MLA Yashwant Rayagouda Patil: ಚರ್ಚೆ ಜ್ಞಾನದ ವಿನಿಮಯವಾದರೆ ವಾದ ಅಜ್ಞಾನದ ವಿನಿಮಯ ಇಂತಹ ಕಾರ್ಯಾಗಾರಗಳು ಸದಾ ನಡೆಯಲಿ-ಶಾಸಕ
ಕಾರ್ಯಾಗಳಿಂದ ಜ್ಞಾನ ವಿನಿಮಯ ಚರ್ಚೆಗಳು ನಡೆಯುತ್ತವೆ. ಚರ್ಚೆ ಜ್ಞಾನದ ವಿನಿಮಯವಾದರೆ ವಾದ ಅಜ್ಞಾನ ವಿನಿಮಯ ಕಾರ್ಯಾಗಾರಗಳಿಂದ ವಿಧ್ಯಾರ್ಥಿಗಳು ಹಾಗೂ ಅಧ್ಯಾಪಕರು ರಾಷ್ಟ್ರ, ರಾಜ್ಯಮಟ್ಟದ ಅನುಭವಿ ತಜ್ಞ ಪರಿಣಿತರಿಂದ ಮಾರ್ಗದರ್ಶನ ಪಡೆಯಬೇಕು. ಕಲಿಕೆ ನಿಂತ ನೀರಲ್ಲ ಸದಾ ಹುಟ್ಟಿನಿಂದ ಸಾವಿನವರೆಗೂ ಇರುತ್ತದೆ. ಶಿಕ್ಷಣ ಕ್ಷೇತ್ರಕ್ಕೆ ಚಟುವಟಿಕೆಗಳು ಮುಖ್ಯ

ಶ್ರೀಶಾಂತೇಶ್ವರ ಸಂಸ್ಥೆಯ ಜಿ.ಆರ್.ಜಿ ,ವಾಯ್ ಎ ಪಾಟೀಲ, ಎಂ.ಪಿ ದೋಶಿ ವಿಜ್ಞಾನ ಕಾಲೇಜಿನಲ್ಲಿ ನ್ಯಾಕ್ ಕಾರ್ಯಾಗಾರ ಉದ್ಘಾಟಿಸುತ್ತಿರುವ ಶಾಸಕ ಯಶವಂತರಾಯಗೌಡ ಪಾಟೀಲ ಹಾಗೂ ವೇದಿಕೆ ಗಣ್ಯರು. -

ಇಂಡಿ: ಶ್ರೀಶಾಂತೇಶ್ವರ ವಿಧ್ಯಾಸಂಸ್ಥೆಯ ಅಡಿಯಲ್ಲಿರುವ ಜಿ.ಆರ್.ಜಿ, ವಾಯ್.ಎ ಪಾಟೀಲ ವಾಣಜ್ಯ , ಎಂ.ಪಿ ದೋಶಿ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಐಕ್ಯೂಎಸಿ ಸಹಯೋಗದಲ್ಲಿ ನ್ಯಾಕ್ ಹೊಸ ಆವೃತ್ತಿಯ ಮೌಲ್ಯಮಾಪನ ಎಂಬ ವಿಷ ಕಾರ್ಯಾಗಾರ ನಡೆಯಿತು.
ಕಾರ್ಯಾಗಾರ ಉದ್ಘಾಟಿಸಿ ಶಾಸಕ ಯಶವಂತರಾಯಗೌಡ ಪಾಟೀಲ( MLA Yashwant Rayagouda Pati)ಮಾತನಾಡಿ, ಕಾರ್ಯಾಗಳಿಂದ ಜ್ಞಾನ ವಿನಿಮಯ ಚರ್ಚೆಗಳು ನಡೆಯುತ್ತವೆ. ಚರ್ಚೆ ಜ್ಞಾನದ ವಿನಿಮಯವಾದರೆ ವಾದ ಅಜ್ಞಾನ ವಿನಿಮಯ ಕಾರ್ಯಾಗಾರಗಳಿಂದ ವಿಧ್ಯಾರ್ಥಿಗಳು ಹಾಗೂ ಅಧ್ಯಾಪಕರು ರಾಷ್ಟ್ರ, ರಾಜ್ಯಮಟ್ಟದ ಅನುಭವಿ ತಜ್ಞ ಪರಿಣಿತರಿಂದ ಮಾರ್ಗದರ್ಶನ ಪಡೆಯಬೇಕು. ಕಲಿಕೆ ನಿಂತ ನೀರಲ್ಲ ಸದಾ ಹುಟ್ಟಿನಿಂದ ಸಾವಿನವರೆಗೂ ಇರುತ್ತದೆ. ಶಿಕ್ಷಣ ಕ್ಷೇತ್ರಕ್ಕೆ ಚಟುವಟಿಕೆಗಳು ಮುಖ್ಯ ಎಂದರು.
ಇದನ್ನೂ ಓದಿ: Vijayapura (Indi) news: ಅಂಗನವಾಡಿ ಕಾರ್ಯಕರ್ತರಿಗೆ ಚುನಾವಣೆ ಕಾರ್ಯ: ಆದೇಶಕ್ಕೆ ಖಂಡನೆ
ಸಂಸ್ಥೆಯ ಅಧ್ಯಕ್ಷ ನೀಲಕಂಠಗೌಡ ಪಾಟೀಲ ಇಂದಿನ ಕಾರ್ಯಾಗಾರ ಪ್ರತಿಷ್ಠಿತ ಅನುಭವಿಗಳಿಂದ ಸಂಶೋಧನಾ ಮನೋಭಾವ ಹಂಚಿಕೊಳ್ಳುವುದಾಗಿದೆ ಎಂದರು. ಎ.ಜಿ ಗಾಂಧಿ ಬಾಲಕಿಯರ ಪ್ರೌಢ ಶಾಲೆಯ ಮುಖ್ಯಗುರು ರಾಘವೇಂದ್ರ ಕುಲಕರ್ಣಿ ಪ್ರಾಸ್ತಾವಿಕ ಮಾತುಗಳಾಡಿದರು.
ಕಾರ್ಯಕ್ರಮದ ಸಂಪನ್ಮೋಲ ವ್ಯಕ್ತಿ ಡಾ.ಕೆ ವಿಕ್ರಮ ಮಾತನಾಡಿ ಶಿಕ್ಷಣ ಕ್ಷೇತ್ರದಲ್ಲಿ ಗುಣಮಟ್ಟ ಕಾಪಾಡುವುದು ಪ್ರಮುಖವಾಗಿದೆ. ಆಡಳಿತ ವ್ಯವಸ್ಥೆ ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ತೋರಿಸಿಕೊಳ್ಳಲು ಸಹಕಾರಿಯಾಗುತ್ತದೆ. ಇತೀಚಿಗೆ ಪರಿಚಯಿಸಿದ ದ್ವೀಮೌಲ್ಯಮಾಪನ ನಿರ್ಣಯ (ಬೈನರಿ ಅಕ್ರಿಡಿಯೇಶನ) ಮಾರ್ಗಸೂಚಿಗಳು ಶಿಕ್ಷಣ ಸಂಸ್ಥೆಗಳ ಮೌಲ್ಯಮಾಪನ ಇನ್ನಷ್ಟು ಸುಲಭ ಗೊಳಿಸಿ ಪಾರದರ್ಶಕ ಹಾಗೂ ನಿಖರಗೊಳಿಸಿದೆ ಎಂದರು.
ಪ್ರಾಚಾರ್ಯ ಶ್ರೀಶೈಲ ಸಣ್ಣಕ್ಕಿ ನಿರೂಪಿಸಿದರು. ಡಾ.ಆದರ್ಶ ಬಗಲಿ, ಬಸವರಾಜ ತಾಂಬೆ, ಎಸ್.ಎಂ ತೆನ್ನಹಳ್ಳಿ, ಭೀಮನಗೌಡ ಪಾಟೀಲ, ಸಚೀನಕುಮಾರ ಗಾಂಧಿ, ವರ್ಧನ ದೋಸಿ, ಬಾಪುರಾಯ ಪಾಟೀಲ, ಶಾಂತುಗೌಡ ಬಿರಾದಾರ, ಬಾಬುಗೌಡ ಪಾಟೀಲ, ಸಿಂದಗಿ ತಾಲೂಕಿನ ಮುಖಂಡ ಗೊಲ್ಲಾಳಪ್ಪಗೌಡ ಪಾಟೀಲ ವೇದಿಕೆಯಲ್ಲಿದ್ದರು.
ಡಾ.ಆನಂದ, ಡಾ.ವಿಶ್ವಾಸ ಕೊರವಾರ, ಡಾ.ಪಿ.ಕೆ ರಾಠೋಡ, ಡಾ.ಸುರೇಂದ್ರ ಕೆ, ಎಸ್.ಬಿ ಜಾಧವ, ಡಾ.ಶ್ರೀಕಾಂತ ರಾಠೋಡ, ಎಂ.ಆರ್ ಕೋಣದೆ, ರಾಘವೇಂದ್ರ ಇಂಗನಾಳ, ಶೃತಿ ಪಾಟೀಲ, ಪಂಕಜಾ ಕುಲಕರ್ಣಿ, ಶೃತಿ ಬಿರಾದಾರ, ಧಾನಮ್ಮಾ ಪಾಟೀಲ, ನಸ್ರೀನ್ ವಾಲೀಕಾರ ವಿವಿಧ ಜಿಲ್ಲೆಗಳ ತಾಲೂಕಿನ ಪಾಚಾರ್ಯರರು, ಉಪನ್ಯಾಸಕರು, ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.