ಜಾನಪದ ಉಳಿಸಿ ಬೆಳೆಸಬೇಕಾಗಿದೆ: ಮುರುಗೇಂದ್ರ ಶ್ರೀಗಳು
ತಾಲೂಕಾ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ಪಂಡಿತ ಅವಜಿಯವರು ಮಾತನಾಡಿ ಆಧುನಿಕತೆಯ ಹೆಸರಿನಲ್ಲಿ ನಾವು ನಮ್ಮತನ ಮರೆಯುತ್ತಿರುವ ಕಾಲದಲ್ಲೂ ಗ್ರಾಮೀಣ ಪ್ರದೇಶದಲ್ಲಿ ಎಲೆ ಮರೆ ಕಾಯಿಯಂತಿರುವ ಜನಪದ ಕಲಾವಿದರನ್ನು ಮುಖ್ಯವಾಹಿನಿಗೆ ತರುವ ಕಾರ್ಯ ಶ್ಲಾಘನೀಯ ಎಂದರು
![ಇಂಡಿ ತಾಲೂಕಿನ ಪಿ.ಎಮ್.ಶ್ರೀ ಸರಕಾರಿ ಪ್ರೌಢಶಾಲೆ ಗೊರನಾಳದಲ್ಲಿ ಹಮ್ಮಿಕೊಂಡ ಸಮಾರಂಭದಲ್ಲಿ ಮುರಗೇಂದ್ರ ಶಿವಾಚಾರ್ಯರರು ಉದ್ಘಾಟಿಸಿ ಮಾತನಾಡಿದರು.](https://cdn-vishwavani-prod.hindverse.com/media/images/Indi_07.max-1280x720.jpg)
![Profile](https://vishwavani.news/static/img/user.png)
ಇಂಡಿ: ಮುಂದಿನ ಪೀಳಿಗೆಗೆ ಮಾದರಿಯಾಗಬೇಕಾಗಿರುವ ಜಾನಪದ ಕಲೆಗಳು ನಶಿಸಿ ಹೋಗುತ್ತಿದ್ದು ಅವುಗಳನ್ನು ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಶಿರಶ್ಯಾಡದ ಅಭಿವನ ಮುರಗೇಂದ್ರ ಶಿವಾಚಾರ್ಯರರು ಹೇಳಿದರು. ಕನ್ನಡ ಜಾನಪದ ಪರಿಷತ್ತು ಬೆಂಗಳೂರು, ಜಾನಪದ ಪರಿಷತ್ತು ವಿಜಯಪುರ ಮತ್ತು ಇಂಡಿ ತಾಲೂಕು ಜಾನಪದ ಪರಿಷತ್ತು ಮತ್ತು ಪಿ.ಎಂ.ಶ್ರೀ ಸರಕಾರಿ ಪ್ರೌಢಶಾಲೆ ಗೊರನಾಳ ಇವರ ಸಂಯುಕ್ತ ಆಶ್ರಯದಲ್ಲಿ ಗೊರನಾಳದಲ್ಲಿ ಹಮ್ಮಿಕೊಂಡ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ಡಾ.ಎಸ್ ಬಾಲಾಜಿ ಮಾತನಾಡಿ ಜಾನಪದ ಅಳಿವಿನ ಅಂಚಿನಲ್ಲಿರುವ ಕಲೆಯಲ್ಲ. ಬದಲಾಗಿ ಅದು ತಲೆ ಮಾರಿನಿಂದ ತಲೆಮಾರಿಗೆ ಬದಲಾಗುತ್ತಿದೆ. ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ಯುವಕರ ಮೇಲಿದೆ ಎಂದರು.
ತಾಲೂಕಾ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ಪಂಡಿತ ಅವಜಿಯವರು ಮಾತನಾಡಿ ಆಧುನಿಕತೆಯ ಹೆಸರಿನಲ್ಲಿ ನಾವು ನಮ್ಮತನ ಮರೆಯುತ್ತಿರುವ ಕಾಲದಲ್ಲೂ ಗ್ರಾಮೀಣ ಪ್ರದೇಶದಲ್ಲಿ ಎಲೆ ಮರೆ ಕಾಯಿಯಂತಿರುವ ಜನಪದ ಕಲಾವಿದರನ್ನು ಮುಖ್ಯವಾಹಿನಿಗೆ ತರುವ ಕಾರ್ಯ ಶ್ಲಾಘನೀಯ ಎಂದರು.
ಇದನ್ನೂ ಓದಿ: Vijayapura shootout case: ವಿಜಯಪುರದಲ್ಲಿ ಹಾಡಹಗಲೇ ಗುಂಡಿನ ದಾಳಿ ನಡೆಸಿ ವ್ಯಕ್ತಿಯ ಬರ್ಬರ ಹತ್ಯೆ
ಮಾಯವ್ವ ಹಂಜಗಿ, ಜಟ್ಟೆಪ್ಪ ಮಾದರ, ತುಕಾರಾಮ ಸೂರ್ಯವಂಶಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿಯಾಗಿ ಜಟ್ಟೆಪ್ಪ ಮಾದರ, ಖಜಾಂಚಿಯಾಗಿ ಮಲ್ಲಿಕಾರ್ಜುನ ಸುಪನೂರ,ಜಂಟಿ ಕಾರ್ಯದರ್ಶಿಯಾಗಿ ಸುಭಾಸಚಂದ್ರ ನಾವಿ, ಪತ್ರಿಕಾ ಪ್ರತಿನಿಧಿ ಖಾಜು ಸಿಂಗೆಗೋಳ, ಸರದಾರ ಮುಲ್ಲಾ ಸಾಗರ ಮಾನೆ, ಗೀತಾ ಹತ್ತಳ್ಳಿ, ಪಾರ್ವತಿ ಸೊನ್ನದ, ತುಳಜಾರಾಮ ನಾಟಿಕಾರ, ಸುಭಾಸ ಕಾಮಾ, ಸುರೇಶ ಚವ್ಹಾಣ, ಸಿ.ಎಸ್.ಮೇತ್ರಿ ಸದಸ್ಯರಾಗಿ ಪದಗ್ರಹಣ ಮಾಡಿದರು. ಬೆಂಗಳೂರಿನ ಮಹೇಂದ್ರ ಜಾಧವ, ವಿಜಯ ವೇದಿಕೆ ಮೇಲಿದ್ದರು.
ವಿಜಯಪುರ ಜಿಲ್ಲಾ ಮಹಿಳಾ ಜಾನಪದ ಪರಿಷತ್ತಿನ ಅಧ್ಯಕ್ಷರಾಗಿ ದ್ರಾಕ್ಷಾಯಣಿ ಆಯ್ಕೆ ಯಾದರು. ಆನಂದ ಕೆಂಬಾವಿ, ಶ್ರೀನಿವಾಸ ಜಮಾದಾರ, ವೀರಣ್ಣ ನಾಯ್ಕೋಡಿ, ಎಂ.ಪಿ.ಚಿಮ್ಮಾಗೋಳ, ಎಂ. ಎಂ.ವಾಲಿಕಾರ, ವೈ.ಟಿ.ಪಾಟೀಲ ಗೊಂದಳಿ ಕಲಾವಿಧರು,ಚೌಡಕಿ ಪದ ಭಜನಾ ತಂಡದವರು ಭಾಗವಹಿಸಿದ್ದರು.