ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Chittaranjan S Column: ನಂಬಲಸಾಧ್ಯ ಎನಿಸುವ ದಾಖಲೆ !

ಸಿಕ್ಸರ್ ಮತ್ತು ಬೌಂಡರಿಗಳನ್ನು ಹೊಡೆಯುವುದು ಎಂದರೆ ಸೂರ್ಯವಂಶಿಗೆ ಬಹಳ ಇಷ್ಟ ಮತ್ತು ಬಹು ಸುಲಭ ಎನಿಸುವಂತೆ ರನ್‌ಗಳ ಹೊಳೆಯನ್ನೇ ಹರಿಸುವುದು ಅವರ ಬ್ಯಾಟಿಂಗ್ ಶೈಲಿ. ಅತಿ ಕಿರಿಯ ವಯಸ್ಸಿನಲ್ಲೇ ಐಪಿಎಲ್ ಪಂದ್ಯ ಗಳನ್ನು ಆರಂಬಿಸಿದ ಈ ಬಾಲಕ, ತಾನು ಐಪಿಎಲ್‌ನ ಮೊದಲ ಪಂದ್ಯದಲ್ಲಿ ಎದುರಿಸಿದ ಮೊದಲ ಬಾಲ್‌ಗೆ ಸಿಕ್ಸರ್ ಹೊಡೆದರು! (2025) ಮತ್ತು ತನ್ನ ಮೂರನೆಯ ಐಪಿಎಲ್ ಪಂದ್ಯದಲ್ಲಿ ಶತಕ ಬಾರಿಸಿದರು.

Chittaranjan S Column: ನಂಬಲಸಾಧ್ಯ ಎನಿಸುವ ದಾಖಲೆ !

-

Profile
Ashok Nayak Jun 7, 2026 2:32 PM

ಚಿತ್ತರಂಜನ್ ಎಸ್.

ಅತಿ ಕಿರಿಯ ವಯಸ್ಸಿನಲ್ಲಿ ಶತಕ ಬಾರಿಸಿ ಐಪಿಎಲ್ ಕ್ರಿಕೆಟ್‌ನಲ್ಲಿ ದಾಖಲೆ ಬರೆದಿರುವ ವೈಭವ ಸೂರ್ಯವಂಶಿಯನ್ನು ತರಬೇತುಗೊಳಿಸಿದವರಲ್ಲಿ ಮಾನಿಶ್ ಓಜಾ ಪ್ರಮುಖರು; ಇವರು ಸಹ ಜಾರ್ಖಂಡ್‌ನ ಪ್ರಮುಖ ಕ್ರಿಕೆಟ್ ಆಟಗಾರರಾಗಿದ್ದವರು. ಒಂದು ದಿನ ತರಬೇತಿ ಮುಗಿದ ನಂತರ, ಅವರು ಸೂರ್ಯವಂಶಿಯನ್ನು ಕೇಳಿದರಂತೆ: ‘ನೀನು ಏಕೆ ಪ್ರತಿ ಬಾಲ್‌ನ್ನು ಸಿಕ್ಸರ್ ಹೊಡೆ ಯುತ್ತೀಯಾ?’ ‘ಒಂದು ಬಾಲ್‌ನಲ್ಲಿ ಆರು ರನ್ ಹೊಡೆಯುವ ಅವಕಾಶವಿದ್ದಾಗ, ಒಂದು ಎರಡು ರನ್‌ಗೆ ಏಕೆ ಪ್ರಯತ್ನಿಸಬೇಕು?’ ಎಂಬುದು ಸೂರ್ಯವಂಶಿಯ ಉತ್ತರ! ಆಗ, ಸೂರ್ಯವಂಶಿ ಇನ್ನೂ 13 ವರ್ಷ ದಾಟಿರಲಿಲ್ಲ.

ಕಳೆದ ವರ್ಷದ ಐಪಿಎಲ್‌ನಲ್ಲಿ (2025)ವೈಭವ್ ಸೂರ್ಯವಂಶಿ, ಕೇವಲ 38 ಬಾಲ್ಗಳಲ್ಲಿ ಶತಕ ಬಾರಿಸಿ, ಅಂತಾ ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಬರೆದರು. ಈ ವರ್ಷದ ಐಪಿಎಲ್‌ನಲ್ಲಿ 36 ಬಾಲ್‌ನಲ್ಲಿ ಶತಕ ಬಾರಿಸಿದರು!

ಈ ರೀತಿ ಶತಕ ಬಾರಿಸಿದ ಅತಿ ಕಿರಿಯ ಆಟಗಾರ ಎಂಬ ದಾಖಲೆಯ ಜತೆಯಲ್ಲೇ, ಹಲವು ದಾಖಲೆ ಗಳು ಸೂರ್ಯವಂಶಿಯ ಹೆಸರಿನಲ್ಲಿವೆ. ಅತಿ ಕಿರಿಯ ವಯಸ್ಸಿನಲ್ಲಿ ದೊಡ್ಡ ವರ ಜತೆ ಕ್ರಿಕೆಟ್ ಆಡುತ್ತಾ, ರಾಜ್ಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೂರ್ಯವಂಶಿ ಬರೆದ ದಾಖಲೆಗಳ ಪಟ್ಟಿ ಮಾಡುತ್ತಾ ಹೋದರೆ, ಅಂಕಿ ಸಂಕಿಗಳ ಗೋಜಲಿನಲ್ಲಿ ಕಳೆದು ಹೋಗು ವಂತಾಗುತ್ತದೆ!

ಈ ವರ್ಷದ ಐಪಿಎಲ್‌ನಲ್ಲೂ ರಾಜಸ್ತಾನ್ ರಾಯಲ್ಸ್ ಪರ ಆಡಿದ ಸೂರ್ಯವಂಶಿ, ಹಲವು ದಾಖಲೆಗಳನ್ನು ಬರೆದರು; ರಾಜಸ್ತಾನ್ ರಾಯಲ್ಸ್ ತಂಡವು ಸೆಮಿಫೈನಲ್ ತಲುಪಲು ಸೂರ್ಯ ವಂಶಿ ಕೊಡುಗೆ ಬಹು ದೊಡ್ಡದು. ಆದರೆ, ಸೆಮಿ ಫೈನಲ್ಸ್ ಆಟದಲ್ಲಿ, ಸೂರ್ಯವಂಶಿಯು ಬಿರುಸಿನ ಆಟವಾಡಿದರೂ, (47 ಬಾಲಿಗೆ 96 ರನ್), ಎದುರಾಳಿ ತಂಡದ ಗುಜರಾತ್ ಟೈಟನ್ಸ್‌ನ ನಾಯಕ ಗಿಲ್ ಅವರ ಸೊಗಸಾದ ಶತಕದಿಂದಾಗಿ, ರಾಜಸ್ತಾನ್ ರಾಯಲ್ಸ್ ಸೋತಿತು; ಫೈನಲ್ ತಲುಪಲಾಗಲಿಲ್ಲ.

ಅದೇನೇ ಇದ್ದರೂ, ಹಲವು ಪ್ರಮುಖ ಆಟಗಾರರನ್ನು ಎದುರಿಸಿ, ಸೂರ್ಯವಂಶಿ, ಐಪಿಎಲ್ಉ ದ್ದಕ್ಕೂ ಬಿರುಸಿನ ಆಟವಾಡಿದ್ದನ್ನು ಮಾತ್ರ ಯಾರೂ ಮರೆಯುವಂತಿಲ್ಲ. ಅವರ ಆಟದ ಶೈಲಿಯನ್ನು ಕಂಡು ದೇಶೀಯ ಮತ್ತು ವಿದೇಶೀಯ ಆಟಗಾರರು, ಬೌಲರುಗಳ ಬೆರಗಾ ಗಿದ್ದಾರೆ, ನಂಬಲಸಾಧ್ಯ ಶೈಲಿ ಎಂದು ಹೊಗಳಿದ್ದಾರೆ.

ಇದನ್ನೂ ಓದಿ: Vaibhav Suryavanshi: ಜಿತೇಶ್ ಶರ್ಮಾ ನೇತೃತ್ವದ ಭಾರತದ ರೈಸಿಂಗ್ ಏಷ್ಯಾಕಪ್ ತಂಡದಲ್ಲಿ ವೈಭವ್ ಸೂರ್ಯವಂಶಿಗೆ ಸ್ಥಾನ

ಸಿಕ್ಸರ್ ಮತ್ತು ಬೌಂಡರಿಗಳನ್ನು ಹೊಡೆಯುವುದು ಎಂದರೆ ಸೂರ್ಯವಂಶಿಗೆ ಬಹಳ ಇಷ್ಟ ಮತ್ತು ಬಹು ಸುಲಭ ಎನಿಸುವಂತೆ ರನ್‌ಗಳ ಹೊಳೆಯನ್ನೇ ಹರಿಸುವುದು ಅವರ ಬ್ಯಾಟಿಂಗ್ ಶೈಲಿ. ಅತಿ ಕಿರಿಯ ವಯಸ್ಸಿನಲ್ಲೇ ಐಪಿಎಲ್ ಪಂದ್ಯ ಗಳನ್ನು ಆರಂಬಿಸಿದ ಈ ಬಾಲಕ, ತಾನು ಐಪಿಎಲ್‌ನ ಮೊದಲ ಪಂದ್ಯದಲ್ಲಿ ಎದುರಿಸಿದ ಮೊದಲ ಬಾಲ್‌ಗೆ ಸಿಕ್ಸರ್ ಹೊಡೆದರು! (2025) ಮತ್ತು ತನ್ನ ಮೂರನೆಯ ಐಪಿಎಲ್ ಪಂದ್ಯದಲ್ಲಿ ಶತಕ ಬಾರಿಸಿದರು.

ಸೂರ್ಯವಂಶಿಯ ಇಂತಹ ಹಲವು ಸಾಧನೆಗಳು ಕ್ರಿಕೆಟ್‌ನ ಮಹಾನ್ ಆಟಗಾರರನ್ನು ಅಚ್ಚರಿಗೆ ತಳ್ಳಿದೆ; ಈ ಬಾಲಕ ಅದು ಹೇಗೆ ಅಷ್ಟು ಸುಲಭವೆನ್ನುವಂತೆ ಸಿಕ್ಸರ್ ಹೊಡೆಯುವನು, ರನ್ ಗಳಿಸುವನು ಎಂದು ಪೂರ್ತಿಯಾಗಿ ವಿಶ್ಲೇಷಿಸಲು ಹೆಚ್ಚಿನವರಿಗೆ ಇನ್ನೂ ಸಾಧ್ಯವಾಗಿಲ್ಲ.

ಬಾಲ ಪ್ರತಿಭೆ

ಬಿಹಾರದ ಪುಟ್ಟ ಊರು ತಾಜ್‌ಪುರ್‌ನಲ್ಲಿ 27.3.2011ರಂದು ಜನಿಸಿದ ವೈಭವ್ ಸೂರ್ಯವಂಶಿ ಯಲ್ಲಿ ಅಡಗಿದ್ದ ಕ್ರಿಕೆಟ್ ಪ್ರತಿಭೆಯನ್ನು ಮೊದಲು ಗುರುತಿಸದವರು, ಆತನ ತಂದೆ, ಸಂಜೀವ ಸೂರ್ಯವಂಶಿ.

ಸ್ಥಳೀಯ ಪಂದ್ಯಾವಳಿಗಳಲ್ಲಿ ಕ್ರಿಕೆಟ್ ಆಡಿ ಅಭ್ಯಾಸವಿದ್ದ ಅವರು, ತನ್ನ ಮಗನಲ್ಲಿ ಹುದುಗಿದ್ದ ಬ್ಯಾಟಿಂಗ್ ಕೌಶಲವನ್ನು ಬಾಲ್ಯದಲ್ಲೇ ಗುರುತಿಸಿ, 8ನೆಯ ವಯಸ್ಸಿಗೆ ಸೂಕ್ತ ತರಬೇತಿ ನೀಡಲು ನಿರ್ಧರಿಸಿದರು. ದೂರದ ಪಾಟ್ನಾದಲ್ಲಿ ವೈಭವನಿಗೆ ಕ್ರಿಕೆಟ್ ತರಬೇತಿ ಆರಂಭವಾಯಿತು. ಅದಕ್ಕಾಗಿ, ತಂದೆಯು ತನ್ನ ಪುಟ್ಟ ಜಾಗವನ್ನು ಮಾರ ಬೇಕಾಯಿತು; ಪ್ರತಿ ದಿನ ತಂದೆ ಮತ್ತು ಮಗ ಪಾಟ್ನಾಗೆ ಹೋಗುವಾಗ ಬುತ್ತಿ ಊಟ ಮಾಡಿ ಕೊಡುವುದು ತಾಯಿಯ ಕೆಲಸ; ಬಾಲ ಪ್ರತಿಭೆಗೆ ಬುತ್ತಿ ಊಟ ಕಟ್ಟಿ ಕೊಡುವುದರ ಜತೆಯಲ್ಲೇ, ಇತರ ಬೌಲರ್‌ಗಳಿಗೆ, ತರಬೇತುದಾರರಿಗೂ ಆ ಮಾತೆ ಬುತ್ತಿ ಊಟ ಕಟ್ಟಿಕೊಡುತ್ತಿದ್ದಳಂತೆ.

ಬೇಗನೆ ಗ್ರಹಿಸುವ ಶಕ್ತಿ

ಸ್ವತಃ ಕ್ರಿಕೆಟರ್ ಆಗಿರುವ ತರಬೇತುದಾರ ಮಾನಿಶ್ ಓಝಾ ಅವರು ವೈಭವ್‌ನಲ್ಲಿ ಗುರುತಿಸಿದ ಒಂದು ಗುಣ ವಿಶೇಷ ಎನಿಸಿದೆ. ‘ನಾವು ಹೇಳಿಕೊಟ್ಟದ್ದನ್ನೆಲ್ಲವೂ ವೈಭವ್ ಸರಿಯಾಗಿ ಗ್ರಹಿಸಿ, ತರಬೇತಿಯಲ್ಲಿ ಅದನ್ನು ಪ್ರಯೋಗಿಸುತ್ತಿದ್ದ. ಇದನ್ನು ಹೆಚ್ಚಿನ ಬಾಲಕರು ಮಾಡುತ್ತಿದ್ದರು. ವೈಭವ್ ಸೂರ್ಯ ವಂಶಿಯ ವಿಶೇಷವೆಂದರೆ, ಸ್ಥಳೀಯ ಪಂದ್ಯಾವಳಿ ಗಳಲ್ಲಿ ಸಹ, ಸ್ವಲ್ಪವೂ ಬೆದರದೆ, ಧೈರ್ಯದಿಂದ ತಾನು ಕಲಿತ ಬ್ಯಾಟಿಂಗ್ ಕೌಶಲವನ್ನು ಪ್ರಯೋಗಿಸುತ್ತಿದ್ದ. ಅದು ವಿಸ್ಮಯ ಹುಟ್ಟಿಸುವ ಕೌಶಲ’ ಎಂದಿದ್ದಾರೆ ಮಾನಿಷ್ ಓಜಾ.

2024ರಲ್ಲಿ ಬಿಹಾರದ ಪರ ರಣಜಿ ಪಂದ್ಯಾವಳಿಯಲ್ಲಿ ಆಡುವ ಮೂಲಕ ವೈಭವ್, ಕಿರಿಯ ವಯಸ್ಸಿನಲ್ಲೇ (12 ವರ್ಷ 84 ದಿನ) ಆ ಪ್ರಮುಖ ಪಂದ್ಯಾವಳಿಯಲ್ಲಿ ಭಾಗವಹಿಸಿ, ದಾಖಲೆ ಬರೆದರು. ವಿಜಯ್ ಹಜಾರೆ ಟ್ರೋಫಿ ಪಂದ್ಯದಲ್ಲಿ ಅರುಣಾಚಲ ಪ್ರದೇಶದ ವಿರುದ್ಧ ಶತಕ ಬಾರಿಸಿ ದಾಖಲೆ ಬರೆದ ವೈಭವ್, ಇಂತಹ ಹಲವು ದಾಖಲೆ ಬರೆದಿದ್ದಾರೆ. ಕಿರಿಯರ ತಂಡದ ಪರವಾಗಿ ಆಡಿ, ಆಸ್ಟ್ರೇಲಿಯಾ ವಿರುದ್ಧ ಬಿರುಸಿನ ಶತಕ ಬರೆದದ್ದೂ ಒಂದು ದಾಖಲೆ!

ಬಾಲಕನಿಗೆ ಕೋಟಿ ರುಪಾಯಿ!

ಐಪಿಎಲ್ ಪಂದ್ಯಾವಳಿಗೆ (2025) ರಾಜಸ್ತಾನ್ ರಾಯಲ್ಸ್ ತಂಡವು, ರು.1.1 ಕೋಟಿ ನೀಡಿ ಆತನನ್ನು ಸೇರಿಸಿಕೊಂಡಾಗ, ವೈಭವ್ ವಯಸ್ಸು, ಕೇವಲ 13 ವರ್ಷ 241 ದಿನ. ರಾಜಸ್ತಾನ್ ರಾಯಲ್ಸ್ ತಂಡದ ನಿರೀಕ್ಷೆಯನ್ನು ಮೀರಿ, ಸೂರ್ಯವಂಶಿ ಆಡುತ್ತಿದ್ದಾರೆ. ಬಿರುಸಿನ ಬ್ಯಾಟಿಂಗ್ ಮಾಡುವ ಹಲವು ಅದ್ಭುತ ಕ್ರಿಕೆಟ್ ಆಟಗಾರರನ್ನು ನಮ್ಮ ದೇಶ ಕಂಡಿದೆ. ಕಪಿಲ್ ದೇವ್, ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ವಿರಾಟ್ ಕೊಹ್ಲಿ, ರಾಹುಲ್, ಗಿಲ್, ಪಂತ್ ಮೊದಲಾದವರು ಬಿರುಸಿನ ಆಟದಿಂದಲೇ ತಾವಾಡುವ ತಂಡಕ್ಕೆ ಬೆಂಬಲ ಕೊಟ್ಟಿದ್ದಾರೆ. ಆದರೆ, ವೈಭವ್ ಸೂರ್ಯವಂಶಿ ಈಗ ಆಡುತ್ತಿರುವ ಶೈಲಿ ನೋಡಿದರೆ, ಈ ಹಿಂದಿನ ಎಲ್ಲಾ ಬಿರುಸಿನ ಆಟಗಾರರ ದಾಖಲೆಗಳನ್ನು ಈತ ಮುರಿಯುವಂತೆ ಕಾಣುತ್ತಾನೆ.

ಈ ಸಲದ ಐಪಿಎಲ್ ಪಂದ್ಯಾವಳಿಯಲ್ಲಿ, ಅನುಭವಿ ಬೌಲರುಗಳು ಸೂರ್ಯವಂಶಿಯನ್ನು ಕಟ್ಟಿಹಾಕಲು ಹಲವು ಪ್ರಯತ್ನ ಮಾಡಿದರು. ಅದರ ನಡುವೆಯೇ ಅತ 90+ ರನ್ ಎರಡು ಬಾರಿ ಗಳಿಸಿದ; ಒಂದು ಶತಕ ಬಾರಿಸಿದ; ಬಿರುಸಿನ ಬ್ಯಾಟಿಂಗ್‌ನ್ನು ಮುಂದುವರಿಸಿದ. ಆದರೆ, ಬೌನ್ಸರ್ ರೀತಿಯ ಬಾಲ್‌ಗಳನ್ನು ಎದುರಿಸುವಲ್ಲಿ ಸೂರ್ಯವಂಶಿ ಕೆಲವು ಬಾರಿ ಎಡವುತ್ತಾನೆ ಎಂದು, ಕ್ರಿಕೆಟ್ ಪಂಡಿತರು ಮತ್ತು ವಿಶ್ಲೇಷಕರು ಗುರುತಿಸಿದ್ದು, ಅಂತಹ ಬಾಲ್ ಹಾಕಿ ಆತನನ್ನು ಔಟ್ ಮಾಡಲು ಪ್ರಯತ್ನಮಾಡಿಸಿದ್ದಾರೆ. ಅದು ಕೆಲವು ಬಾರಿ ಭಾಗಶಃ ಯಶಸ್ವಿಯೂ ಆಗಿದೆ; ಆದರೆ, ಸಾಕಷ್ಟು ರನ್ ಹೊಡೆದ ನಂತರ, ಕೆಲವು ಬಾರಿ ಬೌನ್ಸರ್‌ಗೆ ಔಟಾಗಿರುವ ಸೂರ್ಯವಂಶಿಯು, ಬಿರುಸಿನ ಬ್ಯಾಟಿಂಗ್ನ್ನು ಮಾತ್ರ ಎಂದಿನಂತೆ ಮುಂದುವರಿಸಿರುವುದು ವಿಶೇಷ. ಇಲ್ಲವಾದರೆ, ೨೦೦+ ಸ್ಟ್ರೈಕ್ ರೇಟ್ ಹೇಗೆ ತಾನೆ ಸಾಧ್ಯವಿತ್ತು?

ಈತನಿನ್ನೂ 15 ವರ್ಷ ದಾಟಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಂಡೇ, ಈತನ ಬ್ಯಾಟಿಂಗ್‌ನ್ನು ವಿಶ್ಲೇಷಿಸಬೇಕು ಮತ್ತು ಮೆಚ್ಚಬೇಕು. ಇಷ್ಟು ಕಿರಿಯ ವಯಸ್ಸಿನಲ್ಲಿ, ಹಿರಿಯ ಆಟಗಾರರೊಂದಿಗೆ ಸೆಣಸಿ, ಆತ ಬಾರಿಸಿದ ರನ್‌ಗಳು ಒಂದು ಅದ್ಭುತ ಸಾಧನೆ! ಮುಂದಿನ ದಿನಗಳಲ್ಲಿ ವೈಭವ್ ಸೂರ್ಯವಂಶಿಯು, ಕ್ರಿಕೆಟ್ ಜಗತ್ತಿನಲ್ಲಿ ಹೊಸ ಮತ್ತು ನಂಬಲ ಸಾಧ್ಯ ಎನಿಸುವ ದಾಖಲೆಗಳನ್ನು ಬರೆಯುವುದರಲ್ಲಿ ಯಾವುದೇ ಸಂಶಯ ವಿಲ್ಲ!

ಆರಂಭಿಕ ತರಬೇತಿ ಹೇಗಿತ್ತು?

ಮೊದಲು ಸೂರ್ಯವಂಶಿಯ ತರಬೇತಿ ಆರಂಭವಾಗಿದ್ದು ಅವನ ವಯಸ್ಸಿನ ಮಕ್ಕಳೊಂದಿಗೆ. ಕೆಲವೇ ದಿನಗಳಲ್ಲಿ ಈ ಬಾಲಕನ ತರಬೇತುದಾರಿಗೆ, ಇಂತಹ ತರಬೇತಿ ವ್ಯರ್ಥ ಎನಿಸಿತು; ಏಕೆಂದರೆ ಸೂರ್ಯವಂಶಿ ಸಿಕ್ಕಸಿಕ್ಕ ಬಾಲಿಗೆ ಸಿಕ್ಸರ್ ಹೊಡೆಯುತ್ತಿದ್ದ. ನಂತರ, ಬೆಳೆದ ಹುಡುಗರು ಮತ್ತು ಅನುಭವಿ ಆಟಗಾರರೊಂದಿಗೆ ತರಬೇತಿ ಆರಂಭವಾಯಿತು. ಪ್ರತಿ ದಿನ ಬೆಳಗ್ಗೆ 7.30ಗೆ ಆರಂಭ ವಾಗುವ ತರಬೇತಿ ಸಂಜೆ 4 ಗಂಟೆಯ ತನಕ ನಡೆಯುತ್ತಿತ್ತು. ಆ ಬಾಲಕ ಆಗ ಪ್ರತಿ ದಿನ ಎದುರಿಸು ತ್ತಿದ್ದ ಸರಾಸರಿ ಬಾಲ್‌ಗಳ ಸಂಖ್ಯೆ, 450! ಸೂರ್ಯವಂಶಿಗೆ 12 ವರ್ಷಗಳಾಗುವ ಹೊತ್ತಿಗೆ, ಆತನ ಪ್ರತಿಭೆ ಯಾವ ಮಟ್ಟದಲ್ಲಿತ್ತೆಂದರೆ, ಇನ್ನು ದೊಡ್ಡವರ ಜತೆ ಇವನನ್ನು ಆಡಲು ಬಿಡಬಹುದು ಎಂದು ತರಬೇತಿದಾರರು ನಿರ್ಧರಿಸಿದರು; ಕ್ಲಬ್ ಮಟ್ಟದ ಮತ್ತು ರಾಜ್ಯ ಮಟ್ಟದ ಪಂದ್ಯಾವಳಿ ಗಳಲ್ಲಿ ಸೂರ್ಯವಂಶಿ ಆಡಿ, ರನ್‌ಗಳ ಹೊಳೆಯನ್ನೇ ಹರಿಸಿದರು. ಐಪಿಎಲ್‌ನಲ್ಲಿ ಆತ ಹೊಸ ದಾಖಲೆಗಳನ್ನೇ ಬರೆದರು.