ದು ನೀಡಿದ್ದಾನೆ.

ಬಳಿಕ ಆತ ಅಲ್ಲೇ ಇರುವಾಗಲೇ ಮತ್ತೊಬ್ಬ ರೋಗಿಗೇ ಅದೇ ಸಿರೇಂಜ್ ಬಳಸಿ ಸೂಜಿ ಬದಲಿಸಿ ಚುಚ್ಚುಮದ್ದು ನೀಡಿದ್ದಾನೆ ಇದನ್ನು ಪ್ರಶ್ನೆ ಮಾಡಿದ ಯುವಕನಿಗೆ ವ್ಯದ್ಯ ಸಿರೇಂಜ್ʼಗಳು ಬಂದಿಲ್ಲಾ ನಾವು ಹಿಂಗೆ ಮಾಡೋದು ಯಾರಿಗೆ ಹೇಳುತ್ತಿಯಾ ಹೇಳಿಕೊ ಎಂದು ಬೇಜವಾಬ್ದಾರಿಯಿಂದ ಉತ್ತರಿಸಿದ್ದಾನೆ.

ಇದನ್ನೂ ಓದಿ: Medical Certificate: ರಾಜ್ಯದಲ್ಲಿ ಪ್ರತಿ ಸಾವಿಗೂ ವೈದ್ಯಕೀಯ ಪ್ರಮಾಣ ಪತ್ರ ಇನ್ನು ಮುಂದೆ ಕಡ್ಡಾಯ

ಇತನ ವರ್ತನೆಯನ್ನು ಆ ಯುವಕ ತನ್ನ ಮೊಬೈಲ್ ನಲ್ಲಿ ಚಿತ್ರಿಕರೀಸಿಕೊಂಡಿದ್ದಾನೆ. ಸದ್ಯ ಸರಕಾರಿ ಆಸ್ಪತ್ರೆಯಲ್ಲಿ ಸ್ಟಾಪ್ ನರ್ಸ್ ಹಾಗೂ ವ್ಯದ್ಯರು ಆಸ್ಪತ್ರೆಗೆ ಬರುವ ಸಾರ್ವಜನಿ ಕರೊಂದಿಗೆ ಸೌಜನ್ಯದಿಂದ ವರ್ತಿಸದೇ ಬೇಜವಾಬ್ದಾರಿಯಿಂದ ವರ್ತನೆ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ, ಇನ್ನಾದರೂ ಸಂಬಂದಪಟ್ಟ ಅಧಿಕಾರಿಗಳು ಎಚ್ಚೆತ್ತು ಸರಕಾರ ಆಸ್ಪತ್ರೆಯ ಸಿಬ್ಬಂದಿಗಳಿಗೆ ಚಿಕಿತ್ಸೆ ನೀಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಮುಖ್ಯ ಆಡಳಿತ ವೈದ್ಯಾಧಿಕಾರಿ ಬೇಜವಾಬ್ದಾರಿ: ಇನ್ನೂ ಸದ್ಯ ಬಸವನಬಾ ಗೇವಾಡಿ ಪಟ್ಟಣದಲ್ಲಿ ಸರಕಾರಿ ಆಸ್ಪತ್ರೆಯಲ್ಲೇ ವೈದ್ಯಕೀಯ ಲೋಪ ಎಸಗಿರುವ ಆರೋಪ ಕೇಳಿ ಬಂದಿದ್ದು ಆಸ್ಪತ್ರೆಯ ಮುಖ್ಯ ಆಡಳಿತ ವೈದ್ಯಾಧಿಕಾರಿ ತಾಲೂಕಾ ಆಸ್ಪತ್ರೆಯ ಕುಂದು ಕೊರತೆಗಳ ಬಗ್ಗೆ ಗಮನ ಹರಿಸುತ್ತಿಲ್ಲ ಬೇಜವಾಬ್ದಾರಿಯಾಗಿ ಕರ್ತವ್ಯ ನಿಭಾಯಿಸು ತ್ತಿದ್ದಾರಾ ಎಂಬ ಪ್ರಶ್ನೇ ಮೂಡುವಂತಾಗಿದೆ.

ಸಮಯಕ್ಕೆ ಸರಿಯಾಗಿ ಬರದ ವೈದ್ಯರು: ಇನ್ನೂ ಆಸ್ಪತ್ರೆಗೆ ರೋಗಿಗಳು ಚಿಕಿತ್ಸೆಗೆ ಆಗಮಿಸಿದ ವೇಳೆ ತುರ್ತು ಸಂದರ್ಭದಲ್ಲಿ ವೈದ್ಯರು ಲಭ್ಯವಿರುವುದಿಲ್ಲ, ಮತ್ತು ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ ಎಂಬ ಗಂಭೀರ ಆರೋಪ ಸಾರ್ವಜನಿಕ ವಲಯ ದಿಂದ ಆರೋಪ ಕೇಳಿ ಬಂದಿದೆ.

image

ನನಗೆ ಸ್ಕೀನ್ ಪ್ರಾಬ್ಲಮ್ ಇದ್ದ ಕಾರಣ ತಾಲೂಕಾ ಆಸ್ಪತ್ರೆಗೆ ಹೋಗಿದ್ದೆ ಆದರೆ ಅಲ್ಲಿರುವ ಸಿಬ್ಬಂದಿ ಒಂದೆ ಸಿರೇಂಜ್ ಬಳಸಿ ಸೂಜಿ ಮಾತ್ರ ಬದಲಿಸಿ ಇಂಜೆಕ್ಷನ್ ನೀಡುತ್ತಿದ್ದ ನನಗೆ ಭಯವಾಯಿತು ಯಾಕೆ ಹೀಗೆ ಎಂದು ಪ್ರಶ್ನೆ ಮಾಡಿದರು ಬೇಜವಾಬ್ದಾರಿಯಾಗಿ ಉತ್ತರಿಸಿದ ಈ ಕುರಿತು ಆಸ್ಪತ್ರೆಯಲ್ಲಿರುವ ಹಲವಾರು ವೈದ್ಯರ ಗಮನಕ್ಕೆ ತಂದರು ಯಾರು ಸ್ಪಂದಿಸಲಿಲ್ಲ.

- ಮಲ್ಲಿಕಾರ್ಜುನ ಅಸ್ಕಿ, ಸ್ಥಳೀಯ.